ಮಹಿಳೆಯರಿಗೆ 40 ರಿಂದ 50 ವರ್ಷಗಳ ಸಮಯದಲ್ಲಿ ಅವರ ಋತುಚಕ್ರದ ಪ್ರಕ್ರಿಯೆ ನಿಲ್ಲುತ್ತದೆ. ಸಂತಾನೋತ್ಪತ್ತಿಗೆ ಕ್ರಿಯೆ ಕ್ಷೀಣಿಸಿ ಹಲವು ರೀತಿಯ ಹಾರ್ಮೋನ್ ವೇರಿಯೇಶನ್ ಗಳು ದೇಹದಲ್ಲಿ ಆಗುತ್ತವೆ. ಈ ಸಮಯವನ್ನು ಮೆನುಪಾಸ್ ಎಂದು ಮೆಡಿಕಲ್ ಭಾಷೆಯಲ್ಲಿ ಕರೆಯುತ್ತಾರೆ.
ಈ ಸಮಯದಲ್ಲಿ ದೈಹಿಕವಾಗಿ ಹಲವು ರೀತಿಯ ನೋ’ವುಗಳು ಮಾತ್ರವಲ್ಲದೆ ಮಾನಸಿಕ ಕಸಿವಿಸಿಗಳು ಕೂಡ ಇರುತ್ತವೆ. ಸಾಮಾನ್ಯವಾಗಿ ಅವರಿಗೆ ಮುಖ ಬಿಸಿ ಆಗುವುದು, ರಾತ್ರಿ ಹೆಚ್ಚು ಬೆವರು ಬರುವುದು, ನಿದ್ರಾಹೀನತೆ, ಬೇಗನೆ ಆಯಾಸಗೊಳ್ಳುವುದು, ಮಾನಸಿಕ ಒತ್ತಡ, ಕಿರಿಕಿರಿ, ಕೋ’ಪ, ಲೈಂಗಿಕತೆಯಲ್ಲಿ ನಿರಾಸಕ್ತಿ ಇದರಿಂದ ಖಿನ್ನತೆ, ತಲೆನೋವ, ತಲೆಸುತ್ತು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.
ಇವುಗಳ ಜೊತೆಗೆ ದೇಹದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಕಡಿಮೆ ಆಗುವುದರಿಂದ ಕ್ಯಾಲ್ಸಿಯಂ ಕೊರತೆ ಉಂಟಾಗಿ ಮೂಳೆಗಳು ಬಲಹೀನವಾಗುತ್ತವೆ. ಮಂಡಿ ನೋವು, ಸ್ನಾಯು ನೋವು, ಬೆನ್ನು ನೋವು, ಸೊಂಟ ನೋವು ಇತ್ಯಾದಿಗಳು ಭಾದಿಸುತ್ತವೆ. ಈ ಸಮಯದಲ್ಲಿ ಅವರಿಗೆ ದೈಹಿಕವಾಗಿ ಕಾಡುವ ಕಾಯಿಲೆಗಳಿಗೆ ಅಷ್ಟೇ ಅಲ್ಲದೆ ಮಾನಸಿಕ ಕಾಡುವ ಸಮಸ್ಯೆಗಳಿಗೂ ಕೂಡ ಚಿಕಿತ್ಸೆ ಬೇಕು.
ಅವರು ಈ ವಿಚಾರವಾಗಿ ಬಹಳ ತಲೆಕೆಡಿಸಿಕೊಳ್ಳುವುದರಿಂದ ಅವರಿಗೆ ಸಾಂತ್ವನ ಹಾಗೂ ಧೈರ್ಯದ ಮಾತುಗಳನ್ನು ಹೇಳಿ ಸಮಾಧಾನ ಪಡಿಸಬೇಕು. ಈ ಸಮಯದಲ್ಲಿ ಅವರಿಗೆ ಗೊತ್ತಿಲ್ಲದ ರೀತಿಯಲ್ಲಿ ಅನೇಕ ರೀತಿಯ ಚಟಪಡಿಕೆ ಇರುತ್ತದೆ. ಯಾವಾಗಲೂ ಒಬ್ಬರೇ ಇರಬೇಕು ಎಲಿಸುವುದು, ಏನನ್ನೋ ಯೋಚನೆ ಮಾಡುತ್ತಾ ಕಳೆದುಹೋಗುವುದು, ಸದಾ ಆಕ್ಟಿವ್ ಆಗಿದ್ದವರು ಇದ್ದಕ್ಕಿದ್ದಂತೆ ಮೌನವಾಗಿ ಸೈಲೆಂಟಾಗಿ ಬಿಡುವುದು.
ಈ ರೀತಿಯೆಲ್ಲಾ ಆಗುತ್ತಿರುತ್ತದೆ. ಅದನ್ನು ಅರ್ಥ ಮಾಡಿಕೊಂಡು ಕುಟುಂಬದಲ್ಲಿರುವ ಇತರರು ಆ ಪರಿಸ್ಥಿತಿಯನ್ನು ಅವರು ಎದುರಿಸಲು ಸಹಕರಿಸಬೇಕು. ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡು ಉತ್ತಮ ಆಹಾರ ಶೈಲಿ, ಅದರಲ್ಲೂ ಹೆಚ್ಚು ಜೀವಸತ್ವ ಇರುವ ಪೋಷಕಾಂಶಗಳು ಹೇರಳವಾಗಿರುವ ಕ್ಯಾಲ್ಸಿಯಂ ಕೊರತೆಯನ್ನು ನೀಗಿಸುವಂತಹ ಆಹಾರ ಪದಾರ್ಥಗಳನ್ನು ಸೇವಿಸಬೇಕು.
