ಮಹಿಳೆಯರಿಗೆ ಕೆಲ ಉಪಯುಕ್ತ ಮಾಹಿತಿಗಳು.! ಎಲ್ಲಾ ಮಹಿಳೆಯರು ತಿಳಿದುಕೊಳ್ಳಲೇ ಬೇಕಾದ ಮಾಹಿತಿ ಇದು.

 

ಹೆಣ್ಣು ಕುಟುಂಬದ ಕಣ್ಣು ಎನ್ನುತ್ತಾರೆ. ಒಂದು ಮನೆಗೆ ಅಮ್ಮ, ಹೆಂಡತಿ, ಸಹೋದರಿ ಅಥವಾ ಮಗಳು ಎಷ್ಟು ಮುಖ್ಯ ಎಂದರೆ ಅವರ ಅನುಪಸ್ಥಿತಿಯಲ್ಲಿ ಮಾತ್ರ ಅದು ಕುಟುಂಬಸ್ಥರಿಗೆ ಮನವರಿಕೆ ಆಗುತ್ತದೆ. ಹೆಣ್ಣು ಇರದ ಮನೆಯನ್ನು ಮನೆ ಎನ್ನುವುದಕ್ಕೆ ಸಾಧ್ಯವಿಲ್ಲ ಹಾಗಾಗಿ ಪ್ರತಿ ಮನೆಯಲ್ಲಿ ಕೂಡ ಆ ಮನೆಗೆ ಭೂಷಣದಂತೆ ಹೆಣ್ಣು ಮಕ್ಕಳು ಇರಲೇಬೇಕು.

ಈ ರೀತಿ ಮನೆ ಹೆಣ್ಣು ಮಕ್ಕಳು ಆರೋಗ್ಯವಾಗಿದ್ದಷ್ಟು ಆನಂದವಾಗಿದ್ದಷ್ಟು ಮನೆಗೆ ಒಳಿತು ಹಾಗಾಗಿ ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತಹ ಕೆಲವು ಟಿಪ್ ಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇನೆ ತಪ್ಪದೆ ಓದಿ.

ಮನೆಯಲ್ಲಿ ನೆಗೆಟಿವ್ ಎನರ್ಜಿ ಇದ್ದರೆ ಈ ಲಕ್ಷಣಗಳು ಕಾಣಿಸುತ್ತೆ ಎಚ್ಚರಿಕೆ.!

● ಹೆಣ್ಣು ಮಕ್ಕಳು ಮತ್ತು ಮಹಿಳೆಯರು ಬಳೆ ಹಾಗೂ ಓಲೆಯನ್ನು ಬಿಚ್ಚಿಟ್ಟು ಮಲಗುತ್ತಾರೆ, ಈ ರೀತಿ ಮಾಡಬಾರದು. ಇದು ಮಹಿಳೆಯರ ಅದೃಷ್ಟವನ್ನು ಕಡಿಮೆ ಮಾಡುತ್ತದೆ.
● ಪೊರಕೆಯನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಇಡಬಾರದು, ಯಾರ ದೃಷ್ಟಿಯೂ ಬೀಳದ ಜಾಗದಲ್ಲಿ ಇಡಬೇಕು. ಕಾಲಿಗೆ ತಾಗುವ ರೀತಿ ಮನೆಗೆ ಬಂದವರಿಗೆ ಎದುರಿಗೆ ಕಾಣುವ ರೀತಿ ಇಡುವುದರಿಂದ ಪೊರಕೆಯನ್ನು ಇಡುವುದರಿಂದ ಆ ಮನೆಯ ಅದೃಷ್ಟ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ.

● ಸೂರ್ಯಸ್ತದ ನಂತರ ಯಾವುದೇ ಕಾರಣಕ್ಕೂ ಪೊರಕೆ ಬಳಕೆಯನ್ನು ಮಾಡಬಾರದು, ಸೂರ್ಯಾಸ್ತದ ನಂತರ ಮನೆ ಕಸವನ್ನು ತೊಡೆಯುವುದು ಅಶುಭ ಎಂದು ಹೇಳಲಾಗುತ್ತದೆ.
● ಕೆಲವರಿಗೆ ಕೋಪ ಬಂದಾಗ ಪೊರಕೆಯಲ್ಲಿ ಹೊಡೆದು ಬಿಡುತ್ತಾರೆ, ಯಾವುದೇ ಕಾರಣಕ್ಕೂ ಈ ರೀತಿ ಯಾರಿಗೂ ಹೊಡೆಯಬಾರದು.

