ಹಿಂದೆ ರೈತರು ಕೃಷಿ ಜೊತೆಗೆ ಹವ್ಯಾಸವಾಗಿ ಕುರಿ, ಕೋಳಿ, ಮೇಕೆ, ಆಡು ಮತ್ತು ಪಶುಪಕ್ಷಿಗಳನ್ನು ಸಾಕುತ್ತಿದ್ದರು. ಆದರೆ ಈಗ ಇವುಗಳು ಕೂಡ ಬೃಹತ್ ಉದ್ಯಮವಾಗಿ ಬೆಳೆದಿದೆ. ಆಹಾರ ಅವಲಂಬಿತ ಮೂಲಗಳಾಗಿ ಮತ್ತು ಆಹಾರೇತರವಾಗಿಯೂ ಕೂಡ ಇನ್ನಿತರ ಕಾರಣಗಳಕ್ಕಾಗಿ (ಹಸುವಿನಿಂದ ಹಾಲು ಮತ್ತು ಗೊಬ್ಬರ ಕೋಳಿಯಿಂದ ಮೊಟ್ಟೆ ಮತ್ತು ಮಾಂಸ ಕುರಿಯಿಂದ ಚರ್ಮ ಇತ್ಯಾದಿ).
ಇವುಗಳನ್ನು ಅವಲಂಬಿಸಿರುವುದರಿಂದ ಸರ್ಕಾರಗಳಿಂದಲೂ ಕೂಡ ಇವುಗಳ ಸಾಕಾಣಿಕೆಗೆ ಸಬ್ಸಿಡಿ ರೂಪದ ಸಾಲ ಕಟಕ ವೆಚ್ಚಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಇತ್ಯಾದಿ ಯೋಜನೆಗಳಿಂದ ಪ್ರೋತ್ಸಾಹ ಕೂಡ ಸಿಗುತ್ತಿದೆ. ಸಾಂಪ್ರದಾಯಿಕವಾದ ಸಾಕಾಣಿಕೆ ಗಿಂತ ವೈಜ್ಞಾನಿಕವಾಗಿ ಕುರಿ ಕೋಳಿ ಸಾಕಾಣಿಕೆ, ಪಶುಸಂಗೋಪನೆ, ಹೈನುಗಾರಿಕೆ, ಮೀನು ಸಾಕಾಣಿಕೆ, ಜೇನು ಸಾಕಾಣಿಕೆ ಇವುಗಳನ್ನು ಮಾಡುವುದರಿಂದ ಅಧಿಕ ಲಾಭ ಕಾಣಬಹುದು.
ತರಬೇತಿಗಳಲ್ಲಿ ಭಾಗಿಯಾಗುವುದರಿಂದ ವೈಜ್ಞಾನಿಕ ವಿಧಾನ ಅಳವಡಿಸಿಕೊಂಡು ಹೇಗೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಇಳುವರಿ ಪಡೆಯುವುದು ಮತ್ತು ತಮ್ಮ ಜಾನುವಾರುಗಳ ಆರೋಗ್ಯ ರಕ್ಷಣೆಯ ಕಾಳಜಿ ಮಾಡುವುದರ ಜೊತೆಗೆ ಅರ್ಥಿಕವಾಗಿ ಹೇಗೆ ಅಭಿವೃದ್ಧಿ ಹೊಂದಬೇಕು ಎನ್ನುವ ಅನೇಕ ವಿಚಾರಗಳ ಬಗ್ಗೆ ಮಾಹಿತಿ ಸಿಗುತ್ತದೆ.
ಈ ಸುದ್ದಿ ಓದಿ:- ದೇವರಿಗೆ ಹರಕೆ ಹೊತ್ತು ತೀರಿಸದೆ ಇದ್ರೆ ಏನಾಗುತ್ತೆ.? ನಿಮಗಿದು ಗೊತ್ತಿರಲಿ.!
ರಾಜ್ಯದ ಯುವ ಜನತೆಗೆ ಅನುಕೂಲವಾಗಲಿ ಎಂದು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಮತ್ತು ಕೆನರಾ ಬ್ಯಾಂಕ್ ಸಹಾಯಕದೊಂದಿಗೆ ರುಡ್ ಸೆಡ್ ಸಂಸ್ಥೆಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ಕೂಡ ಕುರಿ ಮೇಕೆ ಆಡು ಸಾಕಾಣಿಕೆ ಕುರಿತಾದ ಹತ್ತು ದಿನಗಳ ಉಚಿತ ತರಬೇತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಈ ವಿಚಾರವನ್ನು ಸ್ವತಃ ಬೆಂಗಳೂರು ಶಾಖೆಯ ರುಡ್ ಸೆಡ್ ಸಂಸ್ಥೆಯ ನಿರ್ದೇಶಕರಾದ ರವಿಕುಮಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಯಾರು ಈ ತರಬೇತಿ ಪಡೆಯಬಹುದು? ಹೇಗೆ? ಇದರ ಕುರಿತಾದ ವಿವರ ಹೀಗಿದೆ ನೋಡಿ.
