ಸಾಮಾನ್ಯವಾಗಿ ಮನೆಯಲ್ಲಿರುವಂತಹ ಪ್ರತಿಯೊಬ್ಬ ಮಹಿಳೆಯರು ಕೂಡ ಮನೆಯಲ್ಲಿ ಮಾಡುವಂತಹ ಕೆಲಸಗಳಾಗಿರಬಹುದು ಅಥವಾ ಇನ್ಯಾವುದೇ ವಸ್ತುವನ್ನು ಹೇಗೆ ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಹಲವಾರು ಕಡೆ ಹುಡುಕುತ್ತಿರುತ್ತಾರೆ. ಏಕೆ ಎಂದರೆ ಯಾವುದೇ ಕೆಲಸವನ್ನು ಹೇಗೆ ಸುಲಭವಾಗಿ ಮಾಡಬಹುದು ಹಾಗೂ ಅದು ನಮಗೆ ಹೇಗೆ ಅನುಕೂಲವಾಗುತ್ತದೆ.
ಹಾಗೂ ನಾವು ಬಿಸಾಡುವಂತಹ ವಸ್ತುವನ್ನು ಯಾವ ಕೆಲಸಕ್ಕೆ ತುಂಬಾ ಅನುಕೂಲವಾಗುವಂತೆ ಬಳಸಬಹುದು ಎನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳಬಹುದಾಗಿದೆ. ಅದೇ ರೀತಿಯಾಗಿ ಈ ದಿನ ನಾವು ಹೇಳುವಂತಹ ಮಾಹಿತಿ ಮನೆಯಲ್ಲಿರುವಂತಹ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು. ಇವುಗಳಿಂದ ಅವರು ಬಿಸಾಡುವಂತಹ ವಸ್ತುವನ್ನು ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು.
ಹಾಗೂ ಅವುಗಳನ್ನು ಮರುಬಳಕೆ ಮಾಡಿಕೊಳ್ಳುವುದರಿಂದ ನಮ್ಮ ಕೆಲಸ ಇನ್ನೂ ಸುಲಭವಾಗುತ್ತದೆ ಎಂದೇ ಹೇಳಬಹುದು. ಹಾಗಾದರೆ ಯಾವ ಕೆಲವು ವಸ್ತುಗಳನ್ನು ಬಿಸಾಡುವ ಬದಲು ಮತ್ತೆ ಮರುಬಳಕೆ ಮಾಡಿಕೊಳ್ಳಬಹುದು ಹಾಗೂ ಅವುಗಳನ್ನು ಹೇಗೆ ಯಾವ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ.
ಈ ಸುದ್ದಿ ಓದಿ:- ಹೀಗೆ ಮಾಡಿ ಸಾಕು ಎಷ್ಟೇ ಕರಟಿದ ಪಾತ್ರೆ ಮತ್ತೆ ಹೊಸತಾಗುತ್ತೆ.!
* ಮೊದಲನೆಯದಾಗಿ ಕಾಫಿ ಟೀ ಸೋಸುವಂತಹ ಜಾಲರಿ ಹೌದು ಹೆಚ್ಚು ದಿನದವರೆಗೆ ಇದನ್ನು ಉಪಯೋಗಿಸುತ್ತಾ ಬಂದರೆ ಅದು ಹಾಳಾಗುತ್ತದೆ ಆದ್ದರಿಂದ ಕೆಲವೊಬ್ಬರು ಅದನ್ನು ಬಿಸಾಡುತ್ತಾರೆ ಆದರೆ ಈ ಮಾಹಿತಿ ತಿಳಿದರೆ ನೀವು ಮತ್ತೆ ಅದನ್ನು ಮರುಬಳಕೆ ಮಾಡಿಕೊಳ್ಳುತ್ತೀರಿ. ಟೀ ಸೋಸುವಂತಹ ಜಾಲರಿ ಹಾಳಾಗಿದ್ದರೆ ಅದರ ಮಧ್ಯಭಾಗದಲ್ಲಿರುವ ಜಾಲರಿಯನ್ನು ಚಾಕುವಿನ ಸಹಾಯದಿಂದ ಕತ್ತರಿಸಿ ತೆಗೆಯಬೇಕು.
