ಯಾರೆಷ್ಟೇ ಪ್ರೀತಿಯಿಂದ ಕೊಟ್ಟರು ಈ ವಸ್ತುಗಳನ್ನು ಎಂದಿಗೂ ತೆಗೆದುಕೊಳ್ಳಬೇಡಿ ವಾಸ್ತು ಶಾಸ್ತ್ರದ ಪ್ರಕಾರ ಈ ವಸ್ತುಗಳನ್ನು ಬೇರೆಯವರಿಂದ ಪಡೆದರೆ ತೊಂದರೆ ಕಟ್ಟಿಟ್ಟ ಬುತ್ತಿ.!

 

ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ನಾವು ಯಾವ ಕೆಲವು ವಸ್ತುಗಳನ್ನು ಬೇರೆಯವರಿಂದ ಪಡೆಯಬಾರದು ಹಾಗೂ ಪಡೆಯಬಹುದು ಎನ್ನುವುದು ಬಹಳ ಮುಖ್ಯವಾಗಿರುತ್ತದೆ. ಹೌದು ಹಾಗೇನಾದರೂ ಆ ವಸ್ತುಗಳನ್ನು ನೀವು ಪಡೆದುಕೊಂಡರೆ ಹೇಳಬಹುದು ಅದೇ ರೀತಿಯಾಗಿ ಕೆಲವೊಂದು ವಸ್ತುಗಳನ್ನು ಬೇರೆಯವರಿಂದ ಪಡೆದರೆ ಅದರಿಂದ ಅದೃಷ್ಟ ಅಂದರೆ ಒಳ್ಳೆಯದು ಎನ್ನುವುದು ಹೆಚ್ಚಾಗುತ್ತದೆ.

ಹೌದು ಆ ಕೆಲವು ವಸ್ತುಗಳು ಕೆಲವೊಮ್ಮೆ ಅದೃಷ್ಟವನ್ನು ತಂದುಕೊಟ್ಟರೆ ಕೆಲವೊಮ್ಮೆ ದುರಾದೃಷ್ಟವನ್ನು ತಂದು ಕೊಡುತ್ತದೆ. ಹಾಗಾದರೆ ಈ ದಿನ ಯಾವ ಕೆಲವು ವಸ್ತುಗಳನ್ನು ನಾವು ಬೇರೆಯವರಿಂದ ಪಡೆದರೆ ನಮಗೆ ಕಷ್ಟ ಎನ್ನುವುದು ಕಟ್ಟಿಟ್ಟ ಬುತ್ತಿಯಾಗಿರುತ್ತದೆ ಹಾಗೂ ಆ ವಸ್ತುಗಳು ಯಾವುವು ಎನ್ನುವುದನ್ನು ಈ ಕೆಳಗೆ ತಿಳಿಯೋಣ.

ನಮಗೆ ಬೇಕಾದ ವಸ್ತುಗಳನ್ನು ಸರಿಯಾದ ಸಮಯಕ್ಕೆ ಸಿಗದೇ ಇದ್ದಾಗ ನಾವು ಬೇರೆಯವರಿಂದ ವಸ್ತುಗಳನ್ನು ಪಡೆಯುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ ಈ ರೀತಿ ವಸ್ತುಗಳನ್ನು ಪಡೆದುಕೊಂಡರೆ ನಾವು ದೊಡ್ಡ ನಷ್ಟ ವನ್ನು ಅನುಭವಿಸಬಹುದು ಹಾಗಾಗಿ ಎಚ್ಚರವಾಗಿ ಇರುವುದು ಬಹಳ ಮುಖ್ಯವಾಗಿರುತ್ತದೆ. ಅದರಲ್ಲೂ ಆ ವಸ್ತುಗಳು ನಮ್ಮ ಜೀವನ ಪರ್ಯಂತ ನಾವು ತೊಂದರೆಯನ್ನು ಅನುಭವಿಸುವಂತಹ ಪರಿಸ್ಥಿತಿಗೆ ತಂದು ಬಿಡುತ್ತದೆ.

ಹಾಗಾಗಿ ಆ ವಸ್ತುಗಳನ್ನು ಯಾವುದೇ ಕಾರಣಕ್ಕೂ ಎಂತಹ ಪರಿಸ್ಥಿತಿ ಬಂದರೂ ಬೇರೆಯವರಿಂದ ಪಡೆದುಕೊಳ್ಳಬಾರದು ಹಾಗಾಗಿ ಪ್ರತಿಯೊಬ್ಬರೂ ಕೂಡ ಇಂತಹ ಕೆಲವೊಂದಷ್ಟು ವಾಸ್ತು ಶಾಸ್ತ್ರದ ವಿಚಾರಗಳನ್ನು ತಿಳಿದುಕೊಂಡಿರುವುದು ಬಹಳ ಮುಖ್ಯ ವಾಗಿರುತ್ತದೆ. ಕೆಲವೊಂದಷ್ಟು ಜನರಿಗೆ ಈ ರೀತಿಯ ಮಾಹಿತಿ ತಿಳಿಯದೆ ಆ ವಸ್ತುಗಳನ್ನು ಪಡೆದುಕೊಂಡು ಕಷ್ಟದ ಪರಿಸ್ಥಿತಿಗಳನ್ನು ಎದುರಿಸಿರುತ್ತಾರೆ. ಆದರೆ ಅವರಿಗೆ ಇದೇ ಒಂದು ಕಾರಣದಿಂದ ಈ ರೀತಿಯ ಸಂಕಷ್ಟ ಎದುರಾಗಿದೆ ಎಂದು ತಿಳಿಯುವುದಿಲ್ಲ.

