ಶುಕ್ರವಾರ ಈ ರೀತಿ ದೀಪಾರಾಧನೆ ಮಾಡಿದರೆ ಲಕ್ಷ್ಮಿ ಕಟಾಕ್ಷ ದೊರೆಯು ತ್ತದೆ. ಪ್ರತಿಯೊಬ್ಬ ಮನುಷ್ಯನೂ ಮುಂದುವರೆಯಬೇಕು ಎಂದರೆ ಮಹಾಲಕ್ಷ್ಮಿಯ ಅನುಗ್ರಹ ಇದ್ದರೆ ಸಾಧ್ಯ ಆಗುತ್ತದೆ. ಯಾವುದೇ ಒಂದು ಕ್ಷೇತ್ರದಲ್ಲಿ ನೋಡಿದರೂ ಹಣ ಬೇಕೆ ಬೇಕು ಎಂತಹ ಕ್ಷೇತ್ರದಲ್ಲಿ ಅಂತಿಮವಾಗಿ ಹಣವೇ ಒಂದು ಅಂತಿಮವಾಗಿ ಗೋಚರಿಸುತ್ತದೆ.
ಹಾಗಾಗಿ ಈ ಮಹಾ ಲಕ್ಷ್ಮಿಯ ಅನುಗ್ರಹ ನಾವು ಪಡೆಯಬೇಕು ಎಂದರೆ ನಾವು ಮನೆಯಲ್ಲಿ ಸ್ವಲ್ಪ ನಿಯಮ ನಿಷ್ಠೆಯಿಂದ ಪೂಜೆ ಪುನಸ್ಕಾರ ಗಳನ್ನು ಮಾಡಬೇಕು. ಇಂತಹ ಪೂಜೆಯಲ್ಲಿ ನಮಗೆ ಕಣ್ಣಿಗೆ ಕಾಣುವುದು ಎಂದರೆ ದೀಪ. ದೀಪವನ್ನು ಯಾವ ರೀತಿ ಆರಾಧನೆ ಮಾಡಬೇಕು. ದೀಪಾರಾಧನೆ ವಿಶೇಷತೆಗಳು ಏನು ಯಾವ ಸಮಯದಲ್ಲಿ ಯಾವ ರೀತಿ ನಾವು ದೀಪಾರಾಧನೆ ಮಾಡಿದರೆ ಒಳ್ಳೆಯ ಫಲಿತಾಂಶ ಕಾಣಬಹುದು ಎನ್ನುವುದರ ಬಗ್ಗೆ ತಿಳಿಯೋಣ ಬನ್ನಿ.
ಈ ಸುದ್ದಿ ಓದಿ:- 1 ಫೆಬ್ರವರಿ 2024, ಕೇಂದ್ರದಿಂದ ಬಜೆಟ್ ಮಂಡನೆ ಈ 10 ಘೋಷಣೆಗಳು
* ಶುಕ್ರವಾರ ಎಂದರೆ ಮಹಾಲಕ್ಷ್ಮಿಗೆ ಬಹಳ ಪ್ರಿಯವಾದ ದಿನ ಏಕೆಂದರೆ ಶುಕ್ರವಾರದ ದಿನ ಈ ತಾಯಿ ವಿಷ್ಣುವಿನ ವಕ್ಷ ಸ್ಥಳದಲ್ಲಿ ಸ್ಥಿರವಾಗಿ ನೆಲೆಸಿದ ದಿನ. ಹಾಗಾಗಿ ಶುಕ್ರವಾರ ಬಹಳ ಪ್ರೀತಿಯ ದಿನ ಆಗಿದೆ ಹಾಗಾಗಿ ಮಹಾಲಕ್ಷ್ಮಿ ಈ ಅನುಗ್ರಹ ಪಡೆಯಬೇಕು ಎಂದರೆ ಈ ತಾಯಿಗೆ ದೀಪಾರಾಧನೆ ನಿಷ್ಠೆಯಿಂದ ಮಾಡಬೇಕು.
* ಯಾರ ಮನೆಯಲ್ಲಿ ಹೆಚ್ಚಾಗಿ ದಾರಿದ್ರತೆ ಇರುತ್ತದೆಯೋ ಹಣಕಾಸಿನ ಸಮಸ್ಯೆ ಇರುತ್ತದೆಯೋ ಜೀವನದಲ್ಲಿ ಸಾಲದ ಸಮಸ್ಯೆಗಳು ಹೆಚ್ಚಾಗಿದ್ದರೆ ಅಂತವರು ಧನಪ್ರಾಪ್ತಿಗಾಗಿ ಈ ದೀಪಾರಾಧನೆಯನ್ನು ಮಾಡಬೇಕಾಗುತ್ತದೆ.
* ಮೂರು ಶುಕ್ರವಾರ ಭಕ್ತಿಯಿಂದ ಸಂಕಲ್ಪ ಮಾಡಿಕೊಂಡರೆ ಎಲ್ಲಾ ರೀತಿಯಾದಂತಹ ಕಷ್ಟಗಳು ಕಳೆಯುತ್ತದೆ ಮಹಾಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುವುದು ಖಚಿತ ದೀಪವನ್ನು ಯಾವ ರೀತಿ ಹಚ್ಚಬೇಕು ಯಾವ ರೀತಿ ನಿಯಮ ಇದೆ ಎನ್ನುವುದನ್ನು ತಿಳಿಯೋಣ ಬನ್ನಿ.
