Skip to content
  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us

Kannada Trend News

Just another WordPress site

  • News
  • Cinema Updates
  • Serial Loka
  • Terms and Conditions
  • Privacy Policy
  • Contact Us
  • About Us
  • Toggle search form

ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

Posted on January 29, 2023 By Kannada Trend News No Comments on ಬೆಂಗ್ಳೂರಲ್ಲಿ ವಿಷ್ಣು ಸ್ಮಾರಕ ಯಾಕಾಗಿಲ್ಲ ಎಂಬ ಕಟು ಸತ್ಯ ಬಿಚ್ಚಿಟ್ಟ ಅನಿರುಧ್. ಅಪ್ಪು, ಅಂಬಿ, ಅಣ್ಣಾವ್ರ ಸ್ಮಾರಕ ಇದ್ದ ಜಾಗದಲ್ಲೆ ದಾದಾ ಸ್ಮಾರಕ ಇದಿದ್ರೆ ಎಷ್ಟು ಚಂದ ಇರ್ತಿತ್ತು.

 

ವಿಷ್ಣುವರ್ಧನ್ (Vishnuvardhan) ತೆರೆ ಮೇಲೆ ರಾಜನಂತೆ ಅಬ್ಬರಿಸಿದ ಸಾಹಸಸಿಂಹ ಆದರೆ ತೆರೆ ಹಿಂದೆ ವೈಯುಕ್ತಿಕ ಬದುಕಿನಲ್ಲಿ ಇಂಡಸ್ಟ್ರಿಗೆ ಕಾಲಿಟ್ಟ ದಿನದಿಂದಲೂ ಅವರ ಅಂತ್ಯದ ದಿನದವರೆಗೂ ಹಾಗೂ ಈಗ ಸಾವನ್ನಪ್ಪಿ ದಶಕವೇ ಕಳೆದಿದರೂ ಇಲ್ಲಿಯವರೆಗೂ ಇನ್ನೂ ಸ್ಮಾರಕದ ವಿಚಾರದ ವಿಚಾರದ ತನಕವೂ ಕೂಡ ಹಲವು ವಿವಾದಗಳಲ್ಲಿ ಸಿಲುಕಿಕೊಂಡ ದುರಂತ ನಾಯಕ.

ಅಭಿಮಾನಿಗಳ ಹೋರಾಟ ಕುಟುಂಬದವರ ಕೋರಿಕೆ ಸರ್ಕಾರದ ಹಗ್ಗ ಜಗ್ಗಾಟ ಮತ್ತು ಇನ್ನಿತರ ಕಣ್ಣಾ ಮುಚ್ಚಾಲೆ ಎಲ್ಲವನ್ನು ಮೀರಿ ಇಂದು ವಿಷ್ಣುವರ್ಧನ್ ಅವರ ಸ್ಮಾರಕ (Memorial) ಮೈಸೂರಿನಲ್ಲಿ (Mysore) ನಿರ್ಮಾಣ ಆಗಿದೆ. ಆದರೆ ಬೆಂಗಳೂರಿನಲ್ಲಿ (Bangalore) ಅವರ ಪುಣ್ಯಭೂಮಿ ಆಗಬೇಕು ಸ್ಮಾರಕ ಆಗಬೇಕು ಅನ್ನೋದು ಅವರ ಕೋಟ್ಯಾನು ಕೋಟಿ ಅಭಿಮಾನಿಗಳ ಆಸೆ. ಆದರೆ ಅದು ಯಾಕೆ ಸಾಧ್ಯವಾಗುತ್ತಿಲ್ಲ ಎನ್ನುವುದೇ ಯಕ್ಷ ಪ್ರಶ್ನೆ. ಇದಕ್ಕೆ ಅವರ ಅಳಿಯ ಅನಿರುದ್ಧ್ (Anirudh) ಅವರ ಉತ್ತರ ಹೀಗಿತ್ತು.

ಇಂದು ಮೈಸೂರಿನಲ್ಲಿ ನಡೆದ ಸ್ಮಾರಕ ಉದ್ಘಾಟನೆ ಸಮಾರಂಭ ಕುರಿತು ಹಾಗೂ ಬೆಂಗಳೂರಿನಲ್ಲಿ ಯಾಕೆ ಸ್ಮಾರಕ ಇನ್ನು ಆಗಿಲ್ಲ ಎನ್ನುವ ಕನ್ನಡಿಗರ ಪ್ರಶ್ನೆಗಳೂ ಮಾಧ್ಯಮದವರ ಜೊತೆ ಮಾತನಾಡಿದ ಅನಿರುದ್ಧ್ ಅವರು ಈ ರೀತಿ ಉತ್ತರ ಕೊಟ್ಟಿದ್ದಾರೆ. ನಮಗೂ ಸಹ ಬೆಂಗಳೂರಿನಲ್ಲಿ ಅವರ ಪುಣ್ಯ ಭೂಮಿ ಇರುವಲ್ಲಿ ಸ್ಮಾರಕ ಆಗಬೇಕು ಎನ್ನುವ ಆಸೆ ಇದೆ. ಎಲ್ಲರಿಗೂ ಗೊತ್ತಿರುವ ಹಾಗೆ 2010 ರಲ್ಲೇ ರಾಜ್ಯ ಸರ್ಕಾರ (State Government) ಕೂಡ ವಿಷ್ಣುವರ್ಧನ್ ಸ್ಮಾರಕ ಪ್ರತಿಷ್ಠಾಪನ ಟ್ರಸ್ಟ್ ( Vishnuvardhan Smaraka prathistapana Trust) ಮಾಡಿತ್ತು.

