ದೇವರು ಎನ್ನುವವನು ಸರ್ವವ್ಯಾಪಿ. ಆತ ಎಲ್ಲಾ ಕಡೆ ಕೂಡ ಇರುತ್ತಾನೆ ಎನ್ನುವುದು ಯುನಿವರ್ಸಲ್ ಸತ್ಯ. ಆದರೆ ಈಗಾಗಲೇ ಜನ ಹೇಗಾಗಿದ್ದಾರೆ ಎಂದರೆ ತಮ್ಮ ಮನಸ್ಸಿಗೆ ತಕ್ಕ ಹಾಗೆ ದೇವರನ್ನು ಕಲ್ಪಿಸಿಕೊಂಡು ಮನುಷ್ಯರ ಲೆವೆಲ್ ಗೆ ದೇವರನ್ನು ತಂದಿದ್ದಾರೆ ಅದಕ್ಕೆ ಪ್ರತ್ಯಕ್ಷ ಸಾಕ್ಷಿ ಎಂದರೆ ದೇವಸ್ಥಾನಕ್ಕೆ ಹೋಗಿ ಹರಕೆ ಕಟ್ಟಿಕೊಳ್ಳುವುದನ್ನು ಉದಾಹರಿಸಬಹುದು.
ಹಾಗಾದರೆ ದೇವಸ್ಥಾನಕ್ಕೆ ಹೋಗುವುದು ತಪ್ಪಾ ಎಂದರೆ ದೇವಸ್ಥಾನಕ್ಕೆ ಹೋಗುವುದು ತಪ್ಪಲ್ಲ ದೇವಸ್ಥಾನ ಮಾತ್ರವಲ್ಲದೆ ನಿಮ್ಮ ಮನಸ್ಸಿಗೆ ಶಾಂತಿ ಕೊಡುವ ನೆಮ್ಮದಿ ಕೊಡುವ ಯಾವುದೇ ಸ್ಥಳಕ್ಕೆ ಹೋದರೂ ಕೂಡ ಅದು ತಪ್ಪಲ್ಲ. ಆದರೆ ದೇವಸ್ಥಾನಕ್ಕೆ ಹೋಗಿ ನಿನಗೆ ಈ ಸೇವೆ ಮಾಡುತ್ತೇನೆ ಆ ಸೇವೆ ಮಾಡುತ್ತೇನೆ ಹಣ್ಣುಕಾಯಿ ಕೊಡುತ್ತೇನೆ ಈ ಕೆಲಸ ಮಾಡಿ ಕೊಡು ಎಂದು ಕೇಳುತ್ತಿವಲ್ಲ ಅದು ತಪ್ಪು.
ಈ ಸುದ್ದಿ ಓದಿ:- ಯುಗಾದಿ ಹಬ್ಬದ ದಿನ ಈ ಮರ ಎಲ್ಲಿ ಸಿಕ್ಕರೂ ಬಿಡಬೇಡಿ, ಆಗದೆ ಇರುವ ಕೆಲಸವೂ ಆಗುತ್ತದೆ ಸಾಕಷ್ಟು ಹಣ ಗಳಿಸುತ್ತೀರಿ.!
ಮನುಷ್ಯನ ಮಾತ್ರ ಈ ರೀತಿ ಪೇಮೆಂಟ್ ತೆಗೆದುಕೊಂಡು ಅಥವಾ ಕೆಲಸ ಆಗುವುದಕ್ಕೆ ಏನನ್ನಾದರೂ ಡಿಮ್ಯಾಂಡ್ ಮಾಡುವುದು. ದೇವರೆಂದೂ ಈ ರೀತಿ ಇರುವುದಿಲ್ಲ ಆತನಿಗೆ ನೀವು ಕೈ ಮುಗಿದರೂ ಮುಗಿಯದೇ ಇದ್ದರೂ ಹರಕೆ ಕಟ್ಟಿಕೊಂಡರೂ ಕಟ್ಟಿಕೊಳ್ಳದೇ ಇದ್ದರೂ ನಂಬಿಕೆ ಇಟ್ಟರೂ ಇಡದಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ.
