ಉದ್ಯೋಗಿನಿ ಯೋಜನೆ ಎಂದರೆ ಮಹಿಳೆಯರಿಗೆ ಅಂದರೆ ಅವರು ಯಾರದ್ದೇ ಸಹಾಯ ಇಲ್ಲದೆ ಅವರೇ ಒಂದು ವ್ಯಾಪಾರ ವ್ಯವಹಾರವನ್ನು ಮಾಡುವುದರ ಮೂಲಕ ಹಣವನ್ನು ಸಂಪಾದನೆ ಮಾಡುವ ಉದ್ದೇಶ ದಿಂದ ಸರ್ಕಾರ ಈ ಒಂದು ಯೋಜನೆಯನ್ನು ಜಾರಿಗೆ ತಂದಿದೆ ಹೌದು ಮನೆಯಲ್ಲಿ ಇರುವಂತಹ ಮಹಿಳೆಯರು ಸಣ್ಣಪುಟ್ಟ ವ್ಯಾಪಾರ ವ್ಯವಹಾರ ಮಾಡುವುದಕ್ಕೆ.
ಸರ್ಕಾರದ ಕಡೆಯಿಂದ ಒಂದುವರೆ ಲಕ್ಷದಿಂದ 3 ಲಕ್ಷದವರೆಗೆ ಯಾವುದೇ ರೀತಿಯ ಬಡ್ಡಿ ಇಲ್ಲದೆ ಇರುವಂತಹ ಸಾಲವನ್ನು ಕೊಡುತ್ತಿದೆ ಕೇವಲ ಹಣವನ್ನಷ್ಟೇ ಮಾತ್ರ ಕಟ್ಟಬೇಕು ಯಾವುದೇ ರೀತಿಯ ಬಡ್ಡಿಯನ್ನು ಕಟ್ಟುವ ಅವಶ್ಯಕತೆ ಇಲ್ಲ ಇದರಿಂದ ಆ ಮಹಿಳೆಯರಿಗೆ ತುಂಬಾ ಅನುಕೂಲವಾಗುತ್ತದೆ ಎಂದೇ ಹೇಳಬಹುದು.
ಈ ಸುದ್ದಿ ನೋಡಿ:- ಈ ಒಂದು ದೀಪವನ್ನು ಮನೆಯಲ್ಲಿ ಮೂರು ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ…….||
ಹೌದು ಇಲ್ಲಿ ಬರುವಂತಹ ಹಣ ಅವರಿಗೆ ತುಂಬಾ ಅನುಕೂಲವಾಗುತ್ತದೆ ಅವರ ಒಂದು ಸಂಸಾರವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತದೆ ಎಂದೇ ಹೇಳಬಹುದು. ಯಾರಿಗೆ ಆದರೂ ಕೂಡ ತಮ್ಮದೇ ಆದ ಒಂದು ಸ್ವಂತ ವ್ಯಾಪಾರವನ್ನು ಮಾಡಬೇಕು ಅದರಿಂದ ಹಣವನ್ನು ಸಂಪಾದನೆ ಮಾಡಬೇಕು ಎಂಬ ಆಸೆ ಇದ್ದೇ ಇರುತ್ತದೆ.
ಆದರೆ ಎಲ್ಲರಿಗೂ ಕೂಡ ಅದು ಸಾಧ್ಯವಾಗುವುದಿಲ್ಲ ಕೆಲವೊಂದಷ್ಟು ಜನರ ಬಳಿ ಹಣ ಇರುತ್ತದೆ ಕೆಲವೊಂದಷ್ಟು ಜನರ ಬಳಿ ಹಣ ಇರುವುದಿಲ್ಲ ಅಂತಹವರು ಈ ಒಂದು ಯೋಜನೆಗೆ ಅರ್ಜಿಯನ್ನು ಹಾಕುವುದರ ಮೂಲಕ ಸರ್ಕಾರದಿಂದ ಕೊಡುವಂತಹ ಈ ಒಂದು ಹಣವನ್ನು ಪಡೆದುಕೊಂಡು ತಮ್ಮದೇ ಆದ ಒಂದು ಸ್ವಂತ ವ್ಯಾಪಾರ ವ್ಯವಹಾರ ಮಾಡುವುದು ಒಳ್ಳೆಯದು.
ಈ ಸುದ್ದಿ ನೋಡಿ:- 1 ಫೆಬ್ರವರಿ 2024, ಕೇಂದ್ರದಿಂದ ಬಜೆಟ್ ಮಂಡನೆ ಈ 10 ಘೋಷಣೆಗಳು
ಬೇಕಾಗುವ ಅರ್ಹತೆಗಳು :-
ಈ ಒಂದು ಯೋಜನೆಯನ್ನು ಹೇಗೆ ಹಾಕುವುದು ಈ ಒಂದು ಯೋಜನೆಗೆ ಅರ್ಜಿ ಹಾಕುವುದಕ್ಕೆ ಯಾವುದೆಲ್ಲ ದಾಖಲಾತಿಗಳು ಬೇಕು. ಯಾರೆಲ್ಲ ಈ ಯೋಜನೆಗೆ ಅರ್ಹರು ಹೀಗೆ ಈ ಎಲ್ಲ ವಿಚಾರವಾಗಿ ಸಂಬಂಧಿಸಿದ ಹಲವಾರು ಮಾಹಿತಿಗಳ ಬಗ್ಗೆ ಈದಿನ ತಿಳಿಯೋಣ.
