ಬಿಗ್ ಬಾಸ್ ಮನೆಯಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವವರು ಯಾರು? ಇದನ್ನು ಹೇಗೆ ಫಿಕ್ಸ್ ಮಾಡುತ್ತಾರೆ ಗೊತ್ತಾ.?

 

ಬಿಗ್ ಬಾಸ್ ಕನ್ನಡದಲ್ಲಿ ಅತಿ ದೊಡ್ಡ ರಿಯಾಲಿಟಿ ಶೋ ಅದೇನೋ ಗೊತ್ತಿಲ್ಲ ಜನರಿಗೆ ಕ್ರಿಕೆಟ್ ಎಷ್ಟು ಕ್ರೇಜ್ ಹುಟ್ಟಿಸಿದೆಯೋ ಅಷ್ಟೇ ಮಟ್ಟಿಗೆ ಆಸಕ್ತಿಯನ್ನು ಬಿಗ್ ಬಾಸ್ ಕೂಡ ಉಳಿಸಿಕೊಂಡಿದೆ. ಇದೇ ಕಾರಣಕ್ಕಾಗಿ ಪ್ರಪಂಚದ ಎಲ್ಲಾ ದೇಶದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಕೂಡ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದೆ.

ಕನ್ನಡದ ಬಿಗ್ ಬಾಸ್ ಕೂಡ ಈಗ ಹತ್ತರ ಸಂಭ್ರಮ. ಸೀಸನ್ 10 ನಡೆಯುತ್ತಿದ್ದರೂ ಜನರಿಗೆ ಕೊಂಚವೂ ಕೂಡ ಆಸಕ್ತಿ ಕಡಿಮೆ ಆಗಿಲ್ಲ, ಬದಲಾಗಿ ಆರಿಸಿಕೊಳ್ಳುತ್ತಿರುವ ಕಂಟೆಸ್ಟೆಂಟ್ ಗಳ ಕಾರಣ TRP ಹೆಚ್ಚುತ್ತಲೇ ಇದೆ. ಆದರೆ ಅನೇಕ ವಿಷಯಗಳ ಬಗ್ಗೆ ಸಾಮಾನ್ಯ ಜನರಿಗೆ ಮಾಹಿತಿಯೇ ಗೊತ್ತಿಲ್ಲ ಅದರಲ್ಲಿ ಮುಖ್ಯವಾಗಿ ಅಲ್ಲಿ ಸ್ಪರ್ಧಿಸುವವರು ಪಡೆಯುವ ಸಂಭಾವನೆ ಬಗ್ಗೆ ಈ ಆಟದಲ್ಲಿ ನೂರು ದಿನಗಳವರೆಗೆ ಇದ್ದು ಗೆದ್ದವರಿಗೆ 50 ಲಕ್ಷ ರೂಪಾಯಿ ಸಿಗುತ್ತದೆ ನಿಜ ಇದರೊಂದಿಗೆ ಕೆಲವೊಮ್ಮೆ ಸ್ಪಾನ್ಸರ್ಗಳಿಂದ ಕೂಡ ಬಹುಮಾನ ಸಿಗುತ್ತದೆ.

ಇದನ್ನು ಹೊರತುಪಡಿಸಿ ಉಳಿದವರು ಸೋತ ಕೈಲಿ ಮನೆಗೆ ಬರುತ್ತಾರೆ ಎಂದರೆ ಖಂಡಿತವಾಗಿಯೂ ಇಲ್ಲ. ಇಲ್ಲಿ ಮನೆ ಒಳಗೆ ಹೋಗುವ ಪ್ರತಿಯೊಬ್ಬರಿಗೂ ಕೂಡ ಅವರ ಪಾಪುಲ್ಯಾರಿಟಿ ಆಧಾರದ ಮೇಲೆ ಇಂತಿಷ್ಟು ಎಂದು ರೆಮ್ಯೂನೆರೇಷನ್ ಫಿಕ್ಸ್ ಆಗಿರುತ್ತದೆ. ಈವರೆಗೆ ಅವರಿಗೆ ಏನು ಸಂಭಾವನೆ ಸಿಗುತ್ತಿತ್ತು ಅದರ ಆಧಾರದ ಮೇಲೆ ಒಂದು ಗೌರವಾನ್ವಿತವಾದ ಹಣವನ್ನು ನಿಗಧಿ ಪಡಿಸುತ್ತಾರೆ.

ಇದರ ಬಗ್ಗೆ ಅಸಮಾಧಾನವಿದ್ದಾಗ ಕಂಟೆಸ್ಟೆಂಟ್ ಗಳೇ ನಮಗೆ ಇಷ್ಟು ಹಣ ಬೇಕು ಎಂದು ಡಿಮ್ಯಾಂಡ್ ಮಾಡಿ ಪಡೆದುಕೊಳ್ಳುವ ಉದಾಹರಣೆಯೂ ಇದೆ. ತಮಗಿರುವ ಸೋಶಿಯಲ್ ಮೀಡಿಯಾಗಳ ಫಾಲೋವರ್ಸ್, ಅಭಿಮಾನಿಗಳು ಮತ್ತು ಜನರು ಅವರಿಗೆ ಹೇಗೆ ರೆಸ್ಪಾನ್ಸ್ ಮಾಡುತ್ತಾರೆ.

