2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿ/ ಪ್ರವಾಹ ದಿಂದ ಮನೆಹಾನಿಯಾದ ಕುಟುಂಬಗಳಿಗೆ ಹೆಚ್ಚುವರಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರ ಜಿಲ್ಲಾಧಿಕಾರಿಗಳಿಗೆ ಮಾಹಿತಿಗಳನ್ನು ನೀಡಲಾಗಿದೆ. SDRF/NDRF ಎಫ್ ಮಾರ್ಗಸೂಚಿಯಲ್ಲಿ ನಿಗದಿಪಡಿಸಿ ರುವ ದರಕ್ಕಿಂತ ಹೆಚ್ಚುವರಿ ಪರಿಷ್ಕೃತ ದರದಲ್ಲಿ ಪರಿಹಾರವನ್ನು ಪಾವತಿ ಸಲು ಆದೇಶಿಸಿದೆ.
ಆದ್ದರಿಂದ ಈ ವಿಷಯವಾಗಿ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿ ಈ ಮಾಹಿತಿಯ ಬಗ್ಗೆ ಹಲವಾರು ವಿಚಾರವನ್ನು ಚರ್ಚೆ ಮಾಡಿದ್ದಾರೆ. ಹೌದು ಹಾನಿಯಾದ ಮನೆಗಳ ಪುನರ್ ನಿರ್ಮಾಣ ಹಾಗೂ ದುರಸ್ಥಿ ಕಾರ್ಯಕ್ಕೆ ಹೆಚ್ಚಿನ ಪರಿಹಾರ ನೀಡುವ ಬಗ್ಗೆ.
ರಾಜ್ಯಪಾಲರ ಆಜ್ಞಾನುಸಾರ ಕಂದಾಯ ಇಲಾಖೆ ಆದೇಶ ಹೊರಡಿಸಿದೆ. ಹಾಗಾಗಿ ಈ ಮುಂಗಾರು ಹಂಗಾಮಿನಲ್ಲಿ ಅಂದರೆ ಈ ಸಾಲಿನ ಜೂನ್ 2023 ರಿಂದ 30 ಸೆಪ್ಟೆಂಬರ್ 2023ರ ವರೆಗೆ ಅತಿವೃಷ್ಟಿ ಪ್ರವಾಹದಿಂದ ಮನೆಗಳು ಹಾನಿಯಾಗಿದ್ದರೆ ಅಂತಹ ಕುಟುಂಬದವರಿಗೆ ಈ ಒಂದು ಪರಿಹಾರ ಸಿಗಲಿದೆ ಎಂದೇ ಹೇಳಬಹುದು.
ಹೌದು ಈ ಸಾಲಿನಲ್ಲಿ ಉಂಟಾದಂತಹ ದುರಸ್ತಿಯಿಂದ ಯಾವೆಲ್ಲ ಕುಟುಂಬಗಳಿಗೆ ಮನೆ ಇಲ್ಲವೋ ಅಂತವರು ಬೀದಿಗೆ ಬಂದಿದ್ದಾರೆ ಹೌದು ಮನೆಯನ್ನು ಕಳೆದುಕೊಂಡು ಇವರು ಹಲವಾರು ಕಡೆ ಜೀವನ ನಡೆಸುವಂತಹ ಪರಿಸ್ಥಿತಿಗೆ ಬಂದಿದ್ದಾರೆ. ಆದ್ದರಿಂದ ಅವರಿಗೆ ಅನುಕೂಲವಾಗುವಂತೆ ಅವರಿಗೆ ಮತ್ತೆ ಮನೆಯನ್ನು ನಿರ್ಮಾಣ ಮಾಡಿಕೊಡಬೇಕು ಎನ್ನುವ ಉದ್ದೇಶದಿಂದ ಈ ಒಂದು ಆದೇಶವನ್ನು ಹೊರಡಿಸಿದೆ.
ಆದ್ದರಿಂದ ಈ ಒಂದು ಸಾಲಿನಲ್ಲಿ ಯಾರೆಲ್ಲ ತಮ್ಮ ಮನೆಯನ್ನು ಕಳೆದು ಕೊಂಡಿರುತ್ತಾರೋ ಅವರು ಸರ್ಕಾರದಿಂದ ಹಣವನ್ನು ಪಡೆದುಕೊಳ್ಳು ವುದರ ಮೂಲಕ ಅವರು ಮತ್ತೆ ಅಂದರೆ ಪುನರ್ ಮನೆ ನಿರ್ಮಾಣದ ಪ್ರಯೋಜನವನ್ನು ಪಡೆಯಬಹುದಾಗಿದೆ. ಅದೇ ರೀತಿಯಾಗಿ ಈ ರೀತಿ ಮನೆ ಕಳೆದುಕೊಂಡಂತಹ ಕುಟುಂಬದವರಿಗೆ ಎಷ್ಟು ಹಣ ಸಿಗುತ್ತದೆ ಎಂದು ನೋಡುವುದಾದರೆ. ಈ ರೀತಿ ಮನೆ ಕಳೆದುಕೊಂಡ ಕುಟುಂಬ ಗಳನ್ನು ಮೂರು ವಿಭಾಗಗಳಾಗಿ ಮಾಡಲಾಗಿದೆ ಹೌದು ಅದು ಹೇಗೆ ಎಂದರೆ ಎ, ಬಿ ಮತ್ತು ಸಿ ಎಂದು.
