ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ಮಹಿಳೆಯರಿಗೆ ಒಂದು ಸವಾಲಿನ ಕೆಲಸ ಆಗಿದೆ. ಮನೆ ಸ್ವಚ್ಛತೆಯಿಂದ ಇಲ್ಲದಿದ್ದರೆ ಆ ಮನೆಯಲ್ಲಿರುವವರಿಗೆ ಕಾಯಿಲೆಗಳು ಕೂಡ ಬರುತ್ತವೆ. ಮನೆಯಲ್ಲಿ ಶೌಚಾಲಯ ಹಾಗೂ ಅಡುಗೆಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ನಮಗೆ ಬರುವ ಕಾಯಿಲೆಗಳಲ್ಲಿ ಬಹುತೇಕ ಭಾಗ ಕಾಯಿಲೆ ಬರುವುದು ಶೌಚಾಲಯದಿಂದ, ಈ ರೀತಿ ಶೌಚಾಲಯ ಕ್ಲೀನ್ ಆಗಿರುವುದು ಮಾತ್ರವಲ್ಲದೇ ಹಳದಿ ಕರೆ ಅಥವಾ ಉಪ್ಪು ಕರೆಯಿಂದ ಕೂಡಿದ್ದರೆ ನೋಡಲು ಚೆನ್ನಾಗಿರುವುದಿಲ್ಲ.
ಆದರೆ ಇದನ್ನು ಕ್ಲೀನ್ ಮಾಡಲು ದುಬಾರಿ ಬೆಲೆಯ ಕೆಮಿಕಲ್ ಬೇಕಾಗುತ್ತದೆ ಎಂದು ಹಲವರು ಭಾವಿಸುತ್ತಾರೆ ಇವುಗಳನ್ನು ಮತ್ತೆ ಮೊದಲ ಹಾಗೆ ಹೊಸದರಂತೆ ಹೊಳೆಯುವ ಹಾಗೆ ಮಾಡಲು ಎಷ್ಟೇ ವರ್ಷದ ಹಳೆ ಕಲೆ ಇದ್ದರೆ ಕೂಡ ಅದನ್ನು ತೆಗೆದು ಹಾಕಲು ಯಾವುದೇ ಕೆಮಿಕಲ್ ಬಳಸದೆ ಹಣವನ್ನು ಕೂಡ ಖರ್ಚು ಮಾಡದೆ ಮನೆಯಲ್ಲೇ ಇರುವ ಕೆಲವು ವಸ್ತುಗಳನ್ನು ಬಳಸಿಕೊಂಡು ಒಂದು ಸಲ್ಯೂಷನ್ ಮಾಡಿಕೊಂಡು ಅದರ ಮೂಲಕ ಕ್ಲೀನ್ ಮಾಡಬಹುದು.
ಸದಾ ಆರೋಗ್ಯವಾಗಿರಲು ಈ 15 ಅಭ್ಯಾಸಗಳನ್ನು ರೂಢಿಸಿಕೊಳ್ಳಿ.!
ಇಂದು ಎಲ್ಲಾ ಮಹಿಳೆಯರಿಗೂ ಕೂಡ ಉಪಯೋಗವಾಗಲಿ ಎಂದು ನಾವು ಈ ಟಿಪ್ ನ ಬಗ್ಗೆ ಮಾಹಿತಿ ಕೊಡುತ್ತಿದ್ದೇವೆ. ಇದನ್ನು ಮಾಡಲು ಮೊದಲಿಗೆ ಐದಾರು ನಿಂಬೆಹಣ್ಣನ್ನು ತೆಗೆದುಕೊಳ್ಳಿ, ಅದನ್ನು ಕಟ್ ಮಾಡಿ. ನಿಮ್ಮ ಮನೆಯಲ್ಲಿ ಈಗಾಗಲೇ ನಿಂಬೆ ರಸವನ್ನು ಬಳಸಿ ಅದರ ಸಿಪ್ಪೆ ಇದ್ದರೆ ಕೂಡ ಅದನ್ನು ತೆಗೆದುಕೊಳ್ಳಬಹುದು ಅಥವಾ ಕಿತ್ತಳೆ ಹಣ್ಣಿನ ಸಿಪ್ಪೆ ಇದ್ದರೆ ಕೂಡ ಇದರ ಜೊತೆ ತೆಗೆದುಕೊಳ್ಳಬಹುದು. ಈಗ ಎಲ್ಲವನ್ನು ಮಿಕ್ಸಿ ಗ್ರೈಂಡರ್ ಗೆ ಹಾಕಿ ಚೆನ್ನಾಗಿ ಪೇಸ್ಟ್ ಮಾಡಿಕೊಳ್ಳಿ.
ಇದು ಗಟ್ಟಿಯಾಗಿರುವ ಕಾರಣ ಇದಕ್ಕೆ ಸ್ವಲ್ಪ ನೀರು ಕೂಡ ಮಿಕ್ಸ್ ಮಾಡಿ ಒಂದು ಜಾಲರಿ ಸಹಾಯದಿಂದ ಶೋಧಿಸಿಕೊಳ್ಳಿ. ಈಗ ಈ ದ್ರಾವಣಕ್ಕೆ ಅಡುಗೆ ಉಪ್ಪನ್ನು ಹಾಕಿ ಒಂದು ಹಿಡಿಯಷ್ಟು ವಾಷಿಂಗ್ ಪೌಡರ್ ಹಾಕಿ ಇಲ್ಲವಾದರೆ ಲಿಕ್ವಿಡ್ ಕೂಡ ಬಳಸಬಹುದು ನಂತರ ಅಡುಗೆ ಸೋಡವನ್ನು ಒಂದು ಚಮಚ ಹಾಕಿ, ಒಂದೆರಡು ಚಮಚ ವಿಮ್ ಜೆಲ್ ಹಾಕಿ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಿ ಒಂದು ಲೀಟರ್ ಸ್ಪ್ರೇ ಬಾಟಲ್ ಇದ್ದರೆ ಅದಕ್ಕೆ ತುಂಬಿಸಿಕೊಳ್ಳಿ.
