ಟೆನಿಸ್ ಕೃಷ್ಣ ಅವರು 90ರ ದಶಕದಿಂದ ಇಂದಿನವರೆಗೂ ಸುಮಾರು 600ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ನಗಿಸುತ್ತಾ ಬಂದಿದ್ದಾರೆ. ಇಂದಿಗೂ ಟೆನ್ನಿಸ್ ಕೃಷ್ಣ ಎಂದರೆ ನೆನಪಾಗುವುದು ಅವರ ನಂಜಪ್ಪನ ಮಗ ಗುಂಜಪ್ಪ ಮತ್ತು ಗಡಿಬಿಡಿ ಅಳಿಯ ಸಿನಿಮಾದ ಇನ್ನೂ ಬೆಲ್ಲು ಹೊಡಿಲಿಲ್ವೇ ಎನ್ನುವ ಡೈಲಾಗ್ ಹಾಗೆಯೇ ಅವರ ಮಾರಮ್ಮನ ಡಿಸ್ಕ್ ಎನ್ನುವ ಡೈಲಾಗ್ ಕೂಡ ವರ್ಲ್ಡ್ ಫೇಮಸ್ ಆಗಿದೆ. ಇಂದಿಗೂ ಎಷ್ಟೋ ಜನರಿಗೆ ಆ ಡೈಲಾಗ್ ಫೇವರೇಟ್ ಕೂಡ. ಅದೇ ಡೈಲಾಗ್ ಇಟ್ಟುಕೊಂಡು ಕನ್ನಡದ ರಾಪರ್ ಅಲೋಕ್ ರಾಪ್ ಸಾಂಗ್ ಒಂದನ್ನು ಮಾಡಿ ಫೇಮಸ್ ಆಗಿದ್ದಾರೆ. ಟೆನ್ನಿಸ್ ಕೃಷ್ಣ ಅವರು ಎಷ್ಟು ಒಳ್ಳೆಯ ಅದ್ಭುತ ಕಲಾವಿದ ಎನ್ನುವುದನ್ನು ಈಗಾಗಲೇ ಅವರ ಸಿನಿಮಾಗಳಲ್ಲಿ ಪ್ರೂವ್ ಮಾಡಿದ್ದಾರೆ.
ಕನ್ನಡದಲ್ಲಿ ಡಾಕ್ಟರ್ ರಾಜಕುಮಾರ್, ಅನಂತ ನಾಗ್, ರವಿಚಂದ್ರನ್, ಶಿವರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್ ಅಂತಹ ದೊಡ್ಡ ಕಲಾವಿದ ರಿಂದ ಹಿಡಿದು ಇಂದಿಗೂ ಸಹ ಸುದೀಪ್ ದರ್ಶನ್ ಎಲ್ಲರ ಸಿನಿಮಾಗಳಲ್ಲೂ ನಟಿಸಿರುವ ಖ್ಯಾತಿ ಟೆನಿಸ್ ಕೃಷ್ಣ ಅವರಿಗೆ ಸಲ್ಲುತ್ತದೆ. ಇನ್ನು ಇವರು ಸಿನಿಮಾ ಸೇರಿದ್ದಕ್ಕಿಂತ ಮುಂಚೆ ಟೆನ್ನಿಸ್ ಕೋಚ್ ಆಗಿದ್ದರಿಂದ ಇವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಬಂದಾಗ ಕೃಷ್ಣ ಹೆಸರಿನ ಜೊತೆ ಈ ಹೆಸರನ್ನು ಸೇರಿಸಲಾಯಿತು. ಅದ್ಭುತ ಸ್ಪೋರ್ಟ್ಸ್ ಮ್ಯಾನ್ ಆಗಿದ್ದ ಇವರು ಹಾಸ್ಯ ಮಾಡಿ ಜನರನ್ನು ನಕ್ಕಿ ನಗ್ಗಿಸಿದ್ದೇ ಒಂದು ಸಾಧನೆ ಎನ್ನಬಹುದು. ಅದರಲ್ಲೂ ದೊಡ್ಡಣ್ಣ ಮತ್ತು ಟೆನಿಸ್ ಕೃಷ್ಣ ಅವರ ಅದ್ಭುತವಾದ ಕಾಂಬಿನೇಷನ್ ಕನ್ನಡಿಗರನ್ನು ನಗೆ ಗಡಲಲ್ಲಿ ತೇಲಿಸಿತ್ತು. ಟೆನ್ನಿಸ್ ಕೃಷ್ಣ ಅವರ ಹೈಟ್, ಬಾಡಿ ಲ್ಯಾಂಗ್ವೇಜ್ ಎಲ್ಲವೂ ಕೂಡ ಹಾಸ್ಯಕ್ಕೆ ಹೇಳಿ ಮಾಡಿಸಿದ ರೀತಿ ಇತ್ತು. ಕನ್ನಡದ ಸೊಗಡು ಇವರ ಮಾತುಗಳಲ್ಲಿ ತುಂಬಿ ತುಳುಕುತ್ತದೆ.
