ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಇಡೀ ಕರ್ನಾಟಕದಾದ್ಯಂತ ಕೋಟ್ಯಂತರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದ ನಟ. ಮನೆಮನೆಗಳಲ್ಲೂ ಕೂಡ ಈ ನಟನಿಗೆ ಅಭಿಮಾನಿಗಳು ಇದ್ದರು. ಚಿಕ್ಕವಯಸ್ಸಿನಿಂದಲೇ ತಂದೆಯ ಜೊತೆ ನಟನೆ ಶುರುಮಾಡಿ ತಮ್ಮ ಮುಗ್ಧ ನಗುವಿನಿಂದ ಅಮೋಘ ಅಭಿನಯದಿಂದ ಹಾಗೂ ಅಪೂರ್ವ ಸಿರಿಕಂಠದಿಂದ ಇಡೀ ಕರ್ನಾಟಕ ಮನಸೆಳೆದರು. ಬೆಳೆಯುತ್ತ ಅಪ್ಪು ಕಲಿತುಕೊಂಡ ಸಂಸ್ಕಾರಕ್ಕೆ ಮಾರು ಹೋಗದವರೇ ಇಲ್ಲ. ಕರ್ನಾಟಕದ ಮೇರು ನಟ ಡಾಕ್ಟರ್ ರಾಜಕುಮಾರ್ ಅವರ ಮುದ್ದಿನ ಮಗನಾದರೂ ಕನ್ನಡ ಸಿನಿಮಾ ಇಂಡಸ್ಟ್ರಿಯ ಅನ್ನಪೂರ್ಣೇಶ್ವರಿ ತಾಯಿ ಎಂದು ಕರೆಸಿಕೊಳ್ಳುವ ಸಾವಿರಾರು ಜನರಿಗೆ ಉದ್ಯೋಗ ದಾತೆ ಯಾಗಿದ್ದ ಪಾರ್ವತಮ್ಮ ರಾಜಕುಮಾರ್ ಅವರ ಕಿರಿಯ ಮಗ, ಕನ್ನಡ ಸಿನಿಮಾ ಇಂಡಸ್ಟ್ರಿಯ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತು ರಾಘಣ್ಣನ ತಮ್ಮನಾಗಿದ್ದರು, ಚಿಕ್ಕವಯಸ್ಸಿನಲ್ಲಿಯೇ ರಾಷ್ಟ್ರಪ್ರಶಸ್ತಿ ಪಡೆದುಕೊಂಡು ಬಂದಿದ್ದರು ಪುನೀತ್ ರಾಜಕುಮಾರ್ ಅವರು ಮಾತ್ರ ಎಂದಿಗೂ ಎದೆ ಉಬ್ಬಿಸಿ ಬೀಗಿದವರಲ್ಲ.
ಕುಟುಂಬಸ್ಥರೇ ಆಗಲೇ, ಸ್ನೇಹಿತರಾಗಲಿ, ಸಿನಿಮಾ ಇಂಡಸ್ಟ್ರಿ ಜೊತೆಗಾರರೇ ಆಗಲಿ, ಅಭಿಮಾನಿಗಳೇ ಆಗಲಿ ಎಲ್ಲರನ್ನು ಕೂಡ ಮನೆಯವರಂತೆ ಕಾಣುತ್ತಿದ್ದ ಮಹಾನ್ ವ್ಯಕ್ತಿತ್ವ ಪುನೀತ್ ರಾಜಕುಮಾರ್ ಅವರದು. ಅದರಲ್ಲೂ ಕನ್ನಡ ಮತ್ತು ಕರ್ನಾಟಕದ ಬಗ್ಗೆ ಪುನೀತ್ ರಾಜಕುಮಾರ್ ಅವರಿಗಿದ್ದ ಕಾಳಜಿ ಮತ್ತು ಅಭಿಮಾನದ ಬಗ್ಗೆ ಹೇಳುವುದೇ ಬೇಡ. ಇದುವರೆಗೆ ನಮ್ಮ ಕರ್ನಾಟಕದ ಯಾವೊಬ್ಬ ಸಿನಿಮಾ ನಟ ಕೂಡ ಮಾಡದಷ್ಟು ದಾನ ಧರ್ಮವನ್ನು, ಸಮಾಜಸೇವೆಯನ್ನು ಪುನೀತ್ ರಾಜಕುಮಾರ್ ಅವರು ಮಾಡಿದ್ದಾರೆ. ಬಲಗೈಲಿ ಮಾಡಿದ ಸಹಾಯ ಎಡಗೈಗೆ ತಿಳಿಯದಂತೆ ಬದುಕಿದ ದೊಡ್ಡ ಮನಸ್ಸಿನ ಸಾಹುಕಾರ ಅಪ್ಪು ಅವರು. ಆದರೆ ಅದನ್ನೆಲ್ಲಾ ನಮಗೆ ತಿಳಿದುಕೊಳ್ಳಲು ಅವರ ಸಾವೇ ಬರಬೇಕಾಗಿತ್ತು ಎನ್ನುವುದನ್ನು ನೆನೆದರೆ ಮನಸ್ಸಿಗೆ ತುಂಬಾ ನೋವು ಉಂಟಾಗುತ್ತದೆ.
ಅಪ್ಪು ಅವರಿಗೆ ಅವರ ಸರಳ ವ್ಯಕ್ತಿತ್ವದಿಂದ ಮತ್ತು ಅವರು ಸಿನಿಮಾ ಮಾಡಲು ಆರಿಸಿಕೊಳ್ಳುತ್ತಿದ್ದ ಕಥೆಯಿಂದ ಜೊತೆಗೆ ಅವರ ಡ್ಯಾನ್ಸ್ ಇಂದಾಗಿ ಇಡೀ ಕರ್ನಾಟಕದಾದ್ಯಂತ ಫ್ಯಾನ್ಸ್ ಇದ್ದರು. ಚಿಕ್ಕ ಮಕ್ಕಳಿಂದ ಹಿಡಿದು ಮನೆಯ ವೃದ್ಧರವರೆಗೆ ಎಲ್ಲರಿಗೂ ಕೂಡ ಅಪ್ಪು ಎಂದರೆ ಇಷ್ಟ. ಅಪ್ಪು ಅವರು ಆರಿಸಿಕೊಳ್ಳುತ್ತಿದ್ದ ಸಿನಿಮಾ ಕಥೆಗಳು ಕೂಡ ಬೇರೆ ಸಿನಿಮಾಗಳಿಗಿಂತ ತುಂಬಾ ಭಿನ್ನವಾಗಿರುತ್ತಿತ್ತು. ಅಪ್ಪು ಅವರು ಇತ್ತೀಚಿಗೆ ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಸೂಪರ್ ಹಿಟ್ ಸಿನಿಮಾಗಳೇ ಆಗಿದ್ದವು. ಪುನೀತ್ ರಾಜಕುಮಾರ್ ಅವರ ಅಭಿನಯದ ಪವರ್, ಚಕ್ರವ್ಯೂಹ, ರಣವಿಕ್ರಮ, ನಟಸಾರ್ವಭೌಮ, ರಾಜಕುಮಾರ, ಯುವರತ್ನ, ಜೇಮ್ಸ್ ಹೀಗೆ ಕೊನೆಕೊನೆಯಲ್ಲಿ ಅವರು ನಟಿಸಿದ ಎಲ್ಲಾ ಸಿನಿಮಾಗಳು ಕೂಡ ಈಗಿನ ಯುವಜನತೆಗೆ ಒಂದುರೀತಿಯ ಸ್ಪೂರ್ತಿ ತುಂಬುವಂತಹ ಸಮಾಜದ ಆಗುಹೋಗುಗಳ ಬಗ್ಗೆ ಬೆಳಕು ಚೆಲ್ಲುವಂತಹ ಕಥೆಗಳಾಗಿದ್ದವು.
