Home Useful Information ಮನೆಯಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರ ರೂ.1000 ಪಿಂಚಣಿ ಕೊಡುವ ಯೋಜನೆ.! ಯಾರು ಪಡೆಯಬಹುದು, ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

ಮನೆಯಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರ ರೂ.1000 ಪಿಂಚಣಿ ಕೊಡುವ ಯೋಜನೆ.! ಯಾರು ಪಡೆಯಬಹುದು, ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

0
ಮನೆಯಲ್ಲಿರುವ 60 ವರ್ಷ ಮೇಲ್ಪಟ್ಟವರಿಗೆ ಪ್ರತಿ ತಿಂಗಳು ಕೇಂದ್ರ ಸರ್ಕಾರ ರೂ.1000 ಪಿಂಚಣಿ ಕೊಡುವ ಯೋಜನೆ.! ಯಾರು ಪಡೆಯಬಹುದು, ಏನೆಲ್ಲ ದಾಖಲೆಗಳು ಬೇಕು ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!

 

ವಯಸ್ಸಾದ ಬಳಿಕ ವೃದ್ಧರಿಗೆ (Senior Citizen) ದುಡಿಯಲು ಶಕ್ತಿ ಇರುವುದಿಲ್ಲ ಮತ್ತು ಅವರಿಗೆ ಉದ್ಯೋಗಾವಕಾಶವು ಕೂಡ ಸಿಗುವುದಿಲ್ಲ. ಇಂತಹ ಸಮಯದಲ್ಲೂ ಜೀವನ ನಿರ್ವಹಣೆಗಾಗಿ ಹಣದ ಅವಶ್ಯಕತೆ ಇರುತ್ತದೆ ಎಲ್ಲರಿಗೂ ಕೂಡ ಕುಟುಂಬದ ನೆರವು ಇರುವುದಿಲ್ಲ. ಹೀಗಾಗಿ ಔಷಧೋಪಚಾರಕ್ಕಾದರೂ ಅನುಕೂಲತೆಯಾಗಲಿ ಎಂದು ಕೇಂದ್ರ ಸರ್ಕಾರವು ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಯಡಿ ರೂ.1000 ವೃದ್ಧಾಪ್ಯ ವೇತನ ನೀಡುತ್ತದೆ.

ಇದನ್ನು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ ಯೋಜನೆ (Indira Gandhi National Pension Scheme) ಎಂದು ಕೂಡ ಕರೆಯುತ್ತಾರೆ. ಪ್ರತಿ ಕುಟುಂಬದಲ್ಲೂ ಕೂಡ ಹಿರಿಯರು ಇದ್ದೇ ಇರುತ್ತಾರೆ ಹಾಗಾಗಿ ಈ ಅಂಕಣದಲ್ಲಿ ಯೋಜನೆ ಬಗ್ಗೆ ಕೆಲ ಪ್ರಮುಖ ಮಾಹಿತಿಯನ್ನು ತಿಳಿಸುತ್ತೇವೆ.

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು:-

* ಭಾರತೀಯ ನಾಗರಿಕನಾಗಿದ್ದು, ಕರ್ನಾಟಕದ ನಿವಾಸಿಯಾಗಿರಬೇಕು
* 60 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗಿರಬೇಕು
* ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೀಡಲಾಗುವ BPL / AAY ರೇಷನ್ ಕಾರ್ಡ್ ಹೊಂದಿರಬೇಕು.
* ಅರ್ಜಿ ಸಲ್ಲಿಸುವ ಅರ್ಜಿದಾರನ ಕುಟುಂಬದ ವಾರ್ಷಿಕ ಆದಾಯವು ನಗರ ಪ್ರದೇಶಗಳಲ್ಲಿ ರೂ.17,000 ಹಾಗೂ ಗ್ರಾಮೀಣ ಪ್ರದೇಶದಲ್ಲಿ ರೂ.12,000 ಒಳಗೆ ಇರಬೇಕು (ಕಾಲಕಾಲಕ್ಕೆ ಸರ್ಕಾರದ ನಿಬಂಧನೆಗೆ ಒಳಪಟ್ಟು ಆದಾಯದ ಮಿತಿ ಬದಲಾಗುತ್ತಿರುತ್ತದೆ)
* ಅರ್ಜಿದಾರನು ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷ ಯೋಜನೆಯಡಿ ಪಿಂಚಣಿ ಅಥವಾ ಸಾರ್ವಜನಿಕ ಉದ್ಯೋಗದ ಇನ್ಯಾವುದೇ ಪಿಂಚಣಿ ಸೌಲಭ್ಯವನ್ನು ಪಡೆಯುತ್ತಿರಬಾರದು

ಯೋಜನೆಯಿಂದ ಸಿಗುವ ಅನುಕೂಲತೆಗಳು:-

* 60 ರಿಂದ 64ನೇ ವಯಸ್ಸಿನ ವೃದ್ಧರು ತಿಂಗಳಿಗೆ ರೂ.600
* 65 ವರ್ಷ ಮೇಲ್ಪಟ್ಟವರು ರೂ.1000 ಪ್ರತಿ ತಿಂಗಳು ಪಿಂಚಣಿ ಪಡೆಯುತ್ತಾರೆ

ಅರ್ಜಿ ಸಲ್ಲಿಸುವಾಗ ಕೇಳಲಾಗುವ ದಾಖಲೆಗಳು:-

* ವಾಸಸ್ಥಳ ದೃಢೀಕರಣ ಪತ್ರ
* ವಯಸ್ಸಿನ ದೃಢೀಕರಣ ಪತ್ರ (ಶಾಲಾ ದಾಖಲಾತಿ ಪ್ರಮಾಣ ಪತ್ರ / ವೈದ್ಯಕೀಯ ದೃಢೀಕರಣ ಪತ್ರ)
* ಆದಾಯ ಪ್ರಮಾಣ ಪತ್ರ
* BPL ಪಡಿತರ ಚೀಟಿ
* ಆಧಾರ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್ ಡೀಟೇಲ್ಸ್

ಅರ್ಜಿ ಸಲ್ಲಿಸುವುದು ಹೇಗೆ?

