ಮದುವೆ ಎನ್ನುವುದು ಒಂದು ಪವಿತ್ರವಾದ ಸಂಬಂಧ. ಹಾಗೂ ಎಲ್ಲಾ ಸಂಬಂಧಗಳಿಗಿಂತಲೂ ಬಹಳ ಶ್ರೇಷ್ಠವಾದ ಸಂಬಂಧ. ಮದುವೆ ಎನ್ನುವ ವಿಷಯದ ಬಗ್ಗೆ ಪ್ರತಿಯೊಬ್ಬ ಹುಡುಗಿ ಹಾಗೂ ಹುಡುಗ ಕೂಡ ಸಾಕಷ್ಟು ಕನಸುಗಳನ್ನು ಇಟ್ಟುಕೊಂಡಿರುತ್ತಾರೆ. ಮದುವೆ ಎನ್ನುವುದು ಜೀವನದ ದಿಕ್ಕನ್ನು ಬದಲಾಯಿಸುವ ಒಂದು ಪ್ರಮುಖವಾದ ಘಟ್ಟ. ಇಲ್ಲಿ ಯಾರ ಹೆಸರು ಯಾರ ಹಣೆಬರಹದೊಂದಿಗೆ ಬೆಸೆದುಕೊಳ್ಳುತ್ತದೆ ಎನ್ನುವುದೇ ಒಂದು ಕೌತುಕ.
ಈ ವಿಷಯದಲ್ಲಿ ಎಷ್ಟೋ ಬಾರಿ ನಾವು ಊಹೆ ಮಾಡಿರದಂತಹ ಜೋಡಿಗಳು ಮದುವೆಯಾಗಿ ಬಿಟ್ಟಿರುತ್ತಾರೆ. ಆದರೆ ಅವರು ಮದುವೆ ಆಗುವ ಕಡೆ ಘಳಿಗೆವರೆಗೆ ಇಂಥವರ ಜೊತೆ ಮದುವೆ ಆಗುತ್ತದೆ ಎಂದು ಅವರೇ ಉಳಿಸಿಕೊಂಡಿರುವುದಿಲ್ಲ. ಅಂತಹ ಸಂದರ್ಭದಲ್ಲಿ ಕೂಡ ಎದುರಾಗುತ್ತವೆ. ಅದಕ್ಕೆ ಉದಾಹರಣೆಯಂತಿದೆ ಬಿಹಾರದಲ್ಲಿ ನಡೆದಿರುವ ಈ ವಿಚಿತ್ರ ಮದುವೆ.
ಬಿಹಾರದ ಸಮಸ್ತಿಪುರ ಎನ್ನುವಲ್ಲಿ 65 ವರ್ಷದ ರೋಷನ್ ಲಾಲ್ ಎನ್ನುವವರ ಜೊತೆ 21 ವರ್ಷದ ಸ್ವಪ್ನ ಎನ್ನುವ ಹುಡುಗಿಯ ಮದುವೆ ಆಗಿದೆ. ಅಷ್ಟು ಚಿಕ್ಕ ಹುಡುಗಿಯನ್ನು ವೃದ್ದನಿಗೆ ಕೊಡಲು ಆ ಮನೆಯವರಿಗೆ ಹೇಗೆ ಮನಸ್ಸು ಬಂತು, ಮದುವೆ ನಿರ್ಧಾರ ಮಾಡಿದ್ದಾದರು ಯಾರು, ಹೆತ್ತವರಿಗಾದರೂ ಬುದ್ಧಿ ಇರಲಿಲ್ಲವ ಎಂದು ಸಾಕಷ್ಟು ಪ್ರಶ್ನೆಗಳು ಬರಬಹುದು ಆದರೆ ಇದಕ್ಕೆಲ್ಲ ಮುಂಚೆ ಮದುವೆ ಆದ ಸಂದರ್ಭ ತಿಳಿದುಕೊಳ್ಳಬೇಕಾಗಿದೆ.
ಯಾಕೆಂದರೆ ಸ್ವಪ್ನ ರೋಷನ್ ಲಾಲ್ ಅವರ ಬದಲಿಗೆ ಅವರ ಮಗನನ್ನು ಮದುವೆಯಾಗಿ ಪಿತೃ ಸಮಾನವಾದ ಮಾವನ ಕಾಲಿಗೆ ಬೀಳಬೇಕಿತ್ತು. ಆದರೆ ಆಕೆ ಹಣೆಬರಹದಲ್ಲಿ ಮಾವನನ್ನೇ ಪತಿಯಾಗಿ ಸ್ವೀಕರಿಸುವ ರೀತಿ ಬರೆದಿದೆ. ಸ್ವಪ್ನ ಅವರ ಕುಟುಂಬದವರೇ ಒಪ್ಪಿ, ಈ ಮದುವೆಯನ್ನು ಮಾಡಿಕೊಟ್ಟಿದ್ದಾರೆ ಸಪ್ನ ಮದುವೆಯು ರೋಷನ್ ಲಾಲ್ ಅವರ ಮಗನ ಜೊತೆ ನಿಶ್ಚಯವಾಗಿತ್ತು ಮದುವೆ ಮಂಟಪದ ತನಕ ಬರುವವರೆಗೆ ಎಲ್ಲವೂ ಚೆನ್ನಾಗಿತ್ತು.
