ಹಬ್ಬ ಹರಿ ದಿನಗಳಲ್ಲಿ ಸಿಂಗಾರ ಮಾಡಿಕೊಂಡಿರುವಂತಹ ಸುಮಂಗಲಿಯರನ್ನು ನೋಡಿದ್ದೀರಾ. ಆ ಅಂದ ಚಂದವನ್ನು ಪದಗಳಲ್ಲಿ ಹೇಳುವುದಕ್ಕೆ ಅಸಾಧ್ಯ. ಅಚ್ಚುಕಟ್ಟಾಗಿ ಉಟ್ಟಿರುವ ಸೀರೆ, ಹಣೆಗೆ ಸಿಂಧೂರ, ಕಣ್ಣಿಗೆ ಕಾಡಿಗೆ, ಕೈ ತುಂಬಾ ಬಳೆ, ಕಾಲಿಗೆ ಬೆಳ್ಳಿ ಕಾಲು ಗೆಜ್ಜೆ, ಕಾಲುಂಗುರ ಇಷ್ಟು ಸಿಂಗಾರವನ್ನು ಮಾಡಿಕೊಂಡು ಮನೆಯ ತುಂಬ ಓಡಾಡುತ್ತಿದ್ದರೆ ಹಬ್ಬ ಇನ್ನಷ್ಟು ಕಳೆಗಟ್ಟಿ ಬಿಡುತ್ತದೆ.
ಅದರಲ್ಲೂ ನಮ್ಮ ಹಿಂದೂ ಸಂಪ್ರದಾಯದಲ್ಲಿ ಕಾಲುಂಗುರಕ್ಕೆ ವಿಶೇಷವಾದ ಸ್ಥಾನವನ್ನು ಕೊಡಲಾಗಿದೆ. ಕಾಲು ಬೆರಳಿನ ಉಂಗುರವನ್ನು ಯಾರು ಬೇಕೋ ಅವರು ಧರಿಸುವ ಹಾಗಿಲ್ಲ. ಬದಲಾಗಿ ಅದು ಮುತ್ತೈದೆಯ ಪ್ರತೀಕ. ಅಲ್ಲದೆ ಕಾಲುಂಗುರವನ್ನು ಭಗವಾನ್ ವಿಷ್ಣು ಮತ್ತು ಅವನ ಪತ್ನಿ ಲಕ್ಷ್ಮಿಯನ್ನು ಗೌರವಿಸಲು ಧರಿಸಲಾಗುತ್ತದೆ ಎನ್ನುವ ನಂಬಿಕೆ ಇದೆ.
ಕಾಲುಂಗುರವನ್ನು ಧರಿಸುವುದರಿಂದ ಪತಿಯ ಅದೃಷ್ಟವೇ ಬದಲಾಗು ತ್ತದೆ ಅನ್ನುವ ಸತ್ಯ ನಿಮಗೆ ಗೊತ್ತಿದೆಯಾ ಹಾಗೆ ಕಾಲುಂಗುರವನ್ನು ಧರಿಸುವುದರಲ್ಲಿ ಏನಾದರೂ ತಪ್ಪುಗಳನ್ನು ನಾವು ಮಾಡಿದ್ದೆ ಆದಲ್ಲಿ ಇದೇ ಕಾಲುಂಗುರ ನಿಮ್ಮ ಮನೆಗೆ ದಾರಿದ್ರ್ಯ ಬರುವ ಹಾಗೆ ಮಾಡುತ್ತದೆ. ಅದಕ್ಕಾಗಿ ನೀವು ಕೆಲವೊಂದಷ್ಟು ವಿಚಾರಗಳನ್ನು ಗಮನದಲ್ಲಿಟ್ಟು ಕೊಂಡು ಕಾಲುಂಗುರವನ್ನು ಧರಿಸಬೇಕು.
ಭಾರತದಲ್ಲಿ ಸುಮಂಗಲಿಯ ರನ್ನು ಗುರುತಿಸುವುದು ತುಂಬಾ ಸುಲಭ. ಅದರಲ್ಲೂ ಹಿಂದೂ ಮದುವೆಯಾದಂತಹ ಮಹಿಳೆಯರು ತಪ್ಪದೆ ಬೆಳ್ಳಿ ಕಾಲುಂಗುರವನ್ನು ಧರಿಸುತ್ತಾರೆ. ಈ ಬೆಳ್ಳಿ ಕಾಲುಂಗುರವನ್ನು ನೋಡಿದ ಕ್ಷಣ ಅವರು ಸುಮಂಗಲಿಯರು ಎಂದು ಅರ್ಥವಾಗುತ್ತದೆ. ಪುಂಡ ಪೋಕರಿಗಳು ಹೆಣ್ಣು ಮಕ್ಕಳ ತಂಟೆಗೆ ಹೋಗುವ ಮುಂಚೆ ಅವರ ಕಾಲುಗಳನ್ನು ನೋಡುತ್ತಾರೆ.
