ಜ್ಯೋತಿಷ್ಯ ಶಾಸ್ತ್ರವು ಒಬ್ಬ ಮನುಷ್ಯನ ಹುಟ್ಟಿನಿಂದ ಸಾ’ವಿ’ನ ತನಕ ಬರುವ ಆತನ ಪಾಲಿಗೆ ಬರುವ ಕ’ಷ್ಟ, ಸುಖ, ದುಃ’ಖ ಗಂಡಾಂತರಗಳ ಬಗ್ಗೆ ಮಾಹಿತಿ ಕೊಡುತ್ತದೆ. ಇದು ನಮ್ಮ ಭವಿಷ್ಯಕ್ಕೆ ಹಿಡಿದಿರುವ ಕನ್ನಡಿ ಎಂದೇ ಹೇಳಬಹುದು ಆದರೂ ಕೂಡ ಅನೇಕರು ಇದರ ಬಗ್ಗೆ ನಿರ್ಲಕ್ಷ ತೋರುತ್ತಾರೆ. ನಮ್ಮ ಭಾರತ ದೇಶವು ಸಂಪ್ರದಾಯಬದ್ಧ ದೇಶವಾಗಿದ್ದು ಜ್ಯೋತಿಷ್ಯಶಾಸ್ತ್ರಕ್ಕೆ ಬಹಳ ಹಿಂದಿನ ಇತಿಹಾಸವಿದೆ.
ಇತ್ತೀಚಿಗೆ ವೈಜ್ಞಾನಿಕವಾಗಿ ಕೂಡ ಇದೆಲ್ಲವನ್ನು ಸತ್ಯ ಎನ್ನುವಂತೆ ಒಪ್ಪಿಕೊಳ್ಳಲಾಗುತ್ತಿತ್ತು, ವಿಜ್ಞಾನದ ಅನೇಕ ಅನ್ವೇಷಣೆಗಳಿಗೆ ಜ್ಯೋತಿಷ್ಯ ಶಾಸ್ತ್ರ ನೆರವಾಗಿದ್ದು ವ್ಯಕ್ತಿಯೊಬ್ಬನ ಬದುಕಿನಲ್ಲಿ ನಡೆದ ಸಮಸ್ಯೆಯಿಂದ ಹಿಡಿದು ಬ್ರಹ್ಮಾಂಡದವರೆಗೆ ಅನೇಕ ವಿಚಾರಗಳು ಜ್ಯೋತಿಷ್ಯದ ಮೂಲಕ ತಿಳಿಯುತ್ತದೆ.
ಹಾಗೆ ಒಬ್ಬ ಮನುಷ್ಯ ಸಾಲದ ಸುಳಿಗೆ ಸಿಲುಕುತ್ತಾನೆ ಎನ್ನುವುದು ಕೂಡ ಆತನ ಜನ್ಮ ಕುಂಡಲಿಯನ್ನು ನೋಡಿದಾಗ ತಿಳಿಯುತ್ತದೆ. ನಾನಾ ಕಾರಣಗಳಿಂದ ಮನುಷ್ಯ ಸಾಲ ಮಾಡಬೇಕಾಗುತ್ತದೆ ಒಮ್ಮೆ ತೆಗೆದುಕೊಂಡ ಸಾಲವನ್ನು ಮರು ಪಾವತಿಸಲಾಗದೆ ಸಾಲದ ಸುಳಿಗೆ ಸಿಲುಕಿದರೆ ಅಲ್ಲಿಗೆ ಆತನ ಜೀವನ ಮುಳುಗಿದಂತೆಯೇ.
ಈ ಸುದ್ದಿ ಓದಿ:- ಸಂಕಷ್ಟಗಳು ದೂರವಾಗಿ ಲಕ್ಷ್ಮಿ ಕೃಪೆಯಿಂದ ಧನಾಮನವಾಗಬೇಕು ಎಂದರೆ ಜೋಡಿ ನವಲುಗರಿಯನ್ನು ಮನೆಯ ಈ ಜಾಗದಲ್ಲಿಡಿ…
ಈ ರೀತಿ ಆಗಬಾರದು ಎಂದರೆ ಬಹಳ ಎಚ್ಚರಿಕೆಯಿಂದ ಇರಬೇಕು ಗೊತ್ತಿದೋ ದ ಗೊತ್ತಿಲ್ಲದೆಯೋ ಈಗಾಗಲೇ ಸಮಸ್ಯೆಗೆ ಸಿಲುಕಿ ನರಳುತ್ತಿದ್ದೀರ ಎಂದರೆ ಈಗ ನಾವು ಹೇಳುವ ಈ ಸುಲಭ ಉಪಾಯವನ್ನು ಮಾಡಿ. ಜ್ಯೋತಿಷ್ಯ ಶಾಸ್ತ್ರದಲ್ಲಿ ಸಾಲದ ನಿವಾರಣೆಗಾಗಿ ಅನೇಕ ಸೂತ್ರಗಳನ್ನು ತಿಳಿಸಲಾಗಿದ್ದು ಆ ಪ್ರಕಾರವಾಗಿ ನಡೆದುಕೊಂಡಾಗ ಖಂಡಿತವಾಗಿಯೂ ಸಮಸ್ಯೆಯಿಂದ ಹೊರಬಂದು ಆರ್ಥಿಕ ಪರಿಸ್ಥಿತಿ ಸರಿ ಪಡಿಸಿಕೊಳ್ಳುವ ಅವಕಾಶ ಸಿಗುತ್ತದೆ.
