ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಕಡೆಯಿಂದ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬರಿಗೂ ಕೂಡ ಈಗ ನಾವು ಹೇಳುತ್ತಿರುವ ಮಾಹಿತಿ ತುಂಬಾ ಅನುಕೂಲವಾಗಿರುತ್ತದೆ ಎಂದೇ ಹೇಳಬಹುದು. ಹೌದು ಕಾರ್ಮಿಕ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಈಗ ನಾವು ಹೇಳುವಂತಹ ಈ ಒಂದು ಅನುಕೂಲವನ್ನು ಪಡೆದುಕೊಳ್ಳ ಬೇಕು ಎಂದರೆ ನೀವು ಇದಕ್ಕೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.
ಹಾಗಾದರೆ ಕಾರ್ಮಿಕ ಕಾರ್ಡ್ ಇದ್ದವರು ಯಾವ ರೀತಿಯ ಪ್ರಯೋಜನವನ್ನು ಪಡೆದುಕೊಳ್ಳುತ್ತಿದ್ದಾರೆ ಹಾಗೂ ಆ ಒಂದು ಮಾಹಿತಿ ಏನು ಹಾಗೂ ಇದರ ಸಂಪೂರ್ಣವಾದ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದರೆ ನೀವು ಎಲ್ಲಿ ಹೋಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ ಹಾಗೂ ಯಾವುದೆಲ್ಲ ದಾಖಲಾತಿಗಳು ಬೇಕಾಗುತ್ತದೆ ಹೀಗೆ ಈ ಎಲ್ಲಾ ವಿಚಾರ ವಾಗಿ ಸಂಬಂಧಿಸಿದ ಹಲವಾರು ಮಾಹಿತಿಯನ್ನು ಈ ದಿನ ತಿಳಿಯೋಣ.
ಎಲ್ಲರಿಗೂ ತಿಳಿದಿರುವಂತೆ ಕಾರ್ಮಿಕರ ಕಾರ್ಡ್ ಹೊಂದಿರುವಂತಹ ಪ್ರತಿಯೊಬ್ಬ ಸದಸ್ಯರು ಕೂಡ ಕಡಿಮೆ ಮಟ್ಟದ ಅಂದರೆ ಒಂದು ಮಟ್ಟದಲ್ಲಿ ಜೀವನವನ್ನು ಸಾಗಿಸುತ್ತಿದ್ದಾರೆ ಅವರು ಯಾವುದೇ ರೀತಿಯ ಹೆಚ್ಚುವರಿಯಾದ ಹಣವನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅವರು ದುಡಿಯುವಂತಹ ಹಣಕಾಸಿಗೆ ತಕ್ಕಂತೆ ಅವರು ತಮ್ಮ ಜೀವನವನ್ನು ನಡೆಸುತ್ತಿರುತ್ತಾರೆ.
ಈ ಸುದ್ದಿ ಓದಿ:- ರಾಜ್ಯದ ಯುವ ಜನತೆಗೆ ಉಪಯುಕ್ತ ಮಾಹಿತಿ, ಮೇಕೆ ಸಾಕಾಣಿಕೆಗೆ ಉಚಿತ ತರಬೇತಿ, ಪೂರ್ತಿ ಮಾಹಿತಿ ಇಲ್ಲಿದೆ ನೋಡಿ…
ಆದರೆ ಇವರು ಮಾಡುವಂತಹ ಕೆಲಸಕ್ಕೆ ಅನುಗುಣವಾಗಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಇವರಿಗೆ ಅನುಕೂಲವಾಗುವಂತೆ ಇವರಿಗೆ ಹಲವಾರು ರೀತಿಯ ಪ್ರಯೋಜನಗಳನ್ನು ಕೊಡುತ್ತಾರೆ. ಅವರಿಗೆ ಅನುಕೂಲವಾಗುವಂತೆ ಅವರು ಕೂಡ ಎಲ್ಲಾ ರೀತಿಯ ಸೌಕರ್ಯವನ್ನು ಪಡೆದುಕೊಂಡು ಯಾವುದರಲ್ಲೂ ಕೂಡ ಕಡಿಮೆ ಇಲ್ಲದಂತೆ ಬದುಕಬೇಕು ಎನ್ನುವ ಉದ್ದೇಶದಿಂದ ಈ ಒಂದು ಮಂಡಳಿ ಅವರಿಗೆ ತುಂಬಾ ಅನುಕೂಲವನ್ನು ಉಂಟುಮಾಡುತ್ತಿದೆ.
