ಈ ವರ್ಷದ ಮೊದಲ ತಾರಾ ಜೋಡಿ ಆಗಿ ವಸಿಷ್ಠ ಸಿಂಹ ಹಾಗೂ ನಾಯಕ ನಟಿ ಹರಿಪ್ರಿಯಾ ಅವರು ಹಸಿಮಣೆ ಏರುತ್ತಿದ್ದಾರೆ. ಕಳೆದ ವರ್ಷ ನವೆಂಬರ್ ಅಂತ್ಯದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿಗಳು ಜನವರಿ ತಿಂಗಳಿನಲ್ಲಿಯೇ ಮದುವೆ ಆಗಲು ನಿರ್ಧಾರ ಮಾಡಿ ಅದರ ಕೆಲಸಗಳಲ್ಲಿ ಬಿಸಿ ಆಗಿದ್ದಾರೆ. ಈ ಮಧ್ಯೆ ಸಂದರ್ಶನ ಒಂದರಲಿ ಸಿಕ್ಕು, ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ.
ನಟಿ ಹರಿಪ್ರಿಯ ಹಾಗೂ ವಸಿಷ್ಠ ಸಿಂಹ ಅವರು ಜೊತೆಜೊತೆಯಾಗಿ ಓಡಾಡಿರುವ ಫೋಟೋಗಳು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದವು. ಆಗ ಬಹುತೇಕ ಎಲ್ಲರೂ ಇದು ಯಾವುದು ಸಿನಿಮಾ ಶೂಟಿಂಗ್ ಇರಬೇಕು ಎಂದೇ ಅಂದುಕೊಂಡಿದ್ದರು. ಆದರೆ ದಿಢೀರ್ ಎಂದು ಇವರಿಬ್ಬರು ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಇವರಿಬ್ಬರ ನಡುವೆ ಪ್ರೀತಿ ಇತ್ತು ಎನ್ನುವ ವಿಷಯ ರಿವಿಲ್ ಆಗಿದೆ.
ಈ ಪ್ರೀತಿ ಬಗ್ಗೆ ಎಂಗೇಜ್ಮೆಂಟ್ ಆದ ಬಳಿಕ ಇಬ್ಬರು ಸಹ ಪೋಸ್ಟ್ ಹಾಕಿಕೊಳ್ಳುತ್ತಾ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ವಸಿಷ್ಠ ಅವರು ನಾಯಿಮರಿ ಗಿಫ್ಟ್ ಕೊಟ್ಟಿದ್ದನ್ನು ಹರಿಪ್ರಿಯ ಹೇಳಿಕೊಂಡಿದ್ದರು. ಈಗ ಸಂದರ್ಶನದಲ್ಲಿ ಅದೇ ಪ್ರಶ್ನೆಯನ್ನು ಸಂದರ್ಶನಕಾರರು ವಸಿಷ್ಠ ಸಿಂಹ ಅವರಿಗೆ ಕೇಳಿದ್ದಾರೆ. ಅದಕ್ಕೆ ವಸಿಷ್ಠ ಸಿಂಹ ಅವರು ಬರೀ ನಾಯಿ ಮರಿಕೊಟ್ಟು ಪಠಾಯಿಸಿಕೊಂಡಿಲ್ಲ ಗುರು ಅದಕ್ಕಾಗಿ ಬಹಳ ಕಷ್ಟ ಪಟ್ಟಿದ್ದೇನೆ.