• ಮೊದಲನೆಯದಾಗಿ ನಿಮ್ಮ ಬಟ್ಟೆ ಸಮಯಕ್ಕೆ ಸರಿಯಾಗಿ ಇಸ್ತ್ರಿಯಾ ಗಿಲ್ಲ ಅಥವಾ ಬಟ್ಟೆ ಒಗೆದಿಲ್ಲ ಎಂದರೆ ಅಂತಹ ಸಮಯದಲ್ಲಿ ಬೇರೆಯವರ ಬಟ್ಟೆಯನ್ನು ಧರಿಸಿಕೊಂಡು ನೀವು ಯಾವುದೇ ಕೆಲಸ ಕಾರ್ಯಗಳಿಗೆ ಹೋಗಬೇಡಿ ಯಾಕೆಂದರೆ ಅದು ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡುವುದು ಮತ್ತು ನಕಾರಾತ್ಮಕತೆ ಉಂಟಾಗುವುದು ಎಚ್ಚರ.

• ಬೇರೆಯವರ ಕೈಗಡಿಯಾರವನ್ನು ಯಾವತ್ತಿಗೂ ಪಡೆದುಕೊಂಡು ನೀವು ಧರಿಸಿಕೊಳ್ಳಬೇಡಿ ಏಕೆಂದರೆ ಅವರ ಕೆಟ್ಟ ಸಮಯವೂ ನಿಮಗೆ ಕೆಟ್ಟದ್ದನ್ನು ಉಂಟು ಮಾಡಬಹುದು. ಹಾಗೂ ಅವರು ಅನುಭವಿಸ ಬೇಕಾದಂತಹ ಕೆಟ್ಟ ಘಟನೆಗಳು ಎಲ್ಲವನ್ನು ನೀವು ನಿಮ್ಮ ಜೀವನದಲ್ಲಿ ಅನುಭವಿಸಬೇಕಾಗುತ್ತದೆ.

• ಅಪ್ಪಿ ತಪ್ಪಿಯೂ ಯಾರ ಕರವಸ್ತ್ರವನ್ನು ಬಳಸಬೇಡಿ ಹಾಗೂ ಎರವಲು ಪಡೆಯಬೇಡಿ ಇದರಿಂದ ಸಂಬಂಧ ಹಾಳಾಗಿ ಮನಸ್ತಾಪಗಳು ಉಂಟಾಗುತ್ತದೆ.
• ಬೇರೆಯವರ ಉಂಗುರವನ್ನು ಅಥವಾ ರತ್ನವನ್ನು ಎಂದಿಗೂ ಧರಿಸ ಬೇಡಿ ಏಕೆಂದರೆ ಅವರ ಉಂಗುರ ನಿಮಗೆ ಸೂಕ್ತವಾಗದೆ ಪ್ರತಿಕೂಲ ಪರಿಣಾಮ ಬೀರಬಹುದು. ಏಕೆಂದರೆ ರತ್ನಗಳು ಗ್ರಹಗಳೊಂದಿಗೆ ಸಂಬಂಧ ಹೊಂದಿರುತ್ತವೆ.

• ಕೆಲವರು ಫಂಕ್ಷನ್ ಗಳಿಗೆ ಹೋಗುವಾಗ ತಮ್ಮ ಡ್ರೆಸ್ಸಿಗೆ ಮ್ಯಾಚಿಂಗ್ ಆಗುತ್ತೆ ಅಥವಾ ತುಂಬಾ ಚೆನ್ನಾಗಿದೆ ಎಂದು ಬೇರೆಯವರ ಪಾದರಕ್ಷೆ ಅಥವಾ ಶೂಗಳನು ಬಳಸುತ್ತಾರೆ. ಇದು ತುಂಬಾ ತಪ್ಪು ಇದರಿಂದ ಅವರ ಕಷ್ಟಗಳನ್ನು ನೀವು ಹೊತ್ತುಕೊಂಡಂತೆ ಆಗುತ್ತದೆ.
• ಕಸಗುಡಿಸುವ ಪೊರಕೆಯನ್ನು ಯಾವತ್ತೂ ಬೇರೆಯವರಿಂದ ಎರವಲು ಪಡೆಯಬೇಡಿ. ನೀವು ನಿಮ್ಮ ಮನೆಯ ಕಸವನ್ನು ಗುಡಿಸಿ ಅವರಿಗೆ ಕೊಟ್ಟರೆ ಅದರಿಂದ ಇಬ್ಬರಿಗೂ ಕೆಡಕಾಗುವುದು ನೆನಪಿಡಿ.

• ಸಾಮಾನ್ಯವಾಗಿ ಅಡುಗೆ ಸಾಮಗ್ರಿಗಳು ಖಾಲಿಯಾದಾಗ ಪಕ್ಕದ ಮನೆಯವರ ಬಳಿ ತೆಗೆದುಕೊಳ್ಳುವ ರೂಢಿ ಕೆಲವರಲ್ಲಿ ಇರುತ್ತದೆ. ಆದರೆ ಉಪ್ಪನ್ನು ಹೀಗೆ ತೆಗೆದುಕೊಳ್ಳಬಾರದು ಅದರಿಂದ ನೀವು ಜೀವನದಲ್ಲಿ ಸಾಲಗಾರರು ಆಗುವಿರಿ ಸಾಲು ಸಾಲಾಗಿ ಆರ್ಥಿಕ ತೊಂದರೆಗಳು ಬರುತ್ತದೆ.
• ಬೇರೆಯವರಿಂದ ಹಾಸಿಗೆ ಚಾಪೆ ದಿಂಬು ಅಂತದ್ದನ್ನೆಲ್ಲ ಕೇಳಿ ಪಡೆದು ಬಳಸಬಾರದು. ಇದರಿಂದ ಸಂಬಂಧಗಳು ಹದಗೆಡುತ್ತದೆ ಎಚ್ಚರ.

Leave a Comment