ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡ ಫ್ರಿಡ್ಜ್ ಇದ್ದೇ ಇರುತ್ತದೆ. ಆದರೆ ಅವರಿಗೆ ಅದನ್ನು ಹೇಗೆ ಕ್ಲೀನ್ ಮಾಡುವುದು ಎನ್ನುವಂತಹ ಮಾಹಿತಿ ತಿಳಿದಿರುವುದಿಲ್ಲ. ಆದರೆ ಕೆಲವೊಂದಷ್ಟು ಜನ ಅದನ್ನು ಸುಲಭವಾಗಿ ಕ್ಲೀನ್ ಮಾಡುತ್ತಾರೆ ಇನ್ನು ಕೆಲವೊಂದಷ್ಟು ಜನರಿಗೆ ಅದರ ಬಳಕೆ ತಿಳಿದಿರುವುದಿಲ್ಲ. ಅಂತವರು ಈ ದಿನ ನಾವು ಹೇಳುವಂತಹ ಮಾಹಿತಿ ಯನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ.
ಏಕೆಂದರೆ ಹೆಚ್ಚಿನ ದಿನಗಳವರೆಗೆ ಬಾಳಿಕೆಗೆ ಬರಬೇಕು ಯಾವುದೇ ರೀತಿಯ ಸಮಸ್ಯೆ ಉಂಟಾಗಬಾರದು ಎಂದರೆ ಈಗ ನಾವು ಹೇಳುವ ಕೆಲವೊಂದಷ್ಟು ಟಿಪ್ಸ್ ಗಳನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ. ಹಾಗಾದರೆ ಈ ದಿನ ಫ್ರಿಡ್ಜ್ ಅನ್ನು ಹೇಗೆ 10 ನಿಮಿಷದಲ್ಲಿಯೇ ಕ್ಲೀನ್ ಮಾಡಬಹುದು.
ಈ ಸುದ್ದಿ ಓದಿ:- ನಮ್ಮ ಜಾತಕವನ್ನು ನಾವೇ ಹೇಗೆ ನೋಡುವ ಸುಲಭ ವಿಧಾನ ಇಲ್ಲಿದೆ ನೋಡಿ.!
ಹಾಗೂ ಯಾವ ಕೆಲವು ಪದಾರ್ಥವನ್ನು ಉಪಯೋಗಿಸುವುದರಿಂದ ಫ್ರಿಡ್ಜ್ ಅನ್ನು ಸುಲಭವಾಗಿ ಕ್ಲೀನ್ ಮಾಡಬಹುದು ಎನ್ನುವಂತಹ ಮಾಹಿತಿಯನ್ನು ಈ ದಿನ ತಿಳಿಯೋಣ. ಅದಕ್ಕೂ ಮೊದಲು ಸಂಪೂರ್ಣವಾಗಿ ಫ್ರಿಡ್ಜ್ಅನ್ನು ಹಾಗೂ ಅದರಲ್ಲಿರುವಂತಹ ಎಲ್ಲಾ ಡಿವೈಡರ್ ಗಳನ್ನು ಆಚೆ ತೆಗೆಯಬೇಕು.
ಆನಂತರ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಳ್ಳಬೇಕು ಅದಕ್ಕೆ ಎರಡು ಚಮಚ ವಿನೆಗರ್ ಹಾಗೂ ಒಂದು ಚಮಚ ಅಡುಗೆ ಸೋಡವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಕೊಳ್ಳಬೇಕು. ಆ ನಂತರ ಈ ನೀರಿನ ಮಿಶ್ರಣವನ್ನು ಒಂದು ಸ್ಪ್ರೇ ಬಾಟಲ್ ನಲ್ಲಿ ಹಾಕಿ ಅದನ್ನು ಫ್ರಿಜ್ ಎಲ್ಲಾ ಭಾಗಗಳಿಗೂ ಸ್ಪ್ರೇ ಮಾಡಬೇಕು ಆನಂತರ 5 ರಿಂದ 10 ನಿಮಿಷ ಹಾಗೆ ಬಿಡಬೇಕು.
ನಂತರ ಒಂದು ಕಾಟನ್ ಬಟ್ಟೆಯ ಸಹಾಯದಿಂದ ಸಂಪೂರ್ಣವಾಗಿ ಎಲ್ಲವನ್ನು ಸ್ವಚ್ಛ ಮಾಡಿಕೊಳ್ಳಬೇಕು ಹಾಗೂ ಆ ಡಿವೈಡರ್ ಗಳಲ್ಲಿ ಇರುವಂತಹ ಕೊಳೆಯನ್ನು ತೆಗೆಯು ವುದಕ್ಕೆ ಹಳೆದಾಗಿರುವಂತಹ ಒಂದು ಬ್ರಷ್ ತೆಗೆದುಕೊಂಡು ಉಜ್ಜಿದರೆ ಸಾಕು ಅದರಲ್ಲಿ ಇರುವಂತಹ ಕೊಳೆ ಸಂಪೂರ್ಣವಾಗಿ ಆಚೆ ಬರುತ್ತದೆ.
