
ಸಾಹಸಸಿಂಹ ವಿಷ್ಣುವರ್ಧನ್ ಅವರು ಅಭಿನವ ಸಂತ. ಆರಂಭದಲ್ಲಿ ರಾಮಾಚಾರಿ ಸಿನಿಮಾದಂತಹ ಚಿತ್ರಗಳಲ್ಲಿ ಚಿಗುರು ಮೀಸೆ ಬಿಸಿ ರಕ್ತದ ಯುವಕನಾಗಿ, ನಂತರ ಹೃದಯಗೀತೆ ಜಯಸಿಂಹ ಸಿನಿಮಾಗಳ ಕಾಲದಲ್ಲಿ ರೋಮ್ಯಾಂಟಿಕ್ ಹೀರೋ ಆಗಿ, ಯಜಮಾನ ಸೂರ್ಯವಂಶ ಸಿಂಹಾದ್ರಿಯ ಸಿಂಹ ಮುಂತಾದ ಕೌಟುಂಬಿಕ ಚಿತ್ರಗಳಲ್ಲಿ ಭಾವಜೀವಿ ಆಗಿ ಅಂತಿಮ ದಿನಗಳಲ್ಲಿ ಸಿರಿವಂತ ಸಾಹುಕಾರ ಸಿನಿಮಾದಂತಹ ಆಧ್ಯಾತ್ಮಿಕ ಪಾತ್ರಗಳಲ್ಲಿ ಕಾಣಿಸಿಕೊಂಡು ಕನ್ನಡಿಗರನ್ನು ಹಲವು ದಶಕಗಳವರೆಗೂ ರಂಜಿಸಿದ ಒಬ್ಬ ಮಹಾನ್ ಕಲಾವಿದ.
ಇಂತಹ ಮೇರು ನಟನ ಮುಖದಲ್ಲಿ ಅದೆಂತಹದೋ ರಾಜಕಳೆ ರಾರಾಜಿಸುತ್ತಿತ್ತು. ಹೆಸರೇ ವಿಷ್ಣುವರ್ಧನ ಎಂದು ಇದ್ದ ಅವರ ಮುಖದಲ್ಲೂ ಕೂಡ ಅಂತಹದ್ದೇ ತೇಜಸ್ಸು ಎದ್ದು ಕಾಣುತ್ತಿತ್ತು. ಇದಕ್ಕೆ ಅವರು ಆಪ್ತರಕ್ಷಕ ಸಿನಿಮಾದಲ್ಲಿ ಹಾಕಿದ ಆ ಪಾತ್ರವೇ ಸಾಕ್ಷಿ ಆಪ್ತರಕ್ಷಕ ಸಿನಿಮಾದ ವಿಜಯರಾಜೇಂದ್ರ ಬಹದ್ದೂರ್ ಪಾತ್ರ ವಿಷ್ಣುವರ್ಧನ್ ಅವರಿಗೆ ಹೇಳಿ ಮಾಡಿಸಿದ ರೀತಿ ಇತ್ತು.
ಇಂದಿಗೂ ಸಹ ವಿಷ್ಣುವರ್ಧನ್ ಹೆಸರು ಕೇಳಿದ ತಕ್ಷಣ ಅವರು ಇದುವರೆಗೆ ಮಾಡಿದ ಎಲ್ಲಾ ಪಾತ್ರಗಳ ಜೊತೆಯಲ್ಲಿ ಅಂತಿಮವಾಗಿ ಕಣ್ಣ ಮುಂದೆ ಉಳಿದುಕೊಳ್ಳುವ ಚಿತ್ರಪಟ ವಿಜಯ ರಾಜೇಂದ್ರ ಬಹುದ್ದೂರ್ ಅವರ ಅಪಾವತಾರ ಆಗಿದ್ದ ವಿಷ್ಣುವರ್ಧನ್ ಅವರು. ಜಮೀನ್ದಾರು, ಸಿಂಹಾದ್ರಿಯ ಸಿಂಹ, ರಾಜ ನರಸಿಂಹ ಮುಂತಾದ ಸಿನಿಮಾಗಳಲ್ಲಿ ಜಮೀನ್ದಾರನ ಪಾತ್ರ ನಿರ್ವಹಿಸಿದ್ದರೂ ಕೂಡ ಅದಕ್ಕಿಂತಲೂ ಒಂದು ಹೆಜ್ಜೆ ಮುಂದಾಗಿ ಈ ಮಹರಾಜನ ಪಾತ್ರ ಜನರ ಮನಸ್ಸನ್ನು ಗೆದ್ದಿತ್ತು.
ಆ ಪಾತ್ರಕ್ಕೆ ತಕ್ಕ ಹಾಗೆ ಮಾಡಿದ್ದ ಕಾಸ್ಯೂಮ್ ಅದಕ್ಕೆ ಪ್ಲಸ್ ಪಾಯಿಂಟ್ ಆಯ್ತು ಎಂದೇ ಹೇಳಬಹುದು. ಆದರೆ ಆ ಕಾಸ್ಚ್ಯೂನ ಬೆಲೆ ಎಷ್ಟಿತ್ತು ಎಂದು ಕೇಳಿದರೆ ಎಲ್ಲರೂ ಶಾಕ್ ಆಗಿ ಬಿಡಬಹುದು. ಇದನ್ನು ಕರ್ನಾಟಕದಲ್ಲಿ ಜೂನಿಯರ್ ವಿಷ್ಣುವರ್ಧನ್ ಎಂದೇ ಕರೆಸಿಕೊಂಡಿರುವ ಗಂಗಾಧರ್ ಅವರು ಕನ್ನಡ ಮಾಣಿಕ್ಯ ಎನ್ನುವ ಯೂಟ್ಯೂಬ್ ಚಾನೆಲ್ ಸಂದರ್ಶನದಲ್ಲಿ ಮಾತನಾಡುವಾಗ ಹೇಳಿಕೊಂಡಿದ್ದಾರೆ.