ಈ ಸುದ್ದಿ ಓದಿ:- ಸಿಂಹ ರಾಶಿಯವರ ಈ ಗುಣವೇ ಜಗಳಕ್ಕೆ ಮೂಲ ಕಾರಣ…….||
* ಶುಕ್ರವಾರದ ದಿನ ಮನೆಯಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳು ದೀಪಾ ರಾಧನೆಯನ್ನು ಮಾಡಿದರೆ ಬಹಳ ಒಳ್ಳೆಯದು. ಅವರು ಅವತ್ತಿನ ದಿನ ತಲೆಗೆ ಸ್ನಾನ ಮಾಡಿಕೊಂಡು ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ಈ ದೀಪವನ್ನು ಹಚ್ಚಬೇಕಾಗುತ್ತದೆ.
* ಬೆಳಿಗ್ಗೆ ಆದರೂ ಪರವಾಗಿಲ್ಲ ಸಂಜೆ ಆದರೂ ಪರವಾಗಿಲ್ಲ ಒಂದು ದಿನ ಎರಡು ಸಾರಿ ದೀಪಾರಾಧನೆ ಮಾಡಿದರೆ ತೊಂದರೆ ಇಲ್ಲ.
* ಸೂರ್ಯ ಹುಟ್ಟುವುದಕ್ಕಿಂತ ಮುಂಚೆ ನೀವು ದೀಪಾರಾಧನೆ ಮಾಡಿ ದರೆ ಬಹಳ ಉತ್ತಮವಾದ ಫಲ ಸಿಗುತ್ತದೆ ಹಣಕಾಸಿನ ಸಮಸ್ಯೆಗಳು ಬೇಗನೆ ಕಳೆಯುತ್ತದೆ.
* ತಲೆಗೆ ಸ್ನಾನ ಆದನಂತರ ಒಂದು ಮಣ್ಣಿನ ಪಾತ್ರೆ ಅಥವಾ ತಟ್ಟೆಯನ್ನು ತೆಗೆದುಕೊಳ್ಳಬೇಕು ಅದಕ್ಕೆ ಸಂಪೂರ್ಣವಾಗಿ ಅರಿಶಿನವನ್ನು ಹಚ್ಚಬೇಕು ಅರಿಶಿಣವನ್ನು ಹಚ್ಚಿದ ನಂತರ ಮಣ್ಣಿನ ತಟ್ಟೆಯ ಮೇಲೆ ಕಲ್ಲುಪ್ಪನ್ನು ಹಾಕಬೇಕು ಯಾವುದೇ ಕಾರಣಕ್ಕೂ ಪುಡಿ ಉಪ್ಪನ್ನು ಬಳಸುವುದಕ್ಕೆ ಹೋಗಬೇಡಿ.
ಈ ಸುದ್ದಿ ಓದಿ:- ಜೀವನದಲ್ಲಿ ಸಮಸ್ಯೆಗಳೇ ಇಲ್ಲದೆ, ಸದಾ ಖುಷಿಯಾಗಿರಬೇಕು ಅಂದರೆ ಚಾಣಕ್ಯರ ಈ ಸಲಹೆ ಪಾಲಿಸಿ………||
* ಈ ತಟ್ಟೆಗೆ ಒಂದು ಮುಷ್ಟಿಯಷ್ಟು ಕಲ್ಲು ಉಪ್ಪನ್ನು ಹಾಕಬೇಕು ಇದರ ಮೇಲೆ ಒಂದು ದೀಪವನ್ನು ಇಡಬೇಕು ಈ ದೀಪಕ್ಕೂ ಸಹ ಅರಿಶಿನವನ್ನು ಹಚ್ಚಬೇಕು. ಅರಿಶಿಣವನ್ನು ಹಚ್ಚಿದ ನಂತರ ಈ ದೀಪಕ್ಕೆ ಸ್ವಲ್ಪ ಅಕ್ಷತೆಯನ್ನು ಹಾಕಬೇಕು ಅಕ್ಷತೆ ಕಾಳನ್ನು ಹಾಕಿದ ನಂತರ ಅದರ ಮೇಲೆ ಮತ್ತೊಂದು ದೀಪವನ್ನು ಇಡಬೇಕು.
ನಂತರ ಮೇಲುಗಡೆ ಇರುವ ದೀಪಕ್ಕೆ ಎಳ್ಳೆಣ್ಣೆಯನ್ನು ಹಾಕಬೇಕು ಎಳ್ಳೆಣ್ಣೆ ಬಹಳ ಶ್ರೇಷ್ಠ ಹಾಗಾಗಿ ಈ ಎಣ್ಣೆಯನ್ನು ಹಾಕಿ ದೀಪವನ್ನು ಹಚ್ಚ ಬೇಕಾಗುತ್ತದೆ. ಕೊಬ್ಬರಿ ಎಣ್ಣೆ ಅಥವಾ ಶುದ್ಧ ತುಪ್ಪದಿಂದಲೂ ಸಹ ದೀಪವನ್ನು ಹಚ್ಚಬಹುದು. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.