● ಮನೆ ಒಳಗೆ ಹಾಗೂ ಹೊರಗೆ ಗುಡಿಸಲು ಒಂದೇ ಪೊರಕೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು, ಅದು ಒಳ್ಳೆಯದಲ್ಲ, ಮನೆಯಲ್ಲಿ ಅಡುಗೆ ಮನೆ ಸ್ವಚ್ಛಗೊಳಿಸುವ ಸಲುವಾಗಿ ಬೇರೆ ಪೊರಕೆ ಇಟ್ಟುಕೊಳ್ಳಬೇಕು.
● ಮನೆಯಿಂದ ಯಾರಾದರೂ ಹೊರಗೆ ಹೋದ ತಕ್ಷಣವೇ ಮನೆಯ ಕಸವನ್ನು ಗುಡಿಸಬಾರದು, ಈ ರೀತಿ ಮಾಡಿದರೆ ಅದು ಯಾವುದಾದರೂ ಒಂದು ಅಪಘಾತಕ್ಕೆ ಕಾರಣ ಆಗುತ್ತದೆ.

ರೇಷನ್ ಕಾರ್ಡ್ ಇಲ್ಲದವರು ‘ಗೃಹಲಕ್ಷ್ಮಿ ಯೋಜನೆ’ಗೆ ಅರ್ಜಿ ಸಲ್ಲಿಸೋದು ಹೇಗೆ.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

● ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಮನೆಯ ಲಕ್ಷ್ಮಿಗೆ ಹೋಲಿಸಲಾಗಿದೆ ಹಾಗಾಗಿ ಅದಕ್ಕೆ ಗೌರವ ಕೊಡಬೇಕು, ಅದನ್ನು ತುಳಿದುಕೊಂಡು ಓಡಾಡಬಾರದು.
● ಪರಕೆ ಹಳೆಯದಾಗಿದ್ದರೆ ಅದನ್ನು ಬದಲಾಯಿಸಿದಾಗ ಹಳೆ ಪರಕೆಯನ್ನು ಯಾವುದೇ ಕಾರಣಕ್ಕೂ ಮಂಗಳವಾರ ಹಾಗೂ ಶುಕ್ರವಾರ ಮನೆಯಿಂದ ಹೊರಗೆ ಹಾಕಬಾರದು.

● ಗೃಹಿಣಿಯರು ಅಡುಗೆ ಮನೆಯನ್ನು ಸ್ವಚ್ಛವಾಗಿಟ್ಟು ಕೊಂಡಿರಬೇಕು. ಅಡುಗೆ ಆದ ತಕ್ಷಣವೇ ಅದನ್ನು ನೀಟಾಗಿ ಕ್ಲೀನ್ ಮಾಡಬೇಕು. ಸಾಧ್ಯವಾದರೆ ಅನುಕೂಲವಿದ್ದರೆ ಅಡುಗೆ ಮನೆಯಲ್ಲಿ ಸದಾ ಸಣ್ಣ ದೀಪ ಉರಿಯುತ್ತಿದ್ದರೆ ಒಳ್ಳೆಯದು.
● ರಾತ್ರಿ ಸಮಯ ಎಂಜಲು ಪಾತ್ರೆಗಳನ್ನು ಹಾಗೆ ಬಿಟ್ಟು ಯಾವುದೇ ಕಾರಣಕ್ಕೂ ಮಲಗಬಾರದು.

● ಅಡುಗೆ ಮಾಡಲು ಎಣ್ಣೆಯನ್ನು ಕಡಿಮೆ ಬಳಸಬೇಕು, ಕುಟುಂಬದ ಸದಸ್ಯರ ಆರೋಗ್ಯ ಗುಟ್ಟು ಮನೆಯಲ್ಲಿ ಬಳಸುವ ಅಡುಗೆ ಎಣ್ಣೆ ಹಾಗೂ ಅದರ ಪ್ರಮಾಣದ ಮೇಲೆ ನಿರ್ಧಾರವಾಗಿರುತ್ತದೆ ಎಂದರೆ ತಪ್ಪಲ್ಲ.
● ಅಡುಗೆ ಮನೆಯಲ್ಲಿ ಯಾವುದೇ ಔಷಧಿಗಳನ್ನು ಇಡಬಾರದು, ಅದೇ ರೀತಿ ಮನೆ ಕ್ಲೀನರ್ ಗಳು, ಫೆನಾಲ್ ಗಳು ಇಂತವುಗಳನ್ನು ಕೂಡ ಅಡುಗೆ ಮನೆಯಲ್ಲಿ ಇಡದಿರಲು ಪ್ರಯತ್ನಿಸಿ.

