ಸ್ಟಾರ್ ವಾರ್ ಕಿತ್ತಾಟ ಎನ್ನುವುದು ಇಂದು ನೆನ್ನೆಯದಲ್ಲ, ಡಾಕ್ಟರ್ ರಾಜಕುಮಾರ್ ಅವರ ಕಾಲದಿಂದಲೂ ಕೂಡ ಇಂತಹದೊಂದು ಸಮಸ್ಯೆ ಕನ್ನಡ ಇಂಡಸ್ಟ್ರಿಯಲ್ಲಿ ಇತ್ತು. ಅದಕ್ಕೆ ಸಾಕ್ಷಿ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರ ನಡುವೆ ಮೂಡಿದ್ದ ಬಿರುಕು. ಆದರೆ ನಿಜವಾಗಿ ಹೇಳಬೇಕು ಎಂದರೆ ಅಣ್ಣಾವ್ರು ಮತ್ತು ವಿಷ್ಣುವರ್ಧನ್ ಅವರ ನಡುವೆ ಅಷ್ಟೊಂದು ಸಮಸ್ಯೆಯೇ ಇರಲಿಲ್ಲ, ಬದಲಾಗಿ ಅಭಿಮಾನಿಗಳು ಮಾತ್ರ ಇದನ್ನು ದೊಡ್ಡದಾಗಿ ಬೆಳೆಸಿ ಬಿಟ್ಟರು.
ಅದರಲ್ಲೂ ಅಭಿಮಾನಿಗಳು ಎಂದು ಹೇಳುವುದಕ್ಕಿಂತ ಕಿಡಿಗೇಡಿಗಳು ಎಂದೇ ಹೇಳಬಹುದು ಈ ಮಾತನ್ನು ಕನ್ನಡದ ಸಿನಿಮಾ ಇಂಡಸ್ಟ್ರಿ ಏಳಿಗೆಗಾಗಿ ದುಡಿದ ಕನ್ನಡದ ಹೆಸರಾಂತ ವಿತರಕರಲ್ಲಿ ಒಬ್ಬರಾದ ಆರ್ ಪಿ ಮುನಿರಾಜು ಅವರು ಸಹ ಹೇಳಿದ್ದಾರೆ. ಕನ್ನಡ ಮಾಣಿಕ್ಯ ಎಂಬ ಯುಟ್ಯೂಬ್ ಚಾನೆಲ್ ಗೇ ನೀಡಿದ ಸಂದರ್ಶನದಲ್ಲಿ ಇದೆಲ್ಲವನ್ನು ಹಂಚಿಕೊಂಡಿದ್ದಾರೆ.
ವಿಷ್ಣುವರ್ಧನ್ ಅವರನ್ನು ಡಾಕ್ಟರ್ ರಾಜಕುಮಾರ್ ಅವರು ಬಹಳ ಇಷ್ಟ ಪಡುತ್ತಿದ್ದರು. ಅವರಿಬ್ಬರ ನಡುವೆ ಉತ್ತಮವಾದ ಬಾಂಧವ್ಯ ಇತ್ತು ಎಷ್ಟು. ಎಷ್ಟು ಎಂದರೆ ಮಗುವಿನ ರೀತಿ ವಿಷ್ಣುವನ್ನು ಅಪ್ಪಿಕೊಂಡು ಅಣ್ಣಾವ್ರು ಮತ್ತು ನೀಡುತ್ತಿದ್ದರು. ಅಷ್ಟರಮಟ್ಟಿಗೆ ಇಬ್ಬರ ನಡುವೆ ವಿಶ್ವಾಸ ಇತ್ತು ಆದರೆ ಗಂಧದ ಗುಡಿ ಸಿನಿಮಾದಲ್ಲಿ ಆದ ಒಂದು ಕಹಿ ಘಟನೆ ನಂತರ ಇವರಿಬ್ಬರು ದೂರವಾಗುವ ರೀತಿ ಮಾಡಿಬಿಟ್ಟಿತು.
ಆದರೆ ಅವರಿಬ್ಬರ ನಡುವೆ ದ್ವೇಷ ಏನು ಇರಲಿಲ್ಲ ಇಬ್ಬರು ಸಹ ಸಹಜವಾಗಿಯೇ ಇರುತ್ತಿದ್ದರು. ಆದರೆ ಒಟ್ಟಿಗೆ ಸೇರಲು ಜಾಸ್ತಿ ಅವಕಾಶಗಳು ಆಗುತ್ತಿರಲಿಲ್ಲ. ಯಾಕೆಂದರೆ ಇಬ್ಬರ ಅಭಿಮಾನಿಗಳು ಎಂದು ಹೆಸರು ಹೇಳಿಕೊಂಡು ಕೆಲ ಕಡಿಗೇಡಿಗಳು ಇಬ್ಬರ ನಡುವೆ ಕಂದಕವನ್ನು ಸೃಷ್ಟಿಸಿ ಬಿಟ್ಟರು. ಅದು ಕನ್ನಡ ಸಿನಿಮಾ ಇಂಡಸ್ಟ್ರಿ ಹಾಳು ಮಾಡುವ ದುರುದ್ದೇಶದಿಂದ ಮಾಡಿದ ಹೊಂಚು ಎಂತಲೇ ಹೇಳಬಹುದು.