ಪುನೀತ್ ಅವರ ಒಂದೊಂದು ಸಿನಿಮಾಗಳು ಕೂಡ ಎಲ್ಲರಿಗೂ ಇಷ್ಟವಾಗುವಂತಹ ಸಿನಿಮಾಗಳು ಈಗಲೂ ಸಹ ಟಿವಿ ಪರದೆ ಮೇಲೆ ಎಷ್ಟೇ ಬಾರಿ ಬಂದರೂ ಸಹ ಪ್ರತಿ ಬಾರಿಯೂ ಸಿನಿಮಾವನ್ನು ಪೂರ್ತಿ ನೋಡುವಂತಹ ಅಭಿಮಾನಿಗಳು ಪುನೀತ್ ಅವರ ಸಿನಿಮಾಗಳಿಗೆ ಮಾತ್ರ ಇದ್ದಾರೆ ಎನ್ನಬಹುದು. ಪುನೀತ್ ರಾಜಕುಮಾರ್ ಅವರ ಆಕಾಶ್, ಅರಸು, ಮಿಲನ, ವಂಶಿ, ರಾಜ್, ಯಾರೇ ಕೂಗಾಡಲಿ, ಹುಡುಗರು ಈ ಸಿನಿಮಾಗಳು ಎಷ್ಟು ಬಾರಿ ಟಿವಿಯಲ್ಲಿ ಬಂದರೂ ಸಹ ಅಭಿಮಾನಿಗಳು ಪ್ರತಿಬಾರಿ ಚಾನಲ್ ಚೇಂಜ್ ಮಾಡದೇ ನೋಡುತ್ತಾರೆ. ಯಾಕೆಂದರೆ ಅವರು ಮಾಡಿರುವ ಪಾತ್ರಗಳು ನಮಗೆ ಹತ್ತಿರ ಎನಿಸುತ್ತದೆ. ಅವರ ಡೈಲಾಗ್ ಗಳು ಅವರ ಮ್ಯಾನರಿಸಂ ಎಲ್ಲವೂ ಕೂಡ ನಮ್ಮ ಮನೆಯ ಮಗನ ಅಭಿನಯದ ರೀತಿ ಇರುತ್ತದೆ. ಇದೇ ಕಾರಣಕ್ಕೆ ಅಪ್ಪು ಅವರನ್ನು ಇಡೀ ಕರ್ನಾಟಕವೇ ತನ್ನ ಮನೆಯ ಮಗ ಎಂದು ಪ್ರೀತಿಯಿಂದ ಹೇಳಿಕೊಳ್ಳುತ್ತಿತ್ತು.
ಇವರು ನಡೆಸಿಕೊಡುತ್ತಿದ್ದ ರಿಯಾಲಿಟಿ ಶೋಗಳು ಕೂಡ ಕುಟುಂಬದ ಸದಸ್ಯರೆಲ್ಲರೂ ಕೂತು ನೋಡುವಂತಹ ಪ್ರೋಗ್ರಾಮ್ಗಳು ಆಗಿರುತ್ತಿದ್ದವು. ಇವರ ಕನ್ನಡದ ಕೋಟ್ಯಾಧಿಪತಿ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಂದ ಹಿಡಿದು ಎಲ್ಲರೂ ಕೂಡ ತುಂಬಾ ಆಸಕ್ತಿಯಿಂದ ನೋಡುತ್ತಿದ್ದರು. ಜೊತೆಗೆ ಫ್ಯಾಮಿಲಿ ಪವರ್ ಎನ್ನುವ ರಿಯಾಲಿಟಿ ಶೋ ಕೂಡ ಇಡೀ ಕುಟುಂಬವೇ ನಕ್ಕು-ನಲಿವ ಜೊತೆಗೆ ಕೆಲವು ನಾಲೆಡ್ಜ್ ಅನ್ನು ಕೂಡ ತಿಳಿದುಕೊಳ್ಳುವಂತಹ ಕಾರ್ಯಕ್ರಮವಾಗಿತ್ತು. ಆ ಕಾರ್ಯಕ್ರಮವನ್ನು ಪುನೀತ್ ನಡೆಸಿಕೊಡುವುದು ನೋಡುತ್ತಿದ್ದರೆ ನಾವೇ ಕಾರ್ಯಕ್ರಮದಲ್ಲಿ ಭಾಗಿಯಾಗಿ ಇದ್ದೇವೆ ಎನ್ನುವ ಮಟ್ಟಿಗೆ ಎಗ್ಸೈಟ್ಮೆಂಟ್ ಇರುತ್ತಿತ್ತು. ಈ ರೀತಿ ಕಿರುತೆರೆ ಮತ್ತು ಹಿರಿತೆರೆ ಜೊತೆ ಹಾಗೂ ಸದ್ದಿಲ್ಲದೆ ಮಾಡುತ್ತಿದ್ದ ಸಮಾಜಸೇವೆಯಿಂದ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜಕುಮಾರ್ ಅವರು ಈಗ ನಮ್ಮನ್ನೆಲ್ಲಾ ಅಗಲಿ ಅಭಿಮಾನಿಗಳ ದೇವರು ಆಗಿದ್ದಾರೆ.