ನಿಮ್ಮ ನಿಮ್ಮ ಕರ್ಮ ಫಲಗಳನ್ನು ನೀವು ಅನುಭವಿಸಲೇಬೇಕು ಹಾಗಾದರೆ ಈ ಹಬ್ಬ ಹರಿದಿನ ಆಚರಣೆ ಯಾಕೆ ಎಂದರೆ ಮನುಷ್ಯನ ಮನಸ್ಸು ಚಂಚಲ ಆತನನ್ನು ದೇವರು ಎನ್ನುವ ಹೆಸರಿನಲ್ ಏಕಾಗ್ರತೆಗೆ ತರಲು ಮತ್ತು ಆತನ ಮನಸ್ಸಿನ ಕೊಳೆಯನ್ನು ತೊಳೆಯಲು ಈ ರೀತಿಯ ಯಾವುದಾದರೂ ಉದ್ದೇಶದಿಂದ ಇವುಗಳನ್ನು ಆರಂಭಿಸಲಾಗಿರುತ್ತದೆ.
ಯುಗಾದಿ ಹಬ್ಬ ಮಾಡದವರು ಪ್ರಪಂಚದಲ್ಲಿ ಇದ್ದಾರೆ, ಕ್ರಿಸ್ಮಸ್ ಹಬ್ಬ ಮಾಡದವರು ಇದ್ದಾರೆ, ರಂಜಾನ್ ಮಾಡದವರು ಇದ್ದಾರೆ ಆದರೆ ದೇವರು ತನ್ನ ಹಬ್ಬ ಮಾಡದೇ ಇದ್ದವರಿಗೆ ಯಾವುದೇ ಶಿಕ್ಷೆ ಕೊಟ್ಟು ಬಿಡುತ್ತಾನೆ ಎಂದುಕೊಳ್ಳುವುದೆಲ್ಲ ತಪ್ಪು. ದೈವತ್ವ ಎನ್ನುವುದು ಸರ್ವಶೇಷ್ಟವಾದ ಪದ ಮನುಷ್ಯನನ್ನೇ ದೇವತಾ ಮನುಷ್ಯ ಎಂದರೆ ಆತನಲ್ಲಿ ಎಷ್ಟು ಕಲ್ಯಾಣ ಗುಣಗಳು ಇರುತ್ತವೆ.
ಈ ಸುದ್ದಿ ಓದಿ:-ಐಷಾರಾಮಿ ಜೀವನ ಹಾಗೂ ದೀರ್ಘಾಯುಷ್ಯ ಬೇಕು ಎಂದರೆ ಈ ದಿಕ್ಕಿಗೆ ತಲೆ ಹಾಕಿ ಮಲಗುವ ಅಭ್ಯಾಸ ರೂಢಿಸಿಕೊಳ್ಳಿ.!
ಇನ್ನು ದೇವರು ಎಂದರೆ ಅವರು ಹೇಗಿರಬಹುದು ಅದು ನಮ್ಮ ಕಲ್ಪನೆಗೂ ನಿಲುಕದ್ದು ನಮ್ಮ ನೀಚತನದಿಂದ ದೇವರನ್ನು ನಮ್ಮ ಲೆವೆಲ್ ಗೆ ಇಳಿಸುವುದು ಬಹಳ ತಪ್ಪು. ದೇವರು ಬಹಳ ಬೇಗ ಅನುಭವಕ್ಕೂ ಬರುತ್ತಾರೆ ಆದರೆ ಒಳಗಿನ ಕಣ್ಣು ತೆರೆದು ಅದನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಬೇಕು ಅಷ್ಟೇ.
