ರೇಷ್ಮೆ ಸೀರೆ ಎಂದ ತಕ್ಷಣ ಹೆಣ್ಣು ಮಕ್ಕಳ ಮನಸ್ಸು ಪುಳಕಿತಗೊಳ್ಳುತ್ತದೆ. ಬಂಗಾರ ಹಾಗು ರೇಷ್ಮೆ ಸೀರೆ ಎನ್ನುವುದು ಹೆಣ್ಣು ಮಕ್ಕಳಿಗೆ ಅತ್ಯಂತ ಖುಷಿ ಕೊಡುವ ಉಡುಗೊರೆಗಳು ಮತ್ತು ಇದನ್ನು ಅವರು ಪ್ರತಿಷ್ಠೆಯ ಸಂಕೇತ ಎಂದು ಕೂಡ ಅಂದುಕೊಂಡಿದ್ದಾರೆ. ಯಾಕೆಂದರೆ ಸೀರೆಗಳಲ್ಲಿ ಎಲ್ಲಕ್ಕಿಂತ ರೇಷ್ಮೆ ಸೀರೆಗೆ ಹೆಚ್ಚು ಬೆಲೆ ರೇಷ್ಮೆ ಸೀರೆ ಉಡುವುದಕ್ಕೂ ಕೂಡ ಅಷ್ಟೇ ಸುಂದರ ರೇಷ್ಮೆ ಸೀರೆ ಉಟ್ಟವರ ಅಂದ ಹಾಗೂ ಗತ್ತು ಬೇರೆ ರೀತಿ ಇರುತ್ತದೆ.
ಇನ್ನು ಇತ್ಯಾದಿ ಕಾರಣಕ್ಕಾಗಿ ರೇಷ್ಮೆ ಸೀರೆ ಧರಿಸಲು ಎಲ್ಲರೂ ಬಯಸುತ್ತಾರೆ. ಆದರೆ ಖರೀದಿಸುವುದು ಧರಿಸುವುದಕ್ಕಿಂತ ಅದನ್ನು ನೀಟಾಗಿ ಇಟ್ಟುಕೊಳ್ಳುವುದೇ ಬಹಳ ದೊಡ್ಡ ರಿಸ್ಕ್. ಯಾಕೆಂದರೆ ನಾವು ಬೇರೆ ಬಟ್ಟೆಯನ್ನು ವಾಶ್ ಮಾಡುವ ರೀತಿ ಸುಲಭವಾಗಿ ರೇಷ್ಮೆ ಸೀರೆಯನ್ನು ವಾಶ್ ಮಾಡಲು ಆಗುವುದಿಲ್ಲ. ಬಂಗಾರವನ್ನು ನಯ ನಾಜೂಕಿನಿಂದ ನೋಡಿಕೊಂಡ ರೀತಿ ರೇಷ್ಮೆ ಸೀರೆಯನ್ನು ಕೂಡ ನೋಡಿಕೊಳ್ಳಬೇಕು.
ಈ ಸುದ್ದಿ ಓದಿ:- ಮೆಡಿಸಿನ್ ಇಲ್ಲದೇ ಯೋಗದಲ್ಲಿ ಖಾಯಿಲೆ ವಾಸಿ ಮಾಡಬಹುದು ಆದರೆ ಇದೊಂದು ಕಂಡೀಷನ್ ಇದೆ.!
ಹಾಗಾಗಿ ಹೆಚ್ಚಿನವರು ರೇಷ್ಮೆ ಸೀರೆಗಳನ್ನು ಡ್ರೈ ಕ್ಲೀನ್ ಗೆ ಕೊಡುತ್ತಾರೆ. ಈ ರೀತಿ ಕ್ಲೀನಿಂಗ್ ಗೆ ಕೊಡುವಾಗ ಹಣ ವ್ಯರ್ಥ ಎನ್ನುವುದರ ಜೊತೆಗೆ ಅವರು ನಮ್ಮ ಬಟ್ಟೆ ಸರಿಯಾಗಿ ವಾಶ್ ಮಾಡುತ್ತಾರೋ ಅಥವಾ ನಿರ್ಲಕ್ಷ ಮಾಡಿ ಹಾಳು ಮಾಡುತ್ತಾರೋ ಎನ್ನುವ ಡವ ಡವ ಇರುತ್ತದೆ. ಇನ್ನು ಮುಂದೆ ಈ ರೀತಿ ಟೆನ್ಶನ್ ಬಿಡಿ. ನಿಮ್ಮ ಮನೆಯಲ್ಲಿ 20,000 ದ ರೇಷ್ಮೆ ಸೀರೆ ಇದ್ದರೂ ಕೂಡ 20 ರೂಪಾಯಿ ಖರ್ಚು ಮಾಡಿ ನೀವೆ ನೀಟಾಗಿ ಡ್ರೈ ಕ್ಲೀನ್ ಮಾಡಿಕೊಳ್ಳಬಹುದು.
ಹೇಗೆ ಮಾಡುವುದು ಇದಕ್ಕಾಗಿ ಏನೆಲ್ಲ ಬಳಸಬೇಕು ಮತ್ತು ಈ ವಿಧಾನ ಹೇಗೆ ಎಲ್ಲ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಮೊದಲಿಗೆ ಅಂಟವಾಳದ ಕಾಯಿ ತೆಗೆದುಕೊಳ್ಳಿ. 10-12 ಅಂಟುವಾಳದ ಕಾಯಿಯನ್ನು ಜಜ್ಜಿ ಅದರ ಒಳಗಿರುವ ಬೀಜ ತೆಗೆದು ರಾತ್ರಿ ನೆನೆಸಿಡ. ಮರು ದಿನ ಬೆಳಿಗ್ಗೆ ಮೊದಲಿಗೆ ಒಂದು ಬಕೆಟ್ ನೀರಿನಲ್ಲಿ ಒಂದು ಹಿಡಿ ಹರಳುಪ್ಪು ಹಾಕಿ ಕರಗಲು ಬಿಡಿ.
ಈ ಸುದ್ದಿ ಓದಿ:- ಗೃಹಿಣಿಯರೇ ಎಚ್ಚರ, ನಿಮ್ಮ ಮನೆಯಲ್ಲೂ ವಾಷಿಂಗ್ ಮೆಷಿನ್ ಇದೆಯೇ.?, ಈ ವಿಚಾರಗಳ ಬಗ್ಗೆ ತಿಳಿದುಕೊಂಡಿರಲೇ ಬೇಕು…
ಹರಳುಪ್ಪು ಹಾಕುವುದರಿಂದ ಸೀರೆ ಮೇಲಿರುವ ಬ್ಯಾಕ್ಟೀರಿಯಾ ನಾಶವಾಗುತ್ತವೆ ಮತ್ತು ಸೀರೆಯಲ್ಲಿರುವ ಕೆಟ್ಟ ವಾಸನೆ ಹೋಗುತ್ತದೆ. ಈಗ ನಿಮ್ಮ ರೇಷ್ಮೆ ಸೀರೆಯನ್ನು ನೆರಿಗೆಗಳಾಗಿ ಮಾಡಿ, ನಿಮ್ಮ ರೇಷ್ಮೆ ಸೀರೆ ಬಣ್ಣ ಒಂದೇ ರೀತಿ ಇದ್ದರೆ ಒಂದೇ ಬಾರಿಗೆ ನೆನೆಸಬಹುದು ಇಲ್ಲವಾದರೆ ಮೊದಲಿಗೆ ಬಾರ್ಡರ್ ಹಾಗೂ ಸೆರಗನ್ನು ಸಪರೇಟ್ ಇದೇ ವಿಧಾನದಲ್ಲಿ ವಾಷ್ ಮಾಡಿ ನಂತರ ಮಧ್ಯಭಾಗವನ್ನು ಇದೇ ವಿಧಾನದಲ್ಲಿ ಮತ್ತೊಮ್ಮೆ ವಾಶ್ ಮಾಡಬೇಕಾಗುತ್ತದೆ.
ಈಗ ನಿಮ್ಮ ಸೀರೆ ಒಂದೇ ಬಣ್ಣದಲ್ಲಿ ಇದೆ ಎಂದುಕೊಳ್ಳೋಣ ಅದನ್ನು ಉಪ್ಪು ನೀರಿನಲ್ಲಿ ಮೂರು ನಿಮಿಷ ನೆನೆಸಿ ನಂತರ ತೆಗೆದು ಅಂಟವಾಳದ ಕಾಯಿಯನ್ನು ನೆನೆಸಿದ ನೀರು ತೆಗೆದುಕೊಂಡು ಅದನ್ನು ಚೆನ್ನಾಗಿ ನುಣಿಚಿಕೊಳ್ಳಬೇಕು.
ಈ ಸುದ್ದಿ ಓದಿ:- ಇಂಥ ಪವಾಡ ನೀವು ಕನಸಲ್ಲೂ ಊಹಿಸಿರುವುದಿಲ್ಲ, 5 ನಿಮಿಷದಲ್ಲಿ ಕಣ್ಣೆದುರೇ ದೇವರು ಪ್ರತ್ಯಕ್ಷ.!
ಹುಣಸೆಹಣ್ಣು ಕಿವುಚಿದ ರೀತಿ ಮಾಡುತ್ತಿದ್ದರೆ ವಿಪರೀತ ನೊರೆ ಬರುತ್ತದೆ ಅದಕ್ಕೆ ಕೊಳೆ ಹಾಗೂ ಕಲೆ ತೆಗೆಯುವ ಶಕ್ತಿ ಇರುತ್ತದೆ ಚೆನ್ನಾಗಿ ನೊರೆ ಬಂದಮೇಲೆ ಅರ್ಧ ಭಾಗದಷ್ಟು ಮತ್ತೊಂದು ಬಕೆಟ್ ನೀರಿಗೆ ಹಾಕಿ ಎರಡು ನಿಮಿಷ ಸೀರೆಯನ್ನು ನೆನೆ ಹಾಕಿ. ನೀವು ಸೀರೆಯನ್ನು ನೆನೆಸುವ ಮೊದಲು ಎಲ್ಲೆಲ್ಲಿ ಕಲೆ ಹಾಗಿದೆ ಎಂದು ನೋಡಿಕೊಂಡಿದ್ದರೆ ಕಲೆ ತೆಗೆಯುವುದು ಸುಲಭ ಈಗ ಇದನ್ನು ವಾಶ್ ಮಾಡಬೇಕು.
ಒಂದು ಚಿಕ್ಕ ಸ್ಯಾಷೆಮೀರಾ ಶಾಂಪೂ ಒಂದು ಚೂರು ಟೂತ್ ಪೇಸ್ಟ್ ಇನ್ನರ್ಧ ಉಳಿದಿದ್ದ ಅಂಟವಾಳದ ನೀರಿಗೆ ಹಾಕಿ ಮಿಕ್ಸ್ ಮಾಡಿಕೊಳ್ಳಿ ಅದನ್ನು ಎಲ್ಲೆಲ್ಲಿ ಕಲೆಯಾಗಿದೆ ಅಲ್ಲಿಗೆ ಸ್ಪ್ರೆಡ್ ಮಾಡಿ ಉಜ್ಜಿ. ಮುಖ್ಯವಾಗಿ ಸೀರೆ ಫಾಲ್ಸ್ ಹಾಕುವ ಜಾಗದಲ್ಲಿ ಸ್ಪ್ರೆಡ್ ಮಾಡಿ ಯಾವುದೇ ಬ್ರಷ್ ಬಳಸದೆ ಕೈಯಿಂದಲೇ ಉಜ್ಜಬೇಕು.
ಹೀಗೆ ನಿಧಾನವಾಗಿ ಕೈಯಿಂದ ತಿಕ್ಕಿ ತೊಳೆದರೆ ಕೊಳೆಯೆಲ್ಲಾ ಹೋಗುತ್ತದೆ. ಮತ್ತೊಮ್ಮೆ ಈಗ ಇನ್ನೊಂದು ಬಕೆಟ್ ನೀರಿನಲ್ಲಿ ಅದ್ದಬೇಕು ಕೊನೆಯಲ್ಲಿ ಕಂಫರ್ಟ್ ಹಾಗೂ ಅರ್ಧ ಮುಚ್ಚಳ ರಿವೈವ್ (Revive) ಹಾಕಿ ಮತ್ತೊಮ್ಮೆ ಜಾಲಾಡಿ ನೆರಳಿನಲ್ಲಿ ಒಣಹಾಕಿ ಇಷ್ಟು ಮಾಡಿದರೆ ನಿಮ್ಮ ರೇಷ್ಮೆ ಸೀರೆ ಕೊಳೆ ಹೋಗಿ ಹೊಳಪು ಬರುತ್ತದೆ.