ಈ ಸಮಯದಲ್ಲಿ ಅವರಿಗೆ ಬಹಳಷ್ಟು ವಿಶ್ರಾಂತಿಯ ಅವಶ್ಯಕತೆ ಇರುತ್ತದೆ ಮತ್ತು ಅವರು ಸಂತೋಷವಾಗಿರುವಂತೆ ನೋಡಿಕೊಳ್ಳುವುದು ಬಹಳ ಒಳ್ಳೆಯದು ಸಹಿಸಲಾಗದಷ್ಟು ಯಾವುದಾದರೂ ಸಮಸ್ಸೆ ಇದ್ದರೆ ಸ್ತ್ರೀರೋಗ ತಜ್ಞರ ಬಳಿ ಹೇಳಿಕೊಂಡು ಅದಕ್ಕೆ ಈಸ್ಟ್ರೋಜನ್ ಹಾರ್ಮೋನ್ ಚಿಕಿತ್ಸೆ ಕೂಡ ಪಡೆಯಬಹುದು. ಇಲ್ಲವಾದಲ್ಲಿ ಮನೆಮದ್ದುಗಳ ಮೂಲಕವೂ ಕೂಡ ಗುಣಪಡಿಸಿಕೊಳ್ಳಬಹುದು.
ಈ ರೀತಿ ಹಾರ್ಮೋನ್ ವೇರಿಯೇಷನ್ ಕಂಟ್ರೋಲ್ ಮಾಡುವಂತಹ ಉತ್ತಮವಾದ ಮನೆ ಮದ್ದುಗಳು ಮೋನೋಪಾಸ್ ಹಂತದಲ್ಲಿರುವ ಮಹಿಳೆಯರಿಗಾಗಿ ಹೀಗಿದೆ ನೋಡಿ.
* ದಿನದಲ್ಲಿ ಎರಡು ಅಥವಾ ಮೂರು ಬಾರಿ ಒಂದು ಲೋಟ ಹಾಲನ್ನು ಕುಡಿಯುವುದು ಬಹಳ ಒಳ್ಳೆಯದು. ಇದರಿಂದ ಕ್ಯಾಲ್ಸಿಯಂ ಹಾಗೂ ವಿಟಮಿನ್ ಡಿ ಅವರ ದೇಹಕ್ಕೆ ಹೇರಳವಾಗಿ ಸಿಗುತ್ತದೆ
* ಬೀಟ್ರೋಟ್ ರಸವನ್ನು ಕೂಡ ಸೇವಿಸಬಹುದು ದಿನದಲ್ಲಿ 60ರಿಂದ 70ml ಬೀಟ್ರೂಟ್ ರಸವನ್ನು ದಿನದಲ್ಲಿ ಎರಡು ಬಾರಿ ಸೇವಿಸಿದರೆ ರಕ್ತ ಹೀನತೆಯು ಕಂಟ್ರೋಲ್ ಗೆ ಬರುತ್ತದೆ.
* 40ರ ವಯಸ್ಸಿಗೆ ಬರುತ್ತಿದ್ದಂತೆ ಈ ಪ್ರಕ್ರಿಯ ಸಹಜ ಎನ್ನುವುದನ್ನು ಎದುರಿಸಲು ಮಾನಸಿಕವಾಗಿ ಸಿದ್ದರಾಗಬೇಕು. ಹಾಗೆ ಆ ಸಮಯದಲ್ಲಿ ಕ್ಯಾಲ್ಸಿಯಂ ಹೇರಳವಾಗಿರುವ ರಾಗಿ, ನುಗ್ಗೆ ಸೊಪ್ಪು, ಕಬ್ಬು ಮುಂತಾದ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು. ಆರೋಗ್ಯದ ಬಗ್ಗೆ ಕಾಳಜಿ ಮಾಡಬೇಕು. ಹಸಿ ತರಕಾರಿಗಳು, ಹಸಿರು ಸೊಪ್ಪುಗಳು, ಮೊಳಕೆ ಕಟ್ಟಿದ ಕಾಳುಗಳು ಇವುಗಳನ್ನು ತಿನ್ನಬೇಕು.
* ಚೆನ್ನಾಗಿ ನೀರು ಕುಡಿಯಬೇಕು.
* ಪ್ರತಿದಿನವೂ ನಿಯಮಿತವಾದ ವ್ಯಾಯಾಮ, ಧ್ಯಾನ ಅಥವಾ ಯೋಗ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧ್ಯವಾದಷ್ಟು ಆಕ್ಟಿವ್ ಆಗಿರಲು ಪ್ರಯತ್ನಿಸಬೇಕು.
* ದಿನದಲ್ಲಿ ಒಂದು ಬಾರಿ ಒಂದು ಚಮಚ ಅತಿಮಧುರವನ್ನು ಸೇವಿಸಬೇಕು.