ಯಾಕೆಂದರೆ ಇವರಿಬ್ಬರೂ ಸಹ ಮೇರು ನಟರು, ಇಬ್ಬರ ಚಿತ್ರಗಳು ಕೂಡ ಸೂಪರ್ ಹಿಟ್ ಆಗುತ್ತಿತ್ತು. ಇವರಿಬ್ಬರು ಒಟ್ಟಿಗೆ ಇನ್ನಷ್ಟು ಸಿನಿಮಾಗಳನ್ನು ಮಾಡಿದ್ದರೆ ಆ ಕಾಲದಲ್ಲೇ ನಮ್ಮ ಇಂಡಸ್ಟ್ರಿ ಎಲ್ಲೋ ಬೆಳೆಯುತ್ತಿತ್ತು. ಅದನ್ನು ತಡೆಯಲು ಕೆಲ ಕಿಡಿಗೇಡಿಗಳು ಈ ರೀತಿ ಚಿಕ್ಕದನ್ನೆಲ್ಲ ದೊಡ್ಡದು ಮಾಡಿ ಬೆಳೆಸಿ ಬಿಟ್ಟರು. ಎಷ್ಟರ ಮಟ್ಟಿಗೆ ಎಂದರೆ ವಿಷ್ಣುವರ್ಧನ್ ಅವರ ಹೊಂಬಿಸಲು ಸಿನಿಮಾ ರಿಲೀಸ್ ಆದ ವೇಳೆಗೆ ಅಣ್ಣಾವ್ರ ಒಲವು ಗೆಲುವು ಸಿನಿಮಾವೂ ರಿಲೀಸ್ ಆಗಿತ್ತು.
ಒಮ್ಮೆ ಕಾರಿನಲ್ಲಿ ಬಂದ ವಿಷ್ಣುವರ್ಧನ್ ಅವರು ಒಲವು ಗೆಲುವು ಸಿನಿಮಾಗೆ ಥಿಯೇಟರ್ ಮುಂದೆ ಹಾಕಿದ್ದ ಅಣ್ಣಾವ್ರ ಕಟೌಟನ್ನು ಬಹಳ ಆನಂದಿನಿಂದ ನೋಡುತ್ತಿದ್ದರು. ಅದನ್ನೇ ಸಹಿಸದ ಕೆಲವರು ಅಣ್ಣಾವ್ರ ಕಟೌಟ್ ನೋಡುತ್ತಿದ್ದೀಯ ಎಂದು ಗಲಾಟೆ ಆರಂಭಿಸಿದರು. ಏನು ಮಾತನಾಡಿದರೆ ವಿಷ್ಣುವರ್ಧನ್ ಅವರು ಹೊರಟು ಹೋದರು. ಇಂತಹ ಅನೇಕ ಸಂದರ್ಭಗಳು ವಿಷ್ಣುವರ್ಧನ್ ಅವರಿಗೆ ಎದುರಾಗಿತ್ತು ಅದಕ್ಕಾಗಿ ಅವರು ಹೆಚ್ಚಾಗಿ ಯಾವ ಮೀಟಿಂಗ್ ಗೂ ಭಾಗಿ ಆಗುತ್ತಿರಲಿಲ್ಲ, ಹೊರಗಡೆ ಕಾಣಿಸಿಕೊಳ್ಳುತ್ತಲೂ ಇರಲಿಲ್ಲ.
ಅಣ್ಣಾವ್ರು ಸಹ ವಿಷ್ಣುವರ್ಧನ್ ಅವರ ಸಿನಿಮಾಗಳನ್ನು ಬಹಳ ಇಷ್ಟ ಪಡುತ್ತಿದ್ದರು. ಅವರ “ಮಲೆಯ ಮಾರುತ” ಎನ್ನುವ ಸಿನಿಮಾ ರಿಲೀಸ್ ಆದಾಗ ಚಿತ್ರತಂಡವು ಅಣ್ಣಾವ್ರ ಕುಟುಂಬಕ್ಕಾಗಿ ಆಹ್ವಾನ ಕೊಟ್ಟಿತ್ತು. ಆ ಚಿತ್ರ ನೋಡಲು ಅಣ್ಣಾವ್ರು ಪಾರ್ವತಮ್ಮ ಮತ್ತು ಅವರ ಕುಟುಂಬದ ಎಲ್ಲರೂ, ಭಾರತಿ ವಿಷ್ಣುವರ್ಧನ್ ಅವರು ವಿಷ್ಣು ವರ್ಧನ್ ಕುಟುಂಬದ ಮತ್ತಿತರರು ಎಲ್ಲರೂ ಒಟ್ಟಿಗೆ ಕುಳಿತು ಸಿನಿಮಾವನ್ನು ನೋಡಿದ್ದನ್ನು ಕಣ್ಣಾರೆ ನಾನು ಕಂಡಿದ್ದೇನೆ ಎಂದು ಆರ್ ಪಿ ಮುನಿರಾಜು ಅವರು ಹಳೆಯ ಆ ದಿನಗಳನ್ನು ನೆನೆದು ಮಾತನಾಡಿದ್ದಾರೆ. ಅವರ ಮಾತುಗಳಲ್ಲಿ ಇವುಗಳನ್ನೆಲ್ಲ ಕೇಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.