ಅವರ ಲೈಕ್ಸ್, ಕಮೆಂಟ್ಸ್, ವೈರಲ್ ಇದರ ಆಧಾರದ ಮೇಲೂ ಸಂಭಾವನೆ ನಿಗದಿಯಾಗುತ್ತದೆ. ಕಂಟೆಸ್ಟಂಟ್ ಕಾರ್ಯಕ್ರಮಕ್ಕೆ ಮುಖ್ಯವಾಗಿದ್ದಾಗ ಚಾನೆಲ್ ನವರು ಅವರ ಡಿಮ್ಯಾಂಡ್ ಗೆ ಒಪ್ಪಿಕೊಳ್ಳುತ್ತಾರೆ. ಅಂದ ಹಾಗೆ ಈಗಿರುವ ಸೀಸನ್ಗಳಲ್ಲಿ ಎಷ್ಟು ಯಾರ್ಯಾರಿಗೆ ಎಷ್ಟು ಹಣ ಸಿಗುತ್ತಿದೆ ಎನ್ನುವುದರ ಬಗ್ಗೆ ಬಲವಾದ ಮೂಲಗಳಿಂದ ಬಂದ ಮಾಹಿತಿ ಪ್ರಕಾರ ತಿಳಿಸುತ್ತಿದ್ದೇವೆ ಅದರ ವಿವರ ಹೀಗಿದೆ ನೋಡಿ.

ಈ ಬಾರಿಯ ಸ್ಟ್ರಾಂಗ್ ಕಂಟೆಸ್ಟೆಂಟ್ ಎನಿಸಿಕೊಳ್ಳುತ್ತಿರುವ ವಿನಯ್ ಅವರು ಒಂದು ವಾರಕ್ಕೆ 80 ರಿಂದ 90,000 ಪಡೆಯುತ್ತಿದ್ದಾರೆ. ಅದೇ ರೀತಿ ಕಾರ್ತಿಕ್ ಅವರು ಕೂಡ ಕಿರುತೆರೆಯ ಫೇಮಸ್ ಫೇಸ್ ಆಗಿರುವುದರಿಂದ ಧಾರಾವಾಹಿಗಳಲ್ಲಿ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವುದರಿಂದ ಅವರಿಗೂ ಇಷ್ಟೇ ಸಂಭಾವನೆ ಸಿಗುತ್ತಿದೆ.

ನಮ್ರತಾ ಅವರಿಗೂ ಕಿರುತೆರೆಯಲ್ಲಿ ಬಾರಿ ಬೇಡಿಕೆ ಇದೆ, ಬೇರೆ ಆಪ್ಷನ್ ಗಳು ಹೆಚ್ಚಿರುವುದರಿಂದ ಅದರ ಆಧಾರದ ಮೇಲೆ 80 ರಿಂದ 90,000 ಸಂಭಾವನೆ ನಿಗದಿ ಆಗಿದೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ತುಕಾಲಿ ಸಂತೋಷ್ ಅವರಿಗೆ 1,10,000 ಒಂದು ವಾರಕ್ಕೆ ನಿಗದಿ ಆಗಿದೆ. ಮೈಕಲ್ ಕನ್ನಡಿಗರಿಗೆ ಅತಿ ಹೆಚ್ಚು ಪರಿಚಯವಿಲ್ಲ ಆದರೆ ಹಿಂದಿಯ ರೋಡೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದರು.

ಹಾಗಾಗಿ ಇವರಿಗೆ 70,000 ವರೆಗೆ ಸಂಭಾವನೆ ಇದೆ. ಸಂಗೀತ ಶೃಂಗೇರಿ ಅವರು ಕಿರುತೆರೆಯಿಂದ ಬೆಳ್ಳಿತೆರೆಗೆ ನಾಯಕನಟಿಯಾಗಿ ಬಡ್ತಿ ಪಡೆದಿದ್ದಾರೆ ಹಾಗಾಗಿ 1,30,000 ವರೆಗೂ ಇವರಿಗೆ ವಾರಕ್ಕೆ ಪಾವತಿ ಮಾಡಲಾಗುತ್ತಿದೆ. ನೀತು 80,000 ರವರೆಗೆ, ಇಶಾನಿ 50 ರಿಂದ 80,000, ತನೀಶಾ ಗೆ 90,000 ರವರೆಗೆ ಭಾಗ್ಯ ಶ್ರೀ 1 ಲಕ್ಷದವರೆಗೆ ಮತ್ತು ಸಿರಿಯವರು ಎಲ್ಲರಿಗಿಂತ ಹೆಚ್ಚು 1,70,000 ಸಂಭಾವನೆ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತದೆ.

Leave a Comment

WhatsApp Group Join Now
Telegram Group Join Now