ಈಗ ಕೆಲ ವರ್ಷಗಳ ಹಿಂದಿನವರೆಗೂ ಕೂಡ ಡಯಾಬಿಟೀಸ್ ಇರುವವರು ಅನ್ನ ತಿನ್ನಬಾರದು ಚಪಾತಿ ತಿನ್ನುವುದರಿಂದ ಅವರ ಡಯಾಬಿಟಿಸ್ ಕಂಟ್ರೋಲ್ ಆಗುತ್ತದೆ ಮತ್ತು ಡಯಟ್ ಮಾಡುವವರು ಅನ್ನದ ಬದಲು ಚಪಾತಿ ತಿನ್ನಬಹುದು. ಈ ಮಾತನ್ನು ಜನರು ನಂಬುತ್ತಿದ್ದರು.
ಆದರೆ ಈಗ ನಿಧಾನವಾಗಿ ಜನರಿಗೆ ಆಹಾರದ ಬಗ್ಗೆ ತಿಳುವಳಿಕೆ ಬರುತ್ತಿದೆ ಯಾವ ಆಹಾರದಲ್ಲಿ ಏನೆಲ್ಲಾ ಪೋಷಕಾಂಶಗಳು ಇರುತ್ತವೆ? ಯಾವುದು ಎಷ್ಟು ಪ್ರಮಾಣದಲ್ಲಿ ಇರಬೇಕು? ಎನ್ನುವುದನ್ನು ಲೆಕ್ಕಾಚಾರ ಹಾಕಿ ಒಂದು ಧಾನ್ಯಕ್ಕೂ ಮತ್ತೊಂದು ಧಾನ್ಯಕ್ಕೂ ಕಂಪೇರ್ ಮಾಡುವಷ್ಟು ಕಲಿತಿದ್ದಾರೆ.
ಇಷ್ಟು ತಿಳಿಯದೆ ಇದ್ದರೂ ಎಲ್ಲರ ಮನಸಿನಲ್ಲೂ ಈಗ ಗೋಧಿ ತಿನ್ನುವುದು ನಿಜಕ್ಕೂ ಶುಗರ್ ಕಂಟ್ರೋಲ್ ಮಾಡುತ್ತದೆಯಾ ಎನ್ನುವ ಪ್ರಶ್ನೆಯಂತೂ ಖಂಡಿತ ಮೂಡಿದೆ, ಅದಕ್ಕೆ ಉತ್ತರ ಈ ಅಂಕಣದಲ್ಲಿ ಇದೆ ನೋಡಿ. ಎಲ್ಲರಿಗೂ ಗೊತ್ತಿರುವ ಹಾಗೆ ದಕ್ಷಿಣ ಭಾರತದಲ್ಲಿ ಅಕ್ಕಿ ಜೋಳ ರಾಗಿ ಪ್ರಮುಖ ಧಾನ್ಯ ಮತ್ತು ನಮ್ಮ ಪೂರ್ವಿಕರು ಕೂಡ ಇದನ್ನೇ ಸೇವಿಸುತ್ತಿದ್ದರು ಸೈನ್ಸ್ ಕೂಡ ಇದನ್ನು ಹೇಳುತ್ತದೆ.
ಯಾವುದು ನಮ್ಮ ನೆಲದ ಆಹಾರ ಅದನ್ನು ತಿನ್ನುವುದರಿಂದ ನಾವು ಆರೋಗ್ಯವಾಗಿರುತ್ತೇವೆ ಎಂದು. ಆದರೆ ಗೋಧಿ ಎನ್ನುವುದು ನಮ್ಮ ದೇಶದಲ್ಲಿ ಹೇಳುವುದಾದರೆ ಉತ್ತರ ಭಾರತದಲ್ಲಿ ಹೆಚ್ಚು ಬಳಕೆಯಲ್ಲಿದೆ ಮತ್ತು ಅದಕ್ಕೂ ಮುನ್ನ ವಿದೇಶಗಳ ಧಾನ್ಯವಾಗಿದೆ ಇದು. ಸ್ವತಂತ್ರ ಪೂರ್ವದಲ್ಲಿ ಒತ್ತಾಯಪೂರ್ವಕವಾಗಿ ಏಷ್ಯಾದ ಕೆಲ ದೇಶಗಳಿಗೆ ಗೋಧಿ ಪರಿಚಯ ಮಾಡಿಸಲಾಯಿತು ಅದರಲ್ಲೂ ನೆರವಾಗಿ ಈ ವಿಚಾರದಲ್ಲಿ ಅಮೆರಿಕವನ್ನು ದೂಷಿಸಿದರೆ ತಪ್ಪಿಲ್ಲ.
