ಮಹಿಳೆಯರು ಈ ರೀತಿ ತಪ್ಪುಗಳನ್ನು ಮಾಡಿದ್ರೆ ಆ ಮನೆಯ ಸರ್ವನಾಶ ಆಗೋದು ಖಂಡಿತ.!

ಪ್ರತಿ ಮನೆಯ ಏಳಿಗೆಯು ಆ ಮನೆಯಲ್ಲಿ ನೆಲೆಸುವ ಗೃಹಿಣಿಯ ನಡವಳಿಕೆ ಮೇಲೆ ನಿರ್ಧಾರವಾಗುತ್ತದೆ. ಹೆಣ್ಣು ಮಕ್ಕಳು ಮನೆಯನ್ನು ಇಟ್ಟುಕೊಳ್ಳುವುದು ಹಾಗೂ ಅವರು ನಡೆದುಕೊಳ್ಳುವ ಆಚಾರ-ವಿಚಾರದ ಮೇಲೆ ಆ ಮನೆಯ ಏಳಿಗೆ ಮತ್ತೆ ಸೌಖ್ಯ ನಿರ್ಧಾರವಾಗುತ್ತದೆ ಹಾಗಾಗಿ ಹೆಣ್ಣು ಮಕ್ಕಳು ಪಾಲಿಸಲೇಬೇಕಾದ ಕೆಲ ಅಗತ್ಯ ನಿಯಮಗಳ ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

● ಸೂರ್ಯೋದಯ ಆಗುವ ಮುನ್ನವೇ ಎದ್ದು ಮನೆಯನ್ನು ಸ್ವಚ್ಛಗೊಳಿಸಬೇಕು, ಮಟಮಟ ಮಧ್ಯಾಹ್ನ ಎದ್ದು ಮನೆ ಗುಡಿಸಿದರೆ ದರಿದ್ರಲಕ್ಷ್ಮಿ ಮನೆಯಲ್ಲಿ ತಾಂಡವವಾಡುತ್ತಾಳೆ.
● ಮಹಿಳೆಯರು ಯಾವುದೇ ಕಾರಣಕ್ಕೂ ಕೂಡ ತಲೆದಿಂಬಿನ ಮೇಲೆ ಕುಳಿತುಕೊಳ್ಳಬಾರದು, ಇದು ಕೂಡ ದರಿದ್ರ ತರುತ್ತದೆ.
● ಮನೆಯಲ್ಲಿ ಗಂಡಸರು ಮಂಗಳವಾರ ಗಡ್ಡ ಮತ್ತು ಕೂದಲನ್ನು ತೆಗೆದಂತೆ ಹೆಣ್ಣು ಮಕ್ಕಳು ಎಚ್ಚರವರಿಸಿ ನೋಡಿಕೊಳ್ಳಬೇಕು, ಗಂಡಸರು ಈ ರೀತಿ ಮಾಡುತ್ತಿದ್ದರೆ ಅದನ್ನು ತಪ್ಪಿಸಿ ಬುದ್ದಿ ಹೇಳಬೇಕು.

ಮಕ್ಕಳಿಲ್ಲದ ದಂಪತಿ ಈ ದೇವಸ್ಥಾನಕ್ಕೆ ಭೇಟಿ ಕೊಟ್ಟರೆ ಸಂತಾನ ಪ್ರಾಪ್ತಿಯಾಗುತ್ತೆ.!

● ರಾತ್ರಿ ಮಲಗುವಾಗ ಕೆಲವರಿಗೆ ಕರಿಮಣಿ, ಓಲೆ, ಬಳೆಗಳನ್ನು ತೆಗೆದಿಡುವ ಅಭ್ಯಾಸ ಇದೆ, ಆದರೆ ಮುತ್ತೈದೆಯರು ಯಾವುದೇ ಕಾರಣಕ್ಕೂ ಈ ರೀತಿ ಮಾಡಬಾರದು.
● ಮನೆಯಲ್ಲಿ ಯಾವುದೇ ಒಳ್ಳೆಯದು ಅಥವಾ ಕೆಟ್ಟದ್ದು ನಡೆದಾಗ ಅತಿಥಿಗಳು ಮನೆಗೆ ಬರುತ್ತಾರೆ. ಆ ಸಮಯದಲ್ಲಿ ಮನೆಗೆ ಹೆಣ್ಣು ಮಕ್ಕಳೇ ಹೋಗಿ ನೇರವಾಗಿ ಅವರ ಬಳಿ ವಿಷಯದ ಬಗ್ಗೆ ಮಾತನಾಡಬಾರದು.

