ನಾನು ನೋಡಿದ ಮೊದಲ ವೀರ, ಬಾಳು ಕಲಿಸಿದ ಸಲಹೆಗಾರ, ಬೆರಗು ಮೂಡಿಸೋ ಜಾದುಗಿರ ಅಪ್ಪ. ಹಗಲು ಮನೆಯಲ್ಲಿ ಕೂಲಿಕಾರ, ರಾತ್ರಿ ಮನೆಗೆ ಕಾವಲುಗಾರ, ಎಲ್ಲ ಕೊಡಿಸುವ ಸಾಹುಕಾರ ಅಪ್ಪ ಇದು ಕನ್ನಡದ ಚೌಕ ಸಿನಿಮಾದ ಹಾಡೊಂದರ ಸಾಲು. ನಾಗೇಂದ್ರ ಪ್ರಸಾದ್ ಅವರು ಬರೆದಿರುವ ಈ ಸಾಹಿತ್ಯದ ಸಾಲುಗಳ ಮೇಲೆ ಕಣ್ಣಾಡಿಸಿದರೆ ಸಾಕು ಕಣ್ಣಂಚಲಿ ಹೆಣ್ಣು ಮಕ್ಕಳಿಗೆ ಕಣ್ಣಂಚಲಿ ನೀರು ತುಂಬುತ್ತದೆ, ಅದು ಆತ್ಮೀಯತೆಯ ಕಣ್ಣೀರಾಗಿರುತ್ತದೆ. ಯಾಕೆಂದರೆ ತಂದೆ ಹಾಗೂ ಮಕ್ಕಳ ಸಂಬಂಧ ಅಷ್ಟು ಶ್ರೇಷ್ಠ ಮತ್ತು ಪದಗಳಲ್ಲಿ ವಿವರಿಸಲಾಗದ ಅನುಬಂಧ ಅದು.
ಒಬ್ಬ ತಂದೆಗೆ ತನ್ನ ಮಗಳು ಹೆತ್ತ ತಾಯಿ ಹಾಗೂ ಸಹೋದರಿಯ ನಂತರ ಮೂರನೇ ತಾಯಿ ಆಗಿರುತ್ತಾಳೆ. ಹಾಗೇ ಮಗಳಿಗೆ ತಂದೆ ಸರ್ವಸ್ವವು ಆಗಿರುತ್ತಾನೆ. ಆಕೆ ಕಣ್ಣು ಬಿಟ್ಟಾಗಲಿಂದ ಅವಳ ದೃಷ್ಟಿಯಲ್ಲಿ ದೇವರು, ಹೀರೋ ಎಲ್ಲವೂ ಅವಳ ಅಪ್ಪನೇ. ಅಪ್ಪನನ್ನು ಹೊರಗಡೆ ಪ್ರಪಂಚ ಯಾವ ರೀತಿಯಾದರೂ ನೋಡಬಹುದು ಆದರೆ ಆ ಮಗಳ ಮುಂದೆ ಅಪ್ಪನನ್ನು ಮೀರಿಸುವಂತಹ ಯಾವ ಸಾಧಕನು ಇರುವುದಿಲ್ಲ. ಪ್ರತಿಯೊಬ್ಬ ತನಗೆ ಹೆಣ್ಣು ಮಗುವಾಗುತ್ತಿದ್ದಂತೆ ಬಹಳ ಮೆಚ್ಯುರ್ಡ್ ಆಗಿಬಿಡುತ್ತಾನೆ.
ಹೆಣ್ಣು ಮಗು ಹುಟ್ಟಿದ ತಕ್ಷಣ ಹೆಣ್ಣಾಯಿತು ಎಂದು ಮೂಗು ಮುರಿಯುವವರ ಮಧ್ಯೆ ಅಪ್ಪನಿಗೆ ಮಾತ್ರ ಮನೆಗೆ ಮಹಾಲಕ್ಷ್ಮಿ ಬಂದ ಸಂಭ್ರಮ ಇರುತ್ತದೆ. ಯಾವ ತಂದೆ ಕೂಡ ಹೆಣ್ಣು ಮಗು ಎಂದು ತನ್ನ ಮಗುವನ್ನು ತಾತ್ಸಾರ ಮಾಡಲಾರ, ಗಂಡು ಮಗುವಿಗೆ ಸಮವಾಗಿ ಅಲ್ಲ ಅದಕ್ಕಿಂತಲೂ ಒಂದು ಪಟ್ಟು ಹೆಚ್ಚಾಗಿ ಆ ಹೆಣ್ಣು ಮಗುವನ್ನು ನೋಡಿಕೊಳ್ಳುತ್ತಾನೆ.
ಅದುವರೆಗೂ ಆತ ಹೇಗೆ ಬದುಕಿದ್ದರೂ ಹೆಣ್ಣು ಮಗುವಿನ ತಂದೆಯಾದ ಮೇಲೆ ಆತನಿಗೆ ಹೆಣ್ಣು ಮಕ್ಕಳ ಮೇಲೆ ಗೌರವ ಬರುತ್ತದೆ. ಯಾರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ ಧೈರ್ಯವು ಸಹ ಮಾಡಲಾರ. ಕೆ’ಟ್ಟ ಮನುಷ್ಯನಲ್ಲೂ ಒಳ್ಳೆ ಸಂಸ್ಕಾರ ತುಂಬುವ ಶಕ್ತಿ ಆತನಿಗೆ ಹುಟ್ಟುವ ಮಕ್ಕಳಿಗೆ ಮಾತ್ರ ಇರುತ್ತದೆ.