* ಎ ವಿಭಾಗದ ಅಡಿಯಲ್ಲಿ ಬರುವಂತಹ ಮನೆಗಳು ಸಂಪೂರ್ಣವಾಗಿ ಮನೆ ಹಾಳಾಗಿರುವಂತಹ ವಿಭಾಗವಾಗಿದ್ದು. ಇಲ್ಲಿ ಶೇಕಡ 75ಕ್ಕಿಂತ ಹೆಚ್ಚು ಹಾನಿಯಾದ ಮನೆಗಳನ್ನು ಸಂಪೂರ್ಣ ಮನೆ ಹಾನಿ ಎ ವರ್ಗವನ್ನಾಗಿ ಪರಿಗಣಿಸಲಾಗಿದೆ. ಹಾಗಾಗಿ ಇವುಗಳ ಪುನರ್ ನಿರ್ಮಾಣಕ್ಕಾಗಿ SDRF/NDRF ಮಾರ್ಗ ಸೂಚಿ 1,20,000 ರೂಪಾಯಿ ರಾಜ್ಯ ಸರ್ಕಾರದ ಹೆಚ್ಚುವರಿ 3,80,000 ರೂಪಾಯಿ ಸೇರಿಸಿ ಒಟ್ಟು 5,00,000 ರೂಪಾಯಿ ಪರಿಷ್ಕೃತ ಪರಿಹಾರ ಸಿಗಲಿದೆ.
ಬಟ್ಟೆ ಒಗೆಯುವ ಮೊದಲು ಬರಿ ಇಷ್ಟು ಮಾಡಿ ಸಾಕು ಬಟ್ಟೆ ತುಂಬಾನೇ ಚೆನ್ನಾಗಿ ಕ್ಲೀನ್ ಆಗುತ್ತೆ.!
* ಬಿ ವಿಭಾಗದ ಅಡಿಯಲ್ಲಿ ಬರುವಂತಹ ಮನೆಗಳು ತೀವ್ರ ಮನೆಹಾನಿ ವಿಭಾಗವಾಗಿದೆ. ಇಲ್ಲಿ ಶೇಕಡ 25 ರಿಂದ 75 ರಷ್ಟು ಹಾನಿಯಾದ ಮನೆಗಳ ವಿಭಾಗವಾಗಿದೆ. ಇವುಗಳ ದುರಸ್ತಿಗೆ ಒಟ್ಟಾರೆಯಾಗಿ 3,00,000 ರೂಪಾಯಿ ಪರಿಷ್ಕೃತ ಪರಿಹಾರ ಸಿಗಲಿದೆ.
* ಸಿ ಭಾಗದ ಅಡಿಯಲ್ಲಿ ಬರುವಂತಹ ಮನೆಗಳು ಭಾಗಶಃ ಮನೆ ಹಾನಿ ವಿಭಾಗವಾಗಿದೆ. ಇಲ್ಲಿ ಶೇಕಡ 15 ರಿಂದ 25 ರಷ್ಟು ಹಾನಿಯಾದ ಮನೆಗಳನ್ನು ಭಾಗಶಃ ಮನೆ ಹಾನಿ ಸಿ ವರ್ಗವೆಂದು ಪರಿಗಣಿಸಲಾಗಿದೆ. ಇವುಗಳ ದುರಸ್ತಿಗೆ SDRF/NDRF ಮಾರ್ಗ ಸೂಚಿ 6500 ರೂಪಾಯಿ ರಾಜ್ಯ ಸರ್ಕಾರದ ಹೆಚ್ಚುವರಿ 43,500 ರೂಪಾಯಿ ಸೇರಿ ಒಟ್ಟು 50,000 ರೂಪಾಯಿ ಪರಿಷ್ಕೃತ ಪರಿಹಾರ ಸಿಗಲಿದೆ. ಈ ಮೊತ್ತವು ಜಿಲ್ಲಾಧಿಕಾರಿಗಳ PD ಖಾತೆಯಿಂದ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ DBT ಮೂಲಕ ವರ್ಗಾವಣೆ ಆಗುತ್ತದೆ.
ರೇಷನ್ ಕಾರ್ಡ್ ಅಪ್ಲೇಟ್ ಮಾಡದಿದ್ದರೆ ಗೃಹಲಕ್ಷ್ಮೀ ಹಣ ಸಿಗಲ್ಲ, ಇಲ್ಲಿದೆ ಅಷ್ಟೇಟ್ ಮಾಡುವ ಸರಳ ವಿಧಾನ.!