* ಸೂರ್ಯದೇವನ ಆರಾಧನೆ ಮಾಡುವುದರಿಂದ ಸಾಲದ ಸಮಸ್ಯೆ ಸೇರಿದಂತೆ ಇನ್ನು ಅನೇಕ ಸಮಸ್ಯೆಗಳಿಗೆ ಪರಿಹಾರ ಕಾಣಬಹುದು. ಒಂದು ತಾಮ್ರದ ಬಿಂದಿಗೆಯಲ್ಲಿ ನೀರು ತೆಗೆದುಕೊಂಡು 11 ಕೆಂಪು ಮೆಣಸಿನಕಾಯಿ ಬೀಜವನ್ನು ಹಾಕಿ ಸೂರ್ಯನಿಗೆ ಅರ್ಘ್ಯ ಅರ್ಪಿಸಬೇಕು. ಸೂರ್ಯನ ಆರಾಧನೆ ಮಾಡುವ ಸಮಯದಲ್ಲಿ ಓಂ ಆದಿತ್ಯಾಯ ನಮಃ ಎನ್ನುವ ಮಂತ್ರವನ್ನು ಹೇಳಬೇಕು.
* ನಿಮ್ಮ ಊರಿನಲ್ಲಿರುವ ವಿಷ್ಣು ದೇವಸ್ಥಾನದಲ್ಲಿ ಅಥವಾ ವಿಷ್ಣುವಿನ ಅವತಾರದ ದೇವಸ್ಥಾನದಲ್ಲಿ ಜೋಡಿ ಬಾಳೆ ಗಿಡ ನೆಡಬೇಕು. ಒಂದು ಗಂಡು ಹಾಗೂ ಒಂದು ಹೆಣ್ಣು ಬಾಳೆ ಗಿಡ ನೆಟ್ಟು ಪೂಜಿಸಬೇಕು. ಅದು ಸೊಂಪಾಗಿ ಬೆಳೆದು ಫಲ ಕೊಡುತ್ತಾ ಹೋದಂತೆ ನಿಮ್ಮ ಹಣಕಾಸಿನ ಪರಿಸ್ಥಿತಿ ಚೇತರಿಸುತ್ತದೆ. ಆದರೆ ಯಾವುದೇ ಕಾರಣಕ್ಕೂ ಆ ಫಲವನ್ನು ನೀವು ಸೇವಿಸಬೇಡಿ ದೇವಸ್ಥಾನಕ್ಕೆ ಅಥವಾ ಮಕ್ಕಳಿಗೆ ಅಥವಾ ವೃದ್ಧರಿಗೆ ಹಂಚಿ ಇದರಿಂದ ಕೂಡ ಸಾಲದ ಸಮಸ್ಯೆಗೆ ಪರಿಹಾರ ಸಿಗುತ್ತದೆ.
ಈ ಸುದ್ದಿ ಓದಿ:-ಬಿಳಿ ಸಾಸಿವೆಯಿಂದ ಈ ಕೆಲಸ ಮಾಡಿ ಸಾಕು, ಆದಷ್ಟು ಬೇಗ ನಿಮಗೆ ಸ್ವಂತ ಮನೆ ಕಟ್ಟುವ ಯೋಗ ಬರುತ್ತದೆ, ಎಲ್ಲಾ ವಿಘ್ಞಗಳು ನಿವಾರಣೆಯಾಗುತ್ತವೆ.!