ಐದು ನಿಮಿಷಗಳಲ್ಲಿಯೇ ದೇವರ ಅನುಭವ ಮಾಡಿಸಬಹುದು ಬೇಕಾದರೆ ನೀವು ನಿಮ್ಮ ಪಕ್ಕದಲ್ಲಿರುವವರಿಗೆ ಅವರ ಮೂಗು ಹಾಗೂ ಬಾಯಿಯನ್ನು ಮುಚ್ಚಿ ಹಿಡಿದುಕೊಳ್ಳಿ ನಿಮಗೆ ಉಸಿರಾಡಲು ಗಾಳಿ ಬೇಕೋ ಊಟ ಬೇಕೋ ಎಂದು ಕೇಳಿದರೆ ಗಾಳಿ ಸಿಕ್ಕರೆ ಸಾಕು ಎಂಬ ರೀತಿ ಆಗಿರುತ್ತದೆ. ಇನ್ನೆರಡು ನಿಮಿಷಗಳು ಹಾಗೆ ಹಿಡಿದುಕೊಳ್ಳಿ ನಿನಗೆ ಕಾರ್ ಬೇಕೋ ಗಾಳಿ ಬೇಕೋ ಎಂದರೆ ಕೇಳಿದರೆ ಖಂಡಿತವಾಗಿಯೂ ಅವರು ಗಾಳಿಯನ್ನು ಆರಿಸಿಕೊಳ್ಳುತ್ತಾರೆ.
ಇನ್ನು ಸ್ವಲ್ಪ ಹೊತ್ತು ಹಿಡಿದು ನಿಮಗೆ ಅಪಾರವಾದ ಸಂಪತ್ತು ಬೇಕೋ ಉಸಿರಾಡಲು ಬಿಡಬೇಕೋ ಎಂದರೆ ಅವರು ಮೊದಲು ಉಸಿರಾಡಿದರೆ ಸಾಕು ಎಂದು ಮಿಸುಕಾಡುತ್ತಿರುತ್ತಾರೆ. ಆಗ ಬಿಟ್ಟು ನೋಡಿ ಅವರು ಎಷ್ಟು ಚೆನ್ನಾಗಿ ಉಸಿರು ಎಳೆದುಕೊಳ್ಳುತ್ತಾರೆ ಆ ಪ್ರಾಣ ವಾಯುವೇ ಭಗವಂತ ಮತ್ತು ಆತ ಮಾತ್ರ ಸತ್ಯ ಈ ಪ್ರಾಣವಾಯು ಪ್ರತಿಯೊಬ್ಬರಿಗೂ ಉಚಿತವಾಗಿ ಸಿಗುತ್ತದೆ.
ಈ ಸುದ್ದಿ ಓದಿ:-ಜಾತಕ ಎನ್ನುವುದು ಸತ್ಯವೋ.? ಸುಳ್ಳೋ, ಇಲ್ಲಿದೆ ನೋಡಿ ನಿಖರ ಮಾಹಿತಿ.!
ಭಗವಂತನ ಹಾಗೆ ಕೆಟ್ಟವರು ಒಳ್ಳೆಯವರು ದೊಡ್ಡವರು ಚಿಕ್ಕವರಿಗೆಲ್ಲರಿಗೂ ಸಮಾನ ಮತ್ತು ಭಗವಂತನ ಸೃಷ್ಟಿಯು ಕೂಡ ಎಲ್ಲರಿಗೂ ಸಮಾನವಾಗಿಯೇ ಇದೆ. ಹಾಗಾಗಿ ಇರಲು ಎಲ್ಲರಿಗೂ ಒಂದೇ ಭೂಮಿ, ಎಲ್ಲರಿಗೂ ಒಬ್ಬನೇ ಸೂರ್ಯ, ಬೀಳುವ ಮಳೆ ಆ ಭಾಗದ ಎಲ್ಲರಿಗೂ ಒಂದೇ ರೀತಿ ಆದರೆ ಆತ ಮಾಡಿಕೊಳ್ಳುವ ಎಡವಟ್ಟಿನಿಂದ ಅಥವಾ ನಿರ್ಲಕ್ಷದಿಂದ ಅಥವಾ ದು’ರಾ’ಸೆಯಿಂದ ಕ’ಷ್ಟಗಳನ್ನು ಅನುಭವಿಸುತ್ತಾನೆ ಅಷ್ಟೇ.