ವಿಜಯ್ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಅವರು ರಿಲೇಷನ್ಶಿಪ್ ನಲ್ಲಿ ಇದ್ದಾರೆ ಎನ್ನುವುದು ತೆಲುಗು ಇಂಡಸ್ಟ್ರಿಯ ಹಲವು ಜನರ ಬಾಯಿಂದ ಬಂದಿರುವ ಮಾತು. ಅದಕ್ಕೆ ಸಾಕ್ಷಿ ಎನ್ನುವಂತೆ ಹೈದರಾಬಾದಿನ ಹಲವು ಕಡೆಗಳಲ್ಲಿ ಇವರಿಬ್ಬರು ಓಡಾಡಿರುವ ಹಾಗೂ ಡೇಟಿಂಗ್ ನಡೆಸಿರುವ ಬಗ್ಗೆ ಮಾಹಿತಿಗಳು ಇದೆ. ಅಲ್ಲದೆ ರಶ್ಮಿಕ ಮಂದಣ್ಣ ಹಾಗೂ ರಕ್ಷಿತ್ ಶೆಟ್ಟಿ ಅವರೊಂದಿಗಿನ ಎಂಗೇಜ್ಮೆಂಟ್ ಮುರಿದು ಬೀಳಲು ಇವರಿಬ್ಬರ ರಿಲೇಷನ್ಶಿಪ್ ಕಾರಣ ಎನ್ನುವ ಗಾಳಿ ಸುದ್ದಿಗಳು ಕೂಡ ಕನ್ನಡ ಮತ್ತು ತೆಲಗು ಇಂಡಸ್ಟ್ರಿಯ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದವು. ಗೀತ ಗೋವಿಂದಂ ಎನ್ನುವ ಸಿನಿಮಾದಲ್ಲಿ ಜೋಡಿ ಆದ ಇವರು ಡಿಯರ್ ಕಾಮ್ರೆಡ್ ಸಿನಿಮಾದಲ್ಲೂ ಕೂಡ ಒಟ್ಟಿಗೆ ಕಾಣಿಸಿಕೊಂಡು ಮತ್ತೊಮ್ಮೆ ಮೋಡಿ ಮಾಡಿದ್ದರು.
ಗೀತ ಗೋವಿಂದಂ ಸಿನಿಮಾದಲ್ಲಿನ ಹಲವಾರು ದೃಶ್ಯಗಳು ರಶ್ಮಿಕ ಹಾಗೂ ರಕ್ಷಿತ್ ನಡುವೆ ಬಿರುಕು ಉಂಟು ಮಾಡಿತ್ತು ನಂತರ ಅದು ಅವರ ನಿಶ್ಚಿತಾರ್ಥವನ್ನೇ ಮುರಿಯುವಷ್ಟು ಬೆಳೆಯುತ್ತಾ ಹೋಯಿತು. ಆ ಸಮಯದಲ್ಲಿ ವಿಜಯ ದೇವರಕೊಂಡ ಅವರು ರಶ್ಮಿಕ ಮಂದಣ್ಣ ಅವರ ಪರವಾಗಿ ಮಾತನಾಡಿ ನಾವಿಬ್ಬರೂ ಜಸ್ಟ್ ಒಳ್ಳೆ ಫ್ರೆಂಡ್ಸ್ ಅಷ್ಟೇ ವಿವಾದಕ್ಕೂ ನನಗೂ ಸಂಬಂಧವಿಲ್ಲ ಎಂದು ಕೈ ತೊಳೆದುಕೊಂಡರು. ವಿಜಯ ದೇವರಕೊಂಡ ಹಾಗೂ ರಶ್ಮಿಕ ಮಂದಣ್ಣ ಇಬ್ಬರು ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತುಂಬಾ ಒಳ್ಳೆಯ ಹೆಸರು ಮಾಡಿ ಬೆಳೆಯುತ್ತಾ ಇದ್ದಾರೆ. ಸದ್ಯಕ್ಕೆ ರಶ್ಮಿಕ ಮಂದಣ್ಣ ಅವರ ಜೊತೆ ಬಾಂಧವ್ಯ ಮುರಿದುಕೊಂಡಿರುವ ರಕ್ಷಿತ್ ಶೆಟ್ಟಿ ಕೂಡ ಚಾರ್ಲಿ777 ರೀತಿಯ ಪ್ಯಾನ್ ಇಂಡಿಯಾ ಸಿನಿಮಾ ಮಾಡುವ ಮೂಲಕ ಮತ್ತೊಂದು ರೀತಿ ಬೆಳೆಯುತ್ತಿದ್ದಾರೆ.
