Thursday, April 24, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentಕೊನೆಗೂ ನಿರ್ಮಾಣವಾಯ್ತು ವಿಷ್ಣು ಸ್ಮಾರಕ ಅಭಿಮಾನಿಗಳ ಮೊಗದಲ್ಲಿ ಸಂತಸ. ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ಮುಖ್ಯ ಅತಿಥಿ...

ಕೊನೆಗೂ ನಿರ್ಮಾಣವಾಯ್ತು ವಿಷ್ಣು ಸ್ಮಾರಕ ಅಭಿಮಾನಿಗಳ ಮೊಗದಲ್ಲಿ ಸಂತಸ. ಸ್ಮಾರಕ ಉದ್ಘಾಟನೆಗೆ ಆಗಮಿಸುತ್ತಿರುವ ಮುಖ್ಯ ಅತಿಥಿ ಯಾರು ಗೊತ್ತಾ.?

 

ಡಾ. ವಿಷ್ಣುವರ್ಧನ್ ಅಭಿಮಾನಿಗಳಿಗೆ ಸಂತಸದ ವಿಚಾರ ಹೌದು ಬಹಳಷ್ಟು ವರ್ಷಗಳಿಂದ ಅಭಿಮಾನಿಗಳ ಮನಸ್ಸಿನಲ್ಲಿ ಇದ್ದಂತಹ ನೋವಿಗೆ ಇದೀಗ ವಿದಾಯ ಸಿಗುತ್ತಿದೆ. ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ವಿಷ್ಣು ಅವರು ನಮ್ಮನ್ನು ಅಗಲಿ 12 ವರ್ಷಗಳ ಕಳೆದು ಹೋಗಿದೆ ಆದರೂ ಕೂಡ ಅವರ ಸ್ಮಾರಕ ನಿರ್ಮಾಣವಾಗಿಲ್ಲ ಎಂಬ ವಿಚಾರಕ್ಕೆ ಆಗಾಗ ಅಭಿಮಾನಿಗಳು ಬೇಸರವನ್ನು ವ್ಯಕ್ತಪಡಿಸುತ್ತಿದ್ದರು. ಸ್ಮಾರಕ ವಿಚಾರದಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದರು.

ಒಂದು ಕಡೆ ಭಾರತಿ ವಿಷ್ಣುವರ್ಧನ್ ಹಾಗೂ ಅವರ ಅಳಿಯ ಆದಂತಹ ಅನಿರುಧ್ ಅವರು ಕೂಡ ಸಾಕಷ್ಟು ಬಾರಿ ಈ ವಿಚಾರವನ್ನು ಸರ್ಕಾರದ ಗಮನಕ್ಕೂ ಕೂಡ ತಂದಿದ್ದರು. ಆದರೆ ಸರ್ಕಾರದ ನಿರ್ಲಕ್ಷತನವೋ ಅಥವಾ ದುರಾದೃಷ್ಟ ಏನೋ ತಿಳಿದಿಲ್ಲ ದಾದಾ ಅವರ ಸ್ಮಾರಕ ನಿರ್ಮಾಣವಾಗುತ್ತಿರಲಿಲ್ಲ. ಆದರೆ ಈ ಬಾರಿ ದಾದಾ ಅವರ ಸ್ಮಾರಕ ನಿರ್ಮಾಣವಾಗಿದೆ ಹೌದು ಮೈಸೂರಿನಲ್ಲಿ ಇದೇ ತಿಂಗಳ 29ನೇ ತಾರೀಕು ವಿಷ್ಣು ದಾದಾ ಅವರ ಸ್ಮಾರಕ ಉದ್ಘಾಟನೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಈ ವಿಚಾರ ಕೇಳುತ್ತಿದ್ದ ಹಾಗೆ ಅಭಿಮಾನಿಗಳೆಲ್ಲರೂ ಕೂಡ ಹರ್ಷವನ್ನು ವ್ಯಕ್ತಪಡಿಸಿದ್ದಾರೆ ಅಷ್ಟೇ ಅಲ್ಲದೆ ನಮ್ಮ ಎಷ್ಟೋ ವರ್ಷದ ಕನಸು ಈಗ ಈಡೇರುತಿದೆ ಎಂದು ಸಂತಸ ಗೊಂಡಿದ್ದಾರೆ. ಮೈಸೂರಿನಲ್ಲಿ ಸುಮಾರು ಎರಡೂವರೆ ಎಕರೆ ಜಾಗದಲ್ಲಿ ಸ್ಮಾರಕ ನಿರ್ಮಾಣ ಆಗಿದೆ ವಿಷ್ಣು ವರ್ಧನ್ ಅವರಿಗೆ ಸಂಬಂಧಿಸಿದ ಗ್ಯಾಲರಿ, ಆಡಿಟೋರಿಯಂ, ವಿಷ್ಣು ಪುತ್ಥಳಿ, ಕ್ಲಾಸ್ ರೂಮ್, ಕ್ಯಾಂಟೀನ್ ಏರಿಯಾ, ಹೀಗೆ ಈ ಸ್ಮಾರಕದಲ್ಲಿ ಹತ್ತು ಹಲವು ವಿಶೇಷತೆಗಳಿವೆ.

