Friday, June 9, 2023
HomePublic Vishyaದೇವರನ್ನೇ ಪರೀಕ್ಷೆ ಮಾಡಲು ಮಧ್ಯರಾತ್ರಿ ದೇವಾಲಯಕ್ಕೆ ನುಗ್ಗಿದ ಹುಡುಗಿ ನಂತರ ಆಗಿದ್ದೇನು ಗೊತ್ತ.? ನಿಜಕ್ಕೂ ಬೆಚ್ಚಿ...

ದೇವರನ್ನೇ ಪರೀಕ್ಷೆ ಮಾಡಲು ಮಧ್ಯರಾತ್ರಿ ದೇವಾಲಯಕ್ಕೆ ನುಗ್ಗಿದ ಹುಡುಗಿ ನಂತರ ಆಗಿದ್ದೇನು ಗೊತ್ತ.? ನಿಜಕ್ಕೂ ಬೆಚ್ಚಿ ಬಿಳ್ತೀರಾ.

 

ಈಗಿನ ಕಾಲದಲ್ಲಿ ಪ್ರತಿಯೊಂದನ್ನು ಕೂಡ ವೈಜ್ಞಾನಿಕ ದೃಷ್ಟಿಕೋನದಿಂದ ತರ್ಕ ಮಾಡಿ ನೋಡುತ್ತೇವೆ. ನಡೆಯುತ್ತಿರುವ ಎಲ್ಲವೂ ಕೂಡ ವಿಜ್ಞಾನದ ಕಾರಣದಿಂದಲೇ ನಡೆಯುತ್ತಿದೆ ಎನ್ನುವುದನ್ನು ನಂಬುತ್ತೇವೆ. ಆದರೆ ಇವುಗಳ ಹಿಂದೆ ಒಂದು ಕಾಣದ ಶಕ್ತಿ ಇದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇದನ್ನೇ ಕೆಲವರು ದೇವರು ಎಂದು ಕರೆದಿದ್ದಾರೆ. ಆದರೆ ದೇವರು ಮತ್ತು ದೇವರ ಪವಾಡಗಳನ್ನು ನಂಬದ ಅನೇಕರು ನಮ್ಮ ನಡುವೆ ಇದ್ದಾರೆ.

ದೇವರೇ ಇಲ್ಲ ಎಂದು ವಾದ ಮಾಡುತ್ತಾ ಪರೀಕ್ಷೆ ಮಾಡಲು ಹೋಗುತ್ತಾರೆ. ಹೀಗೆ ಒಬ್ಬಾಕೆ ದೇವರನ್ನು ಪರೀಕ್ಷಿಸಲು ಹೋಗಿದ್ದಕ್ಕೆ ಶಿಕ್ಷೆಗೂ ಒಳಗಾಗಿದ್ದಾರೆ. ರಾಜಸ್ಥಾನದ ಉದಯಪುರ ಎನ್ನುವಲ್ಲಿ ಪ್ರಿಯಾಂಕ ಎನ್ನುವ ಒಂದು ಹುಡುಗಿ ಇದ್ದಳು. ಆಕೆ ಬಾಲ್ಯದಿಂದಲೂ ಕೂಡ ಕಾನ್ವೆಂಟ್ ಅಲ್ಲಿ ಓದಿದ್ದರಿಂದ ಆಕೆಗೆ ಹಿಂದೂ ದೇವರ ಬಗ್ಗೆ, ದೇವರ ಶಕ್ತಿಯ ಬಗ್ಗೆ ಅಷ್ಟೊಂದು ನಂಬಿಕೆ ಇರಲಿಲ್ಲ. ಆಕೆ ಪ್ರತಿಯೊಂದನ್ನು ಕೂಡ ವಿಜ್ಞಾನದ ದೃಷ್ಟಿಯಿಂದ ನೋಡುತ್ತಿರುತ್ತಾಳೆ.

