ಬಡ ರೈತನನ್ನು ಅರೆಸ್ಟ್ ಮಾಡಿದ ಪೊಲೀಸರು, ಕೋರ್ಟ್ ನಲ್ಲಿ ವಿಚಾರಣೆ ನಡೆಸಿದಾಗ ರೈತ ಕೊಟ್ಟ ಉತ್ತರ ಕೇಳಿ ಶಾ-ಕ್ ಆದ ಜಡ್ಜ್ ಅಷ್ಟಕ್ಕೂ ಆ ರೈತ ಕೊಟ್ಟ ಉತ್ತರವೇನು ಗೊತ್ತ.!

 

ರೈತರು ದೇಶದ ಬೆನ್ನೆಲುಬು ಅವರಿಗೆ ಅನ್ನ ಹಾಕಿ ಅಭ್ಯಾಸ ಇದೆಯೋ ಹೊರತು ಮತ್ತೊಬ್ಬರಿಗೆ ಮೋಸ ಮಾಡಿ ಬದುಕುವಂತಹ ಯಾವುದೇ ಮನಸ್ಥಿತಿ ಇಲ್ಲ ರೈತರಿಂದಲೇ ನಾವೆಲ್ಲ ಅವರಿದ್ದರೆ ನಮ್ಮ ಹೊಟ್ಟೆ ತುಂಬತ್ತದೆ ನಾವು ಜೀವನ ಮಾಡಲು ಸಾಧ್ಯವಾಗುತ್ತದೆ. ಇತ್ತೀಚಿಗೆ ನಡೆದಿರುವಂತಹ ಒಂದು ಘಟನೆಯನ್ನು ನೋಡಿದರೆ ರೈತರು ಎಷ್ಟು ಮುಗ್ದರು ಎಂದು ನಮಗೆ ತಿಳಿಯುತ್ತದೆ.

ವ್ಯಾಪಾರಿಯ ಮಾತು ಕೇಳಿಕೊಂಡು ಒಬ್ಬ ಮುಗ್ಧ ಬಡ ರೈತನನ್ನು ಅರೆಸ್ಟ್ ಮಾಡಿದಂತಹ ಪೊಲೀಸರಿಗೆ ಅಚ್ಚರಿ ಎದುರಾಗುತ್ತದೆ. ಅಷ್ಟೇ ಅಲ್ಲದೆ ನ್ಯಾಯಾಧೀಶರು ಸಹ ಇದನ್ನು ನೋಡಿ ಬೆಚ್ಚಿ ಬೀಳುತ್ತಾರೆ. ಒಬ್ಬ ಬಡ ರೈತ ಈತನ ಹೆಸರು ರಾಮಪ್ಪ ಈತ ತನ್ನ ಅರ್ಧ ಎಕರೆ ಜಮೀನಿನಲ್ಲಿ ವ್ಯವಸಾಯವನ್ನು ಮಾಡಿಕೊಂಡು ಜೀವನವನ್ನು ನಡೆಸುತ್ತಾ ಇರುತ್ತಾನೆ ಜೊತೆಗೆ ಹಸು ಮತ್ತು ಮೇಕೆಗಳನ್ನು ಸಾಗಾಣಿಕೆ ಮಾಡುತ್ತಾ ಇರುತ್ತಾನೆ.

ಹಸುವಿನಿಂದ ಬಂದಂತಹ ಬೆಣ್ಣೆ ಮತ್ತು ತುಪ್ಪವನ್ನು ಹೋಗಿ ಪಟ್ಟಣದಲ್ಲಿ ಮಾರಿ ಇದರಿಂದ ಬಂದಂತಹ ಹಣದಿಂದ ಸಂಸಾರವನ್ನು ನಡೆಸಿಕೊಂಡು ಹೋಗುತ್ತಾ ಇರುತ್ತಾನೆ. ಒಂದು ದಿನ ರಾಮಪ್ಪ ಮನೆಯಲ್ಲಿ ಊಟ ಮಾಡುತ್ತಿರುವಂತಹ ಸಂದರ್ಭದಲ್ಲಿ ಯಾರೋ ಬಂದು ಬಾಗಿಲನ್ನು ಕುಟ್ಟುತ್ತಾರೆ ಹೋಗಿ ನೋಡಿದಾಗ ಅಲ್ಲಿ ಪೊಲೀಸರು ಬಂದು ನಿಂತಿರುತ್ತಾರೆ ರಾಮಪ್ಪ ಮಾರಾಟ ಮಾಡುತ್ತಿದ್ದಂತಹ ಬೆಣ್ಣೆ ಮತ್ತು ತುಪ್ಪದಲ್ಲಿ ಮೋಸ ನಡೆಯುತ್ತಿದೆ ಎಂದು ವ್ಯಾಪಾರಿಯುವ ಪೊಲೀಸರಿಗೆ ಕಂಪ್ಲೇಂಟ್ ನೀಡಿರುತ್ತಾನೆ ಆದ್ದರಿಂದ ರಾಮಪ್ಪನನ್ನು ಪೊಲೀಸರು ಕರೆದುಕೊಂಡು ಹೋಗುತ್ತಾರೆ.