* ತಮ್ಮ ವಾಸಸ್ಥಳದ ವ್ಯಾಪ್ತಿಗೆ ಬರುವ ನಾಡಕಚೇರಿಗಳಲ್ಲಿ ಹತ್ತಿರದ ಅಟಲ್ ಜಿ ಜನಸ್ನೇಹಿ ಕೇಂದ್ರ / ನೆಮ್ಮದಿ ಕೇಂದ್ರ ಅಥವಾ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅವಶ್ಯಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.
* ನಿಮ್ಮ ಮನವಿಗಳನ್ನು ಸಂಬಂಧಿಸಿದ ರಾಜಸ್ವ ನಿರೀಕ್ಷಕರಿಗೆ ಕಳುಹಿಸಿ ಕೊಡಲಾಗುವುದು
* ಗ್ರಾಮ ಲೆಕ್ಕಾಧಿಕಾರಿಗಳಿಗೆ ಪರಿಶೀಲನೆಗೆ ಹೋಗುತ್ತದೆ ನಂತರ ಅವರು ರಾಜಸ್ವ ನಿರೀಕ್ಷಕರ ಮೂಲಕ ಕಂದಾಯ ಇಲಾಖೆಗೆ ಕಳುಹಿಸಲಾಗುತ್ತದೆ.

ಈ ಸುದ್ದಿ ಓದಿ:- ರೈತನನ್ನು ಮದುವೆಯಾದ ಯುವತಿಗೆ ಸಿಗಲಿದೆ 5 ಲಕ್ಷ ರೂಪಾಯಿ.! ಕನ್ಯಾ ಭಾಗ್ಯದ ಬಗ್ಗೆ ಸರ್ಕಾರ ನಿರ್ಧಾರ

* ರಾಜಸ್ವ ನಿರೀಕ್ಷಕರು ನೀಡಿದ ವರದಿ ಆಧಾರದ ಮೇಲೆ ನಾಡಕಛೇರಿಯಲ್ಲಿ ಉಪತಹಶೀಲ್ದಾರರ ಮೂಲಕ ವಿಲೆ ಗೊಳಿಸಲಾಗುವುದು.
* ಈ ಎಲ್ಲಾ ಪ್ರಕ್ರಿಯೆಯು 45 ದಿನಗಳ (Working Days) ಒಳಗೆ ಪೂರ್ತಿಗೊಳ್ಳುತ್ತದೆ

* ನೀವು ನೀಡಿರುವ ದಾಖಲೆಗಳಲ್ಲಿ ಮಾಹಿತಿ ಸ್ಪಷ್ಟವಾಗಿದ್ದು ಸರಿ ಇದ್ದರೆ ಪ್ರಕ್ರಿಯೆ 45 ದಿನಗಳ ಒಳಗೆ ಮುಗಿಯುತ್ತದೆ ಮತ್ತು ನಿಮಗೆ ಪಿಂಚಣಿ ಅನುಮೋದನೆಯಾಗುತ್ತದೆ. ಮುಂದಿನ ತಿಂಗಳಿಂದ ನೀವು ನೀಡಿದ್ದ ದಾಖಲೆಗಳಲ್ಲಿ ಸೂಚಿಸಿದ್ದ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಪಿಂಚಣಿ ಹಣವು DBT ಮೂಲಕ ವರ್ಗಾವಣೆಯಾಗುತ್ತದೆ. ನೀವು ನೀಡಿರುವ ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ ಮತ್ತು NPCI ಮ್ಯಾಪಿಂಗ್ ಆಗಿರಬೇಕು.

ಈ ಸುದ್ದಿ ಓದಿ:- ಎಷ್ಟೇ ಪೂಜೆ ಮಾಡಿದ್ರು ನಿಮ್ಮ ಕೋರಿಕೆಗಳು ನೆರವೇರುತ್ತಿಲ್ಲ ಎಂದರೆ ಈ ಮಂತ್ರವನ್ನು 11 ಬಾರಿ ಹೇಳಿ ಹಾಗೂ ಈ ಸ್ವಿಚ್ ವರ್ಡ್ ಬರೆದು ಪರ್ಸ್ ನಲ್ಲಿ ಇಟ್ಟುಕೊಳ್ಳಿ ಎಲ್ಲಾ ಕಾರ್ಯ ನೆರವೇರಿಸಿ ಕೊಡುತ್ತಾರೆ ಈ ಶಕ್ತಿಶಾಲಿ ತಾಯಿ.!

* ಇದರ ನಡುವೆ ನಾಡಕಚೇರಿ ವೆಬ್ಸೈಟ್ ವಿಳಾಸ www.nadakacheri.gov.in ಮೂಲಕ ನಿಮ್ಮ ಅರ್ಜಿ ಸ್ಟೇಟಸ್ ಟ್ರಾಕ್ ಮಾಡಬಹುದು.

LEAVE A REPLY

Please enter your comment!
Please enter your name here