● ಹೆಣ್ಣು ಮಕ್ಕಳಿಗೆ ಸೇಫ್ಟಿ ಪಿನ್ ಒಂದು ಅವಶ್ಯಕ ವಸ್ತು ಯಾವಾಗ ಇದರ ಅವಶ್ಯಕತೆ ಬರುತ್ತದೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಅದಕ್ಕಾಗಿ ತಕ್ಷಣಕ್ಕೆ ಸಿಗಲಿ ಎಂದು ತಮ್ಮ ತಾಳಿ ಸರಕ್ಕೆ ಸೇಫ್ಟಿ ಪಿನ್ ಹಾಕಿಕೊಂಡುಬಿಡುತ್ತಾರೆ. ಆದರೆ ಇದು ತುಂಬಾ ತಪ್ಪು. ಇದು ಕಬ್ಬಿನವಾದ ಕಾರಣ ಇದರ ಮೇಲೆ ಶನಿ ದೇವರ ಪ್ರಭಾವ ಇರುವುದರಿಂದ ಗಂಡ ಹೆಂಡತಿ ನಡುವೆ ಮನಸ್ತಾಪ ಜಗಳ ಉಂಟಾಗುತ್ತದೆ. ಅದರಿಂದ ಯಾವುದೇ ಕಾರಣಕ್ಕೂ ಈ ರೀತಿಯ ತಪ್ಪುಗಳನ್ನು ಮಾಡಬೇಡಿ.
● ನಾವು ಯಾವುದೇ ಅಡುಗೆ ಮಾಡುವ ಮುನ್ನ ಅಕ್ಕಿ ಮತ್ತು ಬೇಳೆಯನ್ನು ಮೊರದಲ್ಲಿ ಹಾಕಿಕೊಂಡು ಕ್ಲೀನ್ ಮಾಡುತ್ತೇವೆ. ಮೊದಲಿಗೆ ಮೊರದಲ್ಲಿ ಹಾಕಿ ಕೇರಿ ಆಮೇಲೆ ಅಡುಗೆ ಮಾಡಬೇಕು ಎಂದು ಶಾಸ್ತ್ರ ಹೇಳುತ್ತದೆ. ಆದರೆ ಕೆಲವು ಹೆಣ್ಣು ಮಕ್ಕಳು ಈ ರೀತಿ ಮೊರದಲ್ಲಿ ಅಕ್ಕಿಯನ್ನು ಹಾಕಿ ಕ್ಲೀನ್ ಮಾಡುವಾಗ ಅದನ್ನು ತಿನ್ನುತ್ತಾರೆ. ಯಾವುದೇ ಕಾರಣಕ್ಕೂ ಈ ತಪ್ಪು ಮಾಡಬಾರದು, ಅದರಲ್ಲೂ ಮುಸ್ಸಂಜೆ ಹೊತ್ತು ಈ ರೀತಿ ತಪ್ಪನ್ನು ಮಾಡಲೇಬಾರದು.
● ಬೆಳಗ್ಗೆ ಎದ್ದ ಕೂಡಲೇ ಅಡುಗೆ ಮನೆಗೆ ಹೋಗಬೇಡಿ ಮುಖ ತೊಳೆದುಕೊಂಡು ಶುದ್ಧವಾಗಿ ಅಡುಗೆ ಮನೆಗೆ ಹೋಗಿ ಅಡುಗೆ ಆರಂಭಿಸುವ ಮುನ್ನ ಸ್ಟೌಗೆ ನಮಸ್ಕಾರ ಮಾಡಿ
● ಯಾವುದೇ ಕಾರಣಕ್ಕೂ ಅಡುಗೆಗೆ ಆಗಲಿ ಅಥವಾ ತಟ್ಟೆಗೆ ಆಗಲಿ ಎಡಗೈಯಿಂದ ಉಪ್ಪನ್ನು ಹಾಕಬೇಡಿ.
● ಪೂಜೆ ಮಾಡುವಾಗ ಹಾಗೂ ಅಡುಗೆ ಮಾಡುವಾಗ ಮನಸ್ಸು ಪ್ರಶಾಂತವಾಗಿರಬೇಕು. ಯಾರದೋ ಮೇಲೆ ಕೋಪ ಮಾಡಿಕೊಂಡು ಅಥವಾ ಯಾರನ್ನೋ ಬಯ್ಯುತ್ತಾ ಪೂಜೆ ಮಾಡಬೇಡಿ.
● ಬೇರೆಯವರ ಬಟ್ಟೆ ಹಾಗೂ ಒಡವೆಗಳನ್ನು ಧರಿಸಲೇಬಾರದು
● ಅಡಿಗೆ ಬಡಿಸುವಾಗ ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳು ಕೆಳಗೆ ಬೀಳದಂತೆ ನೋಡಿಕೊಳ್ಳಿ.
● ಬಾಗಿಲುಗಳನ್ನು ಕಾಲಿನಿಂದ ಒದೆಯುವುದು ಅಥವಾ ಕಾಲಿನಿಂದ ಬಾಗಿಲುಗಳನ್ನು ಮುಚ್ಚುವುದು ಈ ರೀತಿ ಮಾಡಬೇಡಿ.
