Home Entertainment ನಿಶ್ಚಿತಾರ್ಥದ ಸಮಯದಲ್ಲಿ ಉಂಗುರ ಬದಲಾಯಿಸಿಕೊಂಡ ತಕ್ಷಣ ಕಣ್ಣೀರಿಟ್ಟ ಹರಿಪ್ರಿಯಾ, ಕಣ್ಣೀರು ಒರೆಸಿ, ಆಕೆಯನ್ನು ಸಂತೈಸಿದ ವಸಿಷ್ಠ ಸಿಂಹ ಈ ಕ್ಯೂಟ್ ವಿಡಿಯೋ ನೋಡಿ.

ನಿಶ್ಚಿತಾರ್ಥದ ಸಮಯದಲ್ಲಿ ಉಂಗುರ ಬದಲಾಯಿಸಿಕೊಂಡ ತಕ್ಷಣ ಕಣ್ಣೀರಿಟ್ಟ ಹರಿಪ್ರಿಯಾ, ಕಣ್ಣೀರು ಒರೆಸಿ, ಆಕೆಯನ್ನು ಸಂತೈಸಿದ ವಸಿಷ್ಠ ಸಿಂಹ ಈ ಕ್ಯೂಟ್ ವಿಡಿಯೋ ನೋಡಿ.

0
ನಿಶ್ಚಿತಾರ್ಥದ ಸಮಯದಲ್ಲಿ ಉಂಗುರ ಬದಲಾಯಿಸಿಕೊಂಡ ತಕ್ಷಣ ಕಣ್ಣೀರಿಟ್ಟ ಹರಿಪ್ರಿಯಾ, ಕಣ್ಣೀರು ಒರೆಸಿ, ಆಕೆಯನ್ನು ಸಂತೈಸಿದ ವಸಿಷ್ಠ ಸಿಂಹ ಈ ಕ್ಯೂಟ್ ವಿಡಿಯೋ ನೋಡಿ.

ಹರಿಪ್ರಿಯಾ ವಸಿಷ್ಠ ಸಿಂಹ ನಿಶ್ಚಿತಾರ್ಥ

ಕಂಚಿನ ಕಂಠವುಳ್ಳ ನಟ ವಸಿಷ್ಟ ಸಿಂಹ ಕಳೆದ ವಾರವಷ್ಟೇ ನಟಿ ಹರಿಪ್ರಿಯಾ ಅವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಿಶ್ಚಿತಾರ್ಥದ ಫೋಟೋಗಳು ವೈರಲ್ ಆದ ತಕ್ಷಣ ಎಲ್ಲರೂ ಕೂಡ ಆಶ್ಚರ್ಯ ಪಟ್ಟರು ಏಕೆಂದರೆ ಇವರಿಬ್ಬರು ಎಲ್ಲಿಯೂ ಕೂಡ ತಾವಿಬ್ಬರು ಪ್ರೇಮಿಗಳನ್ನು ಬಂದೇ ಬಿಂಬಿಸಿಕೊಂಡಿರಲಿಲ್ಲ. ಅಷ್ಟೇ ಅಲ್ಲದೆ ನಿಶ್ಚಿತಾರ್ಥ ಮಾಡಿಕೊಳ್ಳುತ್ತಿರುವ ವಿಚಾರವನ್ನು ಚಿತ್ರತಂಡದಲ್ಲಾಗಲಿ ಅಥವಾ ಅಭಿಮಾನಿಗಳ ಜೊತೆಯಾಗಲಿ ಎಲ್ಲಿಯೂ ಕೂಡ ಹೇಳಿಕೊಂಡಿರಲಿಲ್ಲ.

