ಮಹಿಳೆಯರು ಸೌಂದರ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ ಇದ್ದಕ್ಕಾಗಿ ಅವರು ಎಷ್ಟೇ ದುಬಾರಿಯ ವಸ್ತುವನ್ನು ಬೇಕಾದರೂ ಖರೀದಿಸುತ್ತಾರೆ. ಆದರೆ ಇದರ ಅಗತ್ಯ ಇಲ್ಲ. ಪ್ರತಿನಿತ್ಯ ನಮ್ಮ ಜೀವನದಲ್ಲಿ ನಾವು ಮಾಡುವ ಕೆಲಸಗಳಲ್ಲಿ, ನಮ್ಮ ಜೀವನ ಶೈಲಿಯಲ್ಲಿ ಹಾಗೂ ಆಹಾರ ಪದ್ಧತಿಯಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡು ಉತ್ತಮವಾಗಿಸಿಕೊಂಡರೆ ಸಾಕು.
ಒಳ್ಳೆಯ ವಸ್ತುಗಳನ್ನು ಬಳಸಲು ಹಾಗೂ ನೈಸರ್ಗಿಕವಾಗಿರುವ ವಸ್ತುಗಳಿಂದ ಅವುಗಳ ಪ್ರಯೋಜನವನ್ನು ಪಡೆಯಲು ಆರಂಭಿಸಿದರೆ ಇದಕ್ಕಾಗಿ ನಾವು ಹಣ ವ್ಯರ್ಥ ಮಾಡುವ ಅವಶ್ಯಕತೆ ಇರುವುದಿಲ್ಲ. ಹಾಗಾಗಿ ಮಹಿಳೆಯರಿಗೆ ತಮ್ಮ ಸೌಂದರ್ಯ ಮತ್ತು ಆರೋಗ್ಯ ವೃದ್ಧಿ ಮಾಡಿಕೊಳ್ಳುವುದಕ್ಕೆ ಉಪಯುಕ್ತವಾಗುವ ಕೆಲವು ಸರಳ ಟಿಪ್ ಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
● ಈರುಳ್ಳಿ ಅಡುಗೆಗೆ ಮಾತ್ರ ಅಲ್ಲ ಕೂದಲಿನ ಆರೋಗ್ಯಕ್ಕೂ ಕೂಡ ಬಹಳ ಒಳ್ಳೆಯದು. ರುಚಿಯನ್ನು ಹೆಚ್ಚಿಸುವ ಈರುಳ್ಳಿಯೂ ಕೂದಲಿನ ಆರೋಗ್ಯವನ್ನು ಕೂಡ ಉತ್ತಮಗೊಳಿಸುತ್ತದೆ. ಈರುಳ್ಳಿ ರಸವನ್ನು ಕೂದಲಿಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದರಿಂದ ಕೂದಲು ಸ್ಟ್ರಾಂಗ್ ಆಗುತ್ತದೆ, ದಪ್ಪವಾಗಿ ಹಾಗೂ ಸೋಂಪಾಗಿ ಬೆಳೆಯುತ್ತದೆ. ಸಣ್ಣ ಈರುಳ್ಳಿ ಆದರೆ ಬಹಳ ಉತ್ತಮ.
ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!
● ಪ್ರತಿಯೊಬ್ಬರಿಗೂ ಕೂಡ ತಮ್ಮ ನೆನಪಿನ ಶಕ್ತಿ ಬಗ್ಗೆ ಹೆಮ್ಮೆ ಇರುತ್ತದೆ. ಹೆಚ್ಚಾಗಿ ಆಹಾರದಲ್ಲಿ ನಿಂಬೆರಸದ ಸೇವನೆ ಮತ್ತು ತುಪ್ಪದ ಸೇವನೆಯನ್ನು ಹೆಚ್ಚಾಗಿ ಮಾಡುವುದರಿಂದ ಜ್ಞಾಪಕ ಶಕ್ತಿ ವೃದ್ಧಿ ಆಗುತ್ತದೆ.
● ಕಾಲಿನಲ್ಲಿ ತುಂಬಾ ನೋವು ಇದ್ದರೆ ಕಾಲಿಗೆ ಸಾಸಿವೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಮಸಾಜ್ ಮಾಡಿ ಬಳಿಕ, ಬಿಸಿ ನೀರಿನಲ್ಲಿ ತೊಳೆಯುವುದರಿಂದ ಅದು ಸ್ವಲ್ಪ ನಿವಾರಣೆ ಕಾಣುತ್ತದೆ.
