Sunday, June 4, 2023
HomeEntertainmentಮೊನ್ನೆ ದರ್ಶನ್, ನೆನ್ನೆ ಸುದೀಪ್ ಇಂದು ಯಶ್ ರವಿಚಂದ್ರನ್ ಮನೆಗೆ ಬಂದು ಮಾಡಿದ ಸಹಾಯವೇನು ಗೊತ್ತಾ.?...

ಮೊನ್ನೆ ದರ್ಶನ್, ನೆನ್ನೆ ಸುದೀಪ್ ಇಂದು ಯಶ್ ರವಿಚಂದ್ರನ್ ಮನೆಗೆ ಬಂದು ಮಾಡಿದ ಸಹಾಯವೇನು ಗೊತ್ತಾ.? ಸೋತು ಕಂಗಾಲಾಗಿ ಕುಳಿತಿರುವ ರವಿಚಂದ್ರನ್ ಗೆ ಬೆನ್ನೆಲುಬಾಗಿ ನಿಂತಿದೆ ಇಡೀ ಚಿತ್ರರಂಗ.

ನಿಮ್ಮೆಲ್ಲರಿಗೂ ತಿಳಿದಿರುವಂತೆ ನಟ ರವಿಚಂದ್ರನ್ ಈಗ ಸಾಕಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ ಅಂದ ಹಾಗೆ ಇದು ಗಾಸಿಪ್ ಅಲ್ಲ ಅಷ್ಟೇ ಅಲ್ಲದೆ ಸುಳ್ಳು ಸುದ್ದಿಯು ಕೂಡ ಅಲ್ಲ. ಇತ್ತೀಚಿಗಷ್ಟೇ ಜೀ ಕನ್ನಡ ವಾಹಿನಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ನಟ ರವಿಚಂದ್ರನ್ ಅವರು ತಾವು ಕಳೆದುಕೊಂಡಿದ ಆಸ್ತಿಯ ಬಗ್ಗೆ ಹೇಳಿಕೊಂಡಿದ್ದಾರೆ. ಸಿನಿಮಾಗಾಗಿ ನಾನು ಕೋಟಿ ಕೋಟಿ ಹಣವನ್ನು ಕಳೆದುಕೊಂಡಿದ್ದೇನೆ ಇದಕ್ಕಾಗಿ ಮನೆ ಮಾರಾಟ ಮಾಡಿದ್ದೇನೆ ಎಂಬ ವಿಚಾರವನ್ನು ಜೀ ಕನ್ನಡ ವಾಹಿನಿಯ ವೇದಿಕೆಯ ಮೇಲೆ ಹೇಳಿ ಭಾವುಕರಾಗಿದ್ದರು.

ಅಷ್ಟೇ ಅಲ್ಲದೆ ನಾನು ದಿನಗೂಲಿಗೆ ಕೆಲಸಕ್ಕೆ ಇಟ್ಟುಕೊಂಡಿದ್ದಂತಹ ವ್ಯಕ್ತಿಯೊಬ್ಬ ಇದೀಗ ನನ್ನನ್ನು ಕರೆದು ಒಂದುವರೆ ಕೋಟಿ ರೂಪಾಯಿ ಕೊಟ್ಟು ನನ್ನ ಸಿನಿಮಾದಲ್ಲಿ ಆಕ್ಟ್ ಮಾಡಿ ಅನ್ನುತ್ತಿದ್ದಾನೆ ಅಷ್ಟರ ಮಟ್ಟಿಗೆ ನಾನು ನನ್ನ ಜೊತೆಯಲ್ಲಿ ಇದ್ದವರೆಲ್ಲರನ್ನು ಬೆಳೆಸಿದ್ದೇನೆ. ಆದರೆ ನಾನು ಮಾತ್ರ ಇದೀಗ ಸೋತು ಹೋಗಿದ್ದೇನೆ ಆದರೆ ಈ ಸೋಲನ್ನು ನಾನು ಒಪ್ಪಿಕೊಳ್ಳುವುದಿಲ್ಲ ಮುಂದೆ ಒಂದು ದಿನ ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದ್ದಾರೆ ಇದರ ಜೊತೆಗೆ.

