“ನನ್ಗೆ ಫ್ರೀಡಂ ಬೇಕಿತ್ತು” ಈ ಕಾರಣಕ್ಕೆ ಮದ್ವೆ ಆದೇ ಅಷ್ಟೇ. ಶಾ-ಕಿಂಗ್ ಹೇಳಿಕೆ ಕೊಟ್ಟ ನಿವೇದಿತಾ ಗೌಡ

 

ನಿವೇದಿತಾ ಗೌಡ ಈ ಕಿರುತೆರೆ ಡಾಲ್ ಕನ್ನಡಿಗರಿಗೆಲ್ಲ ಚಿರಪರಿಚಿತರು. ಬಿಗ್ ಬಾಸ್ ಎನ್ನುವ ಕಲರ್ಸ್ ಕನ್ನಡ ವಾಹಿನಿಯ ರಿಯಾಲಿಟಿ ಶೋ ಇಂದ ಇಡೀ ಕರ್ನಾಟಕಕ್ಕೆ ಪರಿಚಯ ಆದ ಈಕೆ ಸದ್ಯಕ್ಕಿಗ ಒಂದಲ್ಲ ಒಂದು ರಿಯಾಯಿತಿ ಶೋಗಳ ಮೂಲಕ ಒಂದಲ್ಲ ಒಂದು ಚಾನೆಲ್ ನಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ. ಸದಾ ರಿಯಾಲಿಟಿ ಶೋ ಗಳಲ್ಲಿ ಬ್ಯುಸಿ ಆಗಿರುವ ನಿವೇದಿತ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲೂ ಕೂಡ ಅಷ್ಟೇ ಆಕ್ಟಿವ್ ಆಗಿದ್ದಾರೆ.

ನಿವೇದಿತಾ ಗೌಡ ಅವರು ಬಿಗ್ ಬಾಸ್ ಇಂದ ಬಂದ ಮೇಲೆ ಕೆಲವೇ ದಿನಗಳಲ್ಲಿ ಅವರಿದ್ದ ಬಿಗ್ ಬಾಸ್ ಸೀಸನ್ 5 ರ ಸಹ ಕಂಟೆಸ್ಟಂಟ್ ಆದ ಚಂದನ್ ಶೆಟ್ಟಿ ಅವರನ್ನು ಮದುವೆಯಾದರು. ನೋಡುವುದಕ್ಕೆ ಇನ್ನೂ ಸಹ ಹೈಸ್ಕೂಲ್ ಹುಡುಗಿಯಂತೆ ಕಾಣುತ್ತಿರುವ ನಿವೇದಿತ ಗೌಡ ಅವರು ಅಷ್ಟು ಬೇಗ ಯಾಕೆ ಮದುವೆ ಆಗಿದ್ದರು ಎನ್ನುವುದು ಅನೇಕರ ಗೊಂದಲ ಹಾಗೂ ಸಂದೇಹಕ್ಕೆ ಕಾರಣ ಆಗಿತ್ತು.

ಸದಾ ನಗು ನಗುತಾ ಲವಲವಿಕೆಯಿಂದ, ತಾನು ಮಾಡುವ ತಮಾಷೆಯಿಂದ ಹಾಗೂ ಇಂಗ್ಲಿಷ್ ಮಾತಿನಿಂದ ಎಲ್ಲರನ್ನು ನಗಿಸುತ್ತಿದ್ದ ನಿವೇದಿತಾ ಗೌಡ ಮೊದಲ ಬಾರಿಗೆ ಮದುವೆ ಬಗ್ಗೆ ಭಾವುಕರಾಗಿ ಮಾತನಾಡಿದ್ದಾರೆ. ನನಗೆ ಮದುವೆಗೆ ಮುಂಚೆ ಫ್ರೀಡಂ ಇರಲಿಲ್ಲ ನನ್ನ ಅಮ್ಮ ನನ್ನ ಎಲ್ಲೂ ಆಚೆ ಕಳಿಸುತ್ತಿರಲಿಲ್ಲ. ಯಾರಾದರೂ ಕಳ್ಳರು ಬಂದು ನನ್ನನ್ನು ಎತ್ತಿಕೊಂಡು ಹೋಗುತ್ತಾರೆ ಎಂದು ಅವರಿಗೆ ಭಯ ಇತ್ತು.