● ಡ್ರೈ ಫ್ರೂಟ್ಸ್ ಗಳು ದೇಹದ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿದಿನ ರಾತ್ರಿ ತಪ್ಪದೆ ಮಲಗುವ ಮುನ್ನ ಒಣ ದ್ರಾಕ್ಷಿಯನ್ನು ಸೇವಿಸುವುದರಿಂದ ಕಣ್ಣು ದೃಷ್ಟಿ ಚುರುಕಾಗುತ್ತದೆ. ಡ್ರೈ ಫ್ರೂಟ್ಸ್ ಗಳನ್ನು ರಾತ್ರಿಪೂರ್ತಿ ನೆನೆಸಿ ಬೆಳಗ್ಗೆ ತಿನ್ನುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
● ಬೆಳಗ್ಗೆ ಉಪಹಾರ ಸೇವಿಸಿದ ನಂತರ ಏಲಕ್ಕಿಯನ್ನು ತಿನ್ನುವುದರಿಂದ ಉಸಿರಾಟದ ಸಮಸ್ಯೆ ಇರುವವರಿಗೆ ಅದು ರಿಲೀಫ್ ಕೊಡುತ್ತದೆ.
● ನಾನಾ ಕಾರಣಗಳಿಂದ ಮನುಷ್ಯನಿಗೆ ಪಿತ್ತಭಾದೆ ಆಗುತ್ತದೆ. ಅತಿ ಹೆಚ್ಚಾಗಿ ಮೂಲಂಗಿಯಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸುವುದು ಹಾಗೂ ಮೂಲಂಗಿ ರಸವನ್ನು ಸೇವನೆ ಮಾಡುವುದರಿಂದ ಪಿತ್ತ ನಿವಾರಣೆ ಆಗುತ್ತದೆ.
ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!
● ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಟಮೋಟೋ ಸೇವನೆ ಮಾಡುವುದರಿಂದ ದೇಹದಲ್ಲಿರುವ ಬೊಜ್ಜು ಕಡಿಮೆ ಆಗುತ್ತದೆ. ಹಾಗೂ ಕೂದಲು ಬೇಗ ಬೆಳ್ಳಗಾಗುವುದಿಲ್ಲ.
● ಅತಿ ಹೆಚ್ಚು ಹಸಿಮೆಣಸಿನಕಾಯಿಯನ್ನು ಸೇವನೆ ಮಾಡುವುದು ಒಳ್ಳೆಯದಲ್ಲ, ಇದರಿಂದ ಅನಾರೋಗ್ಯಗಳು ಹೆಚ್ಚಾಗಿ ಆಯುಷ್ಯ ಕಡಿಮೆ ಆಗುತ್ತದೆ.
● ಲಿಂಬು ನೀರನ್ನು ಕುಡಿಯುವುದರಿಂದ ಉಸಿರಾಟದ ವಾಸನೆ ಹೋಗುತ್ತದೆ.
● ರಾತ್ರಿ ಹೊತ್ತು ಹೆಚ್ಚಾಗಿ ಅನ್ನ ಸೇವನೆ ಮಾಡುವುದರಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ, ನೀವು ಕೂಡ ದಪ್ಪ ಆಗುತ್ತೀರಿ.
● ಬಿಳಿ ಉಪ್ಪನ್ನು ಅತಿ ಹೆಚ್ಚು ಬಳಕೆ ಮಾಡಲು ಆರಂಭಿಸಿದ್ದೇವೆ, ಆದರೆ ಆಹಾರದಲ್ಲಿ ಅತಿ ಹೆಚ್ಚಾಗಿ ಇದನ್ನು ಬಳಸುವುದರಿಂದ ಹೃದಯ ದುರ್ಬಲವಾಗುತ್ತದೆ. ಹೃದಯದ ಆರೋಗ್ಯಕ್ಕೆ ಇದು ಮಾರಕ.
● ಬೆಳಗ್ಗೆ ಎದ್ದ ತಕ್ಷಣ ಹಸಿರು ಬಣ್ಣದ ವಸ್ತುವನ್ನು ನೋಡುವುದರಿಂದ ಕಣ್ಣಿನ ದೃಷ್ಟಿ ಇಂಪ್ರೂ ಆಗುತ್ತದೆ.
● ಮಕ್ಕಳಿಗೆ ಹಲ್ಲು ಬಿದ್ದ ತಕ್ಷಣ ಆ ಜಾಗಕ್ಕೆ ಟಮೋಟೋ ರಸವನ್ನು ಸವರಿದರೆ ಹಲ್ಲು ಬೇಗ ಬೆಳೆಯುತ್ತದೆ.