Home Entertainment ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಪ್ಪು ಕಟೌಟ್, ಸಿನಿಮಾದ ಪ್ರಚಾರಕ್ಕಾಗಿ ಕಿಚ್ಚ ಮಾಡುತ್ತಿರುವ ಗಿಮಿಕ್ ಅನ್ನುತ್ತಿದ್ದಾರೆ ನೆಟ್ಟಿಗರು.

ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಪ್ಪು ಕಟೌಟ್, ಸಿನಿಮಾದ ಪ್ರಚಾರಕ್ಕಾಗಿ ಕಿಚ್ಚ ಮಾಡುತ್ತಿರುವ ಗಿಮಿಕ್ ಅನ್ನುತ್ತಿದ್ದಾರೆ ನೆಟ್ಟಿಗರು.

0
ವಿಕ್ರಾಂತ್ ರೋಣ ಸಿನಿಮಾದಲ್ಲಿ ಅಪ್ಪು ಕಟೌಟ್, ಸಿನಿಮಾದ ಪ್ರಚಾರಕ್ಕಾಗಿ ಕಿಚ್ಚ ಮಾಡುತ್ತಿರುವ ಗಿಮಿಕ್ ಅನ್ನುತ್ತಿದ್ದಾರೆ ನೆಟ್ಟಿಗರು.

ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಸಿನಿಮಾ ತೆರಿಗೆ ಬರಲು ಇನ್ನೂ ಕೇವಲ ನಾಲ್ಕೇ ನಾಲ್ಕು ದಿನಗಳು ಬಾಕಿ ಉಳಿದಿದೆ ಇದು ಕಿಚ್ಚ ಸುದೀಪ್ ಅವರ ಬಹು ನಿರೀಕ್ಷಿತ ಸಿನಿಮಾ. ಏಕೆಂದರೆ ಕಿಚ್ಚ ಸುದೀಪ್ ಅವರ ಮೊದಲ ಥ್ರೀ ಡಿ ಸಿನಿಮಾ ಅಷ್ಟೇ ಅಲ್ಲದೆ ಪ್ಯಾನ್ ಇಂಡಿಯಾ ಸಿನಿಮಾ ಕೂಡ ಹೌದು. ಕೆಜಿಎಫ್ ಸಿನಿಮಾದ ನಂತರ ಅತಿ ದೊಡ್ಡ ಬಡ್ಜೆಟ್ ನಲ್ಲಿ ಸಿದ್ಧವಾಗುತ್ತಿರುವ ಸಿನಿಮಾ ಅಂದರೆ ಅದು ವಿಕ್ರಾಂತ್ ರೋಣ ಅಂತ ಹೇಳಬಹುದು. ಟ್ರೈಲರ್ ಮತ್ತು ಟೀಸರ್ ಹಾಡುಗಳ ಮುಖಾಂತರ ಬಹಳಷ್ಟು ಸದ್ದು ಮಾಡಿರುವ ವಿಕ್ರಂತ್ ರೋಣ ಸಿನಿಮಾ ತೆರೆ ಮೇಲೆ ಯಾವ ರೀತಿ ಮೂಡಿ ಬರಲಿದೆ ಎಂಬುದನ್ನು ನೋಡುವುದಕ್ಕೆ ಅಭಿಮಾನಿಗಳು ಸಾಕಷ್ಟು ಉತ್ಸುಕರಾಗಿದ್ದಾರೆ.

ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ ಹೀಗೆ ಸುಮಾರು ಐದು ಭಾಷೆಯಲ್ಲಿ ಏಕ್ರಾಂತ್ ರೋಣ ಸಿನಿಮಾ ಬಿಡುಗಡೆಯಾಗಲಿದೆ ವಿಶೇಷ ಏನೆಂದರೆ ಈ ಬಾರಿ ವಿಕ್ರಾಂತ್ ರೋಣ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಮೊತ್ತದ ಹೆಸರು ಪಡೆಯುತ್ತಿದೆ. ಕಿಚ್ಚ ಸುದೀಪ್ ಚಿತ್ರರಂಗಕ್ಕೆ ಬಂದು 25 ವರ್ಷವಾಯಿತು ಯಾವ ಬಾರಿಯೂ ಕೂಡ ಯಾವ ಸಿನಿಮಾಗೂ ಕೂಡ ಇಷ್ಟು ದೊಡ್ಡ ಪ್ರಮಾಣದ ಕಟ್ ಔಟ್ ಗಳನ್ನು ನಿಲ್ಲಿಸಿರಲಿಲ್ಲ. ಆದರೆ ಈ ಬಾರಿ ಸುಮಾರು ನೂರಕ್ಕೂ ಅಧಿಕ ಕಟೌಟ್ಗಳನ್ನು ಸಿದ್ಧಪಡಿಸಲಾಗುತ್ತಿದೆ ಅದರಲ್ಲಿ ವಿಶೇಷತೆ ಏನೆಂದರೆ ಅಪ್ಪು ಮತ್ತು ಕಿಚ್ಚ ಸುದೀಪ್ ಅವರು ಒಟ್ಟಿಗೆ ಇರುವಂತಹ ಕಟೌಟ್ ಸಿದ್ಧಪಡಿಸುತ್ತಿದ್ದಾರೆ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ಕಿಚ್ಚ ಸುದೀಪ್ ಮತ್ತು ಅಪ್ಪು ಅವರು ಆತ್ಮೀಯ ಸ್ನೇಹಿತರು ಸಿನಿಮಾರಂಗಕ್ಕೆ ಎಂಟ್ರಿ ಆಗುವುದಕ್ಕಿಂತ ಮುಂಚೆಯಿಂದಲೂ ಕೂಡ ಅವರಿಬ್ಬರ ನಡುವೆ ಅವಿನಾಭವನ ಸಂಬಂಧವಿತ್ತು. ಅಪ್ಪು ಅವರು ನಮ್ಮೆಲ್ಲರನ್ನು ಬಿಟ್ಟು ಹೋದಾಗಲಂತು ಕಿಚ್ಚ ಸುದೀಪ್ ಅವರು ಬಹಳ ಖಿನ್ನತೆಗೆ ಒಳಗಾಗಿದ್ದರು ನೆಚ್ಚಿನ ಸ್ನೇಹಿತನನ್ನು ಕಳೆದುಕೊಂಡಿದ್ದಂತಹ ಛಾಯೆ ಅವರ ಮುಖದಲ್ಲಿ ಬಹಳಷ್ಟು ತಿಂಗಳುಗಳ ಕಾಲ ಹಾಗೆ ಉಳಿಯುದಿತ್ತು. ಆದರೂ ಕೂಡ ಅನಿವಾರ್ಯ ಪರಿಸ್ಥಿತಿ ಎಲ್ಲವನ್ನು ಮೆಟ್ಟಿನಿಂತು ಮುಂದೆ ಸಾಗಲೇ ಬೇಕಾದಂತಹ ಪರಿಸ್ಥಿತಿ ಎದುರಾದ ಕಾರಣ ಕಿಚ್ಚ ಸುದೀಪ್ ಅವರು ಮತ್ತೆ ತಮ್ಮ ಸಿನಿ ಜೀವನಕ್ಕೆ ಹಿಂತಿರುಗಿದರು. ಅದರಂತೆ ವಿಕ್ರಂತ್ ರೋಣ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲೂ ಕೂಡ ತೊಡಗಿಕೊಂಡಿದ್ದಾರೆ ಕಳೆದ ವಾರವಷ್ಟೇ ಜೀ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗುವಂತಹ ಡಾನ್ಸ್ ಕರ್ನಾಟಕ ಡಾನ್ಸ್ ಎಂಬ ವೇದಿಕೆಯಲ್ಲಿ.

ಕಿಚ್ಚ ಸುದೀಪ್ ಮತ್ತು ಅಪ್ಪು ಅವರು ಬಾಲ್ಯದಲ್ಲಿ ಒಟ್ಟಿಗೆ ಇದ್ದಂತಹ ಫೋಟೋ ಒಂದನ್ನು ಡಿಸ್ಪ್ಲೇ ಮಾಡಲಾಗುತ್ತದೆ ಈ ಫೋಟೋ ನೋಡಿ ಕಿಚ್ಚ ಸುದೀಪ್ ಭಾವುಕರಾತ್ತಾರೆ ಅಷ್ಟೇ ಅಲ್ಲದೆ ಅಪ್ಪು ಅವರ ಬಗ್ಗೆ ಮನದಾಳದ ಮಾತುಗಳನ್ನು ಹೇಳುತ್ತಾರೆ. ಅಪ್ಪು ಅವರಿಗಾಗಿ ಒಂದು ಹಾಡನ್ನು ಕೂಡ ಹೇಳಿ ವೇದಿಕೆಯಲ್ಲೇ ಕಣ್ಣೀರು ಇಡುತ್ತಾರೆ ಇದರಿಂದಲೇ ತಿಳಿಯುತ್ತದೆ ಕಿಚ್ಚ ಸುದೀಪ್ ಅವರಿಗೆ ಅಪ್ಪು ಎಂದರೆ ಎಷ್ಟು ಪ್ರೀತಿ ಅಂತ. ಈ ಕಾರಣಕ್ಕಾಗಿ ಅಪ್ಪು ಅವರಿಗೆ ಗೌರವ ಸಲ್ಲಿಸುವ ದೃಷ್ಟಿಯಿಂದಾಗಿ ವಿಕ್ರಂತ್ ರೋಣ ಸಿನಿಮಾದ ಕಟ್ ಔಟ್ ನಲ್ಲಿ ಅಪ್ಪು ಅವರು ಇರುವಂತಹ ಕಟ್ ಔಟ್ ಒಂದನ್ನು ಕೂಡ ಸಿದ್ಧಪಡಿಸಿದ್ದಾರೆ ಅದನ್ನು ಥಿಯೇಟರ್ ನ ಮುಂದೆ ನಿಲ್ಲಿಸಲು ಎಲ್ಲ ರೀತಿಯಾದಂತಹ ಸಕಲ ಸಿದ್ಧತೆಗಳನ್ನು ಮಾಡಲಾಗಿದೆ.

ಆದರೆ ಕೆಲವು ನೆಟ್ಟುಗರು ಮಾತ್ರ ಸುದೀಪ್ ಅವರು ತಮ್ಮ ಸಿನಿಮಾದ ಪ್ರಚಾರ ಕಾರ್ಯಕಾಗಿ ಅಪ್ಪು ಅಭಿಮಾನಿಗಳನ್ನು ಮೆಚ್ಚಿಸುವ ದೃಷ್ಟಿಯಿಂದಾಗಿ ಈ ಸಿನಿಮಾವನ್ನು ಉತ್ತಮ ರೀತಿಯಲ್ಲಿ ಪ್ರದರ್ಶನ ಕಾಣುವ ಸಲುವಾಗಿ ಈ ರೀತಿ ಗಿಮಿಕ್ ಮಾಡಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಆದರೆ ಇನ್ನೂ ಕೆಲವು ಅಭಿಮಾನಿಗಳು ಅಪ್ಪು ಮತ್ತು ಕಿಚ್ಚ ಇಬ್ಬರದು ನಿಷ್ಕಲ್ಮಶ ಸ್ನೇಹ ಇವರ ಸ್ನೇಹದಲ್ಲಿ ಕಲ್ಲು ಹಾಕುವಂತಹ ಕೆಲಸವನ್ನು ಮಾಡಬೇಡಿ ಎಂದು ನಿಟ್ಟಿಗರಿಗೆ ತಿರುಗೇಟು ನೀಡಿದ್ದಾರೆ. ಕಿಚ್ಚ ಸುದೀಪ್ ಮಾಡಿರುವುದು ಸ್ನೇಹಕ್ಕಾಗಿ ನಾ ಅಥವಾ ಪ್ರಚಾರಕ್ಕಾಗಿ ನಾ ಎಂಬುದು ಇದೀಗ ಅಭಿಮಾನಿಗಳಿಗೆ ಬಿಟ್ಟ ವಿಚಾರವಾಗಿದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ನಿಮ್ಮ ಪ್ರಕಾರ ಕಿಚ್ಚ ಸುದೀಪ್ ಅವರು ಈ ರೀತಿ ಮಾಡುವುದಕ್ಕೆ ಕಾರಣವೇನು ಎಂಬುದನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.

LEAVE A REPLY

Please enter your comment!
Please enter your name here