ಸಾಮಾನ್ಯವಾಗಿ ಯುಗಾದಿ ಹಬ್ಬ ಹಿಂದೂ ಪಂಚಾಂಗದ ಪ್ರಕಾರವಾಗಿ ಹೊಸ ವರ್ಷ ಆರಂಭವಾಗುವುದರಿಂದ ರಾಶಿಗಳಿಗನುಗುಣವಾಗಿ ಪಂಚಾಂಗ ವಿಮರ್ಷೆ ಮಾಡಲಾಗುತ್ತದೆ. ನೂತನ ಸಂವತ್ಸರದಲ್ಲಿ ತಮ್ಮ ರಾಶಿಗನುಸಾರವಾಗಿ ಸುಖ-ದುಃ’ಖ, ಆರೋಗ್ಯ-ಅನಾರೋಗ್ಯ, ಲಾಭ-ನ’ಷ್ಟ ಎಷ್ಟಿದೆ ಎನ್ನುವುದನ್ನು ಲೆಕ್ಕ ನೋಡಲಾಗುತ್ತದೆ.
ಆ ಪ್ರಕಾರವಾಗಿ ಮೇಷ ರಾಶಿಯವರ ಭವಿಷ್ಯದ ಬಗ್ಗೆ ಈ ಲೇಖನದಲ್ಲಿ ಕೆಲ ಸ್ವಾರಸ್ಯಕರ ಸಂಗತಿಗಳನ್ನು ತಿಳಿಸ ಬಯಸುತ್ತಿದ್ದೇವೆ. ಮೇಷ ರಾಶಿಯವರು 2023ರ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದರು, ಆದರೆ ನಡೆದದ್ದಕ್ಕಿಂತ ಕಾದಿದ್ದು ಹಾಗೂ ನಿರಾಸೆಯಾಗಿದ್ದೇ ಹೆಚ್ಚು. ಆದರೆ ಈ ಹೊಸ ವರ್ಷವೂ ನಿಮ್ಮ ಪಾಲಿಗೆ ಅದೃಷ್ಟದಾಯಕವಾಗಿ ಬರುತ್ತಿದ್ದು 2023ರಲ್ಲಿ ಬಾಕಿ ಉಳಿದಿದ್ದ ನಿಮ್ಮೆಲ್ಲಾ ಕನಸುಗಳು ಈಗ ಈಡೇರುವುದಕ್ಕೆ ಶುಭ ಸಮಯವನ್ನು ತಂದಿದೆ.
ಕಳೆದ ವರ್ಷವನ್ನು ಬಹಳ ಅಸಮಧಾನದಲ್ಲಿ ಕಳೆದಿದ್ದೀರಿ. ನಿಮ್ಮ ಕ’ಷ್ಟದ ಎಲ್ಲ ಪ್ರತಿಫಲಗಳ ಕ್ರೆಡಿಟ್ ನಿಮ್ಮ ಕಣ್ಣೆದುರಿಗೆ ಬೇರೆಯವರಿಗೆ ಹೋದರು ಅದನ್ನು ಪ್ರಶ್ನಿಸಲಾಗದೆ ಅಸಹಾಯಕತೆಯನ್ನು ಅನುಭವಿಸಿದ್ದೀರಿ ಆದರೆ ಈ ವರ್ಷ ಇಂತಹ ಅ’ನ್ಯಾ’ಯಗಳು ನಡೆಯುವುದಿಲ್ಲ.
ಈ ಸುದ್ದಿ ಓದಿ:- ಗೃಹಿಣಿಯರಿಗೆ ಒಂದೊಳ್ಳೆ ಟಿಪ್, ಕುಕ್ಕರ್ ನಲ್ಲಿ ಗಾಳಿ ಅಥವಾ ನೀರು ಲೀಕ್ ಆಗುವುದನ್ನು ನಿಲ್ಲಿಸಬೇಕೇ ಈ ಟ್ರಿಕ್ ಬಳಸಿ.!