ಗುಟ್ಟಾಗಿಯೇ ನಿಶ್ಚಿತಾರ್ಥ ಮಾಡಿಕೊಂಡಿದ್ದರು ಕೆಲವು ಫೋಟೋಗಳು ವೈರಲ್ ಆದ ತಕ್ಷಣ ಎಲ್ಲರೂ ಕೂಡ ಆಶ್ಚರ್ಯ ವ್ಯಕ್ತಪಡಿಸಿದರು
ಇನ್ನು ನಟಿ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಕನ್ನಡದ ಯಾವ ಸಿನಿಮಾದಲ್ಲಿಯೂ ಕೂಡ ಒಟ್ಟಿಗೆ ಅಭಿನಯಿಸಿರಲಿಲ್ಲ. ಇಬ್ಬರೂ ಚಿಕ್ಕ ವಯಸ್ಸಿನಿಂದ ಸ್ನೇಹಿತರು ಕೂಡ ಅಲ್ಲ, ಸಂಬಂಧಿಕರು ಕೂಡ ಅಲ್ಲ ಆಗಿದ್ದರೂ ಕೂಡ ಇವರ ಇಬ್ಬರ ನಡುವೆ ಪ್ರೇಮಾಂಕುರ ಹೇಗೆ ಬೆಳೆಯಿತು ಎಂಬ ಗೊಂದಲ ಸಾಕಷ್ಟು ಅಭಿಮಾನಿಗಳಲ್ಲಿ ಇತ್ತು.

ಅಸಲಿಗೆ ನಟಿ ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಒಟ್ಟಿಗೆ ಕೆಲಸ ಮಾಡಿದೆ ಇದ್ದರೂ ಕೂಡ ತೆಲುಗು ಸಿನಿಮಾ ಒಂದರಲ್ಲಿ ಇಬ್ಬರು ಒಟ್ಟಾಗಿ ನಟಿಸುತ್ತಿದ್ದರು. ಈ ಸಮಯದಲ್ಲಿ ಇವರಿಬ್ಬರು ಸ್ನೇಹಿತರಾಗುತ್ತಾರೆ ದಿನ ಕಳೆದಂತೆ ಬಾಂಧವ್ಯ ಹೆಚ್ಚಾಗಿ ಸ್ನೇಹ ಪ್ರೀತಿಗಾಗಿ ತಿರುಗುತ್ತದೆ. ಇನ್ನು ಇವರ ಪ್ರೀತಿಯ ಸಂಕೇತವಾಗಿ ವಸಿಷ್ಠ ಸಿಂಹ ಅವರು ಕ್ರಿಸ್ಟಲ್ ಎಂಬ ನಾಯಿಮರಿ ಒಂದನ್ನು ಕೂಡ ನಟಿ ಹರಿಪ್ರಿಯಾ ಅವರಿಗೆ ಉಡುಗೊರೆಯನ್ನಾಗಿ ನೀಡಿದ್ದರಂತೆ.

ಈ ವಿಚಾರವನ್ನು ಮೊನ್ನೆ ಎಷ್ಟೇ ನಟಿ ಹರಿಪ್ರಿಯ ಅವರು ವಿಡಿಯೋ ಮಾಡುವುದರ ಮೂಲಕ ತಮ್ಮ instagram ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೆಲ್ಲ ಒಂದು ಕಡೆಯಾದರೆ ಇಂದು ನಟಿ ಹರಿಪ್ರಿಯಾ ಮತ್ತು ವಸಿಷ್ಠ ಸಿಂಹ ಇಬ್ಬರೂ ಕೂಡ ತಮ್ಮ ನಿಶ್ಚಿತಾರ್ಥದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿದ್ದಾರೆ. ಈ ವಿಡಿಯೋದಲ್ಲಿ ನಾವು ಹರಿಪ್ರಿಯಾ ಅವರಿಗೆ ವಸಿಷ್ಟ ಸಿಂಹ ಉಂಗುರವನ್ನು ತೊಡಿಸುವುದನ್ನು ಕಾಣಬಹುದು. ನಂತರ ಹರಿಪ್ರಿಯಾ ಸಂತೋಷಕ್ಕೆ ಕಣ್ಣೀರು ಹಾಕಿದ್ದಾರೆ ಇದನ್ನು ನಾವು ಆನಂದ ಭಾಷ್ಪ ಅಂತಾನೆ ಹೇಳಬಹುದು.

ಏಕೆಂದರೆ ಮದುವೆ ಎಂಬುದು ಪ್ರತಿಯೊಬ್ಬ ಹೆಣ್ಣಿನ ಜೀವನದಲ್ಲೂ ಕೂಡ ಮಹತ್ತರ ಘಟ್ಟವಾಗಿರುತ್ತದೆ ಮದುವೆಯಾದ ನಂತರ ಆಕೆಯ ಸಂಪೂರ್ಣ ಜೀವನವೇ ಬದಲಾಗಿ ಹೋಗುತ್ತದೆ. ಹಾಗಾಗಿ ಈ ಮದುವೆಯ ಬಗ್ಗೆ ಸಾಕಷ್ಟು ಹೆಣ್ಣು ಮಕ್ಕಳು ಆಸೆ ಮತ್ತು ಕನಸನ್ನು ಹೊಂದಿರುತ್ತಾರೆ. ಅದರಲ್ಲಿಯೂ ಕೂಡ ತಾವು ಪ್ರೀತಿಸಿದ ಹುಡುಗನನ್ನುಯೇ ಮದುವೆಯಾಗುತ್ತಿದ್ದೇವೆ ಎಂಬ ವಿಚಾರ ತಿಳಿದಾಗ ಆಕೆಗೆ ಆಗುವಂತಹ ಸಂತೋಷ ಹೇಳತೀರದು.

ಸದ್ಯಕ್ಕೆ ಹರಿಪ್ರಿಯಾ ಅವರ ಪರಿಸ್ಥಿತಿಯು ಕೂಡ ಅದೇ ರೀತಿ ಇದೆ ವಸಿಷ್ಠ ಸಿಂಹ ಅವರನ್ನು ಪ್ರೀತಿಸಿ ಅವರನ್ನೇ ಮದುವೆಯಾಗುತ್ತಿದ್ದಾರೆ ನಿಶ್ಚಿತಾರ್ಥದ ವೇಳೆ ತಮ್ಮ ಪ್ರೀತಿಯನ್ನು ನೆನಪಿಸಿಕೊಂಡು ಹರಿಪ್ರಿಯ ಅವರು ಕಣ್ಣೀರು ಹಾಕಿದ್ದಾರೆ. ಇನ್ನು ನಟಿ ಹರಿಪ್ರಿಯ ಕಣ್ಣೀರು ಹಾಕುತ್ತಿದ್ದ ಸಮಯದಲ್ಲಿ ಅದನ್ನು ನೋಡಿದಂತಹ ವಸಿಷ್ಟ ಸಿಂಹ ಹಾಕಿದ ಕಣ್ಣೀರು ಒರೆಸಿ ಆಕೆಗೆ ಒಂದು ಅಪ್ಪಿಗೆ ನೀಡುತ್ತಾರೆ.

ತದನಂತರ ಹಣೆಯ ಮೇಲೆ ಮುತ್ತಿಟ್ಟು ಸಂತೈಸುತ್ತಾರೆ ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಈ ಕ್ಯೂಟ್ ಜೋಡಿಗಳ ವಿಡಿಯೋ ವೈರಲ್ ಆಗಿದ್ದು ನೋಡುಗರ ಮನಸ್ಸನ್ನು ಸೆಳೆದಿದೆ. ಇನ್ನು ಹರಿಪ್ರಿಯ ಮತ್ತು ವಸಿಷ್ಠ ಸಿಂಹ ಅಭಿಮಾನಿಗಳು ಕೂಡ ಈ ವಿಡಿಯೋಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ನೀವು ಕೂಡ ಈ ಕ್ಯೂಟ್ ವಿಡಿಯೋ ನೋಡಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ನಮಗೆ ಕಮೆಂಟ್ ಮುಖಾಂತರ ತಿಳಿಸಿ.

LEAVE A REPLY

Please enter your comment!
Please enter your name here