ಈ ಧಾರಾವಾಹಿ ಪ್ರಪಂಚವೇ ಹಾಗೆ ಇಲ್ಲಿ ನಾಯಕಿಯ ಪಾತ್ರಕ್ಕೆ ಎಷ್ಟು ಪ್ರಾಮುಖ್ಯತೆ ಇರುತ್ತದೆಯೋ ಅಷ್ಟೇ ಸರಿಸಮವಾಗಿ ವಿಲನ್ ಪಾತ್ರವನ್ನು ಕೂಡ ವೈಭವವಾಗಿ ತೋರಿಸಲಾಗುತ್ತದೆ. ಅದರಲ್ಲೂ ಇತ್ತೀಚಿನ ಧಾರವಾಹಿಗಳಲ್ಲಿ ಹೀರೋಯಿನ್ ಗಳನ್ನು ಮಿರಿಸುವಷ್ಟು ಅಟಿಟ್ಯೂಡ್ ಇಂದ ಸ್ಟೈಲಿಶ್ ಆಗಿ ಲೇಡಿ ವಿಲನ್ ಗಳನ್ನು ಮೆರಿಸಲಾಗುತ್ತಿದೆ. ಸದ್ಯಕ್ಕೆ ಎಲ್ಲಾ ವಾಹಿನಿಗಳ ಎಲ್ಲಾ ಧಾರಾವಾಹಿಗಳಲ್ಲೂ ಕೂಡ ಇದೇ ರೀತಿ ಲೇಡಿ ವಿಲನ್ ಇದ್ದೇ ಇರುತ್ತಾರೆ.
ಜಾಹೀರಾತು :- ಶ್ರೀ ಅನ್ನಪೂರ್ಣೇಶ್ವರಿ ಜ್ಯೋತಿಷ್ಯಾಲಯ ನಂಬರ್ 1 ವಶೀಕರಣ ಸ್ಪೆಷಲಿಸ್ಟ್ ಪಂಡಿತ್ : ಶ್ರೀ ಆರ್. ಎನ್. ಜೋಷಿ ನಿಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ಆರೋಗ್ಯ, ಮದುವೆ, ಗಂಡ-ಹೆಂಡತಿ ಕ.ಲ.ಹ ಲೈಂ.ಗಿ.ಕ ಸಮಸ್ಯೆ ಇನ್ನು ಹಲವಾರು ಸಮಸ್ಯೆಗಳಿಗೆ ಕೇರಳದ ಮಹಾ ದೇವತೆಗಳ ಪೂಜಾ ಶಕ್ತಿಯಿಂದ ಕೇವಲ 1 ದಿನದಲ್ಲಿ 100ಕ್ಕೆ 101% ರಷ್ಟು ಶಾಶ್ವತ ಪರಿಹಾರ ಶತಸಿದ್ಧ ಅಸಾಧ್ಯವಾದದ್ದು ಇಲ್ಲಿ ಸಾಧ್ಯ 8050846164
ಇನ್ನು ಹೊಸದಾಗಿ ಶುರು ಆಗಿರುವ ಧಾರವಾಹಿಗಳಲ್ಲಿ ಈ ರೀತಿ ಪಾತ್ರ ಇನ್ನು ಕಾಣಿಸಿಕೊಂಡಿಲ್ಲ ಎಂದರೆ ಮಧ್ಯದಲ್ಲಿ ಅಥವಾ ಮುಂದಿನ ದಿನಗಳಲ್ಲಿ ಖಂಡಿತ ಕರೆತರುವ ಯೋಜನೆ ಇರುತ್ತದೆ. ಈಗ ವರ್ಷದಿಂದ ಕಲರ್ಸ್ ಕನ್ನಡ ವಾಹಿನಿಯ ಪ್ರೇಕ್ಷಕರಿಗೆ ಹೊಸ ರೀತಿ ಕಥೆ ಹೇಳುತ್ತಾ ದಿನಕ್ಕೊಂದು ರೋಚಕ ತಿರುವು ಕೊಡುತ್ತಿದ್ದ ಲಕ್ಷಣ ಧಾರಾವಾಹಿಯಲ್ಲೂ ಕೂಡ ವಿಲನ್ ಎಂಟ್ರಿ ಆಗಿದೆ.