ಯಾವುದಾದರೂ ಪವಾಡಗಳ ನಡೆದಾಗ ಅದಕ್ಕೆ ವಿಜ್ಞಾನವೇ ಕಾರಣ ಎಂದು ಸಮಾಜಾಯಿಷಿ ಕೊಡುತ್ತಿರುತ್ತಾರೆ. ಒಮ್ಮೆ ಅವಳ ಮನೆ ಹತ್ತಿರದ ದೇವರಲ್ಲಿ ನಂದಿ ವಿಗ್ರಹ ಹಾಲು ಕುಡಿಯುತ್ತಿದೆ ಎನ್ನುವ ಸುದ್ದಿ ಪ್ರಚಾರ ಆದಾಗ ಅದು ಪವಾಡವಲ್ಲ ವಿಗ್ರಹದಲ್ಲಿರುವ ರಂಧ್ರಗಳಿಂದ ಹೀಗಾಗುತ್ತದೆ ಎಂದು ಲೇವಡಿ ಮಾಡಿ ನಗುತ್ತಾಳೆ. ಅದರಿಂದ ಕೋಪಗೊಂಡ ಹಿರಿಯರೊಬ್ಬರು ದೇವರನ್ನು ಸದಾ ಕಾಲ ಅವಳೇಹನ ಮಾಡುತ್ತೀಯಲ್ಲಾ ನಿನಗೆ ಧೈರ್ಯ ಇದ್ದರೆ ಉಜ್ಜೈನಿಯ ಕಾಲಭೈರವೇಶ್ವರ ದೇವಸ್ಥಾನಕ್ಕೆ ಹೋಗು, ಅಲ್ಲಿ ದೇವರಿಗೆ ಮಧ್ಯ ಅರ್ಪಿಸಲಾಗುತ್ತದೆ.

ಅದನ್ನು ದೇವರು ಸ್ವೀಕರಿಸುತ್ತಾರೆ, ಈ ಒಂದು ಪವಾಡವನ್ನು ಭೇದಿಸು ಎಂದು ಚಾಲೆಂಜ್ ಮಾಡುತ್ತಾರೆ. ಸವಾಲು ಸ್ವೀಕರಿಸಿದ ಪ್ರಿಯಾಂಕ ಅಂದೇ ಉಜ್ಜೈನಿಗೆ ತೆರಳುತ್ತಾಳೆ ಮತ್ತು ಅಂಗಡಿಯಲ್ಲಿ ಮಧ್ಯದ ಬಾಟಲು ಖರೀದಿ ಮಾಡಿ ಭಕ್ತರ ಸರತಿಯಲ್ಲಿ ನಿಂತು ದೇವಾಲಯದೊಳಕ್ಕೆ ಹೋಗುತ್ತಾಳೆ. ನೋಡು ನೋಡುತ್ತಿದ್ದಂತೆ ಅವಳಿಗೇ ಆಶ್ಚರ್ಯವಾಗುತ್ತದೆ. ಯಾಕೆಂದರೆ ಭಕ್ತರು ತಂದಿದ್ದ ಮಧ್ಯವನ್ನು ಕೂಡ ದೇವರ ಮುಂದೆ ಇಡಲಾಗುತ್ತಿರುತ್ತದೆ ಹಾಗೆ ಅರೆಘಳಿಗೆಯಲ್ಲಿ ಆ ಮಧ್ಯವೆಲ್ಲಾ ಖಾಲಿಯಾಗುತ್ತಿತ್ತು.

ಈಗ ಜನಸಂದಣಿಯಲ್ಲಿ ಇದನ್ನು ಕಂಡು ಹಿಡಿಯಲು ನನಗೆ ಸಾಧ್ಯವಾಗುವುದಿಲ್ಲ ಮಧ್ಯರಾತ್ರಿ ಇಲ್ಲಿಗೆ ಬರುತ್ತೇನೆ ಬಹುಶಃ ದೇವಸ್ಥಾನದ ಹಿಂದೆ ಯಾವುದೋ ಒಂದು ವ್ಯವಸ್ಥೆ ಇರಬೇಕು ಅಲ್ಲಿ ಮಧ್ಯ ಶೇಖರಣೆಯಾಗುತ್ತಿರಬೇಕು ಎಂದುಕೊಂಡು ತಾನು ಮಾಡಿದ್ದ ಹೋಟೆಲ್ ರೂಮ್ ಗೆ ಹಿಂತಿರುಗುತ್ತಾಳೆ. ಮಧ್ಯರಾತ್ರಿ ಬಂದು ಮಧ್ಯವೆಲ್ಲಾ ಗರ್ಭಗುಡಿ ಹಿಂದೆ ಎಲ್ಲಾದರೂ ಹೋಗುತ್ತಿರಬಹುದಾ ಎಂದು ಅದನ್ನು ನೋಡಲು ಹೋಗುತ್ತಾಳೆ.

