2024ನೇ ವರ್ಷದ ಮೊದಲ ಚಂದ್ರಗ್ರಹಣ ಈಗಾಗಲೇ ಕಳೆದ ತಿಂಗಳು ಸಂಭವಿಸಿದೆ. ಈ ತಿಂಗಳ ವರ್ಷದ ಮೊದಲನೇ ಸೂರ್ಯ ಗ್ರಹಣ ಸಂಭವಿಸುತ್ತಿದ್ದು, ಅದು ಕೂಡ ಏಪ್ರಿಲ್ 08, 2024ರ ಯುಗಾದಿ ಹಬ್ಬದ ಸಂಭ್ರಮದ ಸಮಯದಲ್ಲಿ ಸೂರ್ಯಗ್ರಹಣ ಬರುತ್ತಿರುವುದು ಹಲವರಲ್ಲಿ ಆತಂಕ ಮೂಡಿಸಿದೆ
ಈ ಸೂರ್ಯ ಗ್ರಹಣ, ಚಂದ್ರಗ್ರಹಣ ಮತ್ತು ಪ್ರಕೃತಿಯಲ್ಲಿ ನಡೆಯುವ ಪ್ರತಿಯೊಂದು ಗ್ರಹಗಳ ಸಂಚಾರವೂ ಕೂಡ ದ್ವಾದಶ ರಾಶಿಗಳೆಲ್ಲದರ ಮೇಲೆ ಪರಿಣಾಮ ಬೀರುತ್ತದೆ. ಇದು ಕೆಲವು ರಾಶಿಗಳಿಗೆ ತೊಂದರೆ ಮಾಡಿದರೆ ಹಲವು ರಾಶಿಗಳಿಗೆ ಕಂಟಕಮಯವಾಗಿರುತ್ತದೆ. ಆ ಪ್ರಕಾರವಾಗಿ ಸೂರ್ಯಗ್ರಹಣದ ಪ್ರಭಾವದಿಂದಾಗಿ ರಾಶಿ ಚಕ್ರದ ಈ ಆರು ರಾಶಿಯವರ ಸಮಯ ಕೆಡಲಿದೆ.
ಈ ಸುದ್ದಿ ಓದಿ:- ಈ ವಾಸ್ತು ನಿಯಮಗಳು ನಿಮ್ಮ ಬದುಕನ್ನೇ ಬದಲಾಯಿಸುತ್ತದೆ, ಪ್ರತಿಯೊಬ್ಬರಿಗೂ ಕೂಡ ಇದು ತಿಳಿದಿರಲೇಬೇಕು.!
ಯಾವ ರಾಶಿಯವರು ಪರಿಹಾರ ಏನು? ಇಲ್ಲಿದೆ ನೋಡಿ ಪೂರ್ತಿ ಮಾಹಿತಿ. 08 ಏಪ್ರಿಲ್, 2024ರಂದು ಮೇಷ ರಾಶಿಯಲ್ಲಿ ಸಂಪೂರ್ಣ ಸೂರ್ಯಗ್ರಹಣ ಗೋಚರಿಸುತ್ತಿದೆ. ಮಧ್ಯಾಹ್ನ 2:12 ನಿಮಿಷಕ್ಕೆ ಆರಂಭಗೊಳ್ಳುವ ಈ ಸೂರ್ಯ ಗ್ರಹಣವು ಹಲವು ಸಮಯದವರೆಗೆ ಇರಲಿದೆ.
ಈ ಗ್ರಹಣವು ಅನೇಕರ ಜೀವನದಲ್ಲಿ ಸಮಸ್ಯೆಗಳನ್ನು ತರಲಿದೆ, ಇದಿಷ್ಟು ಮಾತ್ರವಲ್ಲದೆ ಒಂದು ಗ್ರಹಣದಿಂದ ಮತ್ತೊಂದು ಗ್ರಹಣ ನಡೆಯುವವರೆಗಿನ ಸಮಯವನ್ನು ಕೂಡ ಗ್ರಹಣ ಕಾಲ ಎಂದು ಕರೆಯುತ್ತಾರೆ. ಇದು ಕೂಡ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆ ಪ್ರಕಾರವಾಗಿ ಈಗ ಇರುವ ಸೂರ್ಯಗ್ರಹಣ ಯಾವ ರಾಶಿಗೆ ಏನು ಫಲ ನೀಡುತ್ತಿದೆ ಇಲ್ಲಿದೆ ನೋಡಿ ಮಾಹಿತಿ.