ಇಲ್ಲಿ ನೀವು ಅರ್ಜಿಯನ್ನು ಹಾಕುವುದಕ್ಕೆ ಕೇವಲ ಒಂದು ವ್ಯಾಪಾರ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರೆ ಕೊಡುವುದಿಲ್ಲ ನೀವು ಯಾವ ಒಂದು ವ್ಯಾಪಾರ ಮಾಡುತ್ತೀರೋ ಅದಕ್ಕೆ ಸಂಪೂರ್ಣವಾದ ದಾಖಲಾತಿಗಳನ್ನು ಕೊಡುವುದರ ಮೂಲಕ ನೀವು ಇಲ್ಲಿ ಕೊಡುವಂತಹ ಲೋನ್ ಹಣವನ್ನು ಪಡೆಯಬಹುದು.
ಈ ಸುದ್ದಿ ನೋಡಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||
ಹಾಗಾದರೆ ಈ ಉದ್ಯೋಗಿನಿ ಯೋಜನೆಯನ್ನು ಪಡೆದುಕೊಳ್ಳಬೇಕು ಎಂದರೆ ವಯಸ್ಸಿನ ಮಿತಿ ಎಷ್ಟಿರಬೇಕಾಗುತ್ತದೆ ಎಂದು ನೋಡುವುದಾದರೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಹಾಗೂ ಗರಿಷ್ಠ 55 ವರ್ಷ ವಯಸ್ಸಿನವರು ಕೂಡ ಯೋಜನೆಗೆ ಅರ್ಜಿ ಸಲ್ಲಿಸುವುದರ ಮೂಲಕ ಹಣ ಪಡೆಯಬಹುದು.
ಅರ್ಹತೆಗಳು :-
* ನೀವು ಇಲ್ಲಿ ಹಣ ಪಡೆದುಕೊಳ್ಳಬೇಕು ಎಂದರೆ ಕರ್ನಾಟಕದ ಖಾಯಂ ನಿವಾಸಿ ಆಗಿರಬೇಕು.
* ಪರಿಶಿಷ್ಟ ಜಾತಿ ಮತ್ತು ಪಂಗಡ ವರ್ಗದವರಿಗೆ ನೀವೇನಾದರೂ ಮೂರು ಲಕ್ಷ ಹಣ ಪಡೆದುಕೊಂಡಿದ್ದರೆ 40% ಸಬ್ಸಿಡಿ ಎಂದು ಹೇಳಿ ಒಂದುವರೆ ಲಕ್ಷದವರೆಗೆ ಸರ್ಕಾರವೇ ಅದನ್ನು ಕಟ್ಟುತ್ತದೆ ಉಳಿದ ಒಂದುವರೆ ಲಕ್ಷ ಹಣವನ್ನು ಮಾತ್ರ ನೀವು ಪಾವತಿಸಬೇಕು.
* ಇನ್ನು ಸಾಮಾನ್ಯ ವರ್ಗದ ಮಹಿಳೆಯರಿಗೆ ನೀವೇನಾದರೂ ಮೂರು ಲಕ್ಷ ಹಣ ಪಡೆದುಕೊಂಡಿದ್ದರೆ 30% ಸಬ್ಸಿಡಿ ಎಂದು ಹೇಳಿ 90 ಸಾವಿರ ಹಣವನ್ನು ಸರ್ಕಾರವೇ ಕಟ್ಟುತ್ತದೆ ಉಳಿದ ಹಣವನ್ನು ನೀವು ಪಾವತಿಸಬೇಕು.
ಈ ಸುದ್ದಿ ನೋಡಿ:- ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||
ಬೇಕಾಗುವ ದಾಖಲಾತಿಗಳು :–
* ಆಧಾರ್ ಕಾರ್ಡ್
* ರೇಷನ್ ಕಾರ್ಡ್
* ಜಾತಿ ಮತ್ತು ಆದಾಯ ಪ್ರಮಾಣ ಪತ್ರ
* ಜನನ ಪ್ರಮಾಣ ಪತ್ರ
* ಬ್ಯಾಂಕ್ ಖಾತೆಯ ವಿವರ
* ಪಾಸ್ಪೋರ್ಟ್ ಅಳತೆಯ ಫೋಟೋ
* ಸ್ವಂತ ಉದ್ಯೋಗದ ವಿವರ
ಇದಿಷ್ಟು ತೆಗೆದುಕೊಂಡು ಹೋಗಿ ನಿಮ್ಮ ಹತ್ತಿರದ ಅಂಗನವಾಡಿ ಕೇಂದ್ರದಲ್ಲಿ ನೀಡಬೇಕು ಅಂದರೆ ಅಲ್ಲಿ ಕೊಡುವಂತಹ ಅರ್ಜಿಯನ್ನು ಭರ್ತಿ ಅವರಿಗೆ ಕೊಡಬೇಕು ಆನಂತರ ಅಲ್ಲಿ ಆಯ್ಕೆ ಆಗಿದ್ದೀರಾ ಇಲ್ಲವ ಎನ್ನುವುದನ್ನು ಅವರೇ ನಿಮಗೆ ತಿಳಿಸುತ್ತಾರೆ. ಇದರ ಮುಖಾಂತರ ನೀವು ಹಣವನ್ನು ಪಡೆದು ನಿಮ್ಮ ಸ್ವಂತ ವ್ಯಾಪಾರದ ಕನಸನ್ನು ಈಡೇರಿಸಿಕೊಳ್ಳಬಹುದು.