ಒಂದು ಪಕ್ಷ ತಾಯಿ ಆ ಹೆಣ್ಣು ಮಗುವಿಗೆ ಹೊಡೆಯಬಹುದು, ಬೈಯಬಹುದು ಅಥವಾ ಮನಸ್ಸಿಗೆ ನೋ’ವಾಗುವಂತೆ ಮಾತನಾಡಬಹುದು. ಆಕೆಯ ಉದ್ದೇಶವು ಕೂಡ ಮಗಳು ಚೆನ್ನಾಗಿ ಬುದ್ಧಿ ಕಲಿಯಲಿ ಚೆನ್ನಾಗಿ ಓದಲಿ, ಒಳ್ಳೆಯವರ ಸಹವಾಸ ಮಾಡಲಿ ಎಂದು ಇರಬಹುದು, ಆದರೆ ಆಕೆ ಅದನ್ನು ನೇರವಾಗಿ ಮಾಡುತ್ತಾಳೆ. ಅದೇ ಈ ವಿಷಯಗಳು ತಂದೆಗೆ ತಿಳಿದರೆ ತಂದೆಯು ಬಹಳ ಮೃದುವಾಗಿ ಆಕೆಯ ಮನಪರಿವರ್ತನೆ ಮಾಡುತ್ತಾನೆ.
ತಂದೆ ಬಹುಶಃ ಮಗನ ವಿಚಾರದಲ್ಲಿ ಈ ರೀತಿ ಮಾಡಲಾರ ಮಗ ತಪ್ಪು ಮಾಡಿದ ತಕ್ಷಣ ಕೈ ಎತ್ತುವ ತಂದೆಗೆ ಮಗಳ ಮೇಲೆ ಆ ರೀತಿ ಮಾಡಲು ಮನಸ್ಸು ಬರುವುದಿಲ್ಲ. ಹಾಗೆ ತಾಯಿ ಎಷ್ಟೇ ಶತಪ್ರಯತ್ನ ಪಟ್ಟರು ತಿದ್ದಿಕೊಳ್ಳದ ಮಗಳು ತಂದೆ ಒಂದೇ ಒಂದು ಮಾತಿಗೆ ಕಟ್ಟುಬಿದ್ದು ತಂದೆ ಮಾತನ್ನು ಉಳಿಸಿಕೊಳ್ಳುವ ತಂದೆ ಹೇಳಿದಾಗೆ ಕೇಳುವ ತಂದೆಯ ಮಗಳಾಗಿ ಬಿಡುತ್ತಾಳೆ.
ಹೆಣ್ಣು ಮಗುವಿಗೆ ಜೀವನದಲ್ಲಿ ಎಂತಹದೆ ಕ’ಷ್ಟ ಬಂದರೂ ಆ ಭಾರ ಹಂಚಿಕೊಳ್ಳುವ ಒಂದೇ ಹೆಗಲು ಅವಳ ಅಪ್ಪ. ಅಪ್ಪ ಇಲ್ಲದ ಜೀವನವನ್ನು ಕಲ್ಪಿಸಿಕೊಳ್ಳಲು ಕೂಡ ಸಾಧ್ಯವಿಲ್ಲ. ಏನೇ ಆದರೂ ನನ್ನ ಅಪ್ಪ ಬರುತ್ತಾನೆ ಎನ್ನುವ ಧೈರ್ಯದಿಂದ ಆಕೆ ಯಾರಿಗೂ ಸೋಲುವುದಿಲ್ಲ ಅಪ್ಪ ಎನ್ನುವುದು ಆಕೆಯ ಪಾಲಿಗೆ ಬೆಲೆ ಕಟ್ಟಲಾದ ಆಸ್ತಿ ಆಕೆಗೆ ಕೇಳಿದ್ದೆಲ್ಲವನ್ನು ಕೊಡಿಸುವುದು ಮಾತ್ರವಲ್ಲದೆ ಆಕೆಯ ಪ್ರತಿಯೊಂದು ಆಸೆ ಆಕಾಂಕ್ಷೆಗಳಿಗೆ ಬೆಲೆ ಕೊಡುವ ಭಾವನಾತ್ಮಕ ಜೀವಿ ತಂದೆ.
ಹಾಗಾಗಿ ಎಷ್ಟೋ ಹೆಣ್ಣು ಮಕ್ಕಳು ತಮ್ಮ ಸಮಸ್ಯೆ ಅಥವಾ ಆಸೆಯನ್ನು ಕುಟುಂಬದ ಬೇರೊಬ್ಬರ ಬಳಿ ಹೇಳಿಕೊಳ್ಳುವುದಕ್ಕಿಂತ ಹೆಚ್ಚಾಗಿ ತಂದೆಯ ಜೊತೆಗೆ ಮುಕ್ತವಾಗಿ ಹೇಳಿಕೊಳ್ಳುತ್ತಾರೆ, ಹಾಗಾಗಿ ಆಕೆಗೆ ಎಲ್ಲರಿಗಿಂತ ತನ್ನ ತಂದೆಯ ಮೇಲೆ ಹೆಚ್ಚು ಪ್ರೀತಿ. ಪ್ರತಿಯೊಬ್ಬ ಪುರುಷನಿಗೂ ಈ ರೀತಿ ತಾಯಿಗಿಂತ ಮಗಳು ಸಿಗಲಿ ಹಾಗೆ ಪ್ರತಿಯೊಬ್ಬ ಹೆಣ್ಣು ಮಕ್ಕಳಿಗೂ ಸ್ನೇಹಿತನಂತ ತಂದೆಯ ಬಾಂಧವ್ಯ ಕೊನೆವರೆಗೂ ದಕ್ಕಲಿ.