ಈ ಸುದ್ದಿ ಓದಿ:- ಮಾರ್ಚ್ 9 ಯುಗಾದಿ ಹಬ್ಬದ ದಿನದಂದು ಈ ಒಂದು ತಪ್ಪು ಮಾಡಿದರೆ ವರ್ಷಪೂರ್ತಿ ಕಷ್ಟ
* ಮೇಷ ರಾಶಿ:- ಮೇಷ ರಾಶಿಯವರಿಗೆ ಯಾವಾಗಲೂ ತಮ್ಮ ಮೇಲೆ ವಿಶ್ವಾಸ ಹೆಚ್ಚು ಎಂದು ಹೇಳಲಾಗುತ್ತಿತ್ತು. ಆದರೆ ಈ ಸಮಯದಲ್ಲಿ ಅವರು ತಮ್ಮ ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತಹ ಸಂದರ್ಭಗಳು ಎದುರಾಗುತ್ತವೆ, ಆಪ್ತ ಸಂಬಂಧಗಳಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಮುರಿದಿದ್ದ ಸಂಬಂಧಗಳು ಮರುಜೊಡನೆ ಆಗುತ್ತಿದ್ದರೆ ಅಥವಾ ಹೊಸ ಸಂಬಂಧಗಳನ್ನು ಆರಂಭಿಸುವ ಚಿಂತನೆಯಲ್ಲಿದ್ದರೆ ಬಹಳ ಜಾಗರಿಕರಾಗಿರುವುದು ಉತ್ತಮ ಇಲ್ಲವಾದಲ್ಲಿ ಇದರಿಂದ ನೀವೇ ನೋ’ವು ಅನುಭವಿಸಬೇಕಾಗುತ್ತದೆ.
ಈ ಸುದ್ದಿ ಓದಿ:- ಕಟಕ ರಾಶಿಯವರ ಏಪ್ರಿಲ್ ತಿಂಗಳ ಮಾಸ ಭವಿಷ್ಯ, ಏಪ್ರಿಲ್ ತಿಂಗಳಲ್ಲಿ ನಿಮಗಾಗಿಯೇ ಬರುತ್ತಿದೆ ವಿಶೇಷವಾದ ಆಫರ್ ಒಂದು.!
* ಕರ್ಕಾಟಕ ರಾಶಿ:- ಈ ಸೂರ್ಯ ಗ್ರಹಣವು ಕರ್ಕಾಟಕ ರಾಶಿ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಅಂದರೆ ಗ್ರಹಣ ಕಳೆದು ಸೂರ್ಯ ಮತ್ತೆ ಹೊಳೆಯುವಂತೆ ಇವರಿಗೂ ಕೂಡ ಸತ್ಯದ ಮೇಲೆ ಲೇಪನವಾಗಿದ್ದ ಸುಳ್ಳಿನ ತೆರೆಯು ಕಳಚಿ ಸತ್ಯದರ್ಶನವಾಗಲಿದೆ. ತಮ್ಮ ಬದುಕಿಗೆ ಸಂಬಂಧ ಪಟ್ಟ ಅನೇಕ ರಹಸ್ಯಗಳನ್ನು ಕಹಿ ಸತ್ಯವನ್ನು ಇವರು ತಿಳಿದುಕೊಳ್ಳುತ್ತಾರೆ. ಆದರೆ ಇದೆಲ್ಲವೂ ನೋ’ವು ನೀಡುವ ಸಂಗತಿಗಳೇ ಆಗಿವೆ, ಆದಷ್ಟು ಶಾಂತಿಯಿಂದ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸಿ.
* ತುಲಾ ರಾಶಿ:- ತುಲಾ ರಾಶಿಯವರಿಗೆ ಕೂಡ ಗ್ರಹಣ ಕಾಲ ಬಹಳ ಕಷ್ಟಕರವಾಗಿದೆ. ನಿಮ್ಮ ನಿಜವಾದ ನಿರ್ಧಾರಗಳನ್ನು ಹೇಳಿಕೊಳ್ಳಲಾಗದ ಸಂಧಿಗ್ದ ಪರಿಸ್ಥಿತಿಯನ್ನು ಎದುರಿಸುತ್ತೀರಿ. ಆದರೆ ಧೈರ್ಯವಾಗಿ ಇದನ್ನು ಗೆದ್ದಿದ್ದೇ ಆದಲ್ಲಿ ಬದುಕಿನಲ್ಲಿ ಮುಂದೆ ಬರುವ ಅನೇಕ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಬಹುದು.