ಆರಂಭದ ದಿನಗಳಲ್ಲಿ ನಾನು ವಿಷ್ಣುವರ್ಧನ್ ಅವರಂತೆ ಕಾಣಿಸಿಕೊಳ್ಳಬೇಕು ಎಂದು ಆಸೆ ಪಟ್ಟಾಗ ಅವರಂತೆ ಕಾಸ್ಟ್ಚೂಮ್ ಹೊಂದಿಸಿಕೊಳ್ಳುವುದು ನನ್ನ ಬಹುದೊಡ್ಡ ಚಾಲೆಂಜ್ ಆಗಿತ್ತು. ಯಾಕೆಂದರೆ ನಾನು ಆಗ ಇನ್ನು ಆರ್ಕೆಸ್ಟ್ರಾಗೆ ಬಂದಿರಲಿಲ್ಲ ರಂಗಭೂಮಿ ಕಲಾವಿದ ಆಗಿದ್ದೆ. ಕಡಿಮೆ ದುಡಿಮೆ, ಅದು ತಿಂಗಳು ಪೂರ್ತಿ ಕೆಲಸವೂ ಇರುತ್ತಿರಲಿಲ್ಲ ಹಾಗಾಗಿ ಫುಟ್ಪಾತ್ ಅಲ್ಲಿ ಸಿಗುವ ಹೆಚ್ಚು ಕಡಿಮೆ ಅವರ ಬಟ್ಟೆಗಳಂತೆ ಹೋಲುವ ಬಟ್ಟೆಗಳನ್ನು ತೆಗೆದುಕೊಂಡು ಟೈಲರ್ ಗಳಿಗೆ ರಿಕ್ವೆಸ್ಟ್ ಮಾಡಿಕೊಂಡು ಅವರಿಂದ ಅದನ್ನು ಆಲ್ಟ್ರೇಷನ್ ಮಾಡಿಸಿಕೊಳ್ಳುತ್ತಿದ್ದೆ.
ಈ ಎಲ್ಲಾ ಕೆಲಸಗಳಲ್ಲಿ ನನ್ನ ಪತ್ನಿ, ಜಯಶ್ರೀ ಅವರು ಬಹಳ ಸಪೋರ್ಟ್ ಮಾಡುತ್ತಿದ್ದರು. ಕೊನೆಗೆ ಆಪ್ತರಕ್ಷಕ ಚಿತ್ರದ ಕಾಸ್ಟಿಂಗ್ ಮಾತ್ರ ಬಹಳ ಚಾಲೆಂಜಿಂಗ್ ಆಗಿತ್ತು. ನಾವು ಅದನ್ನು ರೆಡಿ ಮಾಡಿಸಲು ಅದರ ಬೆಲೆ ಕೇಳಿದಾಗ ಒಂದೂವರೆ ಲಕ್ಷ ರೂಪಾಯಿ ಎಂದು ಹೇಳಿದ್ದರು ನಮ್ಮ ಕೈಲಿ ಅದು ಸಾಧ್ಯವಾಗದ್ದು ಆದರೆ ಬೇಕೇ ಬೇಕಿತ್ತು. ಆಗ ನನ್ನ ಪತ್ನಿ ಶಿವಾಜಿನಗರ ಮುಂತಾದ ಕಡೆಯಲ್ಲ ಓಡಾಡಿ ಅದಕ್ಕೆ ಬೇಕಾದ ಸಾಮಗ್ರಿಗಳನ್ನು ತೆಗೆದುಕೊಂಡು ಅವರ ಗೆಳತಿಯಾದ ಒಬ್ಬ ಟೈಲರ್ ಗೆ ಯಾವ ರೀತಿ ಬೇಕು ಎನ್ನುವುದನ್ನು ಎಲ್ಲ ವಿವರಿಸಿ.
ಮೇಲೆ ಹರಳುಗಳು ಮುತ್ತುಗಳನ್ನೆಲ್ಲ ಅವರೇ ಸೂಜಿ ದಾರ ತೆಗೆದುಕೊಂಡು ಪೋಣಿಸಿ ರೆಡಿ ಮಾಡಿ ಕೊಟ್ಟರು. ಮತ್ತು ಕಿರೀಟ ಪೂರ್ತಿ ಅವರೇ ಅವರ ಕೈಯಿಂದ ಮಾಡಿರುವುದು. ಹೇಗೋ ಕೊನೆಗೂ ಅದಕ್ಕೆ ಪೂರಕವಾದ ಕಾಸ್ಟ್ಯೂಮ್ ಬಂತು. ಇಂದಿಗೂ ಸಹಾ ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದೇವೆ ಎಂದು ಅದರ ಬಗ್ಗೆ ಹೇಳಿಕೊಂಡಿದ್ದಾರೆ.