ಪ್ರತಿಯೊಬ್ಬ ಮಹಿಳೆಗೂ ಕೂಡ ತಾನು ಇರುವಂತಹ ಸುತ್ತಮುತ್ತಲಿನ ಜಾಗ ಹಾಗೂ ತಾನು ದಿನನಿತ್ಯ ಬಳಸುವಂತಹ ವಸ್ತು ಆಗಿರಬಹುದು ಅಥವಾ ಇನ್ಯಾವುದೇ ಆಗಿರಬಹುದು ಎಲ್ಲವೂ ಕೂಡ ಸ್ವಚ್ಛವಾಗಿರಬೇಕು ಎಂಬ ಆಸೆ ಅವಳಲ್ಲಿ ಇರುತ್ತದೆ. ಆದರೆ ಕೆಲವೊಮ್ಮೆ ಆ ವಸ್ತುಗಳನ್ನು ಎಷ್ಟೇ ಶುದ್ಧವಾಗಿ ಮಾಡಿದರು ಕೂಡ ಅದು ಸ್ವಲ್ಪ ದಿನಗಳಲ್ಲಿಯೇ ತಮ್ಮ ಶುದ್ಧತೆಯನ್ನು ಕಳೆದುಕೊಳ್ಳುತ್ತದೆ.
ಅದೇ ರೀತಿಯಾಗಿ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಯೊಬ್ಬ ಮಹಿಳೆಗೂ ಕೂಡ ಮನೆಯಲ್ಲಿ ದೇವರ ಪೂಜೆ ಮಾಡುವ ಅಭ್ಯಾಸ ಇದ್ದೇ ಇರುತ್ತದೆ. ಅದೇ ರೀತಿ ದೇವರ ಪೂಜೆಯನ್ನು ಮಾಡುವಂತಹ ಬೆಳ್ಳಿ ಹಿತ್ತಾಳೆ ಕಂಚು ತಾಮ್ರದ ಪಾತ್ರೆಗಳು ಅಷ್ಟೇ ಸ್ವಚ್ಛವಾಗಿರುವುದು ಕೂಡ ಬಹಳ ಮುಖ್ಯವಾಗಿರುತ್ತದೆ.
ಆದ್ದರಿಂದ ಮನೆಯಲ್ಲಿರುವಂತಹ ಮಹಿಳೆಯರು ದೇವರ ಪೂಜೆಯಲ್ಲಿ ಬಳಸುವಂತಹ ಪ್ರತಿಯೊಂದು ವಸ್ತುವನ್ನು ಕೂಡ ಶುಭ್ರವಾಗಿ ಇಟ್ಟು ಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೆ. ಆದರೆ ಅದು ಕೆಲವೊಮ್ಮೆ ಸಫಲವಾಗುತ್ತದೆ ಮತ್ತೊಮ್ಮೆ ವಿಫಲವಾಗುತ್ತದೆ ಅಂದರೆ ಅವರು ಎಷ್ಟೇ ಸ್ವಚ್ಛವಾಗಿ ತೊಳೆದರೂ ಕೂಡ ಸ್ವಲ್ಪ ದಿನದಲ್ಲಿಯೇ ಅದು ತನ್ನ ಸ್ವಚ್ಛತೆಯನ್ನು ಕಳೆದುಕೊಳ್ಳುತ್ತದೆ.
ಈ ಸುದ್ದಿ ಓದಿ:- ತಪ್ಪಿಯೂ ಈ 10 ಆಹಾರಗಳನ್ನು ಫ್ರಿಡ್ಜ್ ನಲ್ಲಿ ಇಡಬೇಡಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ.!
ಆದರೆ ಈ ದಿನ ನಾವು ಹೇಳುವಂತಹ ಈ ವಿಧಾನವನ್ನು ಅನುಸರಿಸಿದರೆ ನೀವು ಯಾವುದೇ ಶ್ರಮ ಪಡದೆ ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ಖರ್ಚಿನಲ್ಲಿ ನೀವು ಈ ಒಂದು ಸರಳ ಉಪಾಯವನ್ನು ಅಂದರೆ ಸರಳ ವಿಧಾನವನ್ನು ಅನುಸರಿಸ ಬಹುದು. ಈ ವಿಧಾನ ಅನುಸರಿಸಿದರೆ ನಿಮ್ಮ ದೇವರ ಮನೆಯ ಪ್ರತಿಯೊಂದು ಬೆಳ್ಳಿ ತಾಮ್ರ ಹಿತ್ತಾಳೆ ಪಾತ್ರೆಗಳನ್ನು ಶುಭ್ರವಾಗಿ ಮಾಡಬಹುದು.
ಹಾಗಾದರೆ ದೇವರ ಮನೆಯಲ್ಲಿ ಉಪಯೋಗಿಸುವಂತಹ ಈ ವಸ್ತುಗಳನ್ನು ಹೇಗೆ ಸುಲಭವಾಗಿ ಮಾಡಬಹುದು ಹಾಗೂ ಯಾವುದೆಲ್ಲ ಪದಾರ್ಥಗಳನ್ನು ಉಪಯೋಗಿಸುವುದರ ಮೂಲಕ ಇವುಗಳನ್ನು ಸ್ವಚ್ಛ ಮಾಡಬಹುದು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ದಿನ ತಿಳಿದುಕೊಳ್ಳುತ್ತಾ ಹೋಗೋಣ.
ಅದಕ್ಕೂ ಮೊದಲು ಪ್ರತಿಯೊಬ್ಬ ಮಹಿಳೆಯರು ಕೂಡ ಮಾರುಕಟ್ಟೆಗಳಲ್ಲಿ ಸಿಗುವಂತಹ ಹಲವಾರು ಕೆಮಿಕಲ್ ಪದಾರ್ಥಗಳನ್ನು ಉಪಯೋಗಿಸಿ ದೇವರ ಪಾತ್ರೆಗಳನ್ನು ತೊಳೆಯುತ್ತಿರುತ್ತಾರೆ. ಆದರೆ ಅದು ಬಹಳ ಅಪಾಯಕಾರಿ ಎಂದೇ ಹೇಳಬಹುದು. ಹೇಗೆ ಎಂದರೆ ಅವುಗಳಲ್ಲಿ ಪಾತ್ರೆಗಳನ್ನು ತೊಳೆದರೆ ಪಾತ್ರೆಗಳು ತಮ್ಮ ಗುಣಮಟ್ಟವನ್ನು ಕಳೆದುಕೊಳ್ಳುವುದರ ಜೊತೆಗೆ ಅವುಗಳ ಬೆಲೆಯನ್ನು ಕಳೆದುಕೊಳ್ಳಬಹುದು.
ಈ ಸುದ್ದಿ ಓದಿ:-ಬಂತು ನೋಡಿ ಮಿನಿ ಮ್ಯಾಜಿಕ್ ಏರ್ ಕೂಲರ್ ಕೇವಲ 1300 ಕ್ಕೆ ಸಿಗುತ್ತೆ.! ಕರೆಂಟ್, ಪವರ್ ಬಂಕ್ 2 ರಲ್ಲೂ ರನ್ ಮಾಡಬಹುದು ಬೇಸಿಗೆ ಕಾಲಕ್ಕೆ ರಿಲೀಫ್ ನೀಡುತ್ತೆ
ಆದರೆ ಈಗ ನಾವು ಹೇಳುವ ಈ ವಿಧಾನ ಇದು ಯಾವುದೇ ರೀತಿಯ ತೊಂದರೆಯನ್ನು ಉಂಟು ಮಾಡುವುದಿಲ್ಲ. ಆದ್ದರಿಂದ ಈ ಒಂದು ವಿಧಾನ ಬಹಳ ಉತ್ತಮ ಎಂದೇ ಹೇಳಬಹುದು ಈ ಒಂದು ವಿಧಾನ ಮಾಡುವುದಕ್ಕೆ ಬೇಕಾಗುವಂತಹ ಪದಾರ್ಥಗಳು
* ಒಂದು ಚಮಚ ಅಡುಗೆ ಉಪ್ಪು
* ಒಂದು ಚಮಚ ನಿಂಬೆ ಉಪ್ಪು
* ಒಂದು ಚಮಚ ವಿಂ ಲಿಕ್ವಿಡ್
ಇಷ್ಟನ್ನು ಒಂದು ಅಗಲವಾದ ಪಾತ್ರೆಯಲ್ಲಿ ನೀರನ್ನು ಹಾಕಿ ಅದಕ್ಕೆ ಇಷ್ಟು ಪದಾರ್ಥವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಆನಂತರ ಇವೆಲ್ಲವೂ ಕರಗಿದ ಮೇಲೆ ಹಿತ್ತಾಳೆ, ತಾಮ್ರ, ಬೆಳ್ಳಿ, ಕಂಚು ಹೀಗೆ ಎಲ್ಲಾ ಪಾತ್ರೆಗಳನ್ನು ಸಹ ಈ ನೀರಿನಲ್ಲಿ ಒಮ್ಮೆ ಹಾಕಿ ತೊಳೆದರೆ ಸಾಕು.
ಅವುಗಳಲ್ಲಿ ಇರುವಂತಹ ಕೊಳೆ ಅಂಶ ಹಾಗೂ ಬೆಳ್ಳಿ ಅರಿಶಿಣ ಕುಂಕುಮದ ಬಟ್ಟಲಿನಲ್ಲಿ ಇರುವಂತಹ ಕುಂಕುಮದ ಬಣ್ಣ ಹಾಗೂ ಅರಿಶಿನದ ಬಣ್ಣ ಹೀಗೆ ಎಲ್ಲಾ ರೀತಿಯ ಕೊಳೆಗಳು ಸಹ ಸಂಪೂರ್ಣವಾಗಿ ಹೋಗುತ್ತದೆ. ಯಾವುದೇ ರೀತಿಯ ಶ್ರಮಪಡುವ ಹಾಗೂ ಉಜ್ಜಿ ತಿಕ್ಕುವ ಅವಶ್ಯಕತೆ ಇಲ್ಲ. ಆದ್ದರಿಂದ ಪ್ರತಿಯೊಬ್ಬರೂ ಈ ವಿಧಾನ ಅನುಸರಿಸುವುದು ಉತ್ತಮ.