ನಿಮ್ಮನ್ನು ಪರೀಕ್ಷೆ ಮಾಡುವ ಸಮಯ ಮುಗಿದಿದೆ ಈಗ ನಿಮಗೆ ಬಹುಮಾನ ಕೊಡುವ ಸಮಯ ಎಂದೇ ಅಂದುಕೊಳ್ಳಬಹುದು ಹಾಗಾಗಿ ಈ ವರ್ಷ ನಿಮಗೆ ಅಲ್ಲೇ ಡ್ರಾ ಅಲ್ಲೇ ಬಹುಮಾನ ಎನ್ನುವಂತೆ ಎಲ್ಲವೂ ಅಲ್ಲೇ ರಿಟರ್ನ್ ಸಿಗಲಿದೆ. ಅದೇ ರೀತಿಯಾಗಿ ನಿಮ್ಮ ಕೆಲಸ ಕಾರ್ಯಗಳು ಕಾರಣಾಂತರಗಳಿಂದ ಕಳೆದ ವರ್ಷ ಅರ್ಧಕ್ಕೆ ನಿಂತಿದ್ದರೂ ಈ ವರ್ಷ ಅದನ್ನು ಮುಂದುವರಿಸಿ ಪೂರ್ತಿಗೊಳಿಸುವ ಅದೃಷ್ಟವನ್ನು 2024ರ ವರ್ಷ ನೀಡುತ್ತಿದೆ.
ಇದೆಲ್ಲ ಅವಕಾಶವನ್ನು ಸದುಪಯೋಗಪಡಿಸಿಕೊಂಡು ನಿಮ್ಮ ಗುರಿ ಕಡೆ ಗಮನ ಹರಿಸಿ, ಗುರಿ ತಲುಪುವ ತನಕ ನಿಲ್ಲದಿರಿ. ಮೇಷ ರಾಶಿಗೆ 2ನೇ ಮನೆಯ ಅಧಿಪತಿಯಾದ ಶನಿಯು 11ನೇ ಮನೆ ಅಂದರೆ ಲಾಭ ಸ್ಥಾನದಲ್ಲಿ ಸ್ಥಿರವಾಗಿದ್ದಾರೆ. ಇದು ನಿಮ್ಮ ಕೆಲಸ ಕಾರ್ಯ ಚುರಕಾಗಿ ನಡೆಯುತ್ತದೆ ಎನ್ನುವುದನ್ನು ಸೂಚಿಸುತ್ತಿದೆ.
ಕಳೆದ ವರ್ಷ ಇದೇ ಶನಿಯ ಪರಿಣಾಮವಾಗಿ ಮಂದಗತಿಯನ್ನು ಅನುಭವಿಸಿದ್ದ ನಿಮ್ಮ ಅದೃಷ್ಟ ಫಲವು ಈ ವರ್ಷ ಬದಲಾಗುತ್ತಿದೆ. ರಾಹು 12ನೇ ಮನೆಯಲ್ಲಿ ಹಾಗೂ ಕೇತು 6ನೇ ಮನೆಯಲ್ಲಿ ಇರುವುದರಿಂದ ಇದು ಮಾತುಕತೆಗಳಲ್ಲಿ ಎಚ್ಚರ ಎನ್ನುವುದನ್ನು ಹೇಳುತ್ತದೆ.
ಈ ಸುದ್ದಿ ಓದಿ:- ಮಕರ ರಾಶಿಯ ಯುಗಾದಿ ವಾರ್ಷಿಕ ಭವಿಷ್ಯ, 6 ವರ್ಷಗಳಿಂದ ನೀವು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು, ಏಪ್ರಿಲ್ ತಿಂಗಳಿನಿಂದಲೇ ರಾಜಯೋಗ ಶುರು.!
ಸ್ನೇಹಿತರೊಡನೆ ಸಂಬಂಧಿಕರೊಡನೆ ಅಥವಾ ಕೆಲಸ ಸ್ಥಳಗಳಲ್ಲಿ ಮೇಲಾಧಿಕಾರಿಗಳಿಂದ ಅಥವಾ ವ್ಯಾಪಾರ ವಹಿವಾಟುಗಳಲ್ಲಿ ಮಾತುಕತೆ ನಡೆಯುವಾಗ ಮಾತುಗಳಲ್ಲಿ ಜಾಗ್ರತೆ ಇರಲಿ ಮತ್ತು ಮಾತು ಮಿತವಾಗಿ ಹಿತವಾಗಿ ಇರಲಿ. ನಿಮ್ಮ ಮಾತಿನಿಂದಲೇ ನಿಮಗೆ ಕೆಟ್ಟದಾಗುವ ಸಾಧ್ಯತೆಗಳು ಇವೆ ಹಾಗಾಗಿ ಈ ವರ್ಷ ಪೂರ್ತಿ ಆ ವಿಚಾರದಲ್ಲಿ ಇಂತಹ ವಿಚಾರಗಳಲ್ಲಿ ಬಹಳ ಎಚ್ಚರ ವಹಿಸಿ.