ಈ ಧಾರಾವಾಹಿ ಆರಂಭದಲ್ಲಿ ಕೃಷ್ಣವರ್ಣದ ಮುದ್ದು ಹುಡುಗಿ ನಕ್ಷತ್ರಳಿಗೆ ಅಹಂಕಾರ ತುಂಬಿರುವ ಅಧಿಕಾರ ಹಾಗೂ ಹಣದ ಕೊಬ್ಬಿನಿಂದ ಮೆರೆಯುತ್ತಿರುವ ಶ್ವೇತಾ ಎದುರಾಳಿ ಎಂದೇ ಪ್ರೇಕ್ಷಕರು ತಿಳಿದುಕೊಂಡಿದ್ದರು. ಅಲ್ಲದೆ ಇಬ್ಬರು ಕೂಡ ಭೂಪತಿ ಪ್ರೀತಿಯಲ್ಲಿ ಬಿದ್ದ ಕಾರಣ ಭೂಪತಿಯನ್ನು ಮದುವೆ ಆಗುವ ವಿಚಾರದಲ್ಲಿ ಇಬ್ಬರ ನಡುವೆ ಇದ್ದ ವೈರತ್ವ ಮತ್ತಷ್ಟು ಹೆಚ್ಚಾಯಿತು.
ಮಧ್ಯೆ ಮಧ್ಯೆ ಮಿಲ್ಲಿ ಎನ್ನುವ ಪಾತ್ರಧಾರಿ ಕೂಡ ಆಕೆ ತಾಯಿಗೆ ಕರೆ ಮಾಡಿ ಎಲ್ಲವನ್ನು ವಿವರಿಸುತ್ತಿದ್ದ ಪರಿ ಕಥೆಯಲ್ಲಿ ಮತ್ಯಾರೋ ವಿಲನ್ ಇದ್ದಾರೆ ಎನ್ನುವುದರ ಸುಳಿವನ್ನು ನೀಡುತ್ತಿತ್ತು. ಆದರೆ ಅದರ ಬಗ್ಗೆ ತಿಳಿಯುವ ಮುನ್ನವೇ ಭೂಪತಿ ಕೊನೆಯ ತಮ್ಮ ಧ್ರುವ ಕಾಣಿಸಿಕೊಂಡ ಎಪಿಸೋಡ್ ಗಳನ್ನು ನೋಡಿದರೆ ಇವನೇ ಇನ್ನು ಈ ಕಥೆಗೆ ವಿಲನ್ ಎನ್ನುವಂತೆ ಇತ್ತು. ಜೊತೆಗೆ ಸೌಂದರ್ಯ ಮತ್ತು ಹಣಕ್ಕೆ ಹೆಚ್ಚು ಬೆಲೆ ಕೊಡುವ ಭೂಪತಿ ತಾಯಿ ಕೂಡ ಕಥೆಗೆ ಒಂದು ರೀತಿ ವಿಲನ್ ಎಂದೇ ಎಲ್ಲರೂ ಮಾತನಾಡುತ್ತಿದ್ದರು.