ಇವರು ಇಷ್ಟೊಂದು ಫೇಮಸ್ ಆಗಿದ್ದರೂ ಕೂಡ ತಮ್ಮ ಕುಟುಂಬದ ಮತ್ಯಾವ ಸದಸ್ಯರನ್ನು ಫಿಲಂ ಇಂಡಸ್ಟ್ರಿಗೆ ತರಲು ಇಷ್ಟಪಡಲಿಲ್ಲ. ಅದರಲ್ಲೂ ಇವರ ಒಬ್ಬಳೇ ಒಬ್ಬಳು ಮಗಳು ರಂಜಿತ ಬಹಳ ಸುಂದರವಾಗಿದ್ದು ಇವರು ಯಾವ ನಟಿ ಮಣಿಗಿಂತಲೂ ಕಡಿಮೆ ಇಲ್ಲ ಆದರೆ ಕೂಡ ಟೆನಿಸ್ ಕೃಷ್ಣ ಅವರು ಅವರ ಮಕ್ಕಳನ್ನು ಸಿನಿಮಾ ಇಂಡಸ್ಟ್ರಿಗೆ ತರಲು ಇಷ್ಟಪಡಲಿಲ್ಲ. ಅಲ್ಲದೆ ಸಿನಿಮಾ ಇಂಡಸ್ಟ್ರಿಗೆ ಸಂಬಂಧಪಟ್ಟ ಯಾವ ಕೆಲಸವನ್ನು ಅವರು ಮಾಡುತ್ತಿಲ್ಲ ಬದಲಾಗಿ ಅವರು ಈಗ ಕಾರ್ಪೊರೇಟರ್ ಕಂಪನಿ ಕೆಲಸ ಮಾಡುತ್ತಿದ್ದು ಮದುವೆಯಾಗಿ ಮಗುವೊಂದಿಗೆ ಸಂತೋಷದ ಜೀವನ ಕಳೆಯುತ್ತಿದ್ದಾರೆ. ಇನ್ನು ಟೆನಿಸ್ ಕೃಷ್ಣ ಅವರು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಕಂಟೆಸ್ಟೆಂಟ್ ಆಗಿ ಬರುವ ಬಗ್ಗೆ ಹಲವು ದಿನಗಳಿಂದ ಗಾಳಿ ಸುದ್ದಿ ಹಬ್ಬಿದೆ. ಈ ಬಗ್ಗೆ ಅವರನ್ನು ಮಾಧ್ಯಮದವರು ಪ್ರಶ್ನಿಸಿದಾಗ ಅವರು ಈ ರೀತಿ ಉತ್ತರ ಕೊಟ್ಟಿದ್ದಾರೆ.
ನನ್ನ ಹೆಸರು ಬಿಗ್ ಬಾಸ್ ಸೀಸನ್ ಎರಡನೇ ಆವೃತ್ತಿಯಿಂದ ಹಲವು ಬಾರಿ ಕೇಳಿ ಬರುತ್ತಿದೆ. ಈ ವರ್ಷವೂ ಕೂಡ ಅದೇ ರೀತಿ ಮಾತುಗಳು ಇದೆ ಆದರೆ ನಾನು ಈ ಹಿಂದೆಯೇ ಹೇಳಿಕೆ ಕೊಟ್ಟಿದ್ದೇನೆ. ಕೋಟಿ ಹಣ ಕೊಟ್ಟರೂ ಕೂಡ ನಾನು ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು. ಆ ಮಾತಿನ ಪ್ರಕಾರವೇ ನಾನು ನಡೆದುಕೊಳ್ಳುತ್ತಿದ್ದೇನೆ. ಈಗ ನನ್ನ ಬಗ್ಗೆ ಅಪಪ್ರಚಾರ ಇದೆ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಲಿ ಎಂದೇ ನಾನು ಈ ರೀತಿ ಹೇಳಿಕೆ ಕೊಟ್ಟಿದ್ದೇನೆ ಎನ್ನುತ್ತಿದ್ದಾರೆ ಏನೇ ಇದ್ದರೂ ಕೂಡ ನಾನು ಆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದು ಹೇಳಿದ್ದಾರೆ.