ಆದರೆ ಆಕೆ ಗರ್ಭಗುಡಿ ಹಿಂದೆ ಹೋಗುತ್ತಿದ್ದಂತೆ ಶಾ’ಕ್ ಆಗುತ್ತದೆ. ಯಾಕೆಂದರೆ ಅಲ್ಲಿ ಆ ರೀತಿಯ ಯಾವುದೇ ವ್ಯವಸ್ಥೆ ಇರುವುದಿಲ್ಲ. ಹಾಗಾದ್ರೆ ಒಳಗೆ ಹೋಗಿ ನೋಡೋಣ ಎಂದುಕೊಂಡು ಹೆಜ್ಜೆ ಇಟ್ಟವಳಿಗೆ ಕಪ್ಪು ಬೆಕ್ಕು ಒಂದು ಅಡ್ಡ ಬಂದು ತಡೆಯುತ್ತದೆ. ಅಷ್ಟಾದ ಮೇಲೆ ಆಕೆ ತಲೆಸುತ್ತು ಬಂದು ಬಿದ್ದುಬಿಡುತ್ತಾಳೆ, ಪ್ರಜ್ಞೆ ಬಂದಾಗ ಆಕೆ ಅವಳ ರೂಮ್ನಲ್ಲಿಯೇ ಇರುತ್ತಾಳೆ. ಬಹುಶಃ ಇದು ಕನಸೋ, ಭ್ರಮೆಯೋ ಇರಬೇಕು ಎಂದುಕೊಂಡು ಮಧ್ಯರಾತ್ರಿ ಪುನಃ ದೇವಸ್ಥಾನಕ್ಕೆ ಹೋಗುತ್ತಾಳೆ.

ಹಿಂಬದಿಯಲ್ಲಿ ಚೆಕ್ ಮಾಡುತ್ತಾಳೆ ಏನು ಇರುವುದಿಲ್ಲ ಒಳಗಡೆ ಪ್ರವೇಶ ಮಾಡಲು ಹೋದರೆ ಮತ್ತೆ ಬೆಕ್ಕು ಅಡ್ಡ ಬರುತ್ತದೆ. ಮತ್ತೆ ತಲೆ ಸುತ್ತಿ ಬೀಳುತ್ತಾಳೆ. ಮತ್ತೆ ಕಣ್ಣು ಬಿಟ್ಟರೆ ಹೋಟೆಲ್ ರೂಮಿನಲ್ಲಿ ಇರುತ್ತಾಳೆ. ಈ ರೀತಿ ಶತ ಪ್ರಯತ್ನ ಮಾಡಿದ ಮೇಲೆ ಆಕೆಗೆ ಅರಿವಾಗುತ್ತದೆ ಆಕೆ ಕಾಲಭೈರವೇಶ್ವರನನ್ನು ಪರೀಕ್ಷೆ ಮಾಡಲು ಬಂದು ಕಾಲಚಕ್ರದಲ್ಲಿ ಸಿಲುಕಿಕೊಂಡಿದ್ದಾಳೆ ಎಂದು. ಕೊನೆಗೆ ಕಾಲಭೈರವೇಶ್ವರನ ಬಳಿ ಮಂಡಿಯೂರಿ ಕ್ಷಮೆ ಕೇಳಿಕೊಳ್ಳುತ್ತಾಳೆ ಇನ್ನು ಮುಂದೆ ಎಂದು ಕೂಡ ದೇವರ ಶಕ್ತಿಯನ್ನು ಅಲ್ಲಗಳೆಯುವುದಿಲ್ಲ ಎನ್ನುವ ನಿರ್ಧಾರಕ್ಕೆ ಬಂದು ತಾನು ಸಹ ದೇವರ ಸೇವೆಗಳಲ್ಲಿ ತೊಡಗಿಕೊಂಡು ಆಸ್ತಿಕಳಾಗಿ ಬದುಕುತ್ತಾಳೆ.