Sunday, June 4, 2023
HomeUseful Informationಮೊಬೈಲ್ ಮೂಲಕ ಕೇವಲ 5 ನಿಮಿಷಗಳಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ...

ಮೊಬೈಲ್ ಮೂಲಕ ಕೇವಲ 5 ನಿಮಿಷಗಳಲ್ಲಿ ವೋಟರ್ ಐಡಿ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವ ವಿಧಾನ.!

 

ಈಗ ದೇಶದಾದ್ಯಂತ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡುವ ಚರ್ಚೆ ಜೋರಾಗಿ ನಡೆಯುತ್ತಿದೆ. ಈ ಹಿಂದೆಯೇ 2017 ರಲ್ಲಿ ಆದಾಯ ತೆರಿಗೆ ಇಲಾಖೆ ಈ ನಿಯಮ ಹೇರಿತ್ತು. ಜನಸಾಮಾನ್ಯರು ಈ ಬಗ್ಗೆ ಆಸಕ್ತಿ ತೋರದ ಕಾರಣವಾಗಿ ಸರ್ಕಾರವು ದಂಡ ಸಮೇತವಾಗಿ ಮಾರ್ಚ್ 31, 2023ರ ವರೆಗೆ ಪಾನ್ ಕಾರ್ಡ್ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಲೇಬೇಕು ಇದು ಕಡ್ಡಾಯ ಇಲ್ಲದಿದ್ದಲ್ಲಿ ಅಂಥವರ ಪಾನ್ ಕಾರ್ಡ್ ನಿಸ್ಕ್ರಿಯಗೊಳ್ಳುವುದು ಅಥವಾ ದೊಡ್ಡ ಮಟ್ಟದ ದಂಡ ಬೀಳುವುದು ಎನ್ನುವ ಎಚ್ಚರಿಕೆ ನೀಡಿತು.

ಅಂತಿಮವಾಗಿ ಕೊನೆ ದಿನಗಳಲ್ಲಿ ಆದ ಸಮಸ್ಯೆಗಳ ಕಾರಣ ಮತ್ತೊಮ್ಮೆ ಇದನ್ನು 1000 ರೂ ದಂಡ ಸಮೇತ ಲಿಂಕ್ ಮಾಡಲು ಜುಲೈ 30, 2023ರ ವರೆಗೆ ಅವಕಾಶ ನೀಡಲಾಗಿದೆ. ಇದಾದ ನಂತರ ವೋಟರ್ ಐಡಿಗೂ ಸಹ ಆಧಾರ್ ಕಾರ್ಡ್ ಲಿಂಕ್ ಕಡ್ಡಾಯ ಎನ್ನುವ ನಿಯಮ ಜಾರಿಗೆ ಬಂದಿದೆ. ಈಗ ದೇಶದ ಅನೇಕ ರಾಜ್ಯಗಳಲ್ಲಿ ಚುನಾವಣೆ ಇದೆ. ನಮ್ಮ ಕರ್ನಾಟಕ ರಾಜ್ಯದಲ್ಲೂ ಸಹ ಮುಂದಿನ ತಿಂಗಳೇ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಕೂಡ ಎದುರಾಗಿದೆ.

ಇನ್ನೇನು ಚುನಾವಣೆ ದಿನಕ್ಕೆ ಕ್ಷಣಗಣನೆ ಇರುವಾಗಲೇ ಇಂತಹದೊಂದು ನಿಯಮ ಜಾರಿಗೆ ಬಂದಿರುವುದು ಎಲ್ಲರ ಆತಂಕ ಹೆಚ್ಚಿಸುತ್ತಿದೆ. ಆದರೆ ಈ ಬಗ್ಗೆ ಸ್ಪಷ್ಟವಾಗಿ ಉತ್ತರಿಸಿರುವ ಕೇಂದ್ರ ಕಾನೂನು ಸಚಿವ ಕಿರಣ್ ದಿಜಿಯಾ ಅವರು ವೋಟರ್ ಐಡಿ ಗೂ ಆಧಾರ್ ಕಾರ್ಡ್ ಲಿಂಕ್ ಮಾಡುವುದರಿಂದ ಸಾಕಷ್ಟು ಅಕ್ರಮಕ್ಕೆ ತಡೆ ಬೀಳಲಿದೆ. ಆದರೆ ಇದಕ್ಕೆ ಯಾವುದೇ ಕಾಲಾವಧಿ ನಿಗದಿತಗೊಳಿಸಿಲ್ಲ ಮಾರ್ಚ್ 31, 2024ರವರೆಗೆ ನಾಗರೀಕರು ಚುನಾವಣಾ ಆಯೋಗದ ಮತದಾರರ ನೋಂದಣಿ ಅಧಿಕಾರಿಗಳಿಗೆ ಮಾಹಿತಿ ಕೊಟ್ಟು ಈ ಪ್ರಕ್ರಿಯ ಪೂರ್ಣಗೊಳಿಸಬಹುದು ಎಂದು ಹೇಳಿದ್ದರು.

