ಕನ್ನಡ ಚಲನಚಿತ್ರ ರಂಗದಲ್ಲಿ ಪ್ರಭಾಕರ್ ಅವರು ಟೈಗರ್ ಎಂದೇ ಹೆಸರುವಾಸಿ ಆಗಿದ್ದವರು, ಅವರ ಮಾತನಾಡುವ ಶೈಲಿ, ಬೇಸ್ ವಾಯ್ಸ್, ಅವರ ವ್ಯಕ್ತಿತ್ವ ಅವರ ಅಗ್ರೆಸಿವ್ ಲುಕ್ ಇದೆಲ್ಲವೂ ಆ ಹೆಸರಿಗೆ ತಕ್ಕಂತೆ ಇತ್ತು. ಅವರ ಅಚ್ಚಿನಂತೆ ಇರುವ ಅವರ ಮಗ ವಿನೋದ್ ಪ್ರಭಾಕರ್ ಕೂಡ ಇಂಡಸ್ಟ್ರಿಯಲ್ಲಿ ಮರಿ ಟೈಗರ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಕನ್ನಡದ ಹಲವಾರು ಸಿನಿಮಾಗಳಲ್ಲಿ ಮತ್ತು ಮಲ್ಟಿ ಸ್ಟಾರ್ ಸಿನಿಮಾಗಳಲ್ಲಿ ಬಣ್ಣ ಹಚ್ಚಿರುವ ವಿನೋದ್ ಪ್ರಭಾಕರ್ ಅವರು ಈಗ ನಿರ್ಮಾಪಕರಾಗಿ ಬಡ್ತಿ ಹೊಂದಿದ್ದಾರೆ.
ತಮ್ಮದೇ ಅಭಿನಯದ ಲಂಕಾಸುರ ಎನ್ನುವ ಸಿನಿಮಾ ನಿರ್ಮಾಣ ಮಾಡುವ ಮೂಲಕ ಮತ್ತೊಮ್ಮೆ ಇಂಡಸ್ಟ್ರಿಯಲ್ಲಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಸಿನಿಮಾದ ಕುರಿತು ಕನ್ನಡ ಸುದ್ದಿ ಮಾಧ್ಯಮದ ಸಂದರ್ಶನದೊಂದರಲ್ಲಿ ಪಾಲ್ಗೊಂಡ ಇವರು ತಂದೆ ಹೆಸರು ಹಾಳು ಮಾಡಿದ್ದಾಗಿ ಬೇಸರದಿಂದ ಹೇಳಿಕೊಂಡಿದ್ದಾರೆ.
ನಾನು ಮೂರು ವರ್ಷಕ್ಕೊಂದು ಸಿನಿಮಾ ಮಾಡುತ್ತಿದ್ದೆ, ಇಂಡಸ್ಟ್ರಿಯ ಎಲ್ಲಾ ನಾಯಕನಟರಿಗೂ ಹೋಗಿ ಅವರು ಬೇಡ ಎಂದು ರಿಜೆಕ್ಟ್ ಮಾಡಿದ ಸಿನಿಮಾ ನನ್ನನ್ನು ಹುಡುಕಿಕೊಂಡು ಬರುತ್ತಿತ್ತು. ಆ ವಿಷಯ ನನಗೂ ಗೊತ್ತಿತ್ತು ಆದರೂ ನಾನು ಅದನ್ನು ಒಪ್ಪಿಕೊಳ್ಳುತ್ತಿದ್ದೆ. ಅದು ನನ್ನ ಜೀವನ ನಿರ್ವಹಣೆಗಾಗಿ ಮಾಡಲೇ ಬೇಕಿತ್ತು. ಯಾಕೆಂದರೆ ಎಷ್ಟೋ ಬಾರಿ ಆ ರೀತಿ ಮಾಡಿದ ಸಿನಿಮಾಗಳಿಂದ ನಾನು ನನ್ನ ತಾಯಿಗೆ ಮೆಡಿಸಿನ್ ಕೊಡಿಸಲು ಸಾಧ್ಯ ಆಗಿದ್ದು.
ನನ್ನ ತಂದೆ ನನಗಾಗಿ ಸ್ವಲ್ಪ ಆಸ್ತಿ ಮಾಡಿಟ್ಟಿದ್ದಾರೆ, ಮನೆ ಕೊಟ್ಟಿದ್ದಾರೆ ಅದನ್ನು ಮಾರಿ ನಾನು ಮೆರೆದಾಡುವುದು ದೊಡ್ಡದಲ್ಲ, ನನಗೆ ಅದು ಬೇಕಾಗಿರಲಿಲ್ಲ. ನಾನು ದುಡಿದು ಬದುಕಬೇಕು ಎನ್ನುವ ಆದರ್ಶ ಇಟ್ಟುಕೊಂಡಿದ್ದೆ ಕೆಲವೊಮ್ಮೆ ಇಂಡಸ್ಟ್ರಿಯಲ್ಲಿ ಇದ್ದೇನೆ ಇನ್ನು ಇಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎನಿಸಿಕೊಳ್ಳುವ ಉದ್ದೇಶಕ್ಕಾಗಿ ಸಿನಿಮಾ ಒಪ್ಪಿಕೊಂಡಿದ್ದು ಇದೆ.
