ಕೋಟಿ, ಕೋಟಿ ಹಣ ಕೊಟ್ರು ಬಿಗ್ ಬಾಸ್ ಮನೆಗೆ ನಾನು ಹೋಗಲ್ಲ ಅನ್ನುತ್ತಿರವ ಟೆನಿಸ್ ಕೃಷ್ಣ, ಯಾಕೆ ಗೊತ್ತಾ.?
ಟೆನಿಸ್ ಕೃಷ್ಣ ಅವರು 90ರ ದಶಕದಿಂದ ಇಂದಿನವರೆಗೂ ಸುಮಾರು 600ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ನಗಿಸುತ್ತಾ ಬಂದಿದ್ದಾರೆ. ಇಂದಿಗೂ ಟೆನ್ನಿಸ್ ಕೃಷ್ಣ ಎಂದರೆ ನೆನಪಾಗುವುದು ಅವರ ನಂಜಪ್ಪನ ಮಗ ಗುಂಜಪ್ಪ ಮತ್ತು ಗಡಿಬಿಡಿ ಅಳಿಯ ಸಿನಿಮಾದ ಇನ್ನೂ ಬೆಲ್ಲು ಹೊಡಿಲಿಲ್ವೇ ಎನ್ನುವ ಡೈಲಾಗ್ ಹಾಗೆಯೇ ಅವರ ಮಾರಮ್ಮನ ಡಿಸ್ಕ್ ಎನ್ನುವ ಡೈಲಾಗ್ ಕೂಡ ವರ್ಲ್ಡ್ ಫೇಮಸ್ ಆಗಿದೆ. ಇಂದಿಗೂ ಎಷ್ಟೋ ಜನರಿಗೆ ಆ ಡೈಲಾಗ್ ಫೇವರೇಟ್ ಕೂಡ. ಅದೇ ಡೈಲಾಗ್ ಇಟ್ಟುಕೊಂಡು ಕನ್ನಡದ ರಾಪರ್…