ಫ್ರೆಂಡ್ಶಿಪ್ ಎಂದು ಹೆಸರು ಹೇಳಿಕೊಂಡು ರಶ್ಮಿಕ ಮಂದಣ್ಣ ಹಾಗೂ ವಿಜಯ ದೇವರಕೊಂಡ ಅವರು ಒಬ್ಬರಿಗೊಬ್ಬರು ಇಂಡಸ್ಟ್ರಿಯಲ್ಲಿ ಬಲವಾಗಿ ಸಪೋರ್ಟ್ ಮಾಡುತ್ತಿದ್ದಾರೆ. ಲೈಗರ್ ಎನ್ನುವ ಬಾಲಿವುಡ್ ಸಿನಿಮಾ ಮಾಡುತ್ತಿರುವ ವಿಜಯ ದೇವರಕೊಂಡ ಅವರು ಬಿಡುವು ಮಾಡಿಕೊಂಡು ಸದ್ಯಕ್ಕೆ ದುಲ್ಕರ್ ಸಲ್ಮಾನ್ ಅವರೊಂದಿಗೆ ರಶ್ಮಿಕ ಮಂದಣ್ಣ ಅವರು ನಟಿಸಿರುವ ಸೀತಾರಾಮಂ ಎನ್ನುವ ಮಲಯಾಳಂ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಕನ್ನಡ ತಮಿಳು ತೆಲುಗು ಹಾಗು ಹಿಂದಿಯಲ್ಲಿ ತಮ್ಮ ಛಾಪು ಮೂಡಿಸಿರುವ ರಶ್ಮಿಕ ಮಂದಣ್ಣ ಅವರು ಈ ಸಿನಿಮಾದ ಮೂಲಕ ಮಲಯಾಳಂ ಚಿತ್ರರಂಗಕ್ಕೂ ಪಾದರ್ಪಣೆ ಮಾಡುತ್ತಿದ್ದಾರೆ. ನ್ಯಾಷನಲ್ ಕ್ರಶ್ ಆಗಿರುವ ರಶ್ಮಿಕ ಮಂದಣ್ಣ ಅವರು ಇಲ್ಲೂ ಕೂಡ ಗೆಲ್ಲುವ ಎಲ್ಲ ಲಕ್ಷಣಗಳು ಇದೆ. ಈ ಸಿನಿಮಾದ ಚಿತ್ರೀಕರಣ ಪೂರ್ತಿಗೊಂಡಿದ್ದು ಸಿನಿಮಾ ರಿಲೀಸ್ ಮಾಡುವ ಪ್ರತಿ ರಿಲೀಸ್ ಇವೆಂಟ್ ಕಾರ್ಯಕ್ರಮವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ವಿಜಯ ದೇವರಕೊಂಡ ಅವರನ್ನೇ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ಕಾರ್ಯಕ್ರಮಕ್ಕೆ ಆಹ್ವಾನಿಸಿದ ವಿಜಯ ದೇವರಕೊಂಡ ಅವರು ಸಿನಿಮಾ ಗೆ ಸಂಬಂಧಪಟ್ಟ ಎಲ್ಲರಿಗೂ ಕೂಡ ಶುಭ ಹಾರೈಸಿದರು ಆ ಸಮಯದಲ್ಲಿ ರಶ್ಮಿಕ ಮಂದಣ್ಣ ಕಡೆ ಬಂದಾಗ ಅವರು ಕೂಡ ತಮ್ಮ ಎರಡು ಕೈಗಳಲ್ಲಿ ಬರ ಮಾಡಿಕೊಂಡು ಜೋರಾಗಿ ಹಗ್ ಮಾಡಿದ್ದಾರೆ. ಇದನ್ನು ನೋಡಿದ ಯಾರಿಗೆ ಆದರೂ ಇವರಿಬ್ಬರ ನಡುವೆ ಇರುವುದು ಜಸ್ಟ್ ಫ್ರೆಂಡ್ಶಿಪ್ ಅಷ್ಟೇನಾ ಎನ್ನುವ ಅನುಮಾನ ಕಾಡದೆ ಇರದು ಅಥವಾ ಫ್ರೆಂಡ್ಶಿಪ್ ಹೆಸರಿನಲ್ಲಿ ಹೇಳಿಕೊಂಡು ಇವರಿಬ್ಬರು ಏನಾದರೂ ಪ್ರೇಮದ ಪಾಶದಲ್ಲಿ ಸಿಲುಕಿದ್ದಾರ ಎನ್ನುವ ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ ಇವರಿಬ್ಬರ ವರ್ತನೆ. ಈ ವಿಡಿಯೋ ನೋಡಿದರೆ ನಿಮಗೆ ಏನ್ ಅನಿಸುತ್ತದೆ ತಪ್ಪದೆ ಕಾಮೆಂಟ್ ಮಾಡಿ ಈ ಮಾಹಿತಿಯನ್ನು ಲೈಕ್ & ಶೇರ್ ಮಾಡಿ