ದೇಹದ ಅಂಗಾಂಗಗಳಿಂದ ನಮ್ಮ ಶುಭ ಹಾಗು ಅಶುಭ ಫಲಗಳ ಬಗ್ಗೆ, ಭವಿಷ್ಯದ ಬಗ್ಗೆ ತಿಳಿದುಕೊಳ್ಳಬಹುದು.! ಹೇಗೆ ಅಂತ ನೋಡಿ.!
ನಿಮ್ಮ ಮನೆಯಲ್ಲಿ ಸ್ಪ್ರೇ ಬಾಟಲ್ ಇಲ್ಲ ಎಂದರೆ ಅದಕ್ಕೂ ಕೂಡ ಖರ್ಚು ಮಾಡಿ ತರಬೇಡಿ ಮನೆಯಲ್ಲಿರುವ ಯಾವುದೇ ವಾಟರ್ ಬಾಟಲ್ ತೆಗೆದುಕೊಂಡು ಮುಚ್ಚಳವನ್ನು ಸಣ್ಣದಾಗಿ ಹೋಲ್ ಮಾಡಿ ಸಾಕು. ಈಗ ಇದೆಲ್ಲವನ್ನು ಬಾಟಲಿಗೆ ತುಂಬಿಸಿ ಒಂದು ಬಾರಿ ಚೆನ್ನಾಗಿ ಶೇಕ್ ಮಾಡಿ ಬಾತ್ರೂಮ್ ಅಲ್ಲಿರುವ ಎಲ್ಲಾ ಟೈಲ್ಸ್ ಗಳ ಮೇಲೆ ಹಾಗೂ ಫೋರ್ ಮೇಲೆ ಸ್ಪ್ರೇ ಮಾಡಿ 30 ನಿಮಿಷಗಳ ಕಾಲ ಹಾಗೆ ಬಿಡಿ.
ಪಾತ್ರೆಗಳನ್ನು ತೊಳೆಯುವ ಸ್ಕ್ರಬ್ಬರ್ ಸಹಾಯದಿಂದ ಈಗ ಇದನ್ನು ಉಜ್ಜಿ, ಯಾವುದೇ ಕಾರಣಕ್ಕೂ ಬರಿ ಕೈಗಳಿಂದ ಇದನ್ನು ಕ್ಲೀನ್ ಮಾಡಲು ಹೋಗಬೇಡಿ. ಒಂದು ಗ್ಲೌಸ್ ಅಥವಾ ಪ್ಲಾಸ್ಟಿಕ್ ಕವರ್ ನ್ನು ಕೈಗಳಿಗೆ ಹಾಕಿಕೊಂಡು ಕ್ಲೀನ್ ಮಾಡಿ ನಿಂಬೆಹಣ್ಣಿನ ರಸವು ಎಷ್ಟೇ ಹಳೆ ಕಲೆ ಇದ್ದರೂ ಕೂಡ ಸುಲಭವಾಗಿ ಅದು ಹೋಗುವಂತೆ ಮಾಡುತ್ತದೆ.
ಕಿಡ್ನಿ ಫೇಲ್ಯೂರ್ ಆಗಿದ್ದನ್ನೂ ಸರಿ ಮಾಡಬಹುದು, ಡಯಾಲಿಸಿಸ್ ಅವಶ್ಯಕತೆ ಇಲ್ಲ.! ವೈದ್ಯರು ಬಿಚ್ಚಿಟ್ಟ ಸತ್ಯಾಂಶ
ವಾರಗಟ್ಟಲೆ ಬಾತ್ ರೂಮ್ ಫ್ರೆಶ್ ಆಗಿರುವಂತೆ ಮಾಡುತ್ತದೆ ಹೀಗಾಗಿ ನೀವು ತಿಕ್ಕಿ ತೊಳೆ ಹಾಗೇ ಇಲ್ಲ, ಸಲೀಸಾಗಿ ಕಲೆ ಹೋಗುತ್ತದೆ ಇದೆಲ್ಲವನ್ನು ಉಜ್ಜಿದ ಮೇಲೆ ನೀರಿನಿಂದ ವಾಷ್ ಮಾಡಿ ನೋಡಿ ವ್ಯತ್ಯಾಸ ನಿಮಗೆ ತಿಳಿಯುತ್ತದೆ. ಡೋರ್ ಗಳ ಮೇಲಿರುವ ಕಲೆಯು ಹೋಗದಿದ್ದರೆ ಇದಕ್ಕೆ ಒಂದು ಚಮಚದಷ್ಟು ಹಾರ್ಪಿಕ್ ಕೂಡ ಮಿಕ್ಸ್ ಮಾಡಿ ಬಳಸಬಹುದು. ಇದನ್ನು ಬಾತ್ರೂಮಿಗೆ ಮಾತ್ರ ಅಲ್ಲದೆ ಕಿಚನ್ ಕ್ಲೀನ್ ಮಾಡಲು, ಗ್ಯಾಸ್ ಸ್ಟವ್ ಮಾಡಲು, ಹಾಲ್ ಕ್ಲೀನ್ ಮಾಡಲು, ಮಿಕ್ಸಿ ಕ್ಲೀನ್ ಮಾಡಲು ಕೂಡ ಬಳಸಬಹುದು.