ಈ ಫಲಾನುಭವಿಗಳ ರೇಷನ್ ಕಾರ್ಡ್ ರದ್ದು ಜೊತೆಗೆ ಅನ್ನಭಾಗ್ಯ ಅಕ್ಕಿಯೂ ಇಲ್ಲ, ಹಣವೂ ಸಿಗಲ್ಲ.!

● ಕೆಲವರು ಮನೆಯಲ್ಲಿ ಕೂಡ ಚಪ್ಪಲಿ ಹಾಕಿಕೊಂಡು ಓಡಾಡುತ್ತಾರೆ, ಮನೆಗೆ ಬಳಸುವ ಚಪ್ಪಲಿಗಳು ಪ್ರತ್ಯೇಕವಾಗಿದ್ದರೆ ಕೂಡ ಯಾವುದೇ ಕಾರಣಕ್ಕೂ ಚಪ್ಪಲಿಗಳನ್ನು ಹಾಕಿಕೊಂಡು ಅಡುಗೆ ಮನೆಯಲ್ಲಿ ಓಡಾಡಬೇಡಿ.
● ಹೆಚ್ಚು ಹೆಚ್ಚು ಅಡುಗೆ ಮಾಡಿ ವ್ಯರ್ಥ ಮಾಡಬೇಡಿ ಅಥವಾ ತಂಗಳು ಆಹಾರವನ್ನು ಸೇವಿಸಬೇಡಿ, ಪ್ರತಿದಿನವೂ ತಂಗಳು ತಿನ್ನುವ ಅಭ್ಯಾಸವಿದ್ದರೆ ಬಿಟ್ಟು ಬಿಡಿ.

● ಮಹಿಳೆಯರ ರಾತ್ರಿ ಮಲಗುವಾಗ ಬಿಗಿಯಾದ ಒಳ ಉಡುಪನ್ನು ಧರಿಸಿ ಮಲಗಬೇಡಿ, ಇದರಿಂದ ರಕ್ತ ಸಂಚಾರಕ್ಕೆ ತೊಂದರೆ ಆಗುತ್ತದೆ ಹಾಗೂ ಅಲರ್ಜಿಯಂತಹ ಸಮಸ್ಯೆಗಳು ಬರುತ್ತದೆ.
● ಕೂದಲು ಬಾಚುವಾಗ ಒಂದೆಡೆ ಕುಳಿತುಕೊಂಡು ಬಾಚಿಕೊಳ್ಳಿ, ಎಲ್ಲಂದರಲ್ಲಿ ಮನೆಯಲ್ಲಿ ಉದುರಿರುವ ಕೂದಲು ಕಾಣಬಾರದು.
● ಹೆಣ್ಣು ಮಕ್ಕಳ ನೇಲ್ ಫಾಲಿಷ್ ಉಪಯೋಗಿಸುವುದನ್ನು ಕಡಿಮೆ ಮಾಡಿ, ಇದರಿಂದ ಗರ್ಭಕೋಶಕ್ಕೆ ತೊಂದರೆ ಆಗುವುದು ಹೆಚ್ಚು.
● ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಸಾಲೆ ಪದಾರ್ಥವನ್ನು ಸೇವಿಸಬೇಡಿ.

● ಋತುಚಕ್ರದ ಸಮಯದಲ್ಲಿ ಸ್ರಾವವಾಗುವ ರಕ್ತವು ಹಾನಿಕಾರಕವಾಗಿರುತ್ತದೆ, ಆದ್ದರಿಂದ ಕನಿಷ್ಠ ನಾಲ್ಕೈದು ಗಂಟೆಕೊಮ್ಮೆ ಪ್ಯಾಡ್ ಬದಲಾಯಿಸಬೇಕು.
● ಪೀರಿಯಡ್ ಸಮಯದಲ್ಲಿ ದಿನಪೂರ್ತಿ ಹಾಸಿಗೆ ಮೇಲೆ ಮಲಗಿರುವುದನ್ನು ಬಿಟ್ಟು ಸಾಧ್ಯವಾದಷ್ಟು ಚಟುವಟಿಕೆಯಿಂದಿರಿ, ವಾಕಿಂಗ್ ಕೂಡ ಮಾಡಬಹುದು.

Leave a Comment