● ಹೊಸ ಬಟ್ಟೆಯನ್ನು ತಂದಾಗ ನೇರವಾಗಿ ಅದನ್ನು ಧರಿಸಬಾರದು. ಗೋವುಗಳ ಮೇಲೆ ಹಾಕಿ ಅಥವಾ ಅದಕ್ಕೆ ಯಾವುದಾದರೂ ಒಂದು ತುದಿಯಲ್ಲಿ ಸ್ವಲ್ಪ ಅರಿಶಿನವನ್ನು ಹಚ್ಚಿ ಅಥವಾ ದೇವರ ಫೋಟೋಗೆ ತಾಗಿಸಿ ನಂತರ ಹಾಕಿಕೊಳ್ಳಬೇಕು.
● ಮಹಿಳೆಯರು ಒಬ್ಬರು ಮುಡಿದಿರುವ ಹೂವನ್ನು ಮತ್ತೊಬ್ಬರ ಜೊತೆ ಹಂಚಿಕೊಳ್ಳಬಾರದು.

ನಕ್ಷತ್ರದ ಮೂಲಕವೇ ನಿಮ್ಮ ಮದುವೆ ಜೀವನದ ಗುಟ್ಟನ್ನು ತಿಳಿದುಕೊಳ್ಳಬಹುದು.!

● ಮಹಿಳೆಯರು ಕಪ್ಪು ಬಣ್ಣದ ಯಾವುದೇ ಬಟ್ಟೆಯನ್ನು ಧರಿಸಬಾರದು.
● ಅಕ್ಕ ಪಕ್ಕದ ಮನೆಯವರು ಉಪ್ಪು, ಮೆಣಸಿನಕಾಯಿ ಅಥವಾ ಧಾನ್ಯಗಳನ್ನು ಕೇಳಲು ಬಂದಾಗ ಅವರ ಕೈಗೆ ನೇರವಾಗಿ ಕೊಡಬಾರದು, ಕೆಳಗೆ ಇಡಬೇಕು ನಂತರ ಅದನ್ನು ಅವರು ತೆಗೆದುಕೊಂಡು ಹೋಗಬೇಕು.

● ಊಟ ಮಾಡುವ ಮುನ್ನ ಮನೆಯಲ್ಲಿ ಸಾಕಿರುವ ಪಶು ಪಕ್ಷಿ ಅಥವಾ ಸಾಕು ಪ್ರಾಣಿಗಳಿಗೆ ಹಾಕಿ ಅಥವಾ ಮನೆ ಹೊರಗೆ ಬಂದು ಕಾಗೆಗಳಿಗೆ ಹಾಕಿ ನಂತರ ಊಟ ಮಾಡಿದರೆ ಒಳ್ಳೆಯದು.
● ತೆಂಗಿನಕಾಯಿಯನ್ನು ಬೇರೆಯವರು ಕೇಳಿದಾಗ ಮೂರು ಕಣ್ಣಿರುವ ಭಾಗವನ್ನು ಯಾವುದೇ ಕಾರಣಕ್ಕೂ ಯಾರಿಗೂ ಕೊಡಬಾರದು, ಅದನ್ನು ನಿಮ್ಮ ಬಳಿ ಇಟ್ಟುಕೊಂಡು ಮತ್ತೊಂದು ಭಾಗವನ್ನು ಬೇರೆಯವರಿಗೆ ಕೊಡಬಹುದು.

ಮಹಿಳೆಯರು ಮಂಗಳ ಸೂತ್ರದಲ್ಲಿ ಎಷ್ಟು ಕರಿಮಣಿ ಧರಿಸಬೇಕು.? ಮಂಗಳ ಸೂತ್ರದಲ್ಲಿ ಈ ವಸ್ತು ಇದ್ದರೆ ಕೂಡಲೇ ತೆಗಿಯಿರಿ ಇಲ್ಲದಿದ್ರೆ ಕಷ್ಟ ತಪ್ಪಿದಲ್ಲ.!