ಈಗ ಇತ್ತೀಚಿನ ಎಪಿಸೋಡ್ ಗಳು ಎಲ್ಲರ ಲೆಕ್ಕಾಚಾರವನ್ನು ಉಲ್ಟಾ ಮಾಡಿದೆ. ನಕ್ಷತ್ರ ತಂದೆ ಚಂದ್ರಶೇಖರ್ ಅವರ ಸಹೋದರಿ ಮನೆಯಲ್ಲಿಯೇ ಇದ್ದುಕೊಂಡು ಅವನಿಗೆ ಹಳ್ಳ ತೊಡುತ್ತಿದ್ದಾಳೆ. ಚಂದ್ರಶೇಖರ್ ಸಹೋದರಿ ಭಾರ್ಗವಿಯೇ ಇಷ್ಟು ದಿನ ಮುಖ ಮುಚ್ಚಿಟ್ಟುಕೊಂಡು ಆಟ ಆಡಿಸುತ್ತಿದ್ದ ಲೇಡಿ ವಿಲನ್ ಎನ್ನುವುದು ತಿಳಿದಿದೆ. ಮಿಲಿ ಕೂಡ ಆಕೆಯ ಮಗಳು ಎನ್ನುವುದು ಪ್ರೇಕ್ಷಕರಿಗೆ ತಿಳಿದಿದ್ದು ಆದರೆ ಕಥೆಯ ಪಾತ್ರಗಳಿಗೆ ಇನ್ನು ಈ ವಿಷಯಗಳ ಅರಿವಾಗಿಲ್ಲ.
ಇದೆಲ್ಲದರ ನಡುವೆ ಧಾರಾವಾಹಿಯಲ್ಲಿ ಮತ್ತೊಬ್ಬ ವಿಲ್ಲನ್ ಎಂಟ್ರಿ ಆಗಿದೆ. ಅದು ಮತ್ಯಾರು ಅಲ್ಲ ಈವರೆಗೆ ಕಿರುತೆರೆ ಲೋಕದಲಿ ಸಾಫ್ಟ್ ಹುಡುಗಿ ಎಂದು ಕರೆಸಿಕೊಂಡಿದ್ದ ವೈಷ್ಣವಿ ಗೌಡ. ಅಗ್ನಿಸಾಕ್ಷಿ ಎನ್ನುವ ಮೆಘಾ ಧಾರವಾಹಿಯಲ್ಲಿ ಮಾಡಿದ ಸನ್ನಿಧಿ ಪಾತ್ರವು ಆಕೆಗೆ ಸಾಫ್ಟ್ ಹುಡುಗಿ ಎನ್ನುವ ಪಟ್ಟವನ್ನು ನೀಡಿತ್ತು. ಇದಾದ ಬಳಿಕ ಸಿನಿಮಾ ಹಾಗೂ ಕಿರುತೆರೆ ರಿಯಾಲಿಟಿ ಶೋ ಅಲ್ಲೂ ಕೂಡ ಇವರು ಕಾಣಿಸಿಕೊಂಡಿದ್ದರು.
ನಿಜಜೀವನದಲ್ಲೂ ಕೂಡ ಸನ್ನಿಧಿ ಪಾತ್ರದಂತೆ ಸಾಫ್ಟ್ ಆಗಿರುವ ಇವರು ಇದೀಗ ವಿಲನ್ ಆಗಿ ಲಕ್ಷಣ ಧಾರಾವಾಹಿಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಮೊದಲಿಗೆ ಪ್ರೇಕ್ಷಕರು ಒಪ್ಪುವುದಿಲ್ಲ ಎಂದು ನಿರಾಕರಿಸಿದ್ದ ಇವರು ಪಾತ್ರದ ಮಹತ್ವ ತಿಳಿದು ಹಾಗೂ ಅದಕ್ಕಾಗಿ ತಂಡ ಕೊಡುತ್ತಿರುವ ಭಾರಿ ಸಂಭಾವನೆಗೆ ಮಣಿದು ಒಪ್ಪಿಕೊಂಡಿದ್ದಾರೆ. ಬಲವಾದ ಮೂಲಗಳ ಪ್ರಕಾರ ಒಂದು ಎಪಿಸೋಡ್ ಗೆ ಬರೋಬ್ಬರಿ 80 ಸಾವಿರ ರೂಪಾಯಿಗಳನ್ನು ವೈಷ್ಣವಿ ಗೌಡ ಅವರು ಸಂಭಾವನೆಯಾಗಿ ಪಡೆಯುತ್ತಿದ್ದಾರಂತೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