ಆ ಕಾರಣಕ್ಕಾಗಿ ನಾನು ಯಾವಾಗಲೂ ಹೆಚ್ಚು ಸಮಯ ಮನೆಯಲ್ಲಿಯೇ ಕಳೆಯುತ್ತಿದ್ದೆ ಎಲ್ಲಿಗಾದರೂ ಆಚೆ ಹೋಗಬೇಕು ಎನಿಸಿದರೆ ಮದುವೆ ಆದಮೇಲೆ ನಿನ್ನ ಗಂಡನ ಜೊತೆಗೆ ಹೋಗು ಎನ್ನುತ್ತಿದ್ದರು ಅದಕ್ಕೆ ನನಗೆ ಫ್ರೀಡಂ ಬೇಕು ಎಂದು ಮದುವೆ ಆದೆ ಎಂದು ಹೇಳಿಕೊಂಡಿದ್ದಾರೆ. ಈ ವಾರ ಕಲರ್ಸ್ ಕನ್ನಡ ವಾಹಿನಿಯ ಗಿಚ್ಚ ಗಿಲಿ ಗಿಲಿ ಕಾರ್ಯಕ್ರಮದಲ್ಲಿ ಮಹಿಳಾ ದಿನಾಚರಣೆ ಸ್ಪೆಷಲ್ ಇತ್ತು.

ನಿವೇದಿತ ಕೂಡ ತಾಯಿ ಜೊತೆ ಬಂದು ನೃತ್ಯ ಮಾಡಿ ಸಂತಸ ಪಟ್ಟರು. ಜೊತೆಗೆ ಚಂದನ್ ಶೆಟ್ಟಿ ಕೂಡ ಈ ಕಾರ್ಯಕ್ರಮಕ್ಕೆ ಬರಬೇಕಿತ್ತು, ಆದರೆ ಅವರು ಮತ್ತೆಲ್ಲೋ ತನಗೆ ಮ್ಯೂಸಿಕ್ ಕಾರ್ಯಕ್ರಮ ಇದೆ ಎಂದು ಹೇಳಿ ಇದ್ದಕ್ಕಿದ್ದಂತೆ ಕಾರ್ಯಕ್ರಮದ ಮಧ್ಯೆ ಪ್ರತ್ಯಕ್ಷವಾದರು. ಜೊತೆಗೆ ನಿವೇದಿತ ಗೌಡ ಅವರ ವಿವಾಹ ವಾರ್ಷಿಕೋತ್ಸವ ಕೂಡ ಇದ್ದ ಕಾರಣ ಹಾರ್ಟ್ ಶೇಪ್ ತಂದು ಕಟ್ ಮಾಡಿ ತಿನಿಸಿ ಎಲ್ಲರ ಜೊತೆ ಸರ್ಪ್ರೈಸ್ ಕೊಟ್ಟರು.

ಆಮೇಲೆ ಕಣ್ಣಿನಲ್ಲಿ ಆನಂದಭಾಷ್ಪ ತುಂಬಿಕೊಂಡ ನಿವೇದಿತಾ ಗೌಡ ಅವರು ಮದುವೆ ಜೀವನದ ಬಗ್ಗೆ ಹೇಳಿಕೊಂಡರು ಜೊತೆಗೆ ಫ್ರೀಡಂ ಬೇಕು ಎಂದು ಮದುವೆ ಅದೇ ಆದರೆ ಈಗ ತಂದೆ ತಾಯಿಯ ಮೌಲ್ಯ ಅರ್ಥ ಆಗುತ್ತಿದೆ ಎಂದು ತಂದೆ ತಾಯಿಯನ್ನು ನೆನೆದರು. ನಿವೇದಿತ ಗೌಡ ಅವರ ತಾಯಿ ಕೂಡ ಮಾತನಾಡಿ ನನಗೆ ನನ್ನ ಮಗಳು ಕಿಡ್ನಾಪ್ ಆಗುತ್ತಾಳೆ ಎಂದು ಬಹಳ ಭಯ ಇತ್ತು.

ಚಂದನ್ ಶೆಟ್ಟಿ ಬಂದು ನಿಮ್ಮ ಮಗಳನ್ನು ಪ್ರೀತಿಸುತ್ತೇನೆ ಎಂದಾಗ ಅವಳನ್ನು ಜೋಪಾನವಾಗಿ ನೋಡಿಕೊಂಡರೆ ಮಾತ್ರ ಮದುವೆ ಮಾಡಿಕೊಡುತ್ತೇನೆ ಎಂದು ಕಂಡೀಶನ್ ಹಾಕಿ ಮದುವೆ ಮಾಡಿ ಕೊಟ್ಟೆ. ಈಗ ನನಗಿಂತಲೂ ಚೆನ್ನಾಗಿ, ಜೋಪಾನವಾಗಿ ಹಾಗೂ ಪ್ರೀತಿಯಿಂದ ಚಂದನ್ ನಿವೇದಿತಾಳನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ಅಳಿಯನ ಬಗ್ಗೆ ಗುಣಗಾನ ಮಾಡಿದ್ದಾರೆ.

Leave a Comment