ರಾಮಪ್ಪನನ್ನು ನ್ಯಾಯಾಲಯದಲ್ಲಿ ವಿಚಾರಣೆ ನಡೆಸಲಾಗುತ್ತದೆ ರಾಮಪ್ಪನು ಸುಮಾರು 10 ವರ್ಷಗಳ ಕಾಲದಿಂದಲೂ ಸಹ ಪಟ್ಟಣಕ್ಕೆ ಹೋಗಿ ವ್ಯಾಪಾರಿಗಳಿಗೆ ಬೆಣ್ಣೆ ಮತ್ತು ತುಪ್ಪವನ್ನು ಮಾರಾಟ ಮಾಡುತ್ತಿರುತ್ತಾನೆ. ಈತನಿಗೆ ಯಾವುದೇ ರೀತಿಯಾದಂತಹ ಮೋಸ ಕಪಟ ಎನ್ನುವಂತಹದ್ದು ತಿಳಿದಿರುವುದಿಲ್ಲ ಆದರೆ ವ್ಯಾಪಾರಿಯೂ ರಾಮಪ್ಪನ್ನು ನೀಡುತ್ತಿರುವಂತಹ ಬೆಣ್ಣೆ ಮತ್ತು ತುಪ್ಪದಲ್ಲಿ ಕೇವಲ 850 ಗ್ರಾಂ ಮಾತ್ರ ಇದೆ ಒಂದು ಕೆಜಿ ಇಲ್ಲ 250 ಗ್ರಾಂ ತುಪ್ಪ ಮತ್ತು ಬೆಣ್ಣೆಯನ್ನು ನನಗೆ 10 ವರ್ಷಗಳಿಂದ ಮೋಸ ಮಾಡಿಕೊಂಡು ಬಂದಿದ್ದಾನೆ ಎಂದು ಹೇಳುತ್ತಾನೆ.

ರಾಮಪ್ಪನು ನೀಡುತ್ತಿದ್ದಂತಹ ಬೆಣ್ಣೆಯನ್ನು ತರಿಸಿ ತೂಕವನ್ನು ಮಾಡಲಾಗುತ್ತದೆ ಅದರಲ್ಲಿ 850 ಗ್ರಾಂ ಮಾತ್ರ ಇರುತ್ತದೆ ಆಗ ರಾಮಪ್ಪನನ್ನು ವಿಚಾರಿಸಿದಾಗ ಇದು ಹೇಗಾಯಿತು ಗೊತ್ತಿಲ್ಲ ನಾನು ಮೋಸ ಮಾಡಿಲ್ಲ ಸ್ವಾಮಿ ಎಂದು ಹೇಳುತ್ತಾರೆ ಹಾಗೆ ನ್ಯಾಯಾಧೀಶರು ನೀನು ತೂಕ ಮಾಡುವಂತಹ ಯಂತ್ರವನ್ನು ತೆಗೆದುಕೊಂಡು ಬಾ ಅದರಲ್ಲಿ ಏನಾದರೂ ತಪ್ಪು ಇರಬಹುದು ಎಂದು ರಾಮಪ್ಪನಿಗೆ ಹೇಳುತ್ತಾರೆ.

ರಾಮಪ್ಪ ಹೇಳುತ್ತಾನೆ ನಾನು ಬಡವ ನಾನು ತೂಕ ಮಾಡುವಂತ ಯಂತ್ರವನ್ನು ಹೊಂದಿಲ್ಲ ಎಂದು ಹೇಳುತ್ತಾನೆ, ಇದಕ್ಕೆ ನ್ಯಾಯಾಧೀಶರು ಯಾವುದರಲ್ಲಿ ನೀನು ತೂಕ ಮಾಡಿ ಅಂಗಡಿಗೆ ಕೊಡುತ್ತೀಯಾ ಎಂದು ಕೇಳಿದಾಗ ನಾನು 10 ವರ್ಷಗಳಿಂದ ಇವರ ಅಂಗಡಿಯಲ್ಲಿಯೇ ದಿನಸಿ ಕೊಳ್ಳುತ್ತೇನೆ ಇವರು ನೀಡುವಂತಹ ಒಂದು ಕೆಜಿ ರವೆ ಒಂದು ಕೆಜಿ ಅಕ್ಕಿ ಅದೇ ಕವರ್ ನಲ್ಲಿ ಬೆಣ್ಣೆ ಮತ್ತು ತುಪ್ಪವನ್ನು ತುಂಬಿಸಿ ನೀಡುತ್ತೇನೆ ಎಂದು ಹೇಳುತ್ತಾರೆ ಆಗ ಅಂಗಡಿಯವರು ಕೊಟ್ಟಿರುವಂತಹ ರವೆ ಅಥವಾ ಅಕ್ಕಿ ಏನಾದರೂ ಮನೆಯಲ್ಲಿ ಇದೆಯಾ ಎಂದು ನ್ಯಾಯಾಧೀಶರು ಕೇಳುತ್ತಾರೆ.

ಹೌದು ಎಂದು ರೈತನ ತಂದು ನೀಡುತ್ತಾನೆ ಆಗ ಅಲ್ಲಿ ಒಂದು ಕೆಜಿಯ ಬದಲಾಗಿ 850 ಗ್ರಾಂ ಮಾತ್ರ ಇರುತ್ತದೆ ಆಗ ತಿಳಿಯುತ್ತದೆ ಅಂಗಡಿಯವನು 10 ವರ್ಷಗಳಿಂದ ಈ ರೈತನಿಗೆ ಮೋಸ ಮಾಡಿಕೊಂಡು ಬಂದಿದ್ದಾನೆ ಎಂದು. ಮುಗ್ಧ ರೈತನಿಗೆ ಮೋಸ ಮಾಡಿದ್ದಕ್ಕಾಗಿ ಹತ್ತು ವರ್ಷ ದಿನಸಿ ಸಾಮಗ್ರಿಗಳನ್ನು ಉಚಿತವಾಗಿ ನೀಡಬೇಕು ಎಂದು ನ್ಯಾಯಾಧೀಶರು ತೀರ್ಪು ನೀಡುತ್ತಾರೆ.

Leave a Comment