Sunday, April 20, 2025
WhatsApp Group Join Now
Telegram Group Join Now
WhatsApp Group Join Now
Telegram Group Join Now
HomeEntertainmentದರ್ಶನ್ ಮೇಲೆ ಆದ ಕೃತ್ಯಕ್ಕೆ ಚಿತ್ರರಂಗದವರೆಲ್ಲರೂ ರಿಯಾಕ್ಟ್ ಮಾಡಿದ್ದಾರೆ. ಆದ್ರೆ ಯಶ್ ಮಾತ್ರ ಯಾಕಿನ್ನೂ ರಿಯಾಕ್ಟ್...

ದರ್ಶನ್ ಮೇಲೆ ಆದ ಕೃತ್ಯಕ್ಕೆ ಚಿತ್ರರಂಗದವರೆಲ್ಲರೂ ರಿಯಾಕ್ಟ್ ಮಾಡಿದ್ದಾರೆ. ಆದ್ರೆ ಯಶ್ ಮಾತ್ರ ಯಾಕಿನ್ನೂ ರಿಯಾಕ್ಟ್ ಮಾಡಿಲ್ಲ.? ನ್ಯಾಷನಲ್ ಸ್ಟಾರ್ ಆದ ಮೇಲೆ ಮರೆತು ಹೋದ್ರ ಕರ್ನಾಟಕ ನಾ.!

ಡಿ ಬಾಸ್ ಅಭಿಮಾನಿಗಳ ಪ್ರಶ್ನೆ

ಹೊಸಪೇಟೆಯಲ್ಲಿ ನಟ ದರ್ಶನ್ ಮೇಲೆ ಆದಂತಹ ಘಟನೆ ಚಿತ್ರರಂಗದಲ್ಲಿ ಇರುವಂತಹ ಎಲ್ಲರೂ ಕೂಡ ತಲೆ ತಗ್ಗಿಸುವಂತಹ ಕೆಲಸವಾಗಿದೆ. ಒಬ್ಬ ಕಲಾವಿದನ ಮೇಲೆ ನಟನ ಮೇಲೆ ಈ ರೀತಿ ಚಪ್ಪಲು ಎಸೆದಿದ್ದು ನಿಜಕ್ಕೂ ಕೂಡ ದುರ್ಘಟನೆ. ನಟ ದರ್ಶನ್ ಅವರ ಮೇಲೆ ಈ ರೀತಿ ಕೃತ್ಯವನ್ನು ಮಾಡಿದವರ ವಿರುದ್ಧ ಚಿತ್ರರಂಗದ ಪ್ರತಿಯೊಬ್ಬ ನಟ ನಟಿಯರು ಕೂಡ ಮಾತನಾಡಿದ್ದಾರೆ. ಹೌದು ಶ್ರೀಮುರುಳಿ, ವಿಜಯ ರಾಘವೇಂದ್ರ, ರಚಿತಾ ರಾಮ್, ಸುಮಲತಾ ಅಭಿಷೇಕ್, ದುನಿಯಾ ವಿಜಯ್, ರಕ್ಷಿತಾ, ಶಿವಣ್ಣ ಹೀಗೆ ಕನ್ನಡದ ಹಲವಾರು ನಟ ನಟಿಯರು ಎಲ್ಲರೂ ಕೂಡ ಮಾತನಾಡಿದ್ದಾರೆ.

ನಿಜ ಹೇಳಬೇಕೆಂದರೆ ಚಿತ್ರರಂಗದ ಭಾಗಶಹ 90 ಭಾಗದಷ್ಟು ಜನ ದರ್ಶನ್ ಅವರ ವಿರುದ್ಧ ಈ ರೀತಿ ಕೃತ್ಯ ಆಗಿರುವುದು ನಿಜಕ್ಕೂ ಶೋಚನೀಯ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಎಲ್ಲರೂ ಕೂಡ ಈ ಘಟನೆಗೆ ಸಂತಾಪವನ್ನು ಸೂಚಿಸಿ ಇನ್ನು ಮುಂದೆ ಇಂತಹ ಅಹಿತಕರ ಘಟನೆ ಯಾವ ನಟನ ಮೇಲೆಯೂ ನಡೆಯದಿರಲಿ. ಅಭಿಮಾನಿಗಳು ಎಂದಿಗೂ ಕೂಡ ಇಂತಹ ಕೃತ್ಯವನ್ನು ಮಾಡಬೇಡಿ ಎಲ್ಲಾ ನಟರನ್ನು ಗೌರವಿಸಿ ಎಲ್ಲರಿಗೂ ಅವರದ್ದೇ ಆದಂತಹ ಸ್ಥಾನಮಾನ ಇರುತ್ತದೆ ಆ ಸ್ಥಾನಮಾನಕ್ಕೆ ಧಕ್ಕೆ ತರುವಂತಹ ಕೆಲಸ ಮಾಡಬೇಡಿ ಎಂದು ಹೇಳಿದ್ದರು.