● ಮಹಿಳೆಯರು ಮನೆಯಲ್ಲಿ ಯಾವಾಗಲೂ ಕೂದಲನ್ನು ಹರಡಿಕೊಂಡು ಇರಬಾರದು.
● ಹೆಣ್ಣು ಮಕ್ಕಳು ಕಾಲಿನ ಮೇಲೆ ಕಾಲು ಹಾಕಿ ಕುಳಿತುಕೊಳ್ಳಬಾರದು, ಕಾಲನ್ನು ಅಲ್ಲಾಡಿಸುತ್ತಾ ಕುಳಿತುಕೊಳ್ಳಬಾರದು ಹಾಗೂ ಒಂಟಿ ಕಾಲಿನಲ್ಲಿ ನಿಂತು ಕೊಳ್ಳಬಾರದು.
● ಮಹಿಳೆಯರು ರಾತ್ರಿ ಹೊತ್ತು ಊಟ ಮಾಡದೆ ಕೋಪ ಮಾಡಿಕೊಂಡು ಮಲಗಿಕೊಳ್ಳಬಾರದು.

● ಮಹಿಳೆಯರು ಯಾವುದೇ ವಸ್ತುವನ್ನು ಕೊಡುವಾಗ ಯಾರಿಗೂ ಎಡಗೈಯಿಂದ ಕೊಡಬಾರದು ಬಲಗೈಯಿಂದ ಕೊಡಬೇಕು.
● ಮುಟ್ಟಾದ ಸಮಯದಲ್ಲಿ ದೇವರಿಗೆ ಇಟ್ಟಿರುವ ಹೂಗಳನ್ನು ಕೊಟ್ಟರೆ ಅದನ್ನು ಮುಡಿದುಕೊಳ್ಳಬಾರದು.
● ಮನೆಯ ಮುಂದೆ ಹೂ ಮಾರುವವರು ಬಂದು ಕೇಳಿದಾಗ ಬೇಡ ಎನ್ನಬಾರದು, ನಾಳೆ ಖರೀದಿಸುತ್ತೇನೆ ಎಂದು ಸಮಾಧಾನಕರ ಉತ್ತರ ಹೇಳಿ ಕಳುಹಿಸಬೇಕು.

ಈ ಮೂರು ವಸ್ತುಗಳೇ ಮಾರ್ವಾಡಿಗಳ ಶ್ರೀಮಂತಿಕೆಯ ಗುಟ್ಟು.! ನೀವು ಈ 3 ವಸ್ತುಗಳನ್ನು ನಿಮ್ಮ ಅತ್ತಿರ ಇಟ್ಟುಕೊಂಡ್ರೆ ಶ್ರೀಮಂತರಾಗೋದ್ರಲ್ಲಿ ಅನುಮಾನವಿಲ್ಲ.!

● ಶ್ರಾದ್ಧ ಪೂಜೆ ದಿನದಂದು ಮನೆಯಲ್ಲಿ ರಂಗೋಲಿ ಹಾಕಬಾರದು.
● ಮಹಿಳೆಯರ ಬಾಯಿಯಲ್ಲಿ ಶನಿ ದರಿದ್ರ ಪೀಡೆ ಹೆಣ ಎನ್ನುವ ಈ ರೀತಿ ಮಾತುಗಳು ಬರಬಾರದು
● ಮಹಿಳೆಯರ ಹಣೆಯಲ್ಲಿ ಯಾವಾಗಲೂ ಕುಂಕುಮ ಇರಬೇಕು, ಹೆಣ್ಣು ಮಕ್ಕಳು ಖಾಲಿ ಹಣೆಯಲ್ಲಿ ಇರಬಾರದು, ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆದು ಹಣೆಗೆ ಬೊಟ್ಟು ಇಟ್ಟುಕೊಳ್ಳಬೇಕು.
● ಮನೆಯಲ್ಲಿ ಧೂಳು ಕಸದಂತೆ ಇರದಂತೆ, ಬಲೆ ಕಟ್ಟದಂತೆ ನೋಡಿಕೊಳ್ಳಬೇಕು.
● ಬೆಳಗ್ಗೆ ಎದ್ದ ತಕ್ಷಣ ಮುಖ ತೊಳೆಯದೇ ಅಡುಗೆ ಮನೆಗೆ ಹಾಗೂ ದೇವರ ಕೋಣೆಗೆ ಹೆಣ್ಣು ಮಕ್ಕಳು ಹೋಗಬಾರದು.

Leave a Comment