* ಕನ್ಯಾ ರಾಶಿ:- ಕನ್ಯಾ ರಾಶಿಯವರು ಕೂಡ ಅನೇಕ ಕೆಟ್ಟ ಫಲಗಳನ್ನು, ಪರೀಕ್ಷಾ ಸಮಯಗಳನ್ನು ಗ್ರಹಣ ಕಳೆದ ಕೆಲದಿನಗಳವರೆಗೆ ಅನುಭವಿಸಲಿದ್ದಾರೆ. ಸದ್ಯಕ್ಕೆ ತಾಳ್ಮೆ ಒಂದೇ ನಿಮ್ಮ ಅಸ್ತ್ರ ಆದಷ್ಟು ಇದನ್ನು ಪಾಲಿಸಿ ಮುಂದಿನ ಗ್ರಹಣವಾದ ನಂತರ ಬಹಳ ಅದ್ಭುತ ಫಲಗಳನ್ನು ಪಡೆಯುತ್ತೀರಿ.
ಈ ಸುದ್ದಿ ಓದಿ:- ಅಂಜೂರದ ಹಣ್ಣು ಹೇಗೆ ತಯಾರಾಗುತ್ತದೆ.? ಇದು ಆರೋಗ್ಯಕ್ಕೆ ಎಷ್ಟು ಉತ್ತಮ ನೋಡಿ.!
* ಮಕರ ರಾಶಿ:- ಮಕರ ರಾಶಿಗಳು ಕೂಡ ಅಷ್ಟೇ ಶುಭಫಲಗಳನ್ನು ಈ ಗ್ರಹಣ ಕಾಲ ನೀಡುತ್ತಿಲ್ಲ. ತುಂಬಾ ಸಮಸ್ಯೆಗಳನ್ನು ಈ ಸಮಯದಲ್ಲಿ ನೀವು ಎದುರಿಸಬೇಕಾದ ಪರಿಸ್ಥಿತಿಗಳು ಬರುತ್ತವೆ. ವ್ಯಾಪಾರ ವ್ಯವಹಾರಗಳಲ್ಲಿ ಜಾಗೃತಿಯಿಂದ ಇರಿ, ಉದ್ಯೋಗ ಸ್ಥಳದಲ್ಲಿ ಮನಸ್ತಾಪಗಳಾಗುವ ಸಾಧ್ಯತೆಯೂ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮುನ್ನ ಯೋಚಿಸಿ ಮುಂದುವರೆಯಿರಿ.
* ಕುಂಭ ರಾಶಿ:- ಕುಂಭ ರಾಶಿಯವರು ಈಗಾಗಲೇ ಬಹಳ ಕಷ್ಟದ ಸಮಯದಲ್ಲಿ ಇದ್ದಾರೆ. ಗ್ರಹಣ ಪರಿಣಾಮವಾಗಿ ಇದರಲ್ಲಾವ ಬದಲಾವಣೆಯೂ ಆಗುವುದಿಲ್ಲ. ಇನ್ನು ಕೆಲವು ತಿಂಗಳುಗಳವರೆಗೆ ಇವರು ಇದೇ ಪರಿಸ್ಥಿತಿಯಲ್ಲಿ ಮುಂದುವರೆಯಲಿದ್ದಾರೆ. ಆದರೆ ಧೈರ್ಯಂ ಸರ್ವಸ್ತ್ರ ಸಾಧನ ಎನ್ನುವಂತೆ ಧೈರ್ಯ ಒಂದಿದ್ದರೆ ಇಷ್ಟು ದಿನ ಪಟ್ಟ ಕಷ್ಟಗಳ ಮುಂದೆ ಇದ್ಯಾವುದೂ ಇಲ್ಲ ಎನಿಸುತ್ತದೆ, ಮುಂದೆ ಬಹಳ ಶುಭ ದಿನಗಳು ಕಾದಿದೆ ಧೈರ್ಯವಾಗಿರಿ.