ಒಂದು ಅರ್ಥದಲ್ಲಿ ಇದು ಹೆಣ್ಣಿಗೆ ರಕ್ಷಾ ಕವಚವೂ ಕೂಡ ಆಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಸನಾತನ ಧರ್ಮದಲ್ಲಿ ವಿವಾಹಿತ ಮಹಿಳೆಯರು ಕಾಲು ಬೆರಳಿನ ಉಂಗುರವನ್ನು ಧರಿಸುವುದು ತುಂಬಾ ಮಂಗಳಕರ ಎಂದು ಹೇಳಲಾ ಗಿದೆ. ಹೀಗೆ ಮಾಡುವುದರಿಂದ ದಾಂಪತ್ಯ ಜೀವನ ಸುಖ ಶಾಂತಿಯಿಂದ ಕೂಡಿರುತ್ತದೆ.
ಹಾಗೆಯೇ ಕಾಲು ಬೆರಳಿನ ಉಂಗುರವನ್ನು ಧರಿಸುವುದ ರಿಂದ ಜೀವನದಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಈ ವಿಷಯ ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಅದರಲ್ಲೂ ಇತ್ತೀಚಿನ ಹೆಣ್ಣು ಮಕ್ಕಳು ಮದುವೆಯಾದರು ಕಾಲುಂಗುರವನ್ನು ಧರಿಸುವುದಿಲ್ಲ. ಅದು ಫ್ಯಾಶನ್ ಅಲ್ಲ ಎಂದು ಅದನ್ನು ತೆಗೆದು ಒಂದು ಕಡೆ ಇಟ್ಟಿರುತ್ತಾರೆ.
ಆದರೆ ಗ್ರಾಮೀಣ ಭಾಗದಲ್ಲಿ ಇಂದಿಗೂ ಮದುವೆ ಯಾದ ಕ್ಷಣದಿಂದ ಗಂಡ ಇರುವ ಕೊನೆ ಕ್ಷಣದವರೆಗೂ ಕಾಲುಂಗುರ ವನ್ನು ತಪ್ಪದೆ ಧರಿಸುತ್ತಾರೆ. ಮದುವೆಯಾದ ಮೊದಲ ಇದ್ದ ಹಾಗೆ ಮದುವೆಯ ನಂತರದ ಜೀವನ ಇರುವುದಿಲ್ಲ. ಅದಕ್ಕೆ ಇವುಗಳು ಕೂಡ ಒಂದು ಕಾರಣವೇ. ಮಂಗಳಕರ ಎಂದು ಧರಿಸುವಂತಹ ಪ್ರತಿಯೊಂದರಲ್ಲಿಯೂ ಕೂಡ ಒಂದೊಂದು ಗೌಪ್ಯ ವಾದ ಪ್ರಯೋಜನ ಅಡಗಿರುತ್ತದೆ.
ಅದರಲ್ಲೂ ಇಂದಿನ ಜನ ಅದೆಲ್ಲ ವನ್ನು ಕೂಡ ನಿರ್ಲಕ್ಷ್ಯ ಮಾಡಿದ್ದೆ ಹೆಚ್ಚು. ಕೇವಲ ಕಾಲುಂಗುರ ಮಾತ್ರ ಅಲ್ಲ ಕೈಯಲ್ಲಿ ಹಾಕುವ ಬಳೆ ಕುತ್ತಿಗೆಯಲ್ಲಿರುವ ಮಂಗಳಸೂತ್ರ ಮೂಗುಬೊಟ್ಟು ಹೀಗೆ ಇನ್ನು ಅನೇಕ ಆಭರಣಗಳನ್ನು ಧರಿಸುವುದರ ಹಿಂದೆ ಅನೇಕ ಅರ್ಥಗಳು ಇದೆ. ಅದು ನಮಗೆ ಗೊತ್ತಿರುವುದಿಲ್ಲ.
ಫ್ಯಾಶನ್ ಹೆಸರಿನಲ್ಲಿ ನಮಗೆ ಸಂಜೀವಿನಿ ಹಾಗೆ ಇರುವ ವಸ್ತುಗಳೆಲ್ಲ ವನ್ನು ಸಹ ನಾವು ದೂರ ಇಟ್ಟುಬಿಡುತ್ತೇವೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಬೆಳ್ಳಿಯ ಕಾಲುಂಗುರ ಚಂದ್ರ ಗ್ರಹದೊಂದಿಗೆ ಸಂಬಂಧ ಹೊಂದಿದೆ. ಆದ್ದರಿಂದ ಬೆಳ್ಳಿ ಕಾಲುಂಗುರವನ್ನು ಧರಿಸಿದ್ದೆ ಆದಲ್ಲಿ ಇದು ನಿಮಗೆ ಶುಭವನ್ನು ತರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.