ಎಲ್ಲರೂ ಇದನ್ನು ಹೇಳುತ್ತಾರೆ ಅಷ್ಟೆಲ್ಲಾ ಕಷ್ಟ ಪಟ್ಟಿದ್ದು ವ್ಯರ್ಥಾನ ಎನಿಸಿಬಿಡುತ್ತದೆ ಆದರೆ ನಾನು ಅವರಿಗೆ ನಾಯಿಮರಿ ಗಿಫ್ಟಾಗಿ ಕೊಟ್ಟಿದ್ದು ನಿಜ ಆದರೆ ನಾನು ಗಿಫ್ಟ್ ಕೊಟ್ಟ ಸಮಯದಲ್ಲಿ ಅದರ ಮೇಲೆ ಹಾರ್ಟ್ ಶೇಪ್ ಇತ್ತು ಅನ್ನುವುದನ್ನು ಅಬ್ಸರ್ವ್ ಮಾಡಿರಲಿಲ್ಲ. ಅವರ ಮನೆಯಲ್ಲಿ ಲಕ್ಕಿ ಎನ್ನುವ ನಾಯಿಮರಿ ಇತ್ತು ಅದಕ್ಕೆ ಕ್ಯಾನ್ಸರ್ ಆಗಿ ತೀರಿ ಹೋಯಿತು. ಆ ಸಮಯದಲ್ಲಿ ಅವರು ಬಹಳ ದುಃಖದಲ್ಲಿ ಇದ್ದರು ಯಾಕೆಂದರೆ ಅವರಿಗೆ ನಾಯಿಮರಿ ಎಂದರೆ ತುಂಬಾ ಇಷ್ಟ
ಅವರ ಮನೆಯಲ್ಲಿ ಹ್ಯಾಪಿ ಎನ್ನುವ ಇನ್ನೊಂದು ನಾಯಿಮರಿ ಇದೆ ಅದರ ಜೊತೆಗೆ ಆಗಲಿ ಎಂದು ನಾನು ಕ್ರಿಸ್ಟಲ್ ಎನ್ನುವ ನಾಯಿ ಮರಿಯನ್ನು ಗಿಫ್ಟ್ ಕೊಟ್ಟೆ. ಕ್ರಿಸ್ಟಲ್ ಮತ್ತು ಹ್ಯಾಪಿ ಇಬ್ಬರದ್ದು ಸಹ ಡಿಸೆಂಬರ್ 6 ಡೇ ಇರುವುದು ಆಗ ಅವರು ಪ್ರೀತಿಗೆ ಕನ್ನಡಿ ಎಂದಿದ್ದರು. ಆ ಸಮಯದಲ್ಲಿ ಅದು ಬಹಳ ಗೊಂದಲ ಕೂಡ ಉಂಟು ಮಾಡಿತ್ತು. ನಮ್ಮಿಬ್ಬರ ನಡುವೆ ಮೊದಲಿಗೆ ಸ್ನೇಹ ಉಂಟಾಗಿತ್ತು ಆಕ್ಟಿಂಗ್ ಅಲ್ಲಿ ಅವರೇ ನನ್ನ ಸೀನಿಯರ್ ಮತ್ತು ನನ್ನ ಫೇವರೆಟ್ ನಟಿ ಕೂಡ.
ನನ್ನ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಆಕ್ಟಿಂಗ್ ನೋಡಿ ಅವರೇ ಬಂದು ನನ್ನನ್ನು ಮಾತನಾಡಿಸಿದ್ದರು. ಆ ಸಮಯದಲ್ಲಿ ಇವರೆಷ್ಟು ಒಳ್ಳೆಯವರು ಎನ್ನುವ ಅಭಿಪ್ರಾಯ ಮೂಡಿತು. ನಂತರ ಅದು ಸ್ನೇಹವಾಗಿ, ಸ್ನೇಹ ಪ್ರೀತಿಯಾಗಿ ಈಗ ಮದುವೆ ಹಂತಕ್ಕೆ ಬಂದು ತಲುಪಿದೆ. ನಾನು ಮೈಸೂರಿನಲ್ಲಿ ಮದುವೆ ಆಗಲು ನಿರ್ಧಾರ ಮಾಡಿದ್ದೇನೆ. ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ನಮ್ಮ ಮದುವೆಗೆ ಸಿದ್ಧತೆ ನಡೆಯುತ್ತಿದೆ.
ನನ್ನ ಹುಟ್ಟೂರು ಮೈಸೂರು ನಾನು ಬೆಳೆದಿದ್ದು ಕಾಲೇಜು ಎಲ್ಲವೂ ಸಹ ಅಲ್ಲೇ ಆಗಿದ್ದು. ನನ್ನ ತಾಯಿ ಹೋದಾಗ ಚಾಮುಂಡಿ ತಾಯಿಯನ್ನು ನಾನು ನೋಡುತ್ತಿದ್ದೆ. ಈಗ ಅವರ ಊರಿನಲ್ಲಿ ಮದುವೆಯಾಗುವ ಇಚ್ಛೆ ಇದೆ ನನ್ನ ತಾಯಿ ಸ್ಥಾನಕ್ಕೆ ನನ್ನ ನೋವುಗಳಲ್ಲಿ ಜೊತೆಯಾಗಲು ಹರಿಪ್ರಿಯಾ ಅವರು ಬರುತ್ತಿದ್ದಾರೆ ಎನ್ನುವುದು ಬಹಳ ಖುಷಿ ಆಗಿದೆ ಎಂದಿದ್ದಾರೆ.