ಅಂದುಕೊಂಡಂತೆ ಆಗಿದ್ದರೆ 2022ನೇ ಇಸ್ವಿ ಡಿಸೆಂಬರ್ 18 ನೇ ತಾರೀಖಿನಂದೆ ವಿಷ್ಣು ಅವರ ಸ್ಮಾರಕ ಲೋಕಾರ್ಪಣೆ ಯಾಗಬೇಕಿತ್ತು ಈ ವಿಚಾರವನ್ನು ಕುದ್ದು ಮುಖ್ಯಮಂತ್ರಿ ಅವರೇ ತಿಳಿಸಿದ್ದರೂ. ಆದರೆ ಕೆಲವು ಕಾರಣಾಂತರಗಳಿಂದ ಸ್ಮಾರಕ ಉದ್ಘಾಟನೆ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. ಹಾಗಾಗಿ ಇದೇ ಜನವರಿ 29ಕ್ಕೆ (January 29th) ವಿಷ್ಣು ಸ್ಮಾರಕ ಉದ್ಘಾಟನೆ ಆಗಲಿದೆ.

ಈ ಒಂದು ಸಂತಸದ ವಿಚಾರವನ್ನು ಡಾಕ್ಟರ್ ವಿಷ್ಣುವರ್ಧನ್ ಅವರ ಅಳಿಯ ಆದಂತಹ ಅನಿರುಧ್ ಅವರು ಈಗಷ್ಟೇ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳೆಲ್ಲರಿಗೂ ಕೂಡ ಈ ಸಂತಸದ ಸುದ್ದಿ ಕೇಳಿ ಹರ್ಷ ವ್ಯಕ್ತಪಡಿಸಿದ್ದಾರೆ. ಅನಿರುಧ್ ಅವರು ಕೂಡ “ನಮ್ಮೆಲ್ಲರ ಪ್ರೀತಿಯ ಅಪ್ಪಾಜಿ ಅವರ ಸ್ಮಾರಕ ಇದೇ ತಿಂಗಳ 29ರಂದು ಉದ್ಘಾಟನೆಯಾಗಲಿದೆ ಈ ವಿಚಾರವನ್ನು ಈಗಷ್ಟೇ ಮುಖ್ಯಮಂತ್ರಿಗಳಾದಂತಹ ಬಸವರಾಜು ಬೊಮ್ಮಾಯಿಯವರು ತಿಳಿಸಿದ್ದಾರೆ. ಈ ವಿಚಾರ ಕೇಳುತ್ತಿದ್ದ ಹಾಗೆ ಅದೆಷ್ಟೋ ವರ್ಷದ ಕನಸು ನನಸಾಗುತ್ತಿದೆ ಎಂಬ ಸಂತಸ ನನ್ನಲ್ಲೂ ಕೂಡ ಮೂಡಿದೆ.

ಇನ್ನು ಈ ಒಂದು ಉದ್ಘಾಟನಾ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಬರಬೇಕು ಅಭಿಮಾನಿಗಳನ್ನು ಅಪ್ಪಾಜಿಯವರು ಎಷ್ಟು ಪ್ರೀತಿಸುತ್ತಿದ್ದರು ಎಂಬ ವಿಚಾರ ನಿಮಗೆ ತಿಳಿದೇ ಇದೆ. ಹಾಗಾಗಿ ನೀವು ಉದ್ಘಾಟನಾ ಸಮಾರಂಭಕ್ಕೆ ಬಂದರೆ ಅಪ್ಪಾಜಿ ಅವರ ಆತ್ಮಕ್ಕೆ ಶಾಂತಿ ದೊರೆಯುತ್ತದೆ ಹಾಗೂ ಮೇಲೆ ಇರುವಂತಹ ಅಪ್ಪಾಜಿ ಇವೆಲ್ಲವನ್ನೂ ನೋಡಿ ಕಣ್ಣು ತುಂಬಿಕೊಳ್ಳುತ್ತಾರೆ ಎಂಬ ನಂಬಿಕೆಯಲ್ಲಿ ನಾನಿದ್ದೇನೆ. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಭಾಗವಹಿಸಿ ಈ ಕಾರಣಕ್ಕಾಗಿ ಎರಡು ವಾರಗಳಿಗಿಂತ ಮುಂಚೆ ಈ ಒಂದು ವಿಚಾರವನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ ಎಂದು ನಟ ಅನಿರುದ್ಧ ಅವರು ಹೇಳಿಕೊಂಡಿದ್ದಾರೆ.

ಇನ್ನು ವಿಷ್ಣು ಅವರ ಈ ಒಂದು ಸ್ಮಾರಕದಲ್ಲಿ ನೀವು ಸಾಕಷ್ಟು ಸರ್ಪ್ರೈಸ್ ಗಳನ್ನು ಕಾಣಬಹುದಾಗಿದೆ ಎಂದು ಕೂಡ ಹೇಳಿಕೊಂಡಿದ್ದಾರೆ. ಇವೆಲ್ಲವನ್ನು ಕೇಳುತ್ತಿದ್ದರೆ ಅದ್ಭುತವಾಗಿಯೇ ವಿಷ್ಣು ಅವರ ಸ್ಮಾರಕವನ್ನು ನಿರ್ಮಾಣ ಮಾಡಿದ್ದಾರೆ ಎಂಬುದು ತಿಳಿದು ಬರುತ್ತದೆ. ಅದೇನೇ ಆಗಲಿ ಅಪ್ಪಾಜಿ ಅವರ ಸ್ಮಾರಕ ಈಗಲಾದರೂ ಕೂಡ ನಿರ್ಮಾಣವಾಯಿತಲ್ಲ ಎಂಬುದಷ್ಟೇ ನಮಗೆ ಖುಷಿ ತರುವ ವಿಚಾರ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