ಕನ್ನಡದಲ್ಲಿ ಹಲವಾರು ಕಾರ್ಯಕ್ರಮಗಳು ರಿಯಾಲಿಟಿ ಶೋಗಳು ಬರ್ತಾನೆ ಇರುತ್ತವೆ. ಆದರೆ ಜನರು ತುಂಬಾನೆ ಕಾಯುವುದು ಯಾವುದಕ್ಕೆ ಎಂದರೆ ಬಿಗ್ ಬಾಸ್ ಗೋಸ್ಕರ ಯಾವುದೇ ಒಂದು ರಿಯಾಲಿಟಿ ಶೋ ಶುರುವಾದಾಗ ತುಂಬಾ ಜನ ಕೇಳುವುದು ಬಿಗ್ ಬಾಸ್ ಯಾವಾಗ ಶುರು ಆಗುತ್ತೆ ಅಂತ ಹೇಳಿ ಕೇಳುತ್ತಾರೆ. ಅಷ್ಟೊಂದು ಮಟ್ಟಿಗೆ ಈ ಒಂದು ಶೋ ಜನತೆಗೆ ಸಾಕಷ್ಟ ಇಷ್ಟ ಅಂತ ಹೇಳಬಹುದು. ಅವರೆಲ್ಲರಿಗೂ ಕೂಡ ಬಿಗ್ ಬಾಸ್ ಅಭಿಮಾನಿಗಳಿಗೆ ಈ ಸಲ ಒಂದಲ್ಲ ಬದಲಾಗಿ ಎರಡು ಖುಷಿಯ ವಿಷಯ ಇರುವಂತದ್ದು . ಕಳೆದ ವರ್ಷ ಕೊರೋನ ಕಾರಣದಿಂದಾಗಿ ಬಿಗ್ ಬಾಸ್ ಅಷ್ಟೊಂದು ಮುಂದುವರಿದಿರಲಿಲ್ಲ ಮಧ್ಯದಲ್ಲಿ ಸ್ಟಾಪ್ ಆಗಿತ್ತು. ಆಮೇಲೆ ಮತ್ತೆ ಶುರುವಾಗಿತ್ತು ಇದಾದ ನಂತರ ಬಿಗ್ ಬಾಸ್ ಮಿನಿ ಸೀಸನ್ ಅನ್ನು ತೆಗೆದುಕೊಂಡು ಬರಲಾಗಿತ್ತು.
ಈ ಸಲ ಏನು ಮಾಡುತ್ತಾರೆ ಎಂದು ನೋಡುವುದಾದರೆ ಈ ಸಲ ಆಗಸ್ಟ್ ನಲ್ಲಿ ಮೊದಲ ಬಿಗ್ ಬಾಸ್ ಬರುವಂತದ್ದು ಈ ಒಂದು ಬಿಗ್ ಬಾಸ್ ಮುಗಿದ ಮೇಲೆ ಇನ್ನೊಂದು ಬಿಗ್ ಬಾಸ್ ಬರುತ್ತೆ. ಏನಿದು ಮೊದಲನೇ ಬಿಗ್ ಬಾಸ್ ಎರಡನೇ ಬಿಗ್ ಬಾಸ್ ಅಂತ ಕೇಳೋದಾದ್ರೆ ಅದಕ್ಕೆ ಉತ್ತರ ಈ ಕೆಳಗಿನಂತಿದೆ. ಕಳೆದ ವರ್ಷ ಬಿಗ್ ಬಾಸ್ ಅಂದರೆ ಕನ್ನಡ ಬಿಗ್ ಬಾಸ್ ಸೀಸನ್ 8 ಮೊದಲು ಪ್ರಸಾರವಾಗಿತ್ತು ಇದಾದ ಮೇಲೆ ಪ್ರಸಾರವಾಗಿದ್ದು ಬಿಗ್ ಬಾಸ್ ಮಿನಿ ಸೀಸನ್, ಒಂದು ಮಿನಿ ಸೀಸನ್ ನಲ್ಲಿ ಸೀರಿಯಲ್ ನ ನಟ ನಟಿಯರು ಮಾತ್ರನೇ ಇದ್ದರು. ಆದರೆ ಈ ಸಲ ಬಿಗ್ ಬಾಸ್ ಮಿನಿ ಸೀಸನ್ ಮೊದಲು ಶುರುವಾಗುತ್ತದೆ ಹಾಗೆಯೇ ಇದು ಕೇವಲ 42 ದಿನಗಳು ಕಾಲ ಮಾತ್ರ ನಡೆಯಲಿದ್ದು ಇದು ಕೇವಲ ವೂಟ್ ನಲ್ಲಿ ಮಾತ್ರಾನೇ ಪ್ರಸಾರವಾಗುತ್ತದೆ.
ಓ ಟಿ ಟಿ ನಲ್ಲಿ ಪ್ರಸಾರವಾಗುವಂತಹ ಈ ಮಿನಿ ಸೀಸನ್ ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪಾಪುಲರ್ ಆದಂತವರು ಜೊತೆಗೆ ರಾಜ್ಯದ ವಿವಿಧ ರಂಗದ ಕಲಾವಿದರು ಗಳನ್ನು ಕರೆ ತರಲಾಗುತ್ತದೆ ಎಂಬ ಮಾಹಿತಿ ಇರುವಂತದ್ದು. ಈ ಒಂದು ಮಿನಿ ಸೀಸನ್ ಮುಕ್ತಾಯವಾದ ಮೇಲೆ ಶುರುವಾಗುವುದೇ ಬಿಗ್ ಬಾಸ್ ಕನ್ನಡ ಸೀಸನ್ 9 ಅಂತ ಹೇಳಿದರೆ ದೊಡ್ಡ ರೀಸನ್ ಅಂತ ಹೇಳಬಹುದು. ನೂರು ದಿನಗಳ ರಿಯಾಲಿಟಿ ಎಪಿಸೋಡ್ ಗಳನ್ನು ಹೊಂದಿರುವoತಹ ಶೋ ಇದಾಗಿರುತ್ತದೆ ಇನ್ನೊಂದು ಪ್ರಮುಖವಾದಂತಹ ಮಾಹಿತಿ ಏನು ಎಂದು ನೋಡುವುದಾದರೆ ಈ ಒಂದು ಮಿನಿ ಸೀಸನ್.
ಬಿಗ್ ಬಾಸ್ ಮಿನಿ ಸೀಸನ್ ಏನು ಇದು ಆಗಸ್ಟ್ ನಲ್ಲಿ ಬರುತ್ತೆ ಇದರಲ್ಲೂ ಕೂಡ ಶನಿವಾರವೇ ಎಲಿಮಿನೇಶನ್ ಇರುತ್ತದೆ. ಹಾಗೆಯೇ ರವಿವಾರ ಕಿಚ್ಚ ಸುದೀಪ್ ಅವರು ಬಂದು ಯಾವ ರೀತಿ ಪ್ರತಿವಾರ ಮಾತನಾಡುತ್ತಿದ್ದರೋ ಹಾಗೆಯೇ ಈ ಓ ಟಿ ಟಿ ಪ್ಲಾಟ್ ಫಾರ್ಮ್ ನಲ್ಲಿ ಪ್ರಸಾರವಾಗುವ ಬಿಗ್ ಬಾಸ್ ನಲ್ಲಿಯೂ ಕೂಡ ಮಾತನಾಡಲಿದ್ದಾರೆ. ಶನಿವಾರವೇ ಈ ಒಂದು ಎಪಿಸೋಡ್ ಅನ್ನು ಶೂಟ್ ಮಾಡಲಾಗುತ್ತದೆ. ಶನಿವಾರ ಸಂಜೆ ಪ್ರಸಾರ ಮಾಡಲಾಗುತ್ತದೆ ಹಾಗೆಯೇ ಭಾನುವಾರ ವಾರದ ಮಾತುಕತೆ ಕಿಚ್ಚ ಸುದೀಪನಜೊತೆ ಅನ್ನುವಂತಹ ಎಪಿಸೋಡ್ ಪ್ರಸಾರವಾಗುತ್ತಿತ್ತೋ ಅದು ಕೂಡ ಮಿನಿ ಸೀಸನ್ ನಲ್ಲಿ ಇರುತ್ತದೆ. ಬಿಗ್ ಬಾಸ್ ಕಾರ್ಯಕ್ರಮದ ಬಗ್ಗೆ ನಿಮ್ಮ ಅಭಿಪ್ರಾಯವೇನು.? ಬಿಗ್ ಬಾಸ್ ಗಾಗಿ ನೀವು ಕಾಯ್ತ ಇದ್ದೀರ.? ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ನಮಗೆ ತಿಳಿಸಿ.