ಮಡದಿ ಮನೆಯಲ್ಲಿ ಇಲ್ಲದ ಸಮಯದಲ್ಲಿ ಗೆಳತಿಯನ್ನು ಮನೆಗೆ ಕರೆದಿದ್ದ ಟೆಕ್ಕಿ. ಸ್ನೇಹಿತೆಯೊಂದಿಗೆ ಸಿಕ್ಕಿಬಿದ್ದ ಪತಿರಾಯನಿಗೆ ತಕ್ಕ ಶಾಸ್ತಿಯಾಗಿದೆ. ಪತಿಯ ನಿಜರೂಪ ಬಯಲಾದ ಬಳಿಕ ಪತ್ನಿಯು ತಪ್ಪಿಗೆ ನೀಡಿದ ಶಿಕ್ಷೆಯನ್ನು ಕಂಡು ಸುತ್ತ ಮುತ್ತಲಿನ ಜನ ಬೆಚ್ಚಾಗಿದ್ದಾರೆ. ಹೆಂಡತಿಗೆ ತಿಳಿಯದಂತೆ ಆಟವಾಡಿದ್ದ ಟೆಕ್ಕಿಯ ಹೆಸರು ಧನಂಜಯ. ಈ ಘಟನೆ ನಡೆದಿರುವುದು ಕರ್ನಾಟಕದ ಬೆಂಗಳೂರಿನಲ್ಲಿ.
ಇತ್ತೀಚಿನ ದಿನಗಳಲ್ಲಿ ಜನರ ಮನಸ್ಥಿತಿಗಳೇ ಅರ್ಥವಾಗುವುದಿಲ್ಲ. ಮದುವೆ ಎಂಬ ಶುಭಕಾರ್ಯವು ನಡೆದಿರುವುದು ಸಂಬಂಧದಲ್ಲಿ ಯಾವುದೇ ಮೋಸ ಮಾಡದೆ, ಜೊತೆಯಾಗಿ ಬಾಳ ಸಂಗಾತಿಯೊಂದಿಗೆ ಬಾಳುವೆ…ಎಂಬ ಪ್ರತಿಜ್ಞೆಯಲ್ಲಿ ಎಂಬುದನ್ನು ಹಲವಾರು ಮಂದಿ ಮರೆತಿದ್ದಾರೆ. ಪ್ರೀತಿ ವಿಶ್ವಾಸ ನಂಬಿಕೆಗಳಿಂದ ತುಂಬಿರಬೇಕಾಗಿದ್ದ ಸಂಬಂಧಗಳಲ್ಲಿ, ಅನುಮಾನ ಅನೈತಿಕ ಬಂಧಗಳು ತುಂಬಿಕೊಂಡು ಹಾಳಾಗುತ್ತಿವೆ.
ಪತಿ-ಪತ್ನಿಯರ ನಿಜವಾದ ವೈವಾಹಿಕ ಜೀವನದ ಅರ್ಥವೇ ಬದಲಾಗಿ ಹೋಗುತ್ತಿದೆ. ಧನಂಜಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಮಡದಿ ಹಾಗೂ ಮಕ್ಕಳೊಂದಿಗೆ ಬೆಂಗಳೂರಿನ ಉತ್ತರಹಳ್ಳಿಯ ಸಾಲುಹುಣಸೆ ಎಂಬ ಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದ. ಇವರ ಸಂಸಾರವು ಸುಖಮಯವಾಗಿದೆ ಸಾಗುತ್ತಿತ್ತು ಆದರೆ ಧನಂಜಯ್ ಮಾಡಿದ ಕೆಲಸದಿಂದ ಕುಟುಂಬದ ಮರ್ಯಾದಿಯೇ ಕಳೆದು ಹೋಯಿತು.
ಧನಂಜಯ್ ಅವರ ಪತ್ನಿ ತನ್ನ ಸಹೋದರನ ವಿವಾಹ ಕಾರ್ಯವು ನೆರವೇರಲಿದೆ ಎಂಬ ಕಾರಣಕ್ಕಾಗಿ ತನ್ನ ಮಗನೊಂದಿಗೆ ಉತ್ತರಪ್ರದೇಶಕ್ಕೆ ತೆರಳಿದ್ದಳಂತೆ. ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೋಗಿದ್ದ ಪತ್ನಿ ಬರಲು 15 ದಿನ ಬೇಕಾಗುವುದು ಎಂಬುದನ್ನು ಧನಂಜಯ್ ಅರಿತಿದ್ದ. ಹೇಗಂದರೂ ಪತ್ನಿ ಮನೆಯಲ್ಲಿಲ್ಲ..ಇದೇ ಸರಿಯಾದ ಸಮಯ. ಜೀವನ ಬೇಸತ್ತು ಹೋಗಿದೆ..ಎನ್ನುತ್ತಾ ಮೋಸದ ಬುದ್ದಿಯನ್ನು ಉಪಯೋಗಿಸಿದ್ದಾನೆ. ನಿಯಂತ್ರಣ ತಪ್ಪಿದ ಮನಸ್ಸು ಹಳಿ ತಪ್ಪಿದ ರೈಲಿನಂತೆ.
ಪತ್ನಿ ಇಲ್ಲದ ಸಮಯವನ್ನು ಕಳೆಯಲು ಗೆಳೆಯನಿಗೆ ಕರೆ ಮಾಡಿ ಮನೆಗೆ ಯಾರಾದರೂ ಬರುತ್ತರಾ ಎಂದು ಕೇಳಿದ್ದಾನಂತೆ. ಧನಂಜಯನ ಗೆಳೆಯ ಅರ್ಪಿತಾ ಎಂಬ ಹುಡುಗಿಯ ಮೊಬೈಲ್ ನಂಬರ್ ಅನ್ನು ಕಳುಹಿಸಿದನಂತೆ. ನಂತರ ಅರ್ಪಿತಾಳಿಗೆ ಕರೆ ಮಾಡಿ ಮನೆಗೆ ಬರಲು ವಿಳಾಸವನ್ನು ನೀಡಿದನಂತೆ. ಅರ್ಪಿತ ಮನೆಗೆ ಬಂದ ನಂತರ ಇಬ್ಬರು ಸೇರಿಕೊಂಡು ಕುಡಿದು ತಿಂದು ಮಜಾ ಮಾಡಿ ನಂತರ ಸಿಗರೇಟ್ ಸೇದುವ ಆಸೆಯಾಗಿ ಧನಂಜಯ್ ಸಾಲು ಹುಣಸೆಯ ಅಂಗಡಿಯೊಂದಕ್ಕೆ ಸಿಗರೇಟ್ ತರಲು ಹೋದನಂತೆ.
ತದನಂತರ ನಡೆದದ್ದು ವಿಚಿತ್ರ ಘಟನೆ. ಅರ್ಪಿತಾಳನ್ನು ಮನೆಯಲ್ಲಿಯೇ ಬಿಟ್ಟು ತಾನೊಬ್ಬನೇ ಕಾರಿನಲ್ಲಿ ಹತ್ತಿಕೊಂಡು ಹೋಗಿ ಸಿಗರೇಟ್ ತಂದು ಮನೆಯನ್ನು ತಲುಪಿದಾಗ ಧನಂಜಯ್ ಕಂಗಾಲಾದನಂತೆ. ಅರ್ಪಿತ ಮನೆಯಲ್ಲಿರುವ ಹಣ ಹಾಗೂ ಬಂಗಾರವನ್ನು ದೋಚಿಕೊಂಡು ವಸ್ತುಗಳನ್ನೆಲ್ಲಾ ಮನೆಯ ತುಂಬಾ ಹರಡಿ ಹೋಗಿದ್ದಳಂತೆ ಮದುವೆಯನ್ನು ಮುಗಿಸಿ ಮನೆಗೆ ವಾಪಸಾದ ಹೆಂಡತಿಯು ಗಂಡನಲ್ಲಿ ಚಿನ್ನದ ಬಗ್ಗೆ ಪ್ರಶ್ನಿಸಿದಳು.
ಆಗ ಪತ್ನಿಯಿಂದ ಮರೆಮಾಚಿ ಚೆಲ್ಲಾಟವಾಡಲು ಪ್ರಯತ್ನಿಸಿದ್ದ ಟೆಕ್ಕಿ ನಡೆದ ಎಲ್ಲಾ ಘಟನೆಗಳನ್ನು ಮಡದಿಯಲ್ಲಿ ವಿವರಿಸಿವಂತಾಯ್ತು. ವಿಷಯವನ್ನು ತಿಳಿದ ಬಳಿಕ ಈ ದಂಪತಿಗಳು ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ವಿಚಾರಣೆಯನ್ನು ನಡೆಸಿದ ಪೊಲೀಸರು ಅರ್ಪಿತಾ ಇಂಜಿನಿಯರಿಂಗ್ ಓದಿದ್ದು ಒಳ್ಳೆಯ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾಳೆ ಎಂದು ತಿಳಿಸಿದರು. ಪೊಲೀಸರ ತನಿಖೆಯ ವೇಳೆ ಅರ್ಪಿತಾ ಸತ್ಯವನ್ನು ಬಾಯ್ಬಿಟ್ಟಿದ್ದಾಳೆ.
ಒಟ್ಟಾರೆಯಾಗಿ ಮಡದಿ ಮಕ್ಕಳಿಲ್ಲದ ಸಮಯದಲ್ಲಿ ಮಾಡಬಾರದನ್ನು ಮಾಡಲು ಹೋಗಿ ಧನಂಜಯ್ ಸುಖದಿಂದ ಸಾಗುತ್ತಿದ್ದ ಸಂಸಾರವನ್ನು ಹಾಳು ಮಾಡಿಕೊಂಡಿದ್ದಾನೆ. ಪತ್ನಿಯು ಮೊದಲಿನಂತೆ ತೋರಿಸುವ ಪ್ರೀತಿ ಹಾಗೂ ಕಾಳಜಿಯನ್ನು ಕಳೆದುಕೊಂಡಿದ್ದಾನೆ. ಧನಂಜಯನ ಮರ್ಯಾದೆಯು ಬೀದಿ ಪಾಲಾಗಿದ್ದು ತಲೆಯೆತ್ತಿ ನಡೆಯಲು ಹಿಂಜರಿಯುತ್ತಿದ್ದಾನೆ.