ಈಗಷ್ಟೇ ನಿಧಾನವಾಗಿ ಈ ಪ್ರಕ್ರಿಯೆ ಆರಂಭಗೊಂಡಿದ್ದು, ದೇಶದಾದ್ಯಂತ ಇದು ವಿಸ್ತರಿಸಿ ಮುಂದೊಂದು ದಿನ ಇದು ಕಡ್ಡಾಯವಾಗುವ ಸಾಧ್ಯತೆಗಳು ಇವೆ. ಮೊದಲ ಹಂತವಾಗಿ ಇದಕ್ಕೆ ಕಡೇ ದಿನಾಂಕ ನಿಗದಿಪಡಿಸದೆ ಇದ್ದರೂ ಈ ರೀತಿ ಮತದಾರ ಗುರುತಿನ ಚೀಟಿಗೂ ಆಧಾರ್ ಕಾರ್ಡ್ ಲಿಂಕ್ ಮಾಡುವ ಪ್ಲಾನ್ ಅನ್ನು ಸರ್ಕಾರ ಹೊಂದಿದೆ ಎನ್ನುವುದು ನಿಜ.

ಆಫ್ಲೈನ್ ಮೂಲಕ ಚುನಾವಣಾ ಆಯೋಗದ ನೋಂದಣಿ ಅಧಿಕಾರಿಗಳಿಗೆ ತಮ್ಮ ಮಾಹಿತಿಗಳನ್ನು ಕೊಟ್ಟ ಸ್ವಯಂ ಪ್ರೇರಿತವಾಗಿ ಆಧಾರ್ ಕಾರ್ಡ್ ಲಿಂಕ್ ಮಾಡಲು ಸಮಯ ಅವಕಾಶ ಇಲ್ಲದೆ ಹೋದವರು ಮತ್ತೊಂದು ಮಾರ್ಗದ ಮೂಲಕ ಕೂಡ ಮತದಾರರ ಗುರುತಿನ ಚೀಟಿ ಜೊತೆ ಆಧಾರ್ ಕಾರ್ಡ್ ಲಿಂಕ್ ಮಾಡಬಹುದು. ಇದಕ್ಕಾಗಿ ಆನ್ಲೈನಲ್ಲಿ ಈ ರೀತಿ ವಿಧಾನಗಳನ್ನು ಅನುಸರಿಸಿ.

ಯಾವುದೇ ಆಂಡ್ರಾಯ್ಡ್ ಮೊಬೈಲ್ ಫೋನ್ ಇಂದ ಪ್ಲೇ ಸ್ಟೋರ್ ಗೆ ಹೋಗಿ ವೋಟರ್ ಹೆಲ್ಪ್ ಲೈನ್ ಎನ್ನುವ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ. ಇನ್ಸ್ಟಾಲ್ ಆದ ಬಳಿಕ ಒಂದೆಡೆ ಸೇವ್ ಮಾಡಿಟ್ಟು ಕೊಂಡಿದ್ದ ನಿಮ್ಮ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಗಳ ವಿವರಗಳನ್ನು ಇಲ್ಲಿ ತುಂಬಿಸುವ ಮೂಲಕ ನೀವು ನಿಮ್ಮ ವೋಟರ್ ಐಡಿಯನ್ನು ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಬಹುದು.

ಇತ್ತೀಚೆಗೆ ಎಲ್ಲಾ ಯೋಜನೆಗಳ ಅಪ್ಲಿಕೇಶನ್ ಸರ್ಕಾರಿ ಉದ್ಯೋಗಗಳ ಅಪ್ಲಿಕೇಶನ್ ಮತ್ತು ಈ ರೀತಿ ಸರ್ಕಾರದ ಎಲ್ಲಾ ಕೆಲಸ ಕಾರ್ಯಗಳು ಆನ್ಲೈನ್ ನಲ್ಲಿಯೇ ಹೆಚ್ಚಾಗಿ ನಡೆಯುತ್ತಿವೆ. ಹಾಗಾಗಿ ಗ್ರಾಹಕರಿಗೆ ಸ್ವಯಂ ಪ್ರೇರಿತವಾಗಿ ಅವರೇ ಲಿಂಕ್ ಮಾಡಲು ಈ ರೀತಿ ಅವಕಾಶ ಮಾಡಿಕೊಡಲಾಗಿದೆ. ಇನ್ನು ವಿವರವಾಗಿ ಇದನ್ನು ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.