ಯಾವುದೋ ಒಂದು ಮಾತು ಹೆಚ್ಚು ಕಮ್ಮಿ ಆದರೂ ತಾಳ್ಮೆಯಿಂದ ಕಾದು ಉತ್ತರ ಕೊಡಲು ಪ್ರಯತ್ನಿಸಿ ಹೊರತು ತಕ್ಷಣ ಯಾವುದಕ್ಕೂ ರಿಯಾಕ್ಟ್ ಮಾಡಬೇಡಿ, ಈ ವರ್ಷ ಏನಾದ್ರೂ ಸಮಸ್ಯೆ ಆದರೆ ಅದು ನಿಮ್ಮ ಮಾತಿನ ಕಾರಣದಿಂದಲೇ ನಿಮ್ಮ ಬದುಕಿನಲ್ಲಿ ನಡೆಯಬಹುದಾದ ದು’ರ್ಘ’ಟ’ನೆ ಆಗಿರುತ್ತದೆ ಎನ್ನುವುದು ಸದಾ ನೆನಪಿನಲ್ಲಿ ಇರಲಿ.
ಹಣಕಾಸು ವಿಚಾರದ ಬಗ್ಗೆ ಯಾವುದೇ ಸಮಸ್ಯೆ ಇಲ್ಲ ಸರ್ಕಾರಿ ಹುದ್ದೆಯಲ್ಲಿರುವವರು ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿರುವರು ಇತ್ಯಾದಿ ಯಾವುದರಲ್ಲಿ ಭಾಗಿಯಾಗಿದ್ದರು ಏಳಿಗೆಯಾಗುವ ಎಲ್ಲಾ ಫಲಗಳನ್ನು ಕ್ರೋಧಿ ನಾಮ ಸಂವತ್ಸರ ನೀಡುತ್ತಿದೆ. ಆರೋಗ್ಯದ ಬಗ್ಗೆ ಕೂಡ ಉತ್ತಮವಾಗಿದೆ ಆದರೆ ಆರೋಗ್ಯದ ಬಗ್ಗೆ ನಿರ್ಲಕ್ಷ ಮಾಡಬಾರದು, ಕುಟುಂಬ ಸೌಖ್ಯವೂ ಇದೆ.
ಈ ಸುದ್ದಿ ಓದಿ:- ಬಾಳೆಹಣ್ಣು ಬೇಗ ಹಾಳಾಗುತ್ತಿದೆಯೇ.? ಈ ಟೆಕ್ನಿಕ್ ಬಳಸಿ ಎಷ್ಟೇ ಹಣ್ಣಾದರೂ ಕೆಡುವುದಿಲ್ಲ.!
ನಿಮ್ಮ ಎಲ್ಲಾ ಪ್ರಯತ್ನಗಳಿಗೂ ಇನ್ನಷ್ಟು ಶಕ್ತಿಯನ್ನು ತುಂಬಿ ಕೆಲಸ ಕಾರ್ಯಗಳತ್ತ ಗಮನ ಕೊಡಿ ಈ ವರ್ಷ ನೀವು ಕಂಡ ಕನಸನ್ನು ನನಸಾಗಿಸಿಕೊಳ್ಳುವ ಸಮಯ ನಿಮ್ಮ ಗುರಿಯನ್ನು ತಲುಪಿ ಸಂಭ್ರಮಿಸುವ ಸಮಯ ಇಂತಹ ಅದೃಷ್ಟ ಫಲವನ್ನು ಸರಿಯಾಗಿ ಬಳಸಿಕೊಂಡು ಬದುಕಿನಲ್ಲಿ ಉನ್ನತ ಸ್ಥಾನಕ್ಕೆ ತಲುಪಿ ನಿಮ್ಮ ಜೊತೆ ನಿಮ್ಮವರಿಗೂ ಕೂಡ ನೆರವಾಗಿ ಸಂತೋಷದಿಂದಿರಿ.