* ಈ ತರಬೇತಿಯು 12 ಫೆಬ್ರವರಿ, 2024ರಿಂದ 21 ಫೆಬ್ರವರಿ 2024ರ ವರೆಗೆ 10 ದಿನಗಳು ನಡೆಯಲಿದೆ ಆಸಕ್ತರು 11 ಫೆಬ್ರವರಿ 2024ರ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಬೇಕು
* ಅರ್ಜಿ ಸಲ್ಲಿಸುವವರು 18 ವರ್ಷ ಮೇಲ್ಪಟ್ಟು 45 ವರ್ಷದ ಒಳಗಿನವರಾಗಿರಬೇಕು.
ಈ ಸುದ್ದಿ ಓದಿ:- ಎಲ್ಲಾ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ ಹಾಗೂ 8000 ಫ್ರೀ ಸ್ಕಾಲರ್ಶಿಪ್ ವಿತರಣೆ.!
* ಕನ್ನಡ ಭಾಷೆ ಓದಲು ಮತ್ತು ಬರೆಯಲು ಬಲ್ಲವರಾಗಿರಬೇಕು
* ಗ್ರಾಮೀಣ ಭಾಗದ ಹಾಗೂ ಆರ್ಥಿಕವಾಗಿ ಹಿಂದುಳಿದಿರುವ (BPL Card holder) ಮೊದಲ ಆದ್ಯತೆ ನೀಡಲಾಗುವುದು
* ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು
* ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ತುಮಕೂರು ಹಾಗೂ ರಾಮನಗರ ಜಿಲ್ಲಾ ವ್ಯಾಪ್ತಿಯ ಗ್ರಾಮೀಣ ನಿರುದ್ಯೋಗ ಯುವಕ ಯುವತಿಯರು ಈ ತರಬೇತಿಗೆ ಅರ್ಜಿ ಸಲ್ಲಿಸಬಹುದು
ತರಬೇತಿ ಕುರಿತಾದ ಪ್ರಮುಖ ಅಂಶಗಳು:-
* ಈ 10 ದಿನಗಳ ತರಬೇತಿಯು ವಸತಿಯುತವಾದದ್ದಾಗಿದೆ, ತರಬೇತಿಯಲ್ಲಿ ಭಾಗಿಯಾಗುವ ಅಭ್ಯರ್ಥಿಗಳಿಗೆ 10 ದಿನಗಳವರೆಗೆ ವಸತಿ ಊಟ ಸಹಿತವಾದ ಉಚಿತ ತರಬೇತಿ ನೀಡಲಾಗುತ್ತದೆ.
* ತರಬೇತಿ ಪೂರ್ಣಗೊಂಡ ನಂತರ ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ಕೂಡ ವಿತರಿಸಲಾಗುತ್ತದೆ (ಭವಿಷ್ಯದಲ್ಲಿ ಸರ್ಕಾರದಿಂದ ಕುರಿ ಮೇಕೆ ಸಾಕಾಣಿಕೆಗೆ ಸಾಲ ಸೌಲಭ್ಯ ನೀಡುವ ಯೋಜನೆಗಳಲ್ಲಿ ದಾಖಲೆಯಾಗಿ ಇದು ಅನುಕೂಲಕ್ಕೆ ಬರುತ್ತದೆ)
* ಈ ತರಬೇತಿಗೆ ಅರ್ಜಿ ಸಲ್ಲಿಸಲು ಮತ್ತು ಕಾರ್ಯಾಗಾರದ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ರುಡ್ ಸೆಡ್ ಸಂಸ್ಥೆ,
ಅರಿಶಿಣ ಕುಂಟೆ,
ನೆಲಮಂಗಲ ತಾಲ್ಲೂಕು,
ಬೆಂಗಳೂರು ಗ್ರಾಮಾಂತರ ಜಿಲ್ಲೆ.
8884554510 / 9740982585 / 9113880324