ಅಡುಗೆ ಮನೆಯಲ್ಲಿ ಎಷ್ಟೇ ಎಚ್ಚರಿಕೆ ಇಟ್ಟರೂ ಕೂಡ ನಾವು ಪಾತ್ರೆಗಳಲ್ಲಿ ಇಟ್ಟಂತಹ ಹಾಲು ಸಾಂಬಾರ್ ಹೇಗೆ ಮಸಾಲೆ ಭರಿತ ಪದಾರ್ಥಗಳು ಸೀದು ಹೋಗುತ್ತದೆ ಅಂದರೆ ಆ ಎಲ್ಲ ಪದಾರ್ಥಗಳು ಕೆಳಭಾಗದಲ್ಲಿ ಗಟ್ಟಿಯಾಗಿರುತ್ತದೆ ಆದರೆ ಹೆಚ್ಚಿನ ಜನ ಇಂತಹ ಪಾತ್ರೆಗಳನ್ನು ಮತ್ತೆ ಉಪಯೋಗಿಸಲು ಸಾಧ್ಯವಿಲ್ಲ ಎಂದು ಅದನ್ನು ಉಪಯೋಗಿಸದೆ ಹಾಗೆ ಇಟ್ಟಿರುತ್ತಾರೆ.
ಆದರೆ ಈ ರೀತಿ ಕರಟಿದ ಪಾತ್ರೆಯನ್ನು ಮತ್ತೆ ಮರುಬಳಕೆ ಮಾಡಬಹುದು ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕರಟಿದ ಪಾತ್ರೆಯನ್ನು ಹೇಗೆ ಸ್ವಚ್ಛಗೊಳಿಸುವುದು ಹಾಗೂ ಅದನ್ನು ಸ್ವಚ್ಛಗೊಳಿಸುವುದಕ್ಕೆ ಯಾವ ವಿಧಾನ ಅನುಸರಿಸ ಬೇಕಾಗುತ್ತದೆ ಹಾಗೂ ಯಾವ ಪ್ರಮುಖವಾದ ಪದಾರ್ಥ ಬೇಕಾಗುತ್ತದೆ ಎನ್ನುವ ಮಾಹಿತಿಯನ್ನು ಈ ದಿನ ತಿಳಿಯೋಣ.
ಸಾಮಾನ್ಯವಾಗಿ ಯಾವುದೇ ರೀತಿಯ ಕರ್ರಿ ಅಥವಾ ಮಸಾಲೆ ಭರಿತ ಪದಾರ್ಥಗಳನ್ನು ನಾವು ಸ್ಟೀಲ್ ಪಾತ್ರೆಗಳಲ್ಲಿ ಮಾಡುತ್ತಿರುತ್ತೇವೆ ಹಾಗೂ ಕೆಲವೊಂದಷ್ಟು ಜನ ಕಾಫಿ, ಟೀ ಮುಂತಾದ ಪದಾರ್ಥಗಳನ್ನು ಸ್ಟೀಲ್ ಪಾತ್ರೆಗಳಲ್ಲಿ ಮಾಡುತ್ತಿರುತ್ತಾರೆ ಕೆಲವೊಮ್ಮೆ ಅವರು ಅದನ್ನು ಇಟ್ಟಿರುವುದನ್ನು ಮರೆತು ಬೇರೆ ಕಡೆ ಕೆಲಸ ಮಾಡುತ್ತಿರುತ್ತಾರೆ.
ಈ ಸುದ್ದಿ ಓದಿ:- ತೆಂಗಿನಕಾಯಿ ಚಿಪ್ಪಿನಿಂದ ಎಷ್ಟೆಲ್ಲಾ ಉಪಯೋಗಗಳಿವೆ ನೋಡಿ.!
ಆದರೆ ಅದು ಸಂಪೂರ್ಣವಾಗಿ ಆವಿಯಾಗಿ ಪಾತ್ರೆಯಲ್ಲಿ ಒಂದು ರೀತಿಯ ಮಸಿಯ ರೀತಿ ಕೆಳಭಾಗದಲ್ಲಿ ಇರುತ್ತದೆ. ಆದರೆ ಅದನ್ನು ಹೋಗಲಾಡಿಸಲು ಸಾಧ್ಯವಿಲ್ಲ ಅದು ಸಂಪೂರ್ಣವಾಗಿ ಹೋಗುವುದಿಲ್ಲ ಎಂದು ಕೆಲವೊಂದು ಅಷ್ಟು ಜನ ತಿಳಿದುಕೊಂಡಿದ್ದಾರೆ. ಆದರೆ ಅದು ತಪ್ಪು ಈಗ ನಾವು ಹೇಳುವಂತಹ ಈ ಒಂದು ವಿಧಾನವನ್ನು ನೀವು ಅನುಸರಿಸುವುದರಿಂದ ಎಷ್ಟೇ ರೀತಿಯ ಕರಟಿದ ಪಾತ್ರೆ ಇದ್ದರೂ ಅದನ್ನು ಸಂಪೂರ್ಣವಾಗಿ ದೂರ ಮಾಡಬಹುದು.