ಪುನೀತ್ ರಾಜಕುಮಾರ್ ಅವರ ಮೇಲೆ ಇಡೀ ಕರ್ನಾಟಕಕ್ಕೆ ಎಷ್ಟು ಪ್ರೀತಿ ಇದೆ ಎಂದರೆ ಅವರು ನಮ್ಮನ್ನೆಲ್ಲಾ ಅಗಲಿ ಹೋದ ದಿನದಿಂದ ಅಭಿಮಾನಿಗಳು ಅವರ ಮೇಲೆ ತೋರಿಸುತ್ತಿರುವ ಪ್ರೀತಿಯೇ ಸಾಕ್ಷಿ ಎನ್ನಬಹುದು. ಅಪ್ಪು ಅವರು ನಮ್ಮನ್ನೆಲ್ಲಾ ಅಗಲಿ ಏಳು ತಿಂಗಳುಗಳೇ ಕಳೆದಿವೆ. ಈ ಬಾರಿ ಪುನೀತ್ ರಾಜಕುಮಾರ್ ಅವರ ಸಮಾಧಿಯ ಬಳಿ ಪೂಜೆ ಸಲ್ಲಿಸಲು ಅಶ್ವಿನಿ ಪುನೀತ್ ರಾಜಕುಮಾರ್ ಜೊತೆಗೆ ಮಕ್ಕಳಾದ ಧೃತಿ ಮತ್ತು ವಂದನ ಹಾಗೂ ಶಿವಣ್ಣ ಮತ್ತು ರಾಘಣ್ಣನ ಪೂರ್ತಿ ಕುಟುಂಬ ಅಪ್ಪು ಅವರ ಸಮಾಧಿ ಬಳಿ ತೆರಳಿತ್ತು. ಜೊತೆಗೆ ಒಬ್ಬ ವಿಶೇಷ ಅಭಿಮಾನಿ ಕೂಡ ಹೋಗಿದ್ದಾರೆ ಯಾರೆಂದರೆ ಅಪ್ಪು ಅವರು ಸಾಕಿದ್ದ ನಾಯಿ. ಪುನೀತ್ ಅವರ ಸ’ಮಾ’ಧಿಯನ್ನು ನೋಡಿದ ತಕ್ಷಣ ಮೂರು ಸುತ್ತು ಸುತ್ತಿ ಸಮಾಧಿಯ ಎದುರು ಕೂತು ಕಣ್ಣೀರು ಹಾಕುತ್ತಿರುತ್ತದೆ ಇದನ್ನು ನೋಡಿದ ದೃತಿ ಕೂಡ ಕಣ್ಣೀರು ಹಾಕಿದ್ದಾಳೆ. ಅದಕ್ಕೆ ಹಿರಿಯರು ಹೇಳುವುದು ನಿಯತ್ತಿಗೆ ಮತ್ತೊಂದು ಹೆಸರು ಅಂದರೆ ಅದು ನಾಯಿ ಅಂತ ಈಗ ಅದು ಸಾಬೀತಾಗಿದೆ. ಈ ಮಾಹಿತಿಯನ್ನು ತಪ್ಪದೇ ಶೇರ್ ಮಾಡಿ ಮತ್ತು ಲೈಕ್ ಮಾಡಿ ನಿಮ್ಮ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದಗಳು ಸ್ನೇಹಿತರೆ