ಕಳೆದ ಐದು ದಿನದಿಂದ ಯಾವುದೇ ಮೀಡಿಯಾ ನೋಡಿದರೂ ಕೂಡ ಅಲ್ಲಿ ದರ್ಶನ್ ಅವರ ಮೇಲೆ ಮಾಡಿದಂತಹ ಕೃತ್ಯದ ಬಗೆಗಿನ ವಿವಾದಗಳೇ ಹೆಚ್ಚಾಗಿ ಕೇಳಿ ಬರುತ್ತದೆ. ಈ ಒಂದು ವಿಮಾನದ ಬಗ್ಗೆ ಎಲ್ಲಾ ನಟ ನಟಿಯರು ಮಾತನಾಡಿದರು ಕೂಡ ರಾಕಿಂಗ್ ಸ್ಟಾರ್ ಯಶ್ ಅವರು ಮಾತ್ರ ಇದುವರೆಗೂ ಎಲ್ಲಿಯೂ ಕೂಡ ವಿಚಾರದ ಬಗ್ಗೆ ಒಂದೇ ಒಂದು ಚಿಕ್ಕ ಹೇಳಿಕೆಯನ್ನು ಕೊಟ್ಟಿಲ್ಲ. ಇದು ಹಲವಾರು ಅನುಮಾನಗಳಿಗೆ ಹೆಡೆ ಮಾಡಿಕೊಟ್ಟಿದೆ ಹೌದು ನಿಮ್ಮೆಲ್ಲರಿಗೂ ತಿಳಿದಿರುವಂತೆ ರಾಕಿಂಗ್ ಸ್ಟಾರ್ ಇದೀಗ ಕರ್ನಾಟಕದ ಮಾತ್ರ ಸೀಮಿತವಲ್ಲ ನ್ಯಾಷನಲ್ ಸ್ಟಾರ್ ಆಗಿ ಬೆಳೆದು ನಿಂತಿದ್ದಾರೆ.

ಕೆಜಿಎಫ್ ಸಿನಿಮಾ ಸಕ್ಸಸ್ ನಂತರ ರಾಕಿಂಗ್ ಸ್ಟಾರ್ ಯಶ್ ಅವರ ಸಂಪೂರ್ಣ ಜೀವನ ಶೈಲಿಯೇ ಬದಲಾಗಿದೆ ಇದು ಒಳ್ಳೆಯ ವಿಚಾರವೇ ಕನ್ನಡ ಸಿನಿಮಾ ಇಂಡಸ್ಟ್ರಿಗೆ ಸಾಕಷ್ಟು ಹೆಸರು ಕೀರ್ತಿಯನ್ನು ತಂದು ಕೊಟ್ಟಿದ್ದಾರೆ‌. ಈ ನಟ ಮೆಚ್ಚುವ ಕೆಲಸವನ್ನೇ ಮಾಡಿದ್ದಾರೆ ಆದರೆ ಇದೀಗ ಅದೇ ಕನ್ನಡ ಇಂಡಸ್ಟ್ರಿಗೆ ಧಕ್ಕೆ ಬರುವಂತಹ ಕೆಲಸ ನಡೆದಿದ್ದರೂ ಕೂಡ ಇನ್ನು ಯಶ್ ಅವರು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ರಿಯಾಕ್ಟ್ ಮಾಡಿಲ್ಲ ಎಂಬುದೇ ಇದೀಗ ದರ್ಶನ್ ಅಭಿಮಾನಿಗಳ ಪ್ರಶ್ನೆಯಾಗಿದೆ. ಕೇವಲ ಯಶ್ ಮಾತ್ರವಲ್ಲದೆ ಕಾಂತರಾ ಸಿನಿಮಾದ ಹೀರೋ ರಿಷಬ್ ಶೆಟ್ಟಿ ಹಾಗೂ ರಕ್ಷಿತ್ ಶೆಟ್ಟಿ, ಇವರು ಕೂಡ ಈ ಒಂದು ಪ್ರಕರಣದ ಬಗ್ಗೆ ಮಾತನಾಡಿಲ್ಲ.