ಹಾಗಾದರೆ ಅದನ್ನು ಹೇಗೆ ದೂರ ಮಾಡುವುದು ಯಾವ ಪದಾರ್ಥವನ್ನು ಉಪಯೋಗಿಸಬೇಕು ಎಂದು ಈ ಕೆಳಗೆ ತಿಳಿಯೋಣ. ಮೊದಲು ಕರಟಿದ ಪಾತ್ರೆಗೆ ಸಂಪೂರ್ಣವಾಗಿ ನೀರನ್ನು ತುಂಬಿಸಿ ಅದನ್ನು ಸ್ಟವ್ ಮೇಲೆ ಬಿಸಿಯಾಗಲು ಇಡಬೇಕು ಆನಂತರ ಅದಕ್ಕೆ ಎರಡರಿಂದ ಮೂರು ಚಮಚ ಸರ್ಫ್ ಎಕ್ಸೆಲ್ ಪೌಡರ್ ಅನ್ನು ಹಾಕಿ ಚೆನ್ನಾಗಿ ಬಿಸಿ ಮಾಡಬೇಕು.
ಆ ನೀರು ಕೊತಕೊತ ಕುದಿಯಬೇಕು ಆನಂತರ ಕಡಿಮೆ ಮಾಡಬೇಕು ಹೀಗೆ ಎರಡರಿಂದ ಮೂರು ನಿಮಿಷ ಮಾಡಿ ಅದು ತಣ್ಣಗಾಗಲು ಬಿಡಬೇಕು. ಆನಂತರ ಅದನ್ನು ಒಂದು ಪಾತ್ರೆಗೆ ಚೆಲ್ಲಿ ಮತ್ತೆ ಒಂದು ಸ್ಕ್ರಬ್ಬರ್ ಗೆ ವಿಮ್ ಲಿಕ್ವಿಡ್ ಹಾಕಿ ಚೆನ್ನಾಗಿ ಉಜ್ಜಬೇಕು ಈ ರೀತಿ ಮಾಡುವುದರಿಂದ ಎಷ್ಟೇ ಕರಟಿದ ಪಾತ್ರೆ ಇದ್ದರೂ ಅದು ಸಂಪೂರ್ಣವಾಗಿ ಸ್ವಚ್ಛವಾಗುತ್ತದೆ.
ಈ ಸುದ್ದಿ ಓದಿ:-ಕೇವಲ 10 ನಿಮಿಷದಲ್ಲಿ ಫ್ರಿಡ್ಜ್ ಕ್ಲೀನ್ ಮಾಡುವ ಸುಲಭ ವಿಧಾನ.!
ಕೊನೆಯಲ್ಲಿ ಅಲ್ಪ ಸ್ವಲ್ಪ ಇದ್ದರೆ ಅದನ್ನು ಸ್ಟೀಲ್ ಸ್ಕ್ರಬ್ಬರ್ ಇಂದ ವಿಮ್ ಲಿಕ್ವಿಡ್ ಹಾಕಿ ಚೆನ್ನಾಗಿ ಉಜ್ಜಿ ತೊಳೆದರೆ ಸಾಕು ಆ ಪಾತ್ರೆಯಲ್ಲಿ ಇರುವಂತಹ ಎಲ್ಲಾ ಅಂಶವೂ ದೂರವಾಗುತ್ತದೆ. ಆನಂತರ ನೀವು ಆ ಪಾತ್ರೆಯನ್ನು ಮರುಬಳಕೆ ಮಾಡಬಹುದು ಹಾಗೂ ಅದು ಸಂಪೂರ್ಣವಾಗಿ ಹೊಸ ಪಾತ್ರೆಯಾಗಿ ಬದಲಾಗಿರುತ್ತದೆ ಎಂದೇ ಹೇಳಬಹುದು.
ಈ ಮಾಹಿತಿಯನ್ನು ಪ್ರತಿಯೊಬ್ಬ ಮಹಿಳೆಯರು ತಿಳಿದುಕೊಳ್ಳುವುದರಿಂದ ನಿಮ್ಮ ಅಡುಗೆ ಮನೆಯಲ್ಲಿ ಇರುವಂತಹ ಇಂತಹ ಯಾವುದೇ ರೀತಿಯ ಪಾತ್ರೆಗಳನ್ನು ನೀವು ಸುಲಭವಾಗಿ ಸ್ವಚ್ಚ ಮಾಡಬಹುದು ಹಾಗೂ ಯಾವುದೇ ರೀತಿಯ ಹೆಚ್ಚಿನ ಹಣಕಾಸಿನ ಖರ್ಚಾಗುವುದಿಲ್ಲ ಜೊತೆಗೆ ಕಡಿಮೆ ಸಮಯದಲ್ಲಿ ಸುಲಭವಾಗಿ ಇದನ್ನು ಸ್ವಚ್ಛ ಮಾಡಬಹುದು ಇದರಿಂದ ನೀವು ಆ ಪಾತ್ರೆಯನ್ನು ಎಸೆಯುವ ಅವಶ್ಯಕತೆ ಇಲ್ಲ ಎಂದೇ ಹೇಳಬಹುದು.