ಆನಂತರ ಅದರ ಮಧ್ಯ ಭಾಗಕ್ಕೆ ಸ್ವಲ್ಪ ಬೆಂಕಿಯನ್ನು ತಾಕಿಸಿ ಅದನ್ನು ಸ್ಟ್ಯಾಂಡ್ ರೀತಿ ಅಂದರೆ ಮೊಳಕೆ ಸಿಕ್ಕಿಸುವ ರೀತಿ ಮಾಡಿಕೊಳ್ಳಬೇಕು. ಇದನ್ನು ಒಂದು ಕಡೆ ನೇತು ಹಾಕಿ ಅದರ ಮಧ್ಯಭಾಗದಲ್ಲಿ ಇರುವಂತಹ ಜಾಗಕ್ಕೆ ಚಿಕ್ಕದಾಗಿರುವಂತಹ ಲೋಟಗಳು ಸಾಂಬಾರ್ ಸೌಟ್ ಹೀಗೆ ಇಂತಹ ವಸ್ತುಗಳನ್ನು ಅದರಲ್ಲಿ ನೇತು ಹಾಕಬಹುದು ಇದರಿಂದ ಆ ವಸ್ತುಗಳು ನಿಮಗೆ ಸುಲಭವಾಗಿ ಸಿಗುತ್ತದೆ ಹಾಗೂ ಚಿಕ್ಕ ಅಡುಗೆ ಮನೆ ಇರುವವರಿಗೆ ಸುಲಭವಾಗಿ ಕೈಗೆ ಸಿಗುವಂತೆ ವಸ್ತುಗಳನ್ನು ಇಟ್ಟುಕೊಳ್ಳ ಬಹುದು.
* ಎರಡನೆಯದಾಗಿ ಟೂತ್ ಪೇಸ್ಟ್ ಖಾಲಿಯಾದ ತಕ್ಷಣ ನಾವು ಅದನ್ನು ಆಚೆ ಹಾಕುತ್ತೇವೆ ಆದರೆ ಅದನ್ನು ಆಚೆ ಹಾಕುವುದರ ಬದಲು ನಿಮ್ಮ ಸಿಂಕ್ ನಲ್ಲಿ ಬರುವಂತಹ ನೀರನ್ನು ಕಡಿಮೆ ಪ್ರಮಾಣದಲ್ಲಿ ಉಪಯೋಗಿಸುವಂತೆ ಬಳಸಬಹುದು. ಪೇಸ್ಟ್ ಕವರ್ ಹಿಂಭಾಗವನ್ನು ಸ್ವಲ್ಪ ಕತ್ತರಿಸಿ ಅದನ್ನು ಸ್ವಚ್ಛ ಮಾಡಿ ಅದನ್ನು ನೆಲ್ಲಿಗೆ ಹಾಕಿ ನೀರನ್ನು ಆನ್ ಮಾಡಿದರೆ ಸ್ವಲ್ಪ ಪ್ರಮಾಣದಲ್ಲಿ ನೀರು ಬರುತ್ತದೆ ಇದರಿಂದ ಅತಿ ಹೆಚ್ಚು ನೀರು ಖರ್ಚಾಗುವುದಿಲ್ಲ.
ಈ ಸುದ್ದಿ ಓದಿ:- ಈ ರೀತಿ ಮಾಡಿ ಹಾಸಿಗೆಯಲ್ಲಿ ತಿಗಣೆ, ಕೆಟ್ಟವಾಸನೆ, ಮುಗ್ಗುಲು ವಾಸನೆ ಬರೋದಿಲ್ಲ.!
* ಸಾಮಾನ್ಯವಾಗಿ ಮಾರುಕಟ್ಟೆಗಳಲ್ಲಿ ಡಿಶ್ ವಾಷರ್ ಹಾಗೂ ಲಿಕ್ವಿಡ್ ಇಂತಹ ಪದಾರ್ಥಗಳನ್ನು ನಾವು ಪ್ಲಾಸ್ಟಿಕ್ ಬಾಟಲ್ ನಲ್ಲಿ ಖರೀದಿ ಮಾಡುತ್ತೇವೆ ಆದರೆ ಅವು ಖಾಲಿಯಾದ ತಕ್ಷಣ ನಾವು ಅದನ್ನು ಆಚೆ ಹಾಕುತ್ತೇವೆ ಆದರೆ ಅದರ ಮೇಲ್ಭಾಗವನ್ನು ಕತ್ತರಿಸಿ ಅದನ್ನು ಸ್ವಚ್ಛವಾಗಿ ತೊಳೆದರೆ ಒಂದು ಪ್ಲಾಸ್ಟಿಕ್ ಬೌಲ್ ರೆಡಿಯಾಗುತ್ತದೆ.
