Saturday, April 19, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeViral Newsಅದೊಂದು ಮಾತು ನನ್ನ ಗಂಡನನ್ನೆ ಬಳಿ ತೆಗೆದುಕೊಂಡು ಬಿಟ್ಟಿತು ಎಂದು ಭಾವುಕರಾದ ನಟಿ ವಿನಯ ಪ್ರಸಾದ್...

ಅದೊಂದು ಮಾತು ನನ್ನ ಗಂಡನನ್ನೆ ಬಳಿ ತೆಗೆದುಕೊಂಡು ಬಿಟ್ಟಿತು ಎಂದು ಭಾವುಕರಾದ ನಟಿ ವಿನಯ ಪ್ರಸಾದ್…

 

ವಿನಯ ಪ್ರಸಾದ್ ಅವರು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ನಾಯಕ ನಟಿಯಾಗಿ ಈಗ ಪೋಷಕ ಪಾತ್ರಧಾರಿಯಾಗಿ ಮತ್ತು ಕಿರುತೆರೆಯ ಧಾರಾವಾಹಿಗಳಲ್ಲಿ ಒಂದಲ್ಲ ಒಂದು ಧಾರಾವಾಹಿಗಳಲ್ಲಿ ಸದಾ ಸಕ್ರಿಯವಾಗಿರುವ ಮೂಲಕ ಕನ್ನಡಿಗರಿಗೆ ಹತ್ತಿರವಾಗಿದ್ದಾರೆ. ಇಂದು ವಿನಯ ಪ್ರಸಾದ್ ಅವರು ವೃತ್ತಿ ಜೀವನದಲ್ಲಿ ಹಾಗೂ ವೈಯಕ್ತಿಕ ಜೀವನದಲ್ಲೂ ಸಹ ಗೆದ್ದಿದ್ದಾರೆ ಸಂತೋಷವಾಗಿದ್ದಾರೆ. ಆದರೆ ಒಂದು ಸಮಯದಲ್ಲಿ ಅವರು ಪಟ್ಟಿದ್ದ ಕಷ್ಟ ಅಷ್ಟಿಷ್ಟಲ್ಲ ಯಾಕೆಂದರೆ ವಿನಯ ಪ್ರಸಾದ್ ತಮ್ಮ 28ನೇ ವಯಸ್ಸಿಗೆ ಮೊದಲ ಪತಿಯನ್ನು ಕಳೆದುಕೊಂಡಿದ್ದರು.

ಆಗ ಅವರ ಮಗಳು ಪ್ರಥಮ ಗೆ ಕೇವಲ ಐದು ವರ್ಷಗಳು. ಆಗ ತಾನೇ ನಾಯಕ ನಟಿಯಾಗಿ ವಿನಯ ಪ್ರಸಾದ್ ಅವರು ಫೇಮಸ್ ಆಗುತ್ತಿದ್ದರು. ಅಂತಹ ಸಮಯದಲ್ಲಿ ಆದ ಪತಿ ಅಕಾಲಿಕ ಸಾವಿಗೆ ಕಾರಣ ಏನಿತ್ತು ಅನ್ನುವುದನ್ನು ಅವರು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇತ್ತೀಚಿಗೆ ಕಲಾ ಮಾಧ್ಯಮ ಎನ್ನುವ ಯೂಟ್ಯೂಬ್ ಚಾನೆಲ್ ಅಲ್ಲಿ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ ವಿನಯ ಪ್ರಸಾದ್ ಅವರು ಜೀವನದ ಅನೇಕ ವಿಚಾರಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಇಂದಿನ ಯುವ ಪೀಳಿಗೆಗೂ ಸಹ ಸಾಕಷ್ಟು ಸಂದೇಶವನ್ನು ನೀಡಿದ್ದಾರೆ.

ಜೊತೆಗೆ ತನ್ನ ಜೀವನದ ಹಲವು ಘಟನೆಗಳನ್ನು ನೆನೆದು ಅದರಿಂದ ಈ ಕಾಲದವರು ಏನು ತಿದ್ದುಕೊಳ್ಳಬಹುದು ಎನ್ನುವುದನ್ನು ಸಹ ಮುಚ್ಚು ಮರೆ ಇಲ್ಲದೆ ಹೇಳಿದ್ದಾರೆ. ಹೀಗೆ ಮಾತಿನ ಬರದಲ್ಲಿ ಅವರು ತಮ್ಮ ಮೊದಲ ಪತಿ ಸಾವಿಗೆ ಕಾರಣ ಏನು ಎನ್ನುವುದನ್ನು ಸಹ ಹೇಳಿಕೊಂಡಿದ್ದಾರೆ. ನಾನು ನಟಿಯಾಗಿ ಜನಪ್ರಿಯತೆ ಆಗುವ ಮೊದಲೇ ನನ್ನ ಪತಿ ವಿ ಆರ್ ಕೆ ಪ್ರಸಾದ್ ರಾಷ್ಟ್ರ ಪ್ರಶಸ್ತಿ ಪಡೆದ ಯುವ ನಿರ್ದೇಶಕ ಎಂದು ಹೆಸರು ಪಡೆದಿದ್ದರು. ಆದರೆ ನಂತರದ ನನ್ನ ಜನಪ್ರಿಯತೆ ನಮ್ಮನ್ನು ಸಾಕಷ್ಟು ಸಂಕಷ್ಟಕ್ಕೆ ಸಿಕ್ಕಿಸಿತು ಎಂದಿದ್ದಾರೆ.

ಈಗಿನ ಕಾಲದಲ್ಲೂ ಸಹ ಚಿತ್ರರಂಗದಲ್ಲೂ ಹಾಗೂ ಬೇರೆ ಕ್ಷೇತ್ರದಲ್ಲೂ ಗಂಡ ಹೆಂಡತಿ ಇಬ್ಬರೂ ಒಟ್ಟಿಗೆ ಕೆಲಸ ಮಾಡುವವರು ಇದ್ದಾರೆ. ಇದರಲ್ಲಿ ಗಂಡ ಹೆಚ್ಚು ಜನಪ್ರಿಯನಾದರೆ ಹೆಣ್ಣು ಮಕ್ಕಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ, ಆದರೆ ಗಂಡಿಗಿಂತ ಹೆಣ್ಣು ಸ್ವಲ್ಪ ಫೇಮಸ್ ಆಗಿ ಬಿಟ್ಟರೆ ಅದನ್ನು ಗಂಡಸರು ಅರಗಿಸಿಕೊಳ್ಳುವುದು ಕಷ್ಟ. ಅವರಿಬ್ಬರ ಮಧ್ಯ ಅದು ಸಮಸ್ಯೆ ಆಗಿರದೇ ಇರಬಹುದು ಆದರೆ ಆ ತೆರನಾದ ಒಂದು ಆಲೋಚನೆ ಖಂಡಿತ ಇರುತ್ತದೆ.

ನನ್ನ ಸಂಸಾರದಲ್ಲೂ ಅದೇ ಆಗಿದ್ದು ಅಲ್ಲಿಯತನಕ ನಾನು ವಿನಯ ಆಗಿ ಅಥವಾ ವಿ ಆರ್ ಕೆ ಪ್ರಸಾದ್ ಅವರ ಪತ್ನಿ ವಿನಯ ಪ್ರಸಾದ್ ಆಗಿ ಗುರುತಿಸಿಕೊಳ್ಳುತ್ತಿದ್ದೆ. ಒಂದು ಸಮಯದಲ್ಲಿ ನನ್ನ ಪತಿಯ ಎಲ್ಲಾ ಪ್ರಾಜೆಕ್ಟ್ ಗಳು ಫೇಲ್ ಆಗ ತೊಡಗಿದವು, ಅವರು ಅದೇ ನೋವಿನಲ್ಲಿ ಬೇಸರದಲ್ಲಿ ಇದ್ದರು. ನನ್ನ ಅದೃಷ್ಟವೋ ದುರಾದೃಷ್ಟವೋ ಅದೇ ಸಮಯಕ್ಕೆ ನನ್ನ ಎಲ್ಲಾ ಪ್ರಾಜೆಕ್ಟ್ ಗಳು ಗೆಲ್ಲ ತೊಡಗಿದ್ದವು. ಹಾಗಾಗಿ ನನಗೆ ಹೆಚ್ಚಿನ ಜನಪ್ರಿಯತೆ ಬಂದು ಬಿಟ್ಟಿತ್ತು. ಎಲ್ಲಿ ಹೋದರು ಸಹ ವಿನಯ ಪ್ರಸಾದ್ ಪತಿ ವಿ ಆರ್ ಕೆ ಪ್ರಸಾದ್ ಎಂದು ಕರೆಯುತ್ತಿದ್ದರು.

ಸಿನಿಮಾದವರು ಈ ರೀತಿ ಮಾಡಿದಾಗ ಅದನ್ನು ನಾನು ಪತಿ ಸಹಿಸಿಕೊಳ್ಳುತ್ತಿದ್ದರು, ಆದರೆ ಕುಟುಂಬದಲ್ಲೂ ಸಹ ಇದೇ ರೀತಿ ಆಗಿ ಹೋಯಿತು ಅದನ್ನು ಸ್ವಲ್ಪ ಜೀರ್ಣಿಸಿಕೊಳ್ಳುವುದು ಅವರಿಗೆ ಕಷ್ಟ ಆಗಿ ಹೋಯಿತು. ಆದರೆ ಎಂದೂ ಸಹ ಇದಕ್ಕೆಲ್ಲ ನನ್ನನ್ನು ಅವರು ಜವಾಬ್ದಾರಿ ಮಾಡಿದವರು ಅಲ್ಲ ಒಂದು ದಿನ ಕೂಡ ಅದರ ಬಗ್ಗೆ ನನ್ನ ಮೇಲೆ ಕೋಪವೂ ಸಹ ತೋರಲಿಲ್ಲ. ಆದರೆ ಆ ನೋವಿನಿಂದ ಅವರು ಖಿನ್ನತೆಗೆ ಹೋದರು. ಕೆಲ ಕೆಟ್ಟ ಅಭ್ಯಾಸಗಳನ್ನು ರೂಡಿಸಿಕೊಂಡರು. ಅವರ ಸಾ.ವು ಅನಿರೀಕ್ಷಿತವಾಗಿರದಿದ್ದರೂ ಖಂಡಿತ ಶಾ-ಕ್ ನೀಡಿತು ಎಂದು ಹೇಳಿಕೊಂಡಿದ್ದಾರೆ.