ಅದಕ್ಕೆ ಅಧ್ಯಕ್ಷರು ಮುಖ್ಯಮಂತ್ರಿಗಳೇ (Chief Minister) ಆಗಿದ್ದರು ನಾನು ಹಾಗೂ ಭಾರತೀಯಮ್ಮ ಅದರ ಸದಸ್ಯರಾಗಿದ್ದವು. ಮುಖ್ಯ ಮಂತ್ರಿಗಳೇ ಅಧ್ಯಕ್ಷರಾಗಿದ್ದರು ಸಹ ಅಲ್ಲಿ ಪುಣ್ಯಭೂಮಿ ಮತ್ತು ಸ್ಮಾರಕ ಮಾಡುವುದಕ್ಕೆ ಸಾಧ್ಯವಾಗಲೇ ಇಲ್ಲ. ಅದಕ್ಕಾಗಿ ಅಭಿಮಾನಿಗಳು ಮತ್ತು ನಾವುಗಳು ಸಾಕಷ್ಟು ಹೋರಾಟ ಮಾಡಿದ್ದೇವೆ, ಸಂಘರ್ಷಗಳು ನಡೆದು ವಿವಾದಗಳು ಆಗಿವೆ.

ಅಕ್ಕ-ಪಕ್ಕ ಮತ್ತು ಬೇರೆಡೆ ಹಾಗೂ ಮೈಸೂರಿನಲ್ಲಿ ಎಂದು ಹೀಗೆ ಸ್ಥಳಗಳು ಬದಲಾಗುತ್ತಲೇ ಇದ್ದವು ನಾವು ಕೂಡ ಆರುವರೆ ವರ್ಷಗಳ ಕಾಲ ಅದೇ ಸುಧೀರ್ಘಾವಧಿ ಆಯ್ತು ಆದರೂ ತಾಳ್ಮೆಯಿಂದ ಕಾದೆವು. ಅಭಿಮಾನಿಗಳಿಗೆ ಸಹ ಒಂದು ಕಡೆ ಬೇಸರ ಇದೆ, ಬೆಂಗಳೂರಿನಲ್ಲೇ ಆಗಬೇಕಿತ್ತು ಎಂದು. ಇನ್ನು ಎಷ್ಟು ದಿನ ಕಾಯುವುದು ಅಭಿಮಾನಿಗಳನ್ನು ಕೂಡ ಕರೆಸಿ ಒಂದು ಸಮಯ ಕೊಟ್ಟೆವು.

ಇಲ್ಲಿಯವರೆಗೂ ನೀವು ಪ್ರಯತ್ನ ಮಾಡಿ ನಮಗಿಂತ ನೀವು ಒಂದು ಹೆಜ್ಜೆ ಮುಂದಿದ್ದೀರ ಎಂದು ಗೊತ್ತಾದರೂ ನಾವು ಮತ್ತೆ ಹೋರಾಟಕ್ಕೆ ಇಳಿಯುತ್ತೇವೆ, ಇಲ್ಲವಾದರೆ ದಯವಿಟ್ಟು ನಮಗೆ ಮೈಸೂರಿನಲ್ಲಿ ಸ್ಮಾರಕ ಮಾಡಲು ಅವಕಾಶ ಕೊಡಿ ಎಂದು ಕೇಳಿಕೊಂಡೆವು. ಎಲ್ಲರಿಗೂ ತಿಳಿಯಿತು ಯಾರೇ ಬಂದರೂ ಸಹ ಮುಖ್ಯಮಂತ್ರಿಗಳೇ ನಮ್ಮ ಜೊತೆ ಇದ್ದರೂ ಅದು ಸರಕಾರದ ಯೋಜನೆ ಆಗಿದ್ದರೂ ಅಲ್ಲಿ ಸ್ಮಾರಕ ಮಾಡಲು ಆಗೋದೇ ಇಲ್ಲ ಎಂದು.