ಹಾಗಾದರೆ ಈ ದಿನ ಮೇಲೆ ಹೇಳಿದ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಮಿಕ ಕಾರ್ಡ್ ಹೊಂದಿರುವಂತಹ ಸದಸ್ಯರು ಯಾವ ಸಂದರ್ಭದಲ್ಲಿ 60,000ಗಳನ್ನು ಪಡೆದುಕೊಳ್ಳಬಹುದು ಎಂದು ನೋಡುವುದಾದರೆ. ಇವರು ತಮ್ಮ ಮಕ್ಕಳಿಗೆ ಮದುವೆ ಮಾಡುವಂತಹ ಸಂದರ್ಭದಲ್ಲಿ ಈ ಒಂದು ಮಂಡಳಿ ಕಡೆಯಿಂದ ಉಚಿತವಾಗಿ 60,000ಗಳನ್ನು ನೀಡಲಾಗುತ್ತಿದೆ.
ಹಾಗಾಗಿ ಪ್ರತಿಯೊಬ್ಬ ಕಾರ್ಮಿಕ ಕಾರ್ಡ್ ಹೊಂದಿರುವ ಸದಸ್ಯರು ಈ ಒಂದು ಪ್ರಯೋಜನವನ್ನು ಪಡೆದುಕೊಳ್ಳುವುದು ತುಂಬಾ ಉತ್ತಮ ಹಾಗೂ ಅವರಿಗೆ ಸಮಯಕ್ಕೆ ಒಂದಷ್ಟು ಸಹಾಯವಾದಂತೆ ಆಗುತ್ತದೆ. ಇದರ ಮೂಲ ಉದ್ದೇಶವೇ ಕಾರ್ಮಿಕ ಕಾರ್ಡ್ ಹೊಂದಿರುವ ಸದಸ್ಯರು ಯಾವುದರಲ್ಲಿಯೂ ತೊಂದರೆ ಅನುಭವಿಸಬಾರದು ಎಂಬುದು.
ಈ ಸುದ್ದಿ ಓದಿ:- ದೇವರಿಗೆ ಹರಕೆ ಹೊತ್ತು ತೀರಿಸದೆ ಇದ್ರೆ ಏನಾಗುತ್ತೆ.? ನಿಮಗಿದು ಗೊತ್ತಿರಲಿ.!
ಈ ಹಣವನ್ನು ಪಡೆದುಕೊಳ್ಳಬೇಕು ಎಂದರೆ ಕೆಲವೊಂದಷ್ಟು ದಾಖಲಾತಿಗಳ ಅಗತ್ಯ ಇರುತ್ತದೆ ಅದು ಯಾವುದೆಂದರೆ.
* ಕಾರ್ಮಿಕ ಇಲಾಖೆಗೆ ವಂತಿಕೆಯನ್ನು ಕಟ್ಟಿರುವಂತಹ ವಂತಿಕೆ ಪ್ರಮಾಣ ಪತ್ರ.
* ಉದ್ಯೋಗ ದೃಢೀಕರಣ ಪತ್ರ
* ಬ್ಯಾಂಕ್ ಖಾತೆಯ ವಿವರ.
* ವಿವಾಹ ನೋಂದಣಾಧಿಕಾರಿಗಳಿಂದ ಪಡೆದಿರುವ ಪತ್ರ.
* ಮದುವೆ ಆಮಂತ್ರಣ ಪತ್ರ.
* ಮದುವೆ ಕರ್ನಾಟಕ ರಾಜ್ಯದ ಹೊರಗೆ ಜರುಗಿದ್ದಲ್ಲಿ ಅಫಿಡೇವಿಟ್. ಸಲ್ಲಿಸುವುದು.
* ರೇಷನ್ ಕಾರ್ಡ್.
ಹೀಗೆ ಎಷ್ಟು ದಾಖಲಾತಿಗಳು ಇದ್ದರೆ ಸಾಕು ನೀವು ಈ ಒಂದು ಮಂಡಳಿಯ ಮೂಲ ವೆಬ್ಸೈಟ್ ಗೆ ಹೋಗಿ ಅಲ್ಲಿ ಮದುವೆ ಸಹಾಯ ಧನ ಎನ್ನುವಂತಹ ಆಯ್ಕೆಯನ್ನು ಮಾಡಿ ಅಲ್ಲಿ ನೀವು ಈ ಒಂದು ಯೋಜನೆಗೆ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ. ಮದುವೆಯಾಗಿ ಆರು ತಿಂಗಳ ಒಳಗೆ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಆನಂತರ ಅಲ್ಲಿ ನಿಮ್ಮ ಎಲ್ಲರ ದಾಖಲಾತಿಗಳನ್ನು ಪರೀಕ್ಷಿಸುವುದರ ಮೂಲಕ ಎಲ್ಲವನ್ನು ಕೂಲಂಕುಶವಾಗಿ ತಿಳಿದು ಆನಂತರ ನಿಮ್ಮ ಅಕೌಂಟ್ ಗೆ ಹಣವನ್ನು ವರ್ಗಾಯಿಸಲಾಗುತ್ತದೆ.