* ಶನಿವಾರದಂದು ಕಪ್ಪು ನಾಯಿಗೆ ಎಣ್ಣೆ ಸವರಿದ ಚಪಾತಿಯನ್ನು ತಿನಿಸಬೇಕು. ತೆಂಗಿನಕಾಯಿ ಹೋಳಿಗೆ ಬೆಲ್ಲವನ್ನು ತುಂಬಿಸಿ ಅರಳಿ ಮರದ ಕೆಳಗೆ ಇಡಬೇಕು ಇದರಿಂದ ಕೂಡ ಸಾಲದ ಹೊರೆ ನಿಧಾನವಾಗಿ ಕಡಿಮೆಯಾಗುತ್ತದೆ
* ನಿಮ್ಮ ಗ್ರಾಮಗಳಲ್ಲಿ ಗಿಡಗಳನ್ನು ನೆಟ್ಟಿ ಅದನ್ನು ಮರಗಳಾಗಿ ಬೆಳೆಸುವುದು, ಪ್ರತಿ ಶುಕ್ರವಾರದಂದು ನಿಮ್ಮ ಕೈಲಿ ಸಾಧ್ಯವಾದಷ್ಟು ಬಡವರಿಗೆ ಧಾನ್ಯ ಹಾಗೂ ಬಟ್ಟೆಗಳನ್ನು ಹಂಚಿ
* ಐದು ಭಾನುವಾರಗಳು ನಿಮ್ಮ ಕೈನಿಂದ ಹಸುವಿಗೆ ಬೆಲ್ಲ ತಿನ್ನಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ
* ಗುರುವಾರದಂದು ಕುಂಕುಮ ಅದನ್ನು ಅಮ್ಮನವರ ದೇವಸ್ಥಾನಕ್ಕೆ ಕೊಡಬೇಕು.
* ಹತ್ತಿರದಲ್ಲಿರುವ ಮಹಾಲಕ್ಷ್ಮಿ ದೇವಸ್ಥಾನಕ್ಕೆ ಹೋಗಿ ತಾಯಿಗೆ ಕೇಶಲಂಕಾರ ಸೇವೆ ಮಾಡಿಸಿದರೆ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ.
* ಮಂಗಳವಾರ ಮತ್ತು ಶನಿವಾರದಂದು ಸಾಲ ತೆಗೆದುಕೊಂಡರೆ ಆ ಸಾಲಗಳು ಬೇಗ ತೀರುವುದಿಲ್ಲ. ಹಾಗಾಗಿ ಈ ದಿನಗಳಂದು ಸಾಲ ತೆಗೆದುಕೊಳ್ಳಬೇಡಿ.
ಈ ಸುದ್ದಿ ಓದಿ:-ಕನ್ಯಾ ರಾಶಿಯ ಗುಣಸ್ವಭಾವ ಹೇಗಿರುತ್ತದೆ ಗೊತ್ತಾ? ಇವರ ತಂಟೆಗೆ ಹೋಗುವ ಮುನ್ನ ವಿಚಾರ ತಿಳಿದುಕೊಳ್ಳಿ.!
* ನೀವು ಎಷ್ಟೇ ಕಷ್ಟ ಪಟ್ಟರೂ ಸಾಲ ತೀರುತ್ತಿಲ್ಲ ಎಂದರೆ ವೀಳ್ಯದೆಲೆಯಿಂದ ಈ ಒಂದು ರೆಮಿಡಿ ಮಾಡಿ. ಒಡಕಾಗಿರದ ಒಂದು ಶುದ್ಧ ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ಮೇಲೆ ಎರಡು ಲವಂಗ ಹಾಗೂ ಎರಡು ಏಲಕ್ಕಿ ಇಟ್ಟು ಪಾನ್ ರೀತಿ ಮಡಚಿ.
ಮಂಗಳವಾರ ಸಂಜೆ ಸಮಯ ಸ್ನಾನ ಮಾಡಿ ಮಡಿಯುಟ್ಟುಕೊಂಡು ಆಂಜನೇಯ ದೇವಸ್ಥಾನಕ್ಕೆ ಹೋಗಿ ಪಾನ್ ರೀತಿ ಮಡಚಿರುವ ವೀಳ್ಯದೆಲೆಯನ್ನು ಆಂಜನೇಯನ ಬಳಿ ಇಡುವಂತೆ ಅರ್ಚಕರಿಗೆ ಕೇಳಿಕೊಳ್ಳಿ ಅಲ್ಲೇ ಕುಳಿತು ಆಂಜನೇಯನನ್ನು ಸಾಲ ತೀರಿಸುವುದಕ್ಕಾಗಿ ಪ್ರಾರ್ಥಿಸಿ ಹನುಮಾನ್ ಚಾಲೀಸಾ ಪಠಿಸಿ.
ಮೂರು ತಿಂಗಳವರೆಗೆ ಪ್ರತಿ ಮಂಗಳವಾರ ಈ ರೀತಿ ಮಾಡಿದರೆ ಖಂಡಿತವಾಗಿಯೂ ನಿಮ್ಮ ಸಮಸ್ಯೆ ಪರಿಹಾರ ಆಗುತ್ತದೆ. ಯಾವುದಾದರೂ ಒಂದು ವಾರ ಮಾಡಲು ಆಗದಿದ್ದರೆ ಕುಟುಂಬದ ಬೇರೆ ಸದಸ್ಯರಿಂದ ಮಾಡಿಸಬಹುದು.