ಇದಕ್ಕೆ ನೀವು ಅಡುಗೆ ಮನೆಯಲ್ಲಿ ಉಪಯೋಗಿಸುವಂತಹ ಸೌಟ್ ಸ್ಪೂನ್ ಇವುಗಳನ್ನು ಇಡಬಹುದು ಅಥವಾ ಬೆಳ್ಳುಳ್ಳಿ ಹಸಿಮೆಣಸಿನಕಾಯಿ ಹೀಗೆ ಇಂತಹ ವಸ್ತುಗಳನ್ನು ಇಡಬಹುದು ಅಥವಾ ಸ್ಟಡಿ ಟೇಬಲ್ ಮೇಲೆ ಇಟ್ಟುಕೊಂಡು ಅದರಲ್ಲಿ ಪೆನ್ನು ಪೆನ್ಸಿಲ್ ರಬ್ಬರ್ ಹೀಗೆ ಅಲ್ಲಿ ಇರುವಂತಹ ಹಲವಾರು ರೀತಿಯ ವಸ್ತುಗಳನ್ನು ಅದರೊಳಗೆ ಇಟ್ಟು ಸುಲಭವಾಗಿ ಉಪಯೋಗಿಸಬಹುದು. ಹಾಗೂ ಎಲ್ಲವೂ ಕೂಡ ಒಂದೇ ಸ್ಥಳದಲ್ಲಿ ಸಿಗುತ್ತದೆ ಇದು ನಿಮಗೆ ತುಂಬಾ ಅನುಕೂಲವಾಗುತ್ತದೆ.
* ಅಡುಗೆ ಮನೆಯಲ್ಲಿರುವಂತಹ ಬಾಣಲಿ ಎಣ್ಣೆಯಲ್ಲಿ ಕಾದು ಕೆಳಭಾಗದಲ್ಲಿ ಕಪ್ಪಾಗಿರುತ್ತದೆ ಅದನ್ನು ಸ್ವಚ್ಛ ಮಾಡುವುದಕ್ಕೆ ಒಂದು ಗಾಜಿನ ಬಟ್ಟಲಿನಲ್ಲಿ ಒಂದು ಚಮಚ ಹಾರ್ಪಿಕ್ ಒಂದು ಚಮಚ ಉಪ್ಪು ಹಾಗೂ ಒಂದು ಚಮಚ ವಿನಿಗರ್ ಹಾಗೂ ಒಂದು ಚಮಚ ಅಡುಗೆ ಸೋಡಾ ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.
ಆನಂತರ ಈ ಒಂದು ಮಿಶ್ರಣವನ್ನು ಬಾಣಲೆಗೆ ಹಚ್ಚಿ ಅದರ ಮೇಲೆ ಒಂದು ಪೇಪರ್ ಅನ್ನು ಹಾಕಿ 5 ರಿಂದ 10 ನಿಮಿಷ ಹಾಗೆ ಬಿಡಬೇಕು ಆನಂತರ ಒಂದು ಸ್ಯಾಂಡ್ ಪೇಪರ್ ತೆಗೆದುಕೊಂಡು ಅದಕ್ಕೆ ಲಿಕ್ವಿಡ್ ಹಾಕಿ ಅದರಿಂದ ಬಾಣಲೆಯನ್ನು ಉಜ್ಜಬೇಕು ಈ ರೀತಿ ಉಜ್ಜುವುದರಿಂದ ಬಾಣಲೆಯಲ್ಲಿ ಇರುವಂತಹ ಎಲ್ಲಾ ಕಪ್ಪು ಬಣ್ಣ ಹಾಗೂ ಜಿಡ್ಡಿನ ಅಂಶ ಎಲ್ಲವೂ ಕೂಡ ಸಂಪೂರ್ಣವಾಗಿ ಹೋಗುತ್ತದೆ.