ಈ ಸುದ್ದಿ ಓದಿ:- 10 ವರ್ಷದ ಹಳೆಯ ಕುಕ್ಕರ್ ಆಗಿದ್ದರೂ ಮತ್ತೆ ಹೊಸದರಂತೆ ಕಾಣುವ ಹಾಗೆ ಮಾಡಬಹುದು, ಈ ಸಿಂಪಲ್ ಟ್ರಿಕ್ ಉಪಯೋಗಿಸಿ…
ಅದೇ ರೀತಿಯಾಗಿ ಇನ್ನೂ ಕೆಲವೊಂದಷ್ಟು ಜನ ಫ್ರಿಡ್ಜ್ ನಲ್ಲಿ ಯಾವುದೇ ರೀತಿಯ ಪದಾರ್ಥವನ್ನು ಹೇಗೆ ಇಟ್ಟರೂ ಫ್ರಿಜ್ ವಾಸನೆ ಬರುತ್ತಿರುತ್ತದೆ ಎಂದು ಹೇಳುತ್ತಿರುತ್ತಾರೆ. ಆದರೆ ಅದಕ್ಕೆ ಕಾರಣ ಏನು ಎಂದರೆ ಫ್ರಿಡ್ಜ್ ಡೋರ್ ನಲ್ಲಿ ಒಂದು ರೀತಿಯ ಇನ್ಸುಲೇಟರ್ ಇರುತ್ತದೆ ಅದನ್ನು ಕೈ ಹಾಕಿ ಸುಲಭವಾಗಿ ತೆಗೆಯಬಹುದು ಆನಂತರ ಅದರ ಒಳಭಾಗದಲ್ಲಿ ಲೇಯರ್ ರೀತಿಯ ಎರಡರಿಂದ ಮೂರು ಭಾಗ ಇರುತ್ತದೆ ಅದರ ಒಳಗಡೆ ಹೆಚ್ಚಿನ ಕೊಳೆ ಇರುತ್ತದೆ.
ಅದನ್ನು ಕೈ ಹಾಕಿ ಸ್ವಚ್ಛ ಮಾಡಲು ಸಾಧ್ಯವಾಗುವುದಿಲ್ಲ ಅದನ್ನು ಸ್ವಚ್ಛ ಮಾಡುವುದಕ್ಕೆ ಒಂದು ಫೋರ್ಕ್ ಸ್ಪೂನ್ ತೆಗೆದುಕೊಂಡು ಅದರ ಮುಂಭಾಗಕ್ಕೆ ಚಿಕ್ಕದಾಗಿರುವಂತಹ ಕಾಟನ್ ಬಟ್ಟೆಯನ್ನು ಹಾಕಿ ಅದರ ಒಳಗಡೆ ಹಾಕಿ ಸ್ವಚ್ಛವಾಗಿ ಕ್ಲೀನ್ ಮಾಡಬಹುದು. ಈ ರೀತಿ ಮಾಡುವು ದರಿಂದ ಅದರ ಒಳಗಡೆ ಇರುವಂತಹ ಸಣ್ಣಪುಟ್ಟ ಕೊಳೆ ಧೂಳು ಇದ್ದರೆ ಅದು ಸಂಪೂರ್ಣವಾಗಿ ಆಚೆ ಬರುತ್ತದೆ.
ಈ ಸುದ್ದಿ ಓದಿ:- ಬಂತು ನೋಡಿ ಮಿನಿ ಮ್ಯಾಜಿಕ್ ಏರ್ ಕೂಲರ್ ಕೇವಲ 1300 ಕ್ಕೆ ಸಿಗುತ್ತೆ.! ಕರೆಂಟ್, ಪವರ್ ಬಂಕ್ 2 ರಲ್ಲೂ ರನ್ ಮಾಡಬಹುದು ಬೇಸಿಗೆ ಕಾಲಕ್ಕೆ ರಿಲೀಫ್ ನೀಡುತ್ತೆ
ಈ ರೀತಿ ಮಾಡುವುದರಿಂದ ನಿಮಗೆ ಕಷ್ಟವಾಗಿರುವಂತಹ ಕೆಲಸ ಬಹಳ ಸುಲಭವಾಗಿ ಆಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ಕೂಡ ಫ್ರಿಜ್ ಅನ್ನು ಹೇಗೆ ಕ್ಲೀನ್ ಮಾಡಬೇಕು ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯವಾಗಿರುತ್ತದೆ. ಜೊತೆಗೆ ಸಣ್ಣಪುಟ್ಟ ವಿಚಾರಗಳನ್ನು ಸಹ ತಿಳಿದುಕೊಳ್ಳುವುದು ಬಹಳ ಮುಖ್ಯ ಇಲ್ಲವಾದರೆ ನಿಮ್ಮ ಫ್ರಿಡ್ಜ್ ಕಡಿಮೆ ದಿನಗಳಲ್ಲಿಯೇ ಕೆಟ್ಟು ಹೋಗುವ ಸಾಧ್ಯತೆ ಇರುತ್ತದೆ ಆದ್ದರಿಂದ ಇಂತಹ ಮಾಹಿತಿಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ.