ಅಪ್ಪುಗೆ ಪವರ್ ಸ್ಟಾರ್ ಅಂತ ಹೆಸರಿಟ್ಟ ಪುಣ್ಯಾತ್ಮ ಯಾರು ಗೊತ್ತ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಪುನೀತ್ ಎನ್ನುವ ಹೆಸರಿಗಿಂತ ಅಪ್ಪು ಎನ್ನುವ ಹೆಸರಿನಲ್ಲಿ ಹೆಚ್ಚಾಗಿ ಕರೆಸಿಕೊಂಡವರು. ಅವರ ಮನೆಯಲ್ಲಿ ಅವರನ್ನು ಪುನೀತ್ ಎನ್ನುವ ಹೆಸರಿನ ಬದಲಾಗಿ ಅಪ್ಪು ಎಂದು ಕರೆಯುತ್ತಿದ್ದರು. ಇಡೀ ಕರ್ನಾಟಕ ಅವರನ್ನು ಮನೆಯ ಮಗ ಎಂದು ಪ್ರೀತಿಸುತ್ತಿದ್ದ ಕಾರಣ ಎಲ್ಲರೂ ಸಹ ಅವರನ್ನು ಪವರ್ ಸ್ಟಾರ್ ಎಂದಾಗಲಿ ಅಥವಾ ಪುನೀತ್ ಎಂದಾಗಲಿ ಕರೆಯುವುದರ ಬದಲು ಪ್ರೀತಿಯಿಂದ ಅಪ್ಪು ಎಂದು ಕರೆಯುತ್ತಿದ್ದರು.
ಚಿಕ್ಕ ಮಕ್ಕಳಿಂದ ಹಿಡಿದು ಯುವಕರಿಗೆ ವೃದ್ದರಿಗೆ ಹೀಗೆ ಎಲ್ಲರಿಗೂ ಇಷ್ಟವಾಗುತ್ತಿದ್ದ ನಟರಾಗಿದ್ದ ಇವರು ಸಿನಿಮಾದಲ್ಲಿ ಮಾತ್ರವಲ್ಲದೆ ವೈಯಕ್ತಿಕ ಜೀವನದಲ್ಲಿ ಕೂಡ ಇಂತಹದೇ ವ್ಯಕ್ತಿತ್ವ ಹೊಂದಿದವರು. ಇಂತಹ ಪವರ್ ಸ್ಟಾರ್ ಅನ್ನು ಕಳೆದುಕೊಂಡ ದಿನದಿಂದ ಚಿತ್ರರಂಗ ಮತ್ತು ರಾಜ್ ಕುಟುಂಬದಲ್ಲಿ ಮಾತ್ರವಲ್ಲದೆ ಇಡೀ ಕರ್ನಾಟಕದಲ್ಲಿ ಕೂಡ ನೋವಿನ ಮೌನ ಮುಡುಗಟ್ಟಿದೆ.
ಪುನೀತ್ ರಾಜಕುಮಾರ್ ಅವರು ಬಾಲ್ಯದಿಂದಲೂ ಅಪ್ಪನ ಜೊತೆ ಸಿನಿಮಾದಲ್ಲಿ ಅಭಿನಯಿಸುತ್ತಿದ್ದರು. ಬಾಲ ನಟನಾಗಿಯೇ ಕರ್ನಾಟಕದ ಜನತೆ ಅವರನ್ನು ಒಪ್ಪಿ ಅಪ್ಪಿಕೊಂಡಿದ್ದರು. ಮೂರನೇ ವಯಸ್ಸಿಗೆ ಹಾಡುತ್ತಾ, ಆರನೇ ವಯಸ್ಸಿಗೆ ಅಭಿನಯಿಸಿದ ಆಟ ಆಡುವ ವಯಸ್ಸಿನಲ್ಲಿ ರಾಷ್ಟ್ರಪ್ರಶಸ್ತಿ ಮುಡಿಗೇರಿಸಿಕೊಂಡ ಭಾಗ್ಯವಂತ ಇವರು.
ಇನ್ನು ಬೆಳೆಯುತ್ತಾ ಬಂದಂತೆ ಹೋಂ ಪ್ರೊಡಕ್ಷನ್ ಜವಾಬ್ದಾರಿಯನ್ನು ಅಮ್ಮನ ಜೊತೆ ಹಂಚಿಕೊಂಡು ಅವುಗಳಲ್ಲಿ ತಲ್ಲಿನರಾಗಿದ್ದ ಇವರು ಅಪ್ಪು ಎನ್ನುವ ಸಿನಿಮಾದ ಮೂಲಕ ಮತ್ತೆ ಕಮ್ ಬ್ಯಾಕ್ ಮಾಡಿದರು. ಕೆಲವು ದಿನಗಳವರೆಗೆ ಲವರ್ ಬಾಯ್ ಲುಕ್ಕಿನಲ್ಲಿ ಕಾಣಿಸಿಕೊಂಡ ಇವರು ಆ ನಂತರದ ಚಿತ್ರಕಥೆ ಆಯ್ಕೆಯ ವಿಷಯದಲ್ಲಿ ಬಹಳ ಪ್ರಬುದ್ಧರಾಗಿದ್ದರು.
ಇತ್ತೀಚೆಗೆ ಅವರ ಮೈತ್ರಿ, ನಟಸಾರ್ವಭೌಮ, ರಾಜಕುಮಾರ, ಯುವರತ್ನ ಇಂತಹ ಸಿನಿಮಾಗಳು ಸಾಮಾಜಿಕ ಸಂದೇಶ ಹೊತ್ತು ತಂದ ಸಿನಿಮಾಗಳಾಗಿದ್ದು ಸಮಾಜಮುಖಿ ಕಾರ್ಯಗಳಲ್ಲಿ ಸಿನಿಮಾ ಮತ್ತು ಸಿನಿಮಾ ಹೊರತಾಗಿಯೂ ಕೂಡ ಅಪ್ಪು ತೊಡಗಿಕೊಂಡಿದ್ದರು. ಅಪ್ಪು ಅವರು ಕರ್ನಾಟಕದ ಜನತೆಯ ಬಗ್ಗೆ ಎಷ್ಟು ಪ್ರೀತಿ ಒಲವು ಹೊಂದಿದ್ದರು ಹಾಗೂ ನೊಂದವರ ಪಾಲಿಗೆ ಎಷ್ಟು ಸಹಾಯ ಹಸ್ತ ಚಾಚಿದರು ಎನ್ನುವುದು ಅವರು ಇದ್ದ ದಿನಕ್ಕಿಂತಲೂ ಅವರ ಅಗಲಿಕೆಯ ಬಳಿಕ ಎಲ್ಲರಿಗೂ ತಿಳಿಯಿತು.
ಕರ್ನಾಟಕದ ಯಾವೊಬ್ಬ ಸೆಲಬ್ರೆಟಿಯೂ ಕೂಡ ಮಾಡದಷ್ಟು ಸೇವೆಯನ್ನು ಪುನೀತ್ ರಾಜಕುಮಾರ್ ಅವರೊಬ್ಬರೇ ಮಾಡಿದ್ದಾರೆ. ಇಂತಹ ಒಬ್ಬ ಮಹಾನ್ ಪುರುಷನನ್ನು ಪಡೆದ ಕರ್ನಾಟಕವೇ ಧನ್ಯ. ಅವರ ಇಂತಹ ಗುಣಗಳಿಂದಲೇ ಇಂದು ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳ ದೇವರು ಎಂದು ಕರೆಸಿಕೊಳ್ಳುತ್ತಿದ್ದಾರೆ. ಅಣ್ಣಾವ್ರ ಮುದ್ದಿನ ಮಗನಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಈಗ ನಿಜವಾಗಿಯೂ ಸನ್ ಆಫ್ ಬಂಗಾರದ ಮನುಷ್ಯ ಆಗಿಯೇ ಬದುಕಿ ಹೋಗಿದ್ದಾರೆ.
ಇನ್ನು ಅಪ್ಪು ಅವರಿಗೆ ಸಿನಿಮಾ ಇಂಡಸ್ಟ್ರಿಯಲ್ಲಿ ಪವರ್ ಸ್ಟಾರ್ ಎಂದು ಟೈಟಲ್ ಕೊಡಲಾಗಿದ್ದು, ಈ ಹೆಸರನ್ನು ಕೊಟ್ಟಿದ್ದು ಯಾರು ಎಂದು ಮೂಲ ಹುಡುಕುತ್ತಾ ಹೋದಾಗ ತಿಳಿದದ್ದು ಈ ಹೆಸರು ಅಪ್ಪುಗೆ ಬಂದಿದ್ದು ಅವರ ಅಣ್ಣನಾದ ಶಿವರಾಜ್ ಕುಮಾರ್ ಅವರಿಂದ ಎಂದು. ಶಿವರಾಜ್ ಕುಮಾರ್ ಅವರ ಅಪ್ಪು ಅವರ ಎನರ್ಜಿಯನ್ನು ಗುರುತಿಸಿ ಪವರ್ ಎಂದು ಕರೆದರೂ ಆನಂತರ ಅವರಿಗೆ ಪವರ್ ಸ್ಟಾರ್ ಎನ್ನುವ ಸ್ಟಾರ್ ಗಿರಿ ಉಳಿದುಕೊಂಡಿತ್ತು.
ಇಂದು ತಮ್ಮನ ಅಗಲಿಕೆ ನೋವಿನಲ್ಲಿರುವ ಶಿವಣ್ಣನ ಮುಖದಲ್ಲೂ ಕೂಡ ವರ್ಷವಾದರೂ ಸಹ ಆ ನೋವಿನ ಛಾಯೆ ಕುಂದಿಲ್ಲ. ಸ್ವಂತ ಮಗನನ್ನೇ ಕಳೆದುಕೊಂಡ ಆ ಅನಾಥ ಭಾವದಲ್ಲಿರುವ ಅಣ್ಣನ ಕಣ್ಣೀರು ನೋಡಿದರೆ ಎಲ್ಲರ ಕರುಳು ಕೂಡ ಚುರುಕ್ ಎನ್ನುತ್ತದೆ. ಆದಷ್ಟು ಬೇಗ ಅವರ ಕುಟುಂಬಕ್ಕೆ ದೇವರು ಇದನ್ನೆಲ್ಲಾ ಸಹಿಸಿಕೊಳ್ಳುವ ಧೈರ್ಯ ನೀಡಲಿ ಎಂದು ಕೇಳಿಕೊಳ್ಳೋಣ.