ನಿಜ ಹೇಳಬೇಕೆಂದರೆ ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ಮೂಡಿ ಬಂದಂತಹ ಕಾಂತರಾ ಸಿನಿಮಾ ಕೆಜಿಎಫ್ ಸಿನಿಮಾದ ನಾಯಕ ನಟರು ಮಾತನಾಡದೆ ಇರುವುದು ಇದೀಗ ಎಲ್ಲರ ಮನಸ್ಸಿನಲ್ಲಿಯೂ ಕೂಡ ಒಂದು ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ. ದರ್ಶನ್ ಅಭಿಮಾನಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ ಪೋಸ್ಟರ್ ಒಂದು ಸಕ್ಕತ್ ಸದ್ದು ಮಾಡುತ್ತಿದೆ. ಅಷ್ಟಕ್ಕೂ ದರ್ಶನ್ ಅಭಿಮಾನಿಗಳ ವಾದವೇನು ಎಂಬುದನ್ನು ನೋಡುವುದಾದರೆ.

ಡಿಸೆಂಬರ್ 17ರ ರಾತ್ರಿಯಿಂದ ನಡೆಯುತ್ತಿರುವುದು ಇಡೀ ಕರ್ನಾಟಕಕ್ಕೆ ಗೊತ್ತಾಗಿದೆ ಅದರಲ್ಲೂ ನಮ್ಮ ಎಲ್ಲ ಕನ್ನಡ ಚಿತ್ರರಂಗದ ಕಲಾವಿದರಿಗು ತಿಳಿದೇ ಇರುತ್ತದೆ. ಕೆಲವರು ತಮ್ಮ ತಮ್ಮ ಅಭಿಪ್ರಾಯಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಕನ್ನಡದ ಮೇರು ನಟರು ಅವರಿಂದನೆ ಇವತ್ತು ಕನ್ನಡ ಚಿತ್ರರಂಗ ವಿಶ್ವದಾದ್ಯಂತ ಹೆಸರು ಬಂದಿರುವುದು ಅನ್ನೋ ನಟರು ಯಶ್, ರಕ್ಷಿತ್ ಶೆಟ್ಟಿ, ರೀಶಬ್ ಶೆಟ್ಟಿ ಇನ್ನೂ ಮುಂತಾದವರು ಯಾರೆಲ್ಲಾ ಹೊಂಬಾಳೆ ಫಿಲ್ಟ್ ಅಡಿಯಲ್ಲಿ ಚಿತ್ರ ಮಾಡಿದ್ದರೂ ಅವು ಇಲ್ಲಿವರೆಗೂ ತುಟಿ ಬಿಚ್ಚಿಲ್ಲ. ಯಾಕೆ ಅವರಿಗೆ ಸಮಯವಿಲ್ವ ? ಇಲ್ಲ ಆದ್ರೆ ಬೇರೆ ಕಾರಣ ಇದಿಯಾ? ಕೆಲವು ತುಟಿ ಬಿಚ್ಚಿದರು ದರ್ಶನ್ ಸರ್ ಅವರ ವಿರುದ್ಧ ದಿಕ್ಕಿನಲ್ಲಿಯೆ ಇದೆ. ಎಂದು ಕ್ಲಿಯರ್ ಆಗಿ ನೋಡಬಹುದು ಇದಕ್ಕೆಲ್ಲ ಕಾರಣ ದೊಡ್ಡ ತಲೆಗಳ ? ದೊಡ್ಡ ಬಂಡವಾಳ ಶಾಹಿಗಳ ? ದರ್ಶನ್ ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.

ಆದರೆ ಇದು ನಿಜವೋ ಸುಳ್ಳೋ ಎಂಬುದು ದೇವನೊಬ್ಬ ಮಾತ್ರ ಬಲ್ಲ ಯಶ್ ರವರು ಈ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಒಂದೇ ಒಂದು ಸ್ಟೇಟ್ಮೆಂಟ್ ಕೊಟ್ಟಿದ್ದರೆ ಸಾಕಿತ್ತು. ಇಷ್ಟೆಲ್ಲ ರಾದಂತ ಪ್ರಾರಂಭವಾಗುತ್ತಲೇ ಇರಲಿಲ್ಲ ಎಂಬುದು ಕೆಲವು ಅಭಿಮಾನಿಗಳ ವಾದವಾಗಿದೆ. ಈಗಲಾದರೂ ಯಶ್ ಅವರು ಈ ವಿಚಾರದ ಬಗ್ಗೆ ಒಂದೆರಡು ಮಾತನ್ನು ಮಾತನಾಡಿದರೆ ದರ್ಶನ್ ಅಭಿಮಾನಿಗಳು ಒಂದು ರೀತಿ ಸಮಾಧಾನ ಸಿಗುತ್ತದೆ ಎಂಬುದು ಕೆಲವರ ಅಭಿಪ್ರಾಯವಾಗಿದೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡೋಣ ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು ತಪ್ಪದೇ ಕಮೆಂಟ್ ಮಾಡಿ.