ಹಾಗಾಗಿ ಈಗ ನಾವು ಮೈಸೂರಿನಲ್ಲಿ ಮಾಡಿದ್ದೇವೆ ಇದು ಸಂಪೂರ್ಣವಾಗಿ ಸರ್ಕಾರದ ಯೋಜನೆಯಾಗಿದೆ. ನಾಗರೀಕರ ಹಣದಿಂದ ನಿರ್ಮಾಣವಾಗಿ, ಕನ್ನಡಿಗರಿಗೆ ಹಾಗೂ ವಿಷ್ಣುವರ್ಧನ್ ಅವರಿಗೆ ಇದನ್ನು ಅರ್ಪಿಸಲಾಗಿದೆ. ಏನೇ ಆದಾಯ ಬಂದರು ಅದು ಪ್ರತಿಷ್ಠಾಪನ ಟ್ರಸ್ಟಿಗೆ ಹೋಗುತ್ತದೆ. ಅದನ್ನು ಇಲ್ಲಿಯ ನಿರ್ವಹಣೆಗಾಗಿ ಬಳಸಿಕೊಳ್ಳುತ್ತಾರೆ. ಬೆಂಗಳೂರು ಹಾಗೂ ಮೈಸೂರು ಎರಡು ಕಣ್ಣುಗಳು ಇದ್ದ ಹಾಗೆ ಬೆಂಗಳೂರಿನಲ್ಲಿ ಬಾಲಣ್ಣ ಅವರ ಕುಟುಂಬದವರನ್ನು ಸಹ ಸಂಪರ್ಕಿಸಿ ನಾವು ಕೇಳಿಕೊಂಡಿದ್ದೇವೆ.

ಅದು ನಿಮ್ಮದೇ ಸ್ವಂತ ಆಸ್ತಿಯಾಗಿದ್ದರೂ ಇನ್ನೊಬ್ಬ ಕಲಾವಿದ ಕುಟುಂಬಕ್ಕಾಗಿ ಕೊಟ್ಟು ನಿಮ್ಮ ಹೃದಯ ಶ್ರೀಮಂತಿಕೆ ತೋರಿಸಿ ಎಂದು ಅಕಸ್ಮಾತ್ ಅವರು ದೊಡ್ಡ ಮನಸ್ಸು ಮಾಡಿದರೆ ಅಲ್ಲಿಯೂ ಕೂಡ ಆಗುತ್ತದೆ ಎಂದು ಹೇಳಿದ್ದಾರೆ. ಮತ್ತು ಕೋರ್ಟಿನಿಂದ ಆದೇಶ ಆಗಿದೆಯಂತೆ ಕುಟುಂಬಸ್ಥರ ಒಪ್ಪಿಗೆ ಇದ್ದರೆ ಅದನ್ನು ಹೊಡೆದ ಹಾಕಬಹುದು ಎಂದು ಖಂಡಿತವಾಗಿಯೂ ನಾವು ಇದಕ್ಕೆ ಅವಕಾಶ ಕೊಡುವುದಿಲ್ಲ ಎನ್ನುವುದನ್ನು ಸಹ ಅನಿರುದ್ಧ ಅವರು ಸ್ಪಷ್ಟ ಪಡಿಸಿದ್ದಾರೆ.

https://youtu.be/Vc8bhyrRrqA

Viral News Tags:Vishnu, Vishnu dada, Vishnu smaraka, Vishnuvardhan
WhatsApp Group Join Now
Telegram Group Join Now

Post navigation

Previous Post: ಬಿಗ್ ಬಾಸ್ ನಿಂದ ಗೆದ್ದ 60 ಲಕ್ಷ ಹಣವನ್ನೆಲ್ಲಾ ದಾನ ಮಾಡುತ್ತಿರುವ ನಟ ರೂಪೇಶ್ ಶೆಟ್ಟಿ. ಇದ್ದಕ್ಕಿದ್ದ ಹಾಗೇ ರೂಪೇಶ್ ಇಂಥ ನಿರ್ಧಾರ ಕೈಗೊಳ್ಳಲು ಕಾರಣವೇನು ಗೊತ್ತ.?
Next Post: ಚೆನ್ನಾಗ್ ಉಂಡ್ಕೊಂಡು ತಿನ್ಕೊಂಡು ಇದ್ದವ್ನೇ, ಹೊಂಟೋದ ಇನ್ ನಾನ್ ಯಾವ್ ಲೆಕ್ಕ ಜಿಮ್ ಬಗ್ಗೆ ಭಯ ಬೇಡ ಎಂದ ದರ್ಶನ್. ಕ್ರಾಂತಿಗಾಗಿ ಎಷ್ಟು ಕೆ.ಜಿ ತೂಕ ಇಳಿಸಿದ್ದಿನಿ ಗೊತ್ತ.?

Leave a Reply Cancel reply

Your email address will not be published. Required fields are marked *

Copyright © 2025 Kannada Trend News.


Developed By Top Digital Marketing & Website Development company in Mysore