ಜನರಿಗಾಗಿ ಸಿನಿಮಾ ಮಾಡುತ್ತಿದ್ದೀನಿ ಆದರೆ ಜನರು ನನ್ನ ಸಿನಿಮಾವನ್ನು ಇಷ್ಟ ಪಡುತ್ತಿಲ್ಲ ಜನರನ್ನ ಮೆಚ್ಚಿಸೋದಕ್ಕೆ ಆಗಲಿಲ್ಲ ಅಂತ ಬೇಸರ ನನಗಿದೆ. ನಾನು ಮತ್ತೆ ಒಳ್ಳೆಯ ಸಿನಿಮಾ ಕೊಡುವ ಮೂಲಕ ವಾಪಸ್ ಬರ್ತೀನಿ ಜನರು ನನ್ನ ಸಿನಿಮಾ ನೋಡುವ ಹಾಗೆ ಮಾಡ್ತೀನಿ ಎಂದು ಬಹಳ ನೋವಿನಿಂದ ಹೇಳಿಕೊಂಡಿದ್ದರು. ಇದೀಗ ತಿಳಿದು ಬಂದಿರುವ ಮಾಹಿತಿ ಪ್ರಕಾರ, ರವಿ ಬೋಪಣ್ಣ ಸಿನಿಮಾ ಸೋಲಿನಿಂದ ರವಿಚಂದ್ರನ್ ಅವರು ತಾವು ಮಾಡಿದ ಸಾಲ ತೀರಿಸಲಾಗದೆ ಆಡಿ ಕಾರ್ ಮಾರಾಟ ಮಾಡಿದ್ದಾರೆ ಎಂದು ಸಹ ತಿಳಿದು ಬಂದಿದೆ.

ಇನ್ನು ರವಿಚಂದ್ರನ್ ಅವರು ವೇದಿಕೆಯ ಮೇಲೆ ತಮ್ಮ ಕಷ್ಟವನ್ನು ಹೇಳಿಕೊಂಡ ನಂತರ ಈ ವಿಚಾರ ತಿಳಿಯುತ್ತಿದ್ದ ಹಾಗೆ ಇಡೀ ಚಿತ್ರರಂಗವೇ ಇದೀಗ ರವಿಚಂದ್ರನ್ ಅವರ ಬೆನ್ನೆಲುಬುಗೆ ನಿಂತಿದೆ. ಹೌದು ಮೊನ್ನೆಷ್ಟೇ ದರ್ಶನವರು ರವಿಚಂದ್ರನ್ ಅವರನ್ನು ಭೇಟಿ ಮಾಡಿ ನೀವು ಧೈರ್ಯ ಕಳೆದುಕೊಳ್ಳಬೇಡಿ ಆರ್ಥಿಕವಾಗಿ ನಾನು ನಿಮಗೆ ಸಹಾಯ ಮಾಡುತ್ತೇನೆ ಎಂದು ಭರವಸೆಯನ್ನು ಕೊಟ್ಟಿದ್ದಾರೆ. ಇದಾದ ನಂತರ ಸುದೀಪ್ ಅವರು ರವಿಚಂದ್ರನ್ ಅವರನ್ನು ಭೇಟಿ ಮಾಡಿ ಧೈರ್ಯ ಹೇಳಿದ್ದರು.