● ಮಲಗುವ ಹಾಸಿಗೆಯ ಮೇಲೆ ಯಾವುದೇ ಕಾರಣಕ್ಕೂ ಆಹಾರ ಪದಾರ್ಥಗಳನ್ನು ಇಡಲೇಬಾರದು.
● ಎಂಜಲು ಕೈಯಿಂದ ನೋಟನ್ನು ಮುಟ್ಟಬೇಡಿ ಹಾಗೂ ನೋಟುಗಳನ್ನು ಎಣಿಸುವಾಗ ಎಂಜಲು ಮಾಡಿಕೊಂಡು ಎಣಿಸಬೇಡಿ.
● ಮನೆಯಲ್ಲಿ ಇರುವ ಹೆಣ್ಣು ಮಕ್ಕಳು ಸೋಂಬೇರಿಗಳಾಗಿರಬಾರದು ಸದಾ ನಗುನಗುತ ಚಟುವಟಿಕೆಯಿಂದ ಕೂಡಿರಬೇಕು.
● ಮನೆ ಯಾವಾಗಲೂ ಸ್ವಚ್ಛವಾಗಿರುವಂತೆ ನೋಡಿಕೊಳ್ಳಬೇಕು. ಅದರಲ್ಲೂ ಸ್ನಾನದ ಮನೆ, ಶೌಚಾಲಯ ಕ್ಲೀನಾಗಿ ಇರಬೇಕು ಅಡುಗೆಮನೆ ಕೂಡ ವ್ಯವಸ್ಥಿತವಾಗಿ ಇರಬೇಕು.
● ಹೆಣ್ಣು ಮಕ್ಕಳು ಮನೆಯಲ್ಲಿ ಇದ್ದೇವೆ ಎಂದು ಹೇಗೆಂದರೆ ಹಾಗೆ ಇರಬಾರದು, ಮನೆಯಲ್ಲಿ ಇದ್ದರೂ ಕೂಡ ನೀಟಾಗಿ ತಲೆ ಬಾಚಿ ಹಣೆಗೆ ಕುಂಕುಮ ಇಟ್ಟುಕೊಂಡು ಲಕ್ಷಣವಾಗಿ ಇರಬೇಕು.
● ಹೆಣ್ಣು ಮಕ್ಕಳು ಪತಿಗೆ ಗೌರವ ಕೊಡಬೇಕು ಪತಿಯ ಮಾತಿಗೆ ಎದುರ ಮಾತು ಕೊಡುವುದು, ಜೋರು ಧ್ವನಿಯಲ್ಲಿ ಮಾತನಾಡುವುದು ವಾದಿಸುವುದು ಇತ್ಯಾದಿಗಳನ್ನು ಮಾಡಲೇಬಾರದು.
6 ವರ್ಷಗಳ ಕಿಚ್ಚ-ದಚ್ಚು ಮನಸ್ತಾಪಕ್ಕೆ ತೆರೆ ಎಳೆದರಾ ಸುಮಲತಾ ಅಂಬರೀಶ್.! ಕೊನೆಗೂ ಒಂದಾದ್ರು ಕುಚಿಕೋ ಗೆಳೆಯರು.!
● ಸೂರ್ಯೋದಯವಾದ ಮೇಲೆ ಮಲಗುವುದು, ಸಂಜೆ ಸಮಯ ಮಲಗುವುದು ಈ ರೀತಿ ದುರಭ್ಯಾಸಗಳು ಇದ್ದರೆ ಹೆಣ್ಣುಮಕ್ಕಳು ಬಿಟ್ಟುಬಿಡಬೇಕು.
●:ಹೆಣ್ಣು ಮಕ್ಕಳು ಅಡುಗೆ ಮಾಡುವುದನ್ನು ಕಲಿತಿರಬೇಕು ಶುಚಿಯಾಗಿ ರುಚಿಯಾಗಿ ಅಡುಗೆ ಮಾಡಬೇಕು.
● ಗಂಡ ಹಾಗೂ ಮಕ್ಕಳನ್ನು ಸರಿಯಾಗಿ ನಡೆಸುವ ಜಾಣತನ, ಗಂಡನ ದುಡಿಮೆಯಲ್ಲಿ ಸಂಸಾರವನ್ನು ತೂಗಿಸುವ ಚುರುಕುತನ ಇರಬೇಕು.
● ತಲೆಯನ್ನು ಬಾಚಿ ಕೂದಲನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಎಸೆಯಬಾರದು.
● ಯಾರ ಮೇಲೂ ಅತಿಯಾಗಿ ಡಿಪೆಂಡ್ ಆಗಬಾರದು. ಹೆಣ್ಣು ಮಕ್ಕಳು ಧೈರ್ಯವಂತರಾಗಿ ಶಕ್ತಿವಂತರಾಗಿ ಆರ್ಥಿಕ ಸ್ವಾತಂತ್ರ್ಯತೆಯಿಂದ ಬದುಕಬೇಕು.