ಆದರೆ ಮದುವೆ ನಡೆಯಬೇಕಿದ್ದ ಹಿಂದಿನ ದಿನ ರಾತ್ರಿ ಮದುವೆ ಮನೆ ಬಿಟ್ಟು ಮಧುಮಗ ಪರಾರಿಯಾಗಿದ್ದಾನೆ. ಇದರಿಂದ ಸ್ವಪ್ನ ಬದುಕು ಹಾಳಾಗಬಾರದು ಹಸೆಮಣೆವರೆಗೆ ಬಂದು ಆಕೆಯ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕಾಗಿ ರೋಶನ್ ಲಾಲ್ ಸ್ವಪ್ನಳನ್ನು ಮದುವೆ ಆಗುವ ನಿರ್ಧಾರಕ್ಕೆ ಬಂದಿದ್ದಾರೆ. ಸ್ವಪ್ನ ಕೂಡ ಇದಕ್ಕೆ ಸಮ್ಮತಿ ಸೂಚಿಸಿದ್ದಾರೆ, ಹಾಗಾಗಿ ಇವರ ಮದುವೆ ನಡೆದಿದೆ. ಆ ಸಂದರ್ಭದಲ್ಲಿ ಅಲ್ಲಿದ್ದ ಅನೇಕರು ಇವರಿಗೆ ಬುದ್ಧಿ ಹೇಳುವ ಪ್ರಯತ್ನವನ್ನು ಮಾಡಿದ್ದರೂ ಕೂಡ ಪರಸ್ಪರ ಕುಟುಂಬದ ಒಪ್ಪಿಗೆ ಮೇರೆಗೆ ಈ ಮದುವೆ ನಡೆದು ಹೋಗಿದೆ.
ಆದರೆ ಮದುವೆ ಆದ ಬಳಿಕ ವಿಷಯಗಳು ಸೋಶಿಯಲ್ ಮೀಡಿಯಾದಲ್ಲಿ ಲೀಕ್ ಆಗುತ್ತಿದ್ದಂತೆ ಸಾಕಷ್ಟು ಮಂದಿ ಈ ಮದುವೆ ಬಗ್ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಅನೇಕ ಬಾರಿ ಈ ರೀತಿ ಮದುವೆ ಮಂಟಪದಲ್ಲಿ ಮದುವೆ ಮುರಿದು ಬಿದ್ದ ಉದಾಹರಣೆಗಳಿವೆ ಅಥವಾ ಕಡೆ ಕ್ಷಣದಲ್ಲಿ ಓಡಿಹೋದವರ ಬದಲು ಸಂಬಂಧಿಕರಲ್ಲಿ ಉತ್ತಮವಾದ ಹುಡುಗ ಅಥವಾ ಹುಡುಗಿಗೆ ಫಿಕ್ಸ್ ಮಾಡಿ ಮದುವೆ ನಡೆಸಿರುವ ಉದಾಹರಣೆಗಳು ಇವೆ.
ಇಲ್ಲಿ ಸಹ ಆ ರೀತಿ ಮಾಡುವುದನ್ನು ಬಿಟ್ಟು ಯಾಕೆ ಮಾವನಾಗ ಬೇಕಾಗಿದ್ದವರೇ ಆಕೆ ಬಾಳಿಗೆ ಮುಳುವಾದರೂ ಎನ್ನುವುದು ಸಾಕಷ್ಟು ಜನರ ಅ.ಕ್ರೋ.ಶ ಆದರೆ ಇನ್ನೂ ಅನೇಕ ಮಂದಿ ಮದುವೆ ನಿಲ್ಲಬಾರದು ಎನ್ನುವ ಕಾರಣಕ್ಕಾಗಿ ರೋಶನ್ ಲಾಲ್ ಅವರು ಮದುವೆ ಆಗಿರುವುದಕ್ಕೆ ಅವರನ್ನು ಸಹ ಮೆಚ್ಚಿ ಮಾತನಾಡುತ್ತಿದ್ದಾರೆ. ಇಂತಹ ವಿಚಿತ್ರ ಮದುವೆ ಬಗ್ಗೆ ನಿಮ್ಮ ಅಭಿಪ್ರಾಯ ಏನು ಎನ್ನುವುದನ್ನು ತಪ್ಪದೆ ಕಮೆಂಟ್ ಮಾಡಿ ತಿಳಿಸಿ.