ಇದೀಗ ರಾಕಿಂಗ್ ಸ್ಟಾರ್ ಯಶ್ ಮತ್ತು ಅವರ ಪತ್ನಿ ರಾಧಿಕಾ ಪಂಡಿತ್ ಅವರು ರವಿಚಂದ್ರನ್ ಅವರ ಮನೆಗೆ ಭೇಟಿ ನೀಡಿ ಅವರೊಡನೆ ಸ್ವಲ್ಪ ಸಮಯ ಕಳೆದು ಧೈರ್ಯ ಹೇಳಿದ್ದಾರೆ. “ನನ್ನಂತಹ ಹಲವು ಜನರಿಗೆ ನೀವು ಸ್ಪೂರ್ತಿ, ನಾವು ನಿಮ್ಮ ಸಿನಿಮಾಗಳನ್ನ ನೋಡಿಕೊಂಡು ಬೆಳೆದ್ವಿ. ನಿಮ್ಮ ಕಷ್ಟದ ಸಮಯದಲ್ಲಿ ಇಡೀ ಕರ್ನಾಟಕದ ಜನತೆ ನಿಮ್ಮ ಜೊತೆಗಿದೆ ನಾನು ಹಾಗು ಇಡೀ ಕನ್ನಡ ಚಿತ್ರರಂಗ ನಿಮ್ಮ ಜೊತೆಗೆ ಸದಾ ಇರುತ್ತದೆ” ಎಂದು ಇಬ್ಬರು ಧೈರ್ಯ ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸೋತು ಕಂಗಾಲಾಗಿದ್ದಂತಹ ನಟ ರವಿಚಂದ್ರನ್ ಅವರಿಗೆ ಇಡಿ ಸ್ಟಾರ್ ನಟರು ಮನೆಗೆ ಬಂದು ಸಾಂತ್ವನವನ್ನು ಹೇಳಿ ಧೈರ್ಯ ತುಂಬಿ ತಮ್ಮ ಕೈಲಾದಷ್ಟು ಧನ ಸಹಾಯವನ್ನು ಮಾಡಿದ್ದಾರೆ. ಅಷ್ಟೇ ಅಲ್ಲದೆ ಇನ್ನು ಮುಂದೆ ನೀವು ತೆಗಿಯುವ ಪ್ರತಿಯೊಂದು ಸಿನಿಮಾಗೂ ಕೂಡ ನಮ್ಮ ಸಪೋರ್ಟ್ ಇರುತ್ತದೆ ಎಂದು ಹೇಳಿದ್ದಾರೆ. ನಿಜಕ್ಕೂ ನಾವು ಚಿತ್ರರಂಗವನ್ನು ಮೆಚ್ಚಲೇಬೇಕು ಏಕೆಂದರೆ.

ಒಂದು ಕಾಲದಲ್ಲಿ ರಾಯಲ್ ಆಗಿ ಬದುಕಿದಂತಹ ಹಾಗೂ ಇಡೀ ಚಿತ್ರರಂಗವನ್ನು ರಾಯಲಾಗಿ ತೋರಿಸಿದಂತಹ ರವಿಚಂದ್ರನ್ ಅವರು ಸಿನಿಮಾಗಾಗಿಯೇ ತಮ್ಮೆಲ್ಲ ಆಸ್ತಿಯನ್ನು ಕಳೆದುಕೊಂಡರು. ಹಾಗಾಗಿ ಇದೀಗ ಚಿತ್ರರಂಗದವರೇ ರವಿಚಂದ್ರನ್ ಅವರು ಏನನ್ನು ಕಳೆದುಕೊಂಡಿದ್ದರು ಅದನ್ನೆಲ್ಲವನ್ನು ಮರಳಿ ಕೊಡಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದಲ್ಲಾದರೂ ರವಿಚಂದ್ರನ್ ಅವರು ಮತ್ತೆ ಮೊದಲಿನ ಸ್ಥಿತಿಗೆ ಬರಲಿ ಎಂಬುದೇ ನಮ್ಮ ಆಶಯ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ನಮಗೆ ಕಾಮೆಂಟ್ ಮುಖಾಂತರ ತಿಳಿಸಿ.