ಕೆಲವೊಮ್ಮೆ ಕುಳಿತು ಯೋಚನೆ ಮಾಡುವಾಗ ನನಗೆ ನನ್ನ ತಂದೆ ಹೆಸರನ್ನು ಹಾಳು ಮಾಡಿಬಿಟ್ಟೆನಾ ಎನ್ನುವ ಪಶ್ಚಾತ್ತಾಪವೂ ಇದೆ. ಯಾಕೆಂದರೆ ನನ್ನ ತಂದೆ ಯಾವ ರೀತಿ ಅಬ್ಬರಿಸಿದವರು ಹೇಗೆ ತೆರೆ ಮೇಲೆ ಮೆರೆದವರು ಎಂದು ಎಲ್ಲರಿಗೂ ಗೊತ್ತು. ಅವರ ಮಗನಾಗಿ ನಾನು ಅಂತಿಂಥ ಪಾತ್ರ ಮಾಡುತ್ತಿದ್ದೇನೆ, ಯಾವ ಸಿನಿಮಾ ಸಿಕ್ಕರು ಒಪ್ಪಿಕೊಂಡು ಮಾಡುತ್ತಿದ್ದೆನಲ್ಲಾ ಇದು ಸರಿಯಾ ಎಂದು ಯೋಚನೆ ಬರುತ್ತಿತ್ತು. ಆದ್ರೆ ತಪ್ಪು ನನ್ನದೆ ಯಾಕೆಂದರೆ ನಾನು ಸಿನಿಮಾ ಗೆ ತಯಾರಾಗಿ ಬರಲಿಲ್ಲ.
ನನ್ನ ಫೀಲ್ಡ್ ಬೇರೆ ಇತ್ತು, ಎಲೆಕ್ಟ್ರಿಕಲ್ ಇಂಜಿನಿಯರ್ ಮಾಡಿದ ನಾನು ಎಂದು ಸಿನಿಮಾವನ್ನು ನಟನಾಗುವ ದೃಷ್ಟಿಕೋನದಿಂದ ನೋಡಲೇ ಇಲ್ಲ. ಫೈಟ್ ಸೀನ್ ಗಳ ಬಗ್ಗೆ ಆಸಕ್ತಿ ಇತ್ತು, ನೋಡುತ್ತಿದ್ದೆ ಸುಮ್ಮನಾಗುತ್ತಿದ್ದೆ. ಅದೇ ರೀತಿ ಇಲ್ಲಿ ಅಭಿನಯಕ್ಕೆ ಧುಮುಕಿಬಿಟ್ಟೆ, ಅದೇ ನನಗೆ ಹೊಡೆತ ಬಿದ್ದಿದ್ದು. ಯಾರದೋ ಗೈಡೆನ್ಸ್ ಇಂದ ಸಿನಿಮಾ ರಂಗಕ್ಕೆ ಬಂದೆ ಇಲ್ಲಿ ನಂತರ ಸಿನಿಮಾ ಅಂದರೆ ಏನು, ಆಕ್ಟಿಂಗ್ ಅಂದರೇನು, ಯಾವ ರೀತಿ ಪಾತ್ರಕ್ಕೆ ಭಾವ ತುಂಬಬೇಕು, ಏನೇನು ಬೇಕು ಎಲ್ಲವೂ ಗೊತ್ತಾಯ್ತು.
ಅದೆಲ್ಲಾ ತಯಾರಿ ಇಲ್ಲದೆ ಮೊದಲೆಲ್ಲಾ ಪೆಟ್ಟು ತಿನ್ನಬೇಕಾಗಿ ಬಂತು. ಈಗ ಒಂದು ಮಟ್ಟಕ್ಕೆ ಸುಧಾರಿಸಿಕೊಂಡಿದ್ದೇನೆ, ಸರಿ ಹೋಗುವ ಪ್ರಯತ್ನ ನಡೆಯುತ್ತಲೇ ಇದೆ ಎಂದು ಹೇಳುತ್ತಾ ಈ ಪ್ರಯತ್ನದಲ್ಲಿ ಲಂಕಾಸುರ ಮಾತ್ರ ಬಹಳ ಅದ್ಭುತವಾದ ಸಿನಿಮಾ ಆಗಿದೆ. ಸಿನಿಮಾದಲ್ಲಿ ನನ್ನನ್ನು ನೋಡಿ ನನ್ನ ಅಭಿಮಾನಿಗಳು ಹಾಗೂ ನನ್ನ ತಂದೆ ಅಭಿಮಾನಿಗಳು ಎಲ್ಲರೂ ಕೂಡ ಹೆಮ್ಮೆ ಪಡುತ್ತಾರೆ. ಅಂತದ್ದೊಂದು ಕಥೆ ಮತ್ತು ಅಭಿನಯ ಎರಡು ಸಿನಿಮಾದಲ್ಲಿ ಮಾಡಿದ್ದೇನೆ ಎಂದು ಲಂಕಾಸುರ ಸಿನಿಮಾ ಬಗ್ಗೆ ಹೇಳಿಕೊಂಡಿದ್ದಾರೆ.