ಅಮೇರಿಕಾವು ಭಾರತಕ್ಕೆ ಸ್ವಾತಂತ್ರ್ಯ ಸಿಗುವ ಕೆಲವೇ ವರ್ಷಗಳ ಹಿಂದೆ ತನ್ನ ದೇಶದಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಹಾಕಿ ಬಹಳ ದೊಡ್ಡ ಪ್ರಮಾಣದಲ್ಲಿ ಗೋಧಿಯನ್ನು ಬೆಳೆಯಿತು, ತನ್ನ ದೇಶದ ಬೇಡಿಕೆಗಿಂತಲೂ ಹೆಚ್ಚಾಗಿ ಬೆಳೆದ ಗೋಧಿಯನ್ನು ಬೇರೆ ದೇಶಗಳಿಗೆ ತಲುಪಿಸುವ ಸಲುವಾಗಿ ನಿಮ್ಮ ದೇಶಗಳಲ್ಲಿ ಬೆಳೆಯುತ್ತಿರುವ ಆಹಾರ ಧಾನ್ಯಗಳಲ್ಲಿ ಪೋಷಕಾಂಶ ಕಡಿಮೆ ಎಂದು ಹೇಳಿ ಉಚಿತವಾಗಿ ಗೋಧಿ ಕೊಟ್ಟು ಗೋಧಿ ಪರಿಚಯ ಮಾಡಿಸಿತು.
ಮತ್ತು ಇಲ್ಲೂ ಕೂಡ ಆ ಸಮಯದಲ್ಲಿ ವಿದೇಶಿಗರ ಮುಷ್ಟಿಯಲ್ಲಿದ್ದ ಭಾರತವು ಒತ್ತಾಯವಾಗಿಯೂ ಅಥವಾ ತಿಳುವಳಿಕೆ ಇಲ್ಲದೆಯೋ ಅದನ್ನು ಬಳಸುವ ಹಾಗೂ ಬೆಳೆಯುವ ಪರಿಸ್ಥಿತಿಗೆ ಬಂತು. ನಂತರ ಜನರು ಗೋಧಿ ತಿನ್ನುವುದಕ್ಕೆ ಒಗ್ಗಿಕೊಂಡರು. ಅತಿಯಾಗಿ ಗೋಧಿ ಪದಾರ್ಥಗಳನ್ನು ತಿನ್ನುತ್ತಿರುವವರಲ್ಲಿ ಅಸಿಡಿಟಿ ಹಾಗೂ ಗ್ಯಾಸ್ ಸ್ಟ್ರೈಟಿಸಿಸ್ ನಂತಹ ಸಮಸ್ಯೆ ಕಾಮನ್ ಆಗಿರುತ್ತದೆ.
ಆದರೆ ನಮಗೆ ಇದು ಅದರಿಂದಲೇ ಬರುತ್ತಿದೆ ಎನ್ನುವುದನ್ನು ತಿಳಿದುಕೊಳ್ಳದೆ ಇರುವಷ್ಟು ಇದು ಹತ್ತಿರವಾಗಿ ಹೋಯಿತು. ಈ ಬಗ್ಗೆ ನ್ಯೂಟ್ರಿಷನ್ ಗಳು ಹೇಳುವಂತೆ ಇರುವ ಸತ್ಯಾಂಶವೇನೆಂದರೆ, ಗೋಧಿಯಲ್ಲಿ ನಮ್ಮ ಅಕ್ಕಿಗಿಂತಲೂ ಕೆಲವು ಪ್ರೋಟೀನ್ ಗಳು ಹೆಚ್ಚಿಗೆ ಇರಬಹುದು ಆದರೆ ಇವು ದೇಹಕ್ಕೆ ಪೂರಕವಾಗಿಲ್ಲ, ಇವು ದೇಹಕ್ಕೆ ದಕ್ಕುವುದು ಇಲ್ಲ.
ಗೋಧಿಯಲ್ಲಿ ಗ್ಲೂಟೇನ್ ಅಂಶ ಹೆಚ್ಚಾಗಿದೆ, ಇದು ನಮ್ಮ ಜೀರ್ಣಶಕ್ತಿಯನ್ನು ಕುಂಠಿತ ಮಾಡುತ್ತದೆ. ಗೋಧಿಯನ್ನು ಜನಟಿಕಲಿ ಮಾಡಿಫೈಡ್ ಧಾನ್ಯ ಎಂದು ಕರೆಯುತ್ತೇವೆ ಇದು ಅವೈಜ್ಞಾನಿಕವಾಗಿ ತಯಾರಾಗಿರುವುದರಿಂದ ಇದಕ್ಕಿಂತಲೂ ನಮ್ಮ ಅಕ್ಕಿ ಅಂದರೆ ಭತ್ತವು ಎಷ್ಟೋ ಪ್ರಮಾಣದಲ್ಲಿ ಬೆಸ್ಟ್.
ಹಾಗಾಗಿ ಗೋಧಿಯಿಂದ ಶುಗರ್ ಕಂಟ್ರೋಲ್ ಆಗುತ್ತದೆ ಡಯಾಬಿಟಿಸ್ ಇರುವವರು ಚಪಾತಿಯನ್ನು ತಿನ್ನಲೇಬೇಕು ಎನ್ನುವ ಯಾವುದೇ ಭರವಸೆ ಇಲ್ಲ ಎಂದು ಆಹಾರ ತಜ್ಞರೇ ಹೇಳುತ್ತಿದ್ದಾರೆ. ಹಾಗಾಗಿ ಚಪಾತಿ ಅಭ್ಯಾಸ ಇಲ್ಲದೆ ಇರುವವರು ಇದನ್ನು ಬಳಸುವ ಅವಶ್ಯಕತೆ ಇಲ್ಲ ಅಥವಾ ಅತಿಯಾಗಿ ಬಳಸುತ್ತಿರುವವರು ನಿಧಾನಕ್ಕೆ ಕಂಟ್